ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ. ಸದಾಶಿವನಗರದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಗೋ ಹತ್ಯೆ ಹಾಗೂ ಹಲ್ಲೆ ಪ್ರಕರಣಗಳ ಹೆಚ್ಚಳವಾದ ಬಗ್ಗೆ ಮಾತನಾಡಿದ ಅವರು ಇದಕ್ಕೆ ಏನಾದ್ರೂ ಉಪಾಯ ಕಂಡು ಹಿಡಿಯಬೇಕಿದೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇಂತಹ ಮನಸ್ಥಿತಿ ಇರೋರನ್ನು ಗುರುತಿಸಬೇಕಿದೆ. ಯಾವುದಾದ್ಕೂ ಸಂಘಟನೆಯೇ, ಇಂಡಿವಿಜ್ಯೂವಲ್ ಇದ್ದಾರಾ ತನಿಖೆ ಆಗಬೇಕು. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ಕುರಿತು ಸೂಚನೆ ಕೊಡಲಾಗಿದೆ. ಸೆಂಟ್ರಲ್ ಜೈಲ್ ವಿಭಾಗ ಮಾಡುವ ಯಾವುದೇ ವಿಚಾರ ಸದ್ಯಕ್ಕೆ ಇಲ್ಲ. ಜೈಲಿನ ಸೆಕ್ಯೂರಿಟಿ ಟೈಟ್ ಆಗಬೇಕು. ಜೈಲ್ ಸಿಬ್ಬಂದಿ ನೇಮಕಾತಿ ಆಗಬೇಕು. ಜೈಲ್ ಡಿವೈಡ್ ಪ್ರಪೊಸಲ್ ಸದ್ಯಕ್ಕೆ ಇಲ್ಲ ಎಂದಿದ್ದಾರೆ.
ಮೈಕ್ರೋ ಫೈನಾನ್ಸ್ ದೋಖಾ ಬಗ್ಗೆ ಮಾತನಾಡಿದ ಅವರು ಫೈನಾನ್ಸ್ ಇಲಾಖೆಯವರು ಇದಕ್ಕೆ ದಾರಿ ಮಾಡಬೇಕು ನಾವಲ್ಲ ಎಂದಿದ್ದಾರೆ. ಇನ್ನು ರಾಜ್ಯಾದ್ಯಂತ ಸರಣಿ ದರೋಡೆ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಶೀಘ್ರವಾಗಿ ಸೆಕ್ಯೂರ್ ಮಾಡ್ತೀವಿ. ಅವರು ಬೇರೆ ರಾಜ್ಯದವರು ಅಂತ ಮಾಹಿತಿ ಬಂದಿದೆ ಎಂದ್ರು.[ ಮೈಕ್ರೋ ಫೈನಾನ್ಸ್ ಗೆ ಕಡಿವಾಣ ಹಾಕುವ ಬಿಲ್ ತರುವ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಲ್ ತರೋ ವಿಚಾರ ಫೈನಾನ್ಸ್ ಇಲಾಖೆ ಮಾಡುತ್ತೆ. ಮೋಸ ಆದಾಗ ದೂರು ಕೊಟ್ಟಾಗ ಅದನ್ನ ತನಿಖೆ ಮಾಡುತ್ತೇವೆ. ದರ ಕಾನೂನನ್ನು ಹಣಕಾಸು ಇಲಾಖೆ ಮಾಡುತ್ತೆ ಎಂದರು. ಮಂಗಳೂರು ದರೋಡೆ ಬಗ್ಗೆ ಮಾತನಾಡಿದ ಅವರು ಮಂಗಳೂರಿನಲ್ಲಿ ಎರಡು ಕಾರು ಬಳಸಲಾಗಿದೆ.ಎಲ್ಲೆಲ್ಲಿ ಮಾಹಿತಿಯಿದೆ ಅಲ್ಲಿ ಟೀಮ್ ಹೋಗಿದೆ. ಬೇರೆ ರಾಜ್ಯದವರು ಎಂದು ಪ್ರಾಥಮಿಕ ಮಾಹಿತಿ ಇದೆ. ಕೆಲವು ನಿಖರ ಮಾಹಿತಿಗಳೂ ಸಿಕ್ಕಿವೆ.ಪೊಲೀಸ್ ಇಲಾಖೆಯಿಂದ ಹಲವು ಸೂಚನೆ ಕೊಡಲಾಗಿದೆ. ಎಟಿಎಂಗೆ ಹಣ ಫಿಲ್ ಮಾಡುವಾಗ ಆರ್ಮಡ್ ಗಾರ್ಡ್ ಇರಬೇಕು.ಬೀದರ್ ಮಂಗಳೂರು ಎರಡು ಕಡೆ ಆರ್ಮರ್ಡ್ ಗಾರ್ಡ್ ಇರಲಿಲ್ಲ. ಲ್ಯಾಪ್ಸ್ ಆದಾಗ ಅವಕಾಶಕ್ಕೆ ಕಾಯ್ತಿರ್ತಾರೆ.ಸೆಕ್ಯೂರಿಟಿ ಟೈಟ್ ಮಾಡಬೇಕು ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಹೊರಟ್ಟಿ ಬದಲಾವಣೆ ಗೆ ಕಾಂಗ್ರೆಸ್ ನಲ್ಲಿ ಚಿಂತನೆ ವಿಚಾರದ ಬಗ್ಗೆ ಮಾತನಾಡಿದ ಅವರು ಯಾವ ಹಂತದಲ್ಲಿ ಚರ್ಚೆ ಆಗಿದೆ ಗೊತ್ತಿಲ್ಲ.ಬಿಜೆಪಿ ನಮಗೆ ಒಡೆದ ಮನೆ ಅಂತಿದ್ರು. ಇದೀಗ ಅವರ ಮನೆಗೆ ಎಷ್ಟು ಬಾಗಿಲು ಅಂತ ಕೇಳಬೇಕು ಅಲ್ವಾ?. ನಮಗೆ ಹೇಳ್ತಿದ್ದಿರಲ್ವಾ?ಈಗ ಎನ್ ಮಾಡ್ತಿರಿ ಅಂತ ಕೇಳುತ್ತೇನೆ ಎಂದರು.ಸುರ್ಜೇವಾಲಾ ವಿರುದ್ದ ಕೆಲ ಹಿರಿಯ ಸಚಿವರಿಂದ ಹೈಕಮಾಂಡ್ ಗೆ ದೂರು ವಿಚಾರದ ಬಗ್ಗೆ ಮಾತನಾಡಿ ಅದು ನನಗೆ ಗೊತ್ತಿಲ್ಲ ಎಂದಿದ್ದಾರೆ.