ಬೆಂಗಳೂರು: ಆಹ್ವಾನ ಬಂದಿತ್ತು ಅದಕ್ಕೆ ಸದ್ಗುರು ಕಾರ್ಯಕ್ರಮಕ್ಕೆ ಡಿಕೆಶಿ ಹೋಗಿದ್ದಾರೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಸದ್ಗುರು ಕಾರ್ಯಕ್ರಮದಲ್ಲಿ ಡಿಕೆಶಿ ಭಾಗಿ ಹಾಗೂ ಡಿಕೆಶಿ ಬಿಜೆಪಿ ಸೇರ್ತಾರೆಂಬ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನೋಡಿ, ಅದೆಲ್ಲಾ ಅನವಶ್ಯಕವಾದ ಚರ್ಚೆ. ಆಹ್ವಾನ ಬಂದಿತ್ತು ಹೋಗಿದ್ದಾರೆ. ಏಕ್ ನಾಥ್ ಶಿಂಧೆ ಅಂತಾರೆ ಅವ್ರ ಸಾಮರ್ಥ್ಯ ಅಷ್ಟೇನಾ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಸ್ವತಂತ್ರವಾಗಿ ಯಾವತ್ತಾದ್ರೂ ಅಧಿಕಾರಕ್ಕೆ ಬಂದಿದ್ದಾರಾ. ಹೋದ ಸಲ 17 ಏಕ್ ನಾಥ್ ಶಿಂದೆಗಳನ್ನ ಕರೆದುಕೊಂಡು ಹೋಗಿದ್ರಲ್ಲಾ. ಈ ಸಲ ಅದು ಸಾಧ್ಯವಿಲ್ಲ.ಒಂದು ಅರ್ಥ ಆಗ್ತಿದೆ ಅವ್ರಲ್ಲಿ ಧಮ್ಮಿಲ್ಲ, ಸಾಮರ್ಥ್ಯ ಇಲ್ಲ ಎಂದಿದ್ದಾರೆ.
ಬಿಜೆಪಿಯವರ ಬಗ್ಗೆ ನಾನ್ಯಾಕೆ ಕಾಳಜಿ ತೋರಿಸುವ ಅವಶ್ಯಕತೆ ಏನಿದೆ. ನಾನ್ಯಾಕೆ ತಲೆ ಕೆಡಿಸಿಕೊಳ್ಳಿ. ಬಿಜೆಪಿಯವ್ರು ಯಾರನ್ನಾದ್ರೂ ದ್ವೇಷಿಸಿಕೊಳ್ಳಲಿ. ಮೋದಿ, ಖರ್ಗೆ ಅಕ್ಕ ಪಕ್ಕ ಫೋಟೋ ಇರುತ್ತೆ. ಹಾಗಂತ ಮೋದಿ ಕಾಂಗ್ರೆಸ್ ಸೇರ್ತಾರೆ ಅನ್ನೋಕಾಗುತ್ತಾ ಎಂದು ಮರು ಪ್ರಶ್ನಿಸಿದ್ದಾರೆ. ಡಿಕೆಶಿ ಸಿಎಂ ಆಗಬೇಕು ಎಂದು ಸುರೇಶ್ ಇಂಗಿತದ ಬಗ್ಗೆ ಮಾತನಾಡಿದ ಅವರು ಎಲ್ಲರಿಗೂ ಅವರ ಕುಟುಂಬದರು ಆಗಬೇಕು ಅಂತಾ ಇರುತ್ತೆ. ಯತೀಂದ್ರ ಅವ್ರನ್ನ ಕೇಳಿದ್ರೆ ಅವ್ರೂ ಹೇಳ್ತಾರೆ.ನಮ್ಮ ಕುಟುಂಬದವ್ರನ್ನ ಕೇಳಿದ್ರೂ ಹೇಳ್ತಾರೆ. ಅದೆಲ್ಲಾ ಆಗುತ್ತಾ. ಹೈಕಮಾಂಡ್ ಅಂತಿಮವಾಗಿ ತೀರ್ಮಾನ ಮಾಡಲಿದೆ ಎಂದಿದ್ದಾರೆ.
ಈಶಾ ಫೌಂಡೇಶನ್ ನಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಿದ್ದಕ್ಕೆ ಆಕ್ಷೇಪ ವಿಚಾರ; ಅವರು ಹೋಗಿದ್ದು ಅವರ ವೈಯಕ್ತಿಕ ವಿಚಾರ ಎಂದ ಆರ್ ಅಶೋಕ್
ಬೆಂಗಳೂರು; ಈಶಾ ಫೌಂಡೇಶನ್ ನಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಿದ್ದಕ್ಕೆ ಆಕ್ಷೇಪ ವಿಚಾರದ ಬಗ್ಗೆ ವಿಧಾನಪರಿಷತ್ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಸಿದ್ದು ಅವರು ಹೋಗಿದ್ದು ಅವರ ವೈಯಕ್ತಿಕ ವಿಚಾರ ಎಂದಿದ್ದಾರೆ.
ಧರ್ಮದ ವಿಚಾರವಾಗಿ ನಮ್ಮ ಪಾರ್ಟಿಯ ನಾಯಕರು ಹೋಗೋದು ಸರ್ವೇ ಸಾಮಾನ್ಯ. ಮೋದಿ, ಅಮಿತ್ ಶಾ ಅವರು ಹೋಗಿದ್ದಾರೆ. ಧರ್ಮ ಕೂಡ ಹೋಗಬೇಕು, ನಾವೂ ಹೋಗಬೇಕು. ಆದ್ರೆ ಇಲ್ಲಿ ಡಿಕೆ ಯಾಕೆ ಹೋಗಬೇಕು ಎಂದು ಪ್ರಶ್ನೆ ಮಾಡಲಾಗಿದೆ. ಆದ್ರೆ ಡಿಕೆ ಶಿವಕುಮಾರ್ ಅವರು ಸಿಎಂ ಕುರ್ಚಿ ಒದ್ದು ಕಿತ್ತುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಆದ್ರೆ ಕುಂಭಕ್ಕೆ ಕಾಂಗ್ರೆಸ್ ನಾಯಕರು ಯಾರೂ ಕೂಡ ಹೋಗಿಲ್ಲ, ಆದ್ರೆ ಡಿಕೆ ಬಂದಿದ್ದಾರೆ. ಎರಡು ತಿಂಗಳ ಹಿಂದೆ ಮೋದಿ ಅವರನ್ನು ಡಿಕೆ ಭೇಟಿ ಮಾಡಿದ್ದಾರೆ , ಈಗ ಈಶಾ ಫೌಂಡೇಶನ್ ಗೆ ಹೋಗಿದ್ದಾರೆ. ಆದ್ರೆ ಡಿಕೆ ಅವರು ಯಾಕೆ ಹೋಗಿದ್ದಾರೆ ಅವರ ವೈಯಕ್ತಿಕ ವಿಚಾರ. ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ಡಿ ಕೆ ಹೋಗಿದ್ದಕ್ಕೆ ಅಪ್ರಿಷಿಯೆಟ್ ಮಾಡುತ್ತಿದ್ದೇವೆ. ಡಿಕೆ ಅವರು ಎಲ್ಲಿ ಹೋದರು ಕರಿ ಬೆಕ್ಕು ಅಡ್ಡ ಹಾಕುತ್ತಿದ್ದಾರೆ. ಡಿಕೆಗೂ ಕರಿ ಬೆಕ್ಕಿಗೂ ಏನ್ ಸಂಬಂಧ ಅಂತ ಗೊತ್ತಿಲ್ಲ. ಕುಂಭಕ್ಕೆ ಹೋಗೋದು, ಮೋದಿ, ಶಾ ಭೇಟಿ ಮಾಡೋದು, ಈಶಾ ಫೌಂಡೇಶನ್ ಗೆ ಹೋಗೋದು ಅವರ ವೈಯಕ್ತಿಕ . ನಾವು ಕಾಮೆಂಟ್ ಮಾಡಲ್ಲ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ರಾಜ್ಯ ಸರ್ಕಾರ ರಾಜ್ಯದ ಜನತೆಗೆ ನೆಲ ಜಲ ವಿಚಾರದಲ್ಲಿ ದ್ರೋಹ ಬಗೆಯುತ್ತಿದೆ. ಆಲಮಟ್ಟಿ ಮತ್ತು ನಾರಾಯಣ ಪುರ ಡ್ಯಾಂ ನಿಂದ ಒಂದೂವರೆ ಟಿಎಂಸಿ ನೀರನ್ನ ಕದ್ದು ಮುಚ್ಚಿ ಬಿಟ್ಟಿದ್ದಾರೆ. ಜನರು, ರೈತರ ಗಮನಕ್ಕೆ ತರದೇ ನೀರು ಬೀಡಲಾಗಿದೆ. ತೆಲಂಗಾಣ ದಲ್ಲಿರೋ ಕಾಂಗ್ರೆಸ್ ಸರ್ಕಾರವನ್ನ ತೃಪ್ತಿ ಪಡಿಸೋದಕ್ಕೆ ವಿಶೇಷವಾಗಿ ಡಿಕೆ ಅವರು ನೀರು ಬಿಟ್ಟಿದ್ದಕ್ಕೆ ಖಂಡಿಸುತ್ತೇವೆ. ರಾಜ್ಯದಲ್ಲಿ ಬರಗಾಲದ ಛಾಯೆ ಶುರುವಾಗಿದೆ. ಪ್ರಿಯಾಂಕ್ ಖರ್ಗೆ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಭೆ ಮಾಡ್ತಿದ್ದಾರೆ . ಆದ್ರೆ ಮತ್ತೊಂದದ್ಕಡೆ ಪಕ್ಕದ ರಾಜ್ಯಕ್ಕೆ ನೀರು ಕೊಡುತ್ತಿದೆ. ಈ ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರ ಮಾಡಿದ್ದು ದ್ರೋಹ. ಇದೊಂದು ಮೀರ್ ಸಾದಿಕ್ ರೀತಿ ಮಾಡ್ತಿದೆ. ಎಂ ಬಿ ಪಾಟೀಲ್ ಅವರನ್ನ ಕೇಳಿದ್ರೆ ನನಗೆ ಮಾಹಿತಿ ಇಲ್ಲ ಅಂತಾರೆ. ಡಿಕೆ ಅವರು ಹೆಚ್ಚು ನೀರು ಇದ್ರೆ ಬಿಟ್ಟರೇ ಏನ್ ತಪ್ಪು ಅಂತಾರೆ. ಆದ್ರೆ ಪಕ್ಕದ ರಾಜ್ಯ ದಲ್ಲಿ ಇವರ ಸ್ನೇಹಿತರು ಇದ್ದಾರೆ, ಅವರನ್ನ ಕೇಳಲಿ ನೋಡೋಣ. ಅಂದ್ರೆ ನಮ್ಮ ರಾಜ್ಯದಲ್ಲಿ ಹೆಚ್ಚು ನೀರಿದೆ ಎಂಬ ಬಿಂಬಿಸಿಕೊಳ್ತಿದ್ದಾರೆ. ಆದ್ರೆ ನಮ್ಮ ರಾಜ್ಯದಲ್ಲಿ ನೀರಿಗಾಗಿ ಹಾಹಾಕಾರ ಇದೆ. ಒಂದ್ವೇಳೆ ರಾಜ್ಯದಲ್ಲಿ ನೀರಿಗೆ ಅಭಾವ ಆದ್ರೆ ಸರ್ಕಾರವೇ ಹೊಣೆ ಎಂದಿದ್ದಾರೆ.
ಗೃಹ ಸಚಿವ ಅಮಿತ್ ಶಾ- ಡಿಕೆಶಿ ಸದ್ಗುರು ಕಾರ್ಯಕ್ರಮದಲ್ಲಿ ಭಾಗಿ ವಿಚಾರದ ಬಗ್ಗೆ ಮಾತನಾಡಿದ ಅವರು ನಿಖಿಲ್ ಕುಮಾರಸ್ವಾಮಿ ನಾಯಕತ್ವಕ್ಕೆ ಒಂದು ಡಿಮ್ಯಾಂಡ್ ಅಷ್ಟೇ. ಅದಕ್ಕೆ ರಾಜಕೀಯ ಬಣ್ಣ ಕಟ್ಟೋಕೆ ಹೋಗಲ್ಲ. ಶಿವರಾತ್ರಿ ಹಿನ್ನೆಲೆ ಡಿಕೆಶಿ ಭಾಗವಹಿಸುತ್ತಾರೆ ಎಂದರು.
ನರ್ಸ್ ಗಳ ಅಹೋರಾತ್ರಿ ಧರಣಿ ವಿಚಾರದ ಬಗ್ಗೆ ಮಾತನಾಡಿ ಕಾಂಗ್ರೆಸ್ ಸರ್ಕಾರದ ಮೊಸದ ಆಶ್ವಾಸನೆಗೆ ಕಿಡಿ ಕಾರುತ್ತಿದ್ದಾರೆ. ನಾವೆಲ್ಲಾ ಭಿಕ್ಷೆ ಬೀಡೋ ಸ್ಥಿತಿಗೆ ಬಂದಿದ್ದೇವೆ. ಎರಡು ತಿಂಗಳದ್ದು ಸಂಬಳ ಕೊಡುತ್ತಿಲ್ಲ. ಡಾಕ್ಟರ್ ಗಳಿಗೆ ಸಂಬಳ ನೀಡುತ್ತಿಲ್ಲ, ವಿವಿ ಮುಚ್ಚುತ್ತಿದ್ದಾರೆ. ಮತಕ್ಕಾಗಿ ತೆರಿಗೆ ಹೊರೆ ಹಾಕುತ್ತಿದ್ದಾರೆ. ಮತ್ತೆ ಸ್ಟ್ಯಾಂಪ್ ಡ್ಯೂಟಿ ಏರಿಕೆ ಮಾಡೋ ಹುನ್ನಾರ ಮಾಡುತ್ತಿದ್ದಾರೆ. ಪೆಟ್ರೋಲ್ ಡೀಸೆಲ್ , ಹಾಲು ದರ ಏರಿಕೆ ಆಗಿದೆ. ಈ ಖಾತಾ ವಿಚಾರದಲ್ಲಿ ಜನ ಸರ್ಕಾರಕ್ಕೆ ಶಾಪ ಹಾಕ್ತಿದ್ದಾರೆ. ಸಮಸ್ಯೆ ಗಳ ಸರಮಾಲೆಯೇ ಇದೆ. ಆದ್ರೆ ಹೊಸದೊಂದು ಯೋಜನೆ ಯಲ್ಲಿ ಸಮಸ್ಯೆ ಸರ್ವೇ ಸಾಮಾನ್ಯ ಎನ್ನುತ್ತಿದೆ ಸರ್ಕಾರ.ರಸ್ತೆಯ ಎಲ್ಲಾ ಗೋಡೆಗಳಲ್ಲಿ ಈ ಖಾತಾ ಬಗ್ಗೆ ಬರೆದಿದ್ದಾರೆ, ಫೋನ್ ನಂಬರ್ ಹಾಕಿದ್ದಾರೆ, ಅವರ ವಿರುದ್ಧ ಕ್ರಮ ಯಾಕೆ ಕೈಗೊಂಡಿಲ್ಲ ಎಂದ್ರು