ಬೆಂಗಳೂರು; ಸಿ ಟಿ ರವಿ ವಿಚಾರ ಕೋರ್ಟ್ ನಲ್ಲಿರೋದರಿಂದ ನಾನು ಆ ಬಗ್ಗೆ ಮಾತಾಡಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ವಿಷಯ ಕೋರ್ಟ್ ನಲ್ಲಿದೆ ನಾನು ಯಾವುದೇ ಕಮೆಂಟ್ ಮಾಡುವುದಕ್ಕೆ ಹೋಗಲ್ಲ . ಯಾವ ವಿಚಾಗಳನ್ನೂ ಅದರ ಬಗ್ಗೆ ಚರ್ಚೆ ಮಾಡುವುದು ಸರಿ ಕಾಣಲ್ಲ. ಯಾವುದೇ ಪ್ರಶ್ನೆಗೂ ನಾನು ಉತ್ತರ ಕೊಡೋಕೆ ಹೋಗಲ್ಲ. ಪೋಲೀಸ್ ಅವರು ಸರಿ ಮಾಡಿದ್ದೀವಿ ಅಂತ ಅವರ ವಾದ ಇರುತ್ತೆ. ಆದರೆ ಕೋರ್ಟ್ ನಲ್ಲಿ ಮ್ಯಾಟರ್ ಇದೆ ಯಾವುದು ಸರಿ ಯಾವುದು ತಪ್ಪು, ಅವರು ತೀರ್ಮಾನ ಮಾಡುತ್ತಾರೆ . ಬೇರೆ ಬೇರೆ ರೀತಿಯಲ್ಲಿ ಮಾಹಿತಿಗಳನ್ನ ಕೇಳುವ ಸಂದರ್ಭದಲ್ಲಿ ಇವರನ್ನ ಕೇಳದೆ ಜಡ್ಜ್ ಮೆಂಟ್ ಆಗಿದೆ ಅಂತ ಇದೆ. ಹೀಗಾಗಿ ಅದರ ಬಗ್ಗೆ ಟೀಕೆ ಮಾಡಲು ಆಗಲ್ಲ . ಸಭಾಪತಿಗಳು ದಾಖಲೆಗಳಿಲ್ಲ ಅಂತ ಹೇಳಿರೋದು ನನಗೆ ಗೊತ್ತಿಲ್ಲ ಎಂದಿದ್ದಾರೆ.
ಕೆಲವರು ಸದನ ಮುಗಿದ ಮೇಲೆ ಘಟನೆ ಅಂತ ಹೇಳ್ತಾರೆ . ಆದ್ದರಿಂದ ಸಭಾಪತಿಗಳಿಗೆ ಇದರಲ್ಲಿ ಏನು ಹೇಳೋಕೆ ಆಗಲ್ಲ ಅಂತ ಕೆಲವರು ವಿಶ್ಲೇಷಣೆ ಮಾಡುತ್ತಾರೆ .ಇನ್ನು ಕೆಲವರು ಸದನ ನಡೀತಾ ಇತ್ತು ಅಂತ ವಿಶ್ಲೇಷಣೆ ಮಾಡಿದ್ದಾರೆ. ಅದನ್ನೆಲ್ಲ ಈಗ ನಾನು ಮಾತನಾಡಲು ಹೋಗಲ್ಲ ಎಂದ ಕೋರ್ಟ್ ತೀರ್ಪು ಕಪಾಳಮೋಕ್ಷ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿ ಬಿಜೆಪಿಯವರು ಅದನ್ನೇ ಹೇಳಬೇಕು ಬೇರೆ ಏನು ಹೇಳೋಕೆ ಆಗಲ್ಲ ಎಂದರು.
ಪೊಲೀಸರು ಸಿಟಿ ರವಿ ಅವರನ್ನು ಸುತ್ತಾಡಿಸಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಆ ಮಾಹಿತಿಯನ್ನ ಕೇಳ್ತಾ ಇದ್ದೇನೆ ಮಾಹಿತಿ ಬಂದ ಮೇಲೆ ಹೇಳುತ್ತೇನೆ. ಸಿಟಿ ರವಿ ಮೇಲೆ ಹಲ್ಲೆ ಯತ್ನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ 24 ಜನರನ್ನು ಆ ಕ್ಷಣದಲ್ಲೇ ಅರೆಸ್ಟ್ ಮಾಡಿದ್ದಾರೆ. ಆನಂತರ ಅವರನ್ನ ಬಿಟ್ಟಿದ್ದಾರೆ. ಅರೆಸ್ಟ್ ಮಾಡದೇ ಇದ್ದಿದ್ರೆ ಇನ್ನೂ ಹೆಚ್ಚು ಘಟನೆಗಳು ಆಗುತ್ತಿತ್ತು ಎಂದರು. ಇನ್ನು ಬಂಧನಕ್ಕೆ ಒಳಗಾದವರನ್ನು ಬಿಟ್ಟಿದ್ದು ಯಾಕೆ ಎಂಬ ಪ್ರಶ್ನೆಗೆ ಎಲ್ಲದಕ್ಕೂ ಪ್ರಶ್ನೆ ಇದ್ದೇ ಇರುತ್ತೆ ಎಂದು ಹೇಳಿ ಗೃಹ ಸಚಿವ ಪರಮೇಶ್ವರ್ ಸುಮ್ಮನಾಗಿದ್ದಾರೆ.
ಎಲ್ಲಾ ಲೆಕ್ಕ ಚುಕ್ತಾ ಮಾಡ್ತೀವಿ ಎಂಬ ಬಿಜೆಪಿಗರ ಹೇಳಿಕೆ ಪ್ರತಿಕ್ರಿಯಿಸಿದ ಅವರು ಆಗಬಹುದು ಎಂದಿದ್ದಾರೆ. ಜಾಮೀನು ರದ್ದಿಗೆ ಮೇಲ್ಮನವಿ ಹಾಕುವ ವಿಚಾರಕ್ಕೆ ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ ಎಂದು ಹೇಳಿದ್ದಾರೆ. ಸಿಟಿ ರವಿ ನೀಡಿದ ದೂರಿಗೆ FIR ಆಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅವರು ಹೇಳಿಕೆ ಕೊಟ್ಟಿದ್ದಾರೆ ನಾನು ಕೂಡ ಗಮನಿಸಿದ್ದೇನೆ . ಮಾಧ್ಯಮಗಳಲ್ಲೂ ಕೂಡ ಪತ್ರಿಕೆಗಳಲ್ಲೂ ಕೂಡ ಬಂದಿದೆ . ವಿಚಾರ ಮಾಡುತ್ತೇವೆ ಎಂದ ಪರಮೇಶ್ವರ್ ಹೇಳಿದ್ದಾರೆ.
ಗೃಹ ಇಲಾಖೆ ಓವರ್ ಟೇಕ್ ಮಾಡಿ ಈ ಬೆಳವಣಿಗೆ ಆಯ್ತಾ ಎಂಬ ಪ್ರಶ್ನೆಗೆ ಆ ರೀತಿ ಮಾಡಕ್ಕೆ ಆಗುತ್ತಾ..?. ನಮ್ಮ ಮೇಲೆ ಮುಖ್ಯಮಂತ್ರಿಗಳು ಇದ್ದಾರೆ . ಮುಖ್ಯಮಂತ್ರಿ ಬಿಟ್ರೆ ಬೇರೆ ಯಾರು ಇಲ್ಲ. ಗೃಹ ಸಚಿವರ ಮೇಲೆ ಮುಖ್ಯಮಂತ್ರಿಗಳು ಇದ್ದಾರೆ .ಗೃಹ ಸಚಿವರ ಮೇಲೆ ಮಂತ್ರಿಗಳ ಮೇಲೆ ಮುಖ್ಯಂಮಂತ್ರಿ ಇದ್ದಾರೆ. ಅಷ್ಟು ಬಿಟ್ರೆ ಬೇರೇನೂ ಕಾಣಿಸ್ತಾಯಿಲ್ಲ .ನನಗೆ ಬೇಕಾದಷ್ಟು ಸ್ವಾತಂತ್ರ್ಯ ಇದೆ ಎಂದು ಪರಮೇಶ್ವರ್ ಹೇಳಿದ್ದಾರೆ.