ಮನೆ Latest News ಸಿ ಟಿ ರವಿ ಅವರ ಬಂಧನದ ಕುರಿತಾಗಿ ಸಿಬಿಐ ತನಿಖೆ ಆಗಬೇಕು; ವಿಪಕ್ಷ ನಾಯಕ ಆರ್...

ಸಿ ಟಿ ರವಿ ಅವರ ಬಂಧನದ ಕುರಿತಾಗಿ ಸಿಬಿಐ ತನಿಖೆ ಆಗಬೇಕು; ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹ

0

ಬೆಂಗಳೂರು;  ಸಿ ಟಿ ರವಿ ಅವರ ಬಂಧನದ ಕುರಿತಾಗಿ ಸಿಬಿಐ ತನಿಖೆ ಆಗಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸಿ ಟಿ ರವಿ ಅವರನ್ನು ಸೇಫ್ಟಿ ಎಂದು ಕರೆದುಕೊಂಡು ಹೋಗಿ ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿದ್ದಾರೆ. ಆಂಧ್ರಪ್ರದೇಶದಲ್ಲಿ ರಕ್ತ ಚರಿತ್ರೆ ರಾಯಲ್‌ ಸೀಮೆಯ ಸಿನಿಮಾ ಬಂದಿತ್ತು. ಆಂಧ್ರಪ್ರದೇಶ ರಾಜಕಾರಣ ಮಾದರಿಯಲ್ಲೇ ರಾಜ್ಯದಲ್ಲಿ ರಾಜಕಾರಣ ನಡೆಯುತ್ತಿದೆ ಎಂದು ಬೇಸರ ಹೊರ ಹಾಕಿದರು.

ಸೇಫ್ಟಿ ಅಂತ ಸಿ.ಟಿ. ರವಿ ಅವರನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋದರು. ಸೇಫ್ಟಿ ದೃಷ್ಟಿಯಿಂದ ಕೆಲವರು ಕಾಡು, ಕ್ವಾರಿಗಳಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ. ಅಲ್ಲಿ ಪ್ರಾಣಿಗಳಿರುತ್ತವೆ, ಅಲ್ಲಿ ಯಾರೂ ಬರಲ್ಲ ಎಂದು ಅಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ. ಸಿ.ಟಿ. ರವಿಯನ್ನು ಕರೆದುಕೊಂಡು ಹೋಗಿ ಸೇಫ್ಟಿ ಅಂತ ಕಬ್ಬಿನ ಗದ್ದೆಯಲ್ಲಿ ಇರಿಸಿದರು. ಸೇಫ್ಟಿ ಅಂತ ಅಲ್ಲಿನ ಕಮೀಷನರ್ ಹೇಳಿದರು. ಬೆಂಗಳೂರಿನಲ್ಲಿ ಪರಪ್ಪನ ಅಗ್ರಹಾರ ಇದೆ. ಅಲ್ಲಿರುವವರನ್ನು ಕಬ್ಬಿನ ಗದ್ದೆಯಲ್ಲಿ ಬಿಟ್ಟರೆ ಸಾಕು, ಸೇಫ್ಟಿ‌ ಇದೆ. ಕಬ್ಬಿನ ಗದ್ದೆಯಲ್ಲಿ ತೋಳ, ಕರಡಿ, ಚಿರತೆ ಇರುತ್ತದೆ. ಅಲ್ಲಿ ಕರೆದುಕೊಂಡು ಹೋದರೆ ಸಾಕು ಅವುಗಳೇ ಅವರನ್ನು ಕಾಯುತ್ತವೆ . ಯಾವುದೇ ಗೋಡೆ ಬೇಡ, ಬಾಗಿಲು ಬೇಡ. ಪ್ರಾಣಿಗಳೇ ಅವರನ್ನು ಕಾಯುತ್ತವೆ. ಪೊಲೀಸರು ಹೊಸ ಸೇಫ್ಟಿ ಮಾರ್ಗ ಹುಡುಕಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಸಚಿವರನ್ನು ಸೇಫ್ಟಿ ದೃಷ್ಟಿಯಿಂದ ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ಬಿಡಬೇಕು. ಮುಖ್ಯಮಂತ್ರಿ ಹಾಗೂ ಸಚಿವರನ್ನು ಕಬ್ಬಿನ ಗದ್ದೆ ಅಥವಾ ಕ್ವಾರಿಗೆ ಕರೆದುಕೊಂಡು ಹೋಗಿ ಬಿಡಿ. ವಿಧಾನಸೌಧಕ್ಕೆ ಕರೆದುಕೊಂಡು ಬನ್ನಿ, ಸೇಫ್ಟಿ ಬೇಕಾದಾಗ ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ಬಿಡಿ ಎಂದು ವ್ಯಂಗ್ಯ ಮಾಡಿದರು. ಒಬ್ಬ ವಿಧಾನಪರಿಷತ್ ಸದಸ್ಯನಿಗೆ ಸುರಕ್ಷತೆ ಕೊಡಲು ಸಾಧ್ಯವಾಗದ ಸರ್ಕಾರ , ಅಪರಾಧಿಗಳಿಂದ ಹೇಗೆ ಜನರನ್ನು ಕಾಪಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಎಲ್ಲರೂ ಬಾಲಿಶ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದರು.

ಸಿ.ಟಿ. ರವಿ ನಕ್ಸಲ್ ಪ್ರದೇಶದಿಂದ ಬಂದವರು. ಸಿ ಟಿ ರವಿ ಅವರಿಗೆ ಮೊದಲೇ ನಕ್ಸಲರಿಂದ ಮೊದಲೇ ಪ್ರಾಣ ಬೆದರಿಕೆ ಇದೆ. ಅಂತಹವರನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿದ್ದಾರೆ. ಅವರಿಗೆ ಗುಂಡು ಹೊಡೆದು ನಕ್ಸಲರು ಹೊಡೆಯಲಿ ಅನ್ನೋ ಕಾರಣಕ್ಕೆ ಅಲ್ಲಿಗೆ ಕರೆದುಕೊಂಡು ಹೋದ್ರಾ ಎಂದು ಪ್ರಶ್ನಿಸಿದ್ದಾರೆ. ಸಿ ಟಿ ರವಿ ಸದನದ ಒಳಗೆ ನಡೆದ ಘಟನೆ. ಅದನ್ನು ಅಲ್ಲೇ ಬಗೆಹರಿಸಬೇಕು. ಅದನ್ನು ಬಿಟ್ಟು ಎಲ್ಲೋ ಪ್ರಕರಣ ದಾಖಲಿಸಿ ರಾತ್ರಿಯೆಲ್ಲಾ ಪ್ರವಾಸೋದ್ಯಮ ಬಸ್ ರೀತಿ ಕಬ್ಬಿನಗದ್ದೆ, ಕ್ವಾರಿ ಅಂತೆಲ್ಲಾ ಸಿ ಟಿ ರವಿ ಅವರನ್ನು ಸುತ್ತಾಡಿಸಿದ್ದಾರೆ. ಸಿ.ಟಿ ರವಿ ಬಂಧಿಸಿದ ಹಾಗೂ ಸುತ್ತಾಡಿಸಿದ ಅಧಿಕಾರಿ ವಿರುದ್ಧ ಹೋರಾಟ ಮಾಡುತ್ತೇವೆ. ರವಿ ಬಂಧನ ಬಳಿಕ ಫೋನ್ ಇಳಿಸದೇ ಪದೇ ಪದೇ ಮಾತಾಡುತ್ತಿದ್ದರು. ಅವರಿಗೆ ಯಾರು ಕಾಲ್ ಮಾಡಿದರು ಅನ್ನೋದು ಪತ್ತೆ ಹಚ್ಚಬೇಕು. ಅದಕ್ಕಾಗಿ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು.