ಮನೆ Latest News ದೇವ್ರೇ ಬಂದರೂ ಬೆಂಗಳೂರು ಸರಿ ಮಾಡಲು ಆಗೋಲ್ಲ ಎಂಬ ಡಿ ಕೆ ಹೇಳಿಕೆಗೆ ಸಿ...

ದೇವ್ರೇ ಬಂದರೂ ಬೆಂಗಳೂರು ಸರಿ ಮಾಡಲು ಆಗೋಲ್ಲ ಎಂಬ ಡಿ ಕೆ ಹೇಳಿಕೆಗೆ ಸಿ ಟಿ ರವಿ ತಿರುಗೇಟು

0

ಬೆಂಗಳೂರು; ದೇವ್ರೇ ಬಂದರೂ ಬೆಂಗಳೂರು ಸರಿ ಮಾಡಲು ಆಗೋಲ್ಲ ಎಂಬ ಡಿ ಕೆ ಹೇಳಿಕೆಗೆ  ಸಿ ಟಿ ರವಿ ತಿರುಗೇಟು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಡಿ ಕೆ ಶಿವಕುಮಾರ್ ಗೆ ಸ್ಕ್ವೇರ್ವಫೀಟ್ ಗೆ 100 ರೂಪಾಯಿ ತಗೋ ಅಂತಾ ದೇವ್ರು ಹೇಳಿದ್ನಾ. ಲಂಚ ಹೊಡಿ ಅಂತಾ ದೇವ್ರು ಹೇಳಿದ್ನಾ. ಲಂಚ ತಗೊ ಅಂತಾ ಯಾವ ದೇವರು ಹೇಳಿದ್ದ.ಇವರ ಉದ್ದೇಶವೇ ದುರುದ್ದೇಶವಾಗಿದ್ರೆ ಇಂತದ್ದಲ್ಲ ಆಗುತ್ತೆ .ಏನ್ ಮಾಡೋದು ಈ ಸರ್ಕಾರ ಬಂದಿದೆ ಎಂದ್ರು.

ಇದೇ ವಿಚಾರವಾಗಿ ಮಾತನಾಡಿದ ಶಾಸಕ ಡಾ.ಅಶ್ವತ್ಥ್ ನಾರಾಯಣ್  ಬೆಂಗಳೂರನ್ನ ದೇವರು ಬಂದರೂ ಸರಿ ಮಾಡಲು ಆಗೊಲ್ಲ ಎಂದು ಡಿ ಕೆ ಶಿ ಹೇಳಿದ್ದಾರೆ. ಸಿಎಂ ಮತ್ತು ಡಿಸಿಎಂ ನಡುವಿನ ತಿಕ್ಕಾಟವೇ ಇದಕ್ಕೆ ಕಾರಣ.ಡಿ ಕೆ ಶಿವಕುಮಾರ್ ಬೆಂಗಳೂರು ಉಸ್ತುವಾರಿ ಇರುವವರೆಗೂ ಸಿಎಂ ಹಣ ಕೊಡಲ್ಲ. ಇವರಿಬ್ಬರ ನಡುವಿನ ಸಂಘರ್ಷದಿಂದ ಬೆಂಗಳೂರು ಅಭಿವೃದ್ಧಿ ಆಗ್ತಾ ಇಲ್ಲ ಎಂದಿದ್ದಾರೆ.

ಜನರಿಗೆ ಹೇಗೆ ಮೋಸ ಮಾಡಬೇಕು ಅನ್ನೋ ಕಲೆ ಕಾಂಗ್ರೆಸ್ ನವರಿಗೆ ಕರಗತ ಆಗಿದೆ: ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ

ಬೆಂಗಳೂರು; ಜನರಿಗೆ ಹೇಗೆ ಮೋಸ ಮಾಡಬೇಕು ಅನ್ನೋ ಕಲೆ ಕಾಂಗ್ರೆಸ್ ನವರಿಗೆ ಕರಗತ ಆಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷವಾಗಿದೆ. ಪ್ರಾರಂಭದಲ್ಲಿ ಬೆಂಗಳೂರನ್ನ ಬ್ರಾಂಡ್ ಬೆಂಗಳೂರು, ಸಿಂಗಾಪುರ ಮಾಡ್ತೀವಿ ಅಂತ ಡಿಕೆಶಿ ಹೇಳಿದ್ರು. ಬಿಜೆಪಿ ಬೆಂಗಳೂರನ್ನ ಹಾಳು ಮಾಡಿದ್ದಾರೆ. ಕಸ ಬೀದೀಲಿ ಬೀಳ್ತಿತ್ತು, ನಾವೆಲ್ಲಾ ಸರಿ ಮಾಡ್ತೀವಿ ಅಂದ್ರು. ಬೆಂಗಳೂರಲ್ಲಿ ಮಳೆ ಬಂದ್ರೆ ಹಾಳಾಗ್ತಿತ್ತು. ನಾವೆಲ್ಲಾ ಸರಿ ಮಾಡ್ತೀವಿ ಅಂದ್ರು.ಮೂರು ವರ್ಷವಾದ್ರೂ ಬೆಂಗಳೂರನ್ನ‌ ಉದ್ದಾರ ಮಾಡೋಕೆ ಆಗಲ್ಲ.ದೇವರೇ ಬಂದ್ರೂ ಬೆಂಗಳೂರನ್ನ ಸರಿ ಮಾಡೋಕೆ ಆಗಲ್ಲ. ಫ್ಲಡ್ ಬಂದಾಗ ಅನೇಕ ಸಮಸ್ಯೆ ಆಯ್ತು. ಸಿದ್ದರಾಮಯ್ಯ ಅವರು ಬಂದ ಮೇಲೆ ಅನುದಾನ ಒಂದು ರೂಪಾಯಿ ಬಿಡುಗಡೆ ಆಗಿಲ್ಲ. ಜನರಿಗೆ ಹೇಗೆ ಮೋಸ ಮಾಡಬೇಕು ಅನ್ನೋ ಕಲೆ ಕಾಂಗ್ರೆಸ್ ನವರಿಗೆ ಕರಗತ ಆಗಿದೆ. ಗ್ಯಾರಂಟಿ ಹೆಸರೇಳಿ ಅಧಿಕಾರಕ್ಕೆ ಬಂದು, ಈಗ ಗ್ಯಾರಂಟಿ ಕೊಡ್ತಿಲ್ಲ. ಜಾರ್ಜ್ ಸಂಬಳಾನಾ ಅಂತಾರೆ, ಡಿಕೆಶಿ ಯಾವಾಗ ಆಗುತ್ತೋ ಅವಾಗ ಕೊಡ್ತೀವಿ ಅಂತಾರೆ.ಜನರಿಗೂ ಅವರು ಮೋಸಗಾರರು ಅನಿಸಿದೆ ಎಂದರು.

ಒಂದೇ ಒಂದು ಕಾಮಗಾರಿ ಲ್ಯಾಂಡ್ ಆಗಿರೋದು ಹೇಳಿ. ಮೆಟ್ರೋ ಕಾಮಗಾರಿ ಕೇಂದ್ರದ ಯೋಜನೆ.ಇವರು ಒಂದೇ ಒಂದು ಬೋಗಿ ತರೋಕೆ ಆಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.ರಂಜಾನ್ ಹಬ್ಬಕ್ಕೆ ಸಮಯ ರಿಯಾಯಿತಿ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಹೇಳಿದ್ದಾರೆ ನಾವೇನು ಹಿಂದೂಗಳಿಂದ ಗೆದ್ದಿಲ್ಲ, ಮುಸ್ಲೀಮರಿಂದ ಗೆದ್ದಿದ್ದೇವೆ ಅಂತಾರೆ. ಬೀದರ್‌ನ ಅನೇಕ ಶಾಸಕರು ಆ ರೀತಿ ಹೇಳಿದ್ದಾರೆ. ಕುಕ್ಕರ್ ಬ್ಲಾಸ್ಟ್ ಮಾಡಿದವನನ್ನ ಬ್ರದರ್ ಅಂತಾರೆ. ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗ್ತಾರೆ. ಉದಯಗಿರಿ ಗಲಭೆಯವರನ್ನ ಬಿಟ್ಟಿದ್ದಾರೆ.ರಂಜಾನ್ ಮುಗಿಯುವವರೆಗೂ ರಜೆ ಕೊಟ್ಟುಬಿಡಿ. ಟ್ರಾಫಿಕ್ ಆದ್ರೂ ಕಡಿಮೆ ಆಗುತ್ತೆ. ಬಿರಿಯಾನಿ ತಿನ್ಕೊಂಡು ಆರಾಮವಾಗಿ ಇರಲಿ ಎಂದು ಸಮಯ ವಿನಾಯಿತಿ ಕೇಳಿದವರಿಗೆ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.

ಪಿಯುಸಿ ಪರೀಕ್ಷೆಗೆ ಹಿಜಾಬ್ ಹಾಕಲು ಅವಕಾಶ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಬಗ್ಗೆ ನನಗೆ ಮಾಹಿತಿ ಇಲ್ಲ. ತಿಳಿದು ಮಾತಾಡ್ತೀನಿ ಎಂದಿದ್ದಾರೆ.