ಮನೆ Latest News ಡಿ ಬಾಸ್ ದರ್ಶನ್ ಗೆ ಎದುರಾಯ್ತು ಮತ್ತೊಂದು ಸಂಕಷ್ಟ; ರೇಣುಕಾಸ್ವಾಮಿ ಕೊಲೆಯಾದ ದಿನ ದರ್ಶನ್ ಧರಿಸಿದ್ದ...

ಡಿ ಬಾಸ್ ದರ್ಶನ್ ಗೆ ಎದುರಾಯ್ತು ಮತ್ತೊಂದು ಸಂಕಷ್ಟ; ರೇಣುಕಾಸ್ವಾಮಿ ಕೊಲೆಯಾದ ದಿನ ದರ್ಶನ್ ಧರಿಸಿದ್ದ ಬಟ್ಟೆಯಲ್ಲಿ ರಕ್ತದ ಕಲೆ ಪತ್ತೆ

0
darshan bail

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರು ಯಾವಾಗ ತನಗೆ ಬೇಲ್ ಸಿಗುತ್ತೆ ಅಂತಾ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ತೂಗುದೀಪ ಅವರು ಹೇಗಾದ್ರೂ ಮಾಡಿ ದರ್ಶನ್ ಅವರಿಗೆ ಬೇಲ್ ಕೊಡಿಸಲೇ ಬೇಕು ಅಂತಾ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಲೇ ಇದ್ದಾರೆ.

ಹೀಗಿರುವಾಗಲೇ ನಟ ದರ್ಶನ್ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಭಾಗಿಯಾಗಿದ್ದಾರೆ ಅನ್ನೋದಕ್ಕೆ ಪೊಲೀಸರಿಗೆ ಮಹತ್ವದ ಸಾಕ್ಷಿಯೊಂದು ಲಭಿಸಿದೆ. ಎಫ್ ಎಸ್ ಎಲ್ ವರದಿಯೊಂದು ದರ್ಶನ್ ಅವರು ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅನ್ನೋದನ್ನು ದೃಢಿಕರಿಸಿದೆ.

ಹೌದು.. ಕೊಲೆಯಾದ ದಿನ ದರ್ಶನ್ ಪಟ್ಟಣಗೆರೆಯ ಶೆಡ್ ನಲ್ಲಿದ್ದರು . ಅಲ್ಲದೇ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುವುದಕ್ಕೆ ಪೂರಕವಾದ ಸಾಕ್ಷಿ ಲಭಿಸಿದೆ. ರೇಣುಕಾಸ್ವಾಮಿ ಕೊಲೆಯಾದ ದಿನ ದರ್ಶನ್ ಧರಿಸಿದ್ದ ಬಟ್ಟೆಯನ್ನು ಸ್ಥಳ ಮಹಜರು ವೇಳೆ ದರ್ಶನ್ ಅವರ ನಿವಾಸದಿಂದ ಪೊಲೀಸರು ವಶಕ್ಕೆ ಪಡೆದಿದ್ದರು. ಆ ಬಟ್ಟೆಯನ್ನು ಎಫ್ ಎಸ್ ಎಲ್ ಲ್ಯಾಬ್ ಗೆ ಕಳುಹಿಸಲಾಗಿತ್ತು. ಅದರಲ್ಲಿದ್ದ ರಕ್ತದ ಕಲೆ ಇದೀಗ ರೇಣುಕಾಸ್ವಾಮಿಯದ್ದೇ ಅನ್ನೋ ವರದಿ ಬಂದಿದೆ ಎನ್ನಲಾಗಿದೆ. ಹಾಗಾಗಿ ದರ್ಶನ್ ಅವರು ಪ್ರಕರಣದಲ್ಲಿ ಭಾಗಿಯಾಗಿದ್ದು ಪೊಲೀಸರಿಗೆ ಕನ್ಫರ್ಮ್ ಎಂಬಂತಾಗಿದೆ. ಹಾಗಾಗಿ ದರ್ಶನ್ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಹತ್ವದ ಸಾಕ್ಷಿ ಲಭ್ಯವಾಗಿದ್ದು. ದರ್ಶನ್ ಪಾಲಿ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗಿದೆ. ಇನ್ನು ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್ ಶೀಟ್  ಇದೇ ತಿಂಗಳ ಅಂತ್ಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆರೋಪಿಗಳು ಕೂಡ ಚಾರ್ಜ್ ಶೀಟ್  ಸಲ್ಲಿಸಲು ಕಾಯುತ್ತಿದ್ದಾರೆ. ಆ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಏಳನೇ ಬಾರಿಗೆ ನಟ ದರ್ಶನ್ ಅವರನ್ನು ಭೇಟಿಯಾದ ಪತ್ನಿ ವಿಜಯಲಕ್ಷ್ಮೀ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರನ್ನು ಪ್ರತಿ ವಾರ ಅವರ ಪತ್ನಿ ವಿಜಯಲಕ್ಷ್ಮೀ ಅವರು ಭೇಟಿಯಾಗುತ್ತಲೇ ಇದ್ದಾರೆ, ಮೊನ್ನೆ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಪ್ರಸಾದ ತೆಗೆದುಕೊಂಡು ಬಂದು ಪತಿಗೆ ನೀಡಿದ್ದರು. ಇದೀಗ ಮತ್ತೆ ಪತಿಗಾಗಿ ಪ್ರಸಾದ ತಂದಿದ್ದಾರೆ ವಿಜಯಲಕ್ಷ್ಮೀ.

ದರ್ಶನ್ ಜೈಲು ಸೇರಿದಾಗಿನಿಂದ ದರ್ಶನ್ ಅವರನ್ನು ಸಂಕಷ್ಟದಿಂದ ಪಾರು ಮಾಡಲು ನಿರಂತರವಾಗಿ ವಿಜಯಲಕ್ಷ್ಮೀ ದೇವರ ಮೊರೆ ಹೋಗುತ್ತಲೇ ಇದ್ದಾರೆ. ಮೊನ್ನೆ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ದರ್ಶನ್ ಗಾಗಿ ವಿಶೇಷ ಪೂಜೆ ಸಲ್ಲಿಸಿದ್ದರು. ಬಳಿಕ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವ ಚಂಡಿಕಾಯಾಗ ನೆರವೇರಿಸಿದ್ರು. ನಿನ್ನೆ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಪತಿಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದರು. ಸ್ನೇಹಿತೆಯೊಂದಿಗೆ ತೆರಳಿ ಪೂಜೆ ಸಲ್ಲಿಸಿದ್ದರು.ಇಂದು ಅದೇ ಪ್ರಸಾದವನ್ನು ತೆಗೆದುಕೊಂಡು ಪತಿಯ ಭೇಟಿಗಾಗಿ ಪರಪ್ಪನ ಅಗ್ರಹಾರ ಜೈಲಿಗೆ ವಿಜಯಲಕ್ಷ್ಮೀ ಆಗಮಿಸಿದ್ದರು.

 ನಟ ದರ್ಶನ್ ಸಹೋದರ ದಿನಕರ್ ‌ಜೊತೆ ವಿಜಯಲಕ್ಷ್ಮಿ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದರು. ಬರುವಾಗ ಪತಿಗಾಗಿ ಜೊತೆಯಲ್ಲಿ ಬನಶಂಕರಿ ದೇವಿ ಪ್ರಸಾದ ತಂದಿದ್ದಾರೆ, ನಿನ್ನೆ ಭೀಮನ ಅಮಾವಾಸ್ಯೆ ಪ್ರಯುಕ್ತ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು ವಿಜಿ. ನಟ ದರ್ಶನ್ ಗೆ ಎದುರಾಗಿರುವ ಸಂಕಷ್ಟ ದೂರಾಗಲಿ ಎಂದು ಪ್ರಾರ್ಥಿಸಿದ್ದರು. ಇಂದು  ಪೂಜೆ ಮಾಡಿಸಿದಂತ ಪ್ರಸಾದ, ಹೂ ದರ್ಶನ್ ಗೆ ನೀಡಿದ್ದಾರೆ ಎನ್ನಲಾಗಿದೆ.