ಬೆಂಗಳೂರು : ಮೈಸೂರಿನ ಕೆ ಆರ್ ನಗರದ ಸಂತ್ರಸ್ತೆ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ವಿರುದ್ಧ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ದೂರು ದಾಖಲಾಗುತ್ತಿದ್ದಂತೆ ಎಸ್ ಐಟಿ ಭವಾನಿ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿತ್ತು. ಇದಾದ ಬೆನ್ನಲ್ಲೇ ಭವಾನಿ ರೇವಣ್ಣ ತಲೆ ಮರೆಸಿಕೊಂಡಿದ್ದರು. ಸುಮಾರು 15 ದಿನಗಳ ಕಾಲ ಯಾರ ಸಂಪರ್ಕಕ್ಕೂ ಸಿಗದೇ ಭವಾನಿ ಎಸ್ಕೇಪ್ ಆಗಿದ್ದರು. ಎರಡೆರಡು ಬಾರಿ ನೋಟಿಸ್ ನೀಡಿದ್ರು ನೋ ರಿಪ್ಲೈ. ತಾನು ಹೊಳೆನರಸೀಪುರದ ಮನೆಯಲ್ಲೇ ವಿಚಾರಣೆಗೆ ಹಾಜರಾಗ್ತೀನಿ ಅಂತಾ ಭವಾನಿ ರೇವಣ್ಣ ಹೇಳಿದ್ದರಿಂದ ಕೊನೆಗೆ ಎಸ್ ಐಟಿ ಅಧಿಕಾರಿಗಳು ಅಲ್ಲೇ ಹೋಗಿ ಎರಡು ಕಾದ್ರೂ ಆಕೆಯ ಸುಳಿವಿಲ್ಲ. ಇದರ ನಡುವೆ ಭವಾನಿ ರೇವಣ್ಣ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಬಂದನ ಭೀತಿಯಲ್ಲಿದ್ದ ಭವಾನಿ ರೇವಣ್ಣೆಗೆ ಜೂನ್ 7 ರಂದು ಜಾಮೀನು ಸಿಗುತ್ತಿದ್ದಂತೆ ಎಸ್ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಕೋರ್ಟ್ ಕೂಡ ಎಸ್ ಐಟಿ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಭವಾನಿ ರೇವಣ್ಣ ಅವರನ್ನು ಬಂಧಿಸುವಂತಿಲ್ಲ. ಹಾಗೂ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುವಂತಿಲ್ಲ. ಮತ್ತು 5 ಗಂಟೆ ವೇಳೆಗೆ ಸಂಜೆ ಕಳುಹಿಸುವಂತೆ ಹೇಳಿತ್ತು.
ಇನ್ನುಈಗಾಗಲೇ ಭವಾನಿ ರೇವಣ್ಣ ಕಿಡ್ನ್ಯಾಪ್ ಪ್ರಕರಣದಲ್ಲಿ ಪಡೆದಿದ್ದ ನಿರೀಕ್ಷಣಾ ಜಾಮೀನಿನ ಅವಧಿ ಮುಗಿದ ಹಿನ್ನೆಲೆ ಇದೀಗ ಕೋರ್ಟ್ ಅದನ್ನು ವಿಸ್ತರಿಸಿ ಆದೇಶ ನೀಡಿದೆ. ಅಲ್ಲದೇ ಜಾಮೀನು ಅರ್ಜಿ ವಿಚಾರಣೆ ಪೂರ್ಣವಾಗಿದ್ದು ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ. ಜಾಮೀನು ಅರ್ಜಿಯ ಅವಧಿ ವಿಸ್ತರಣೆ ಆಗಿರೋದರಿಂದ ಸದ್ಯ ಭವಾನಿ ರೇವಣ್ಣ ಕೊಂಚ ನಿರಾಳರಾಗಿದ್ದಾರೆ.
ಏನಿದು ಕಿಡ್ನ್ಯಾಪ್ ಪ್ರಕರಣ?
ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಹೊರ ಬಂದ ಬೆನ್ನಲ್ಲೇ ಮೇ 2 ರಂದು ಮೈಸೂರಿನ ಕೆ ಆರ್ ನಗರ ಠಾಣೆಯಲ್ಲಿ ಮಹಿಳೆಯೊಬ್ಬರ ಪುತ್ರ ದೂರು ನೀಡಿದ್ದ. ನನ್ನ ತಾಯಿಯನ್ನು ಅಪಹರಣ ಮಾಡಲಾಗಿದೆ. ಪ್ರಜ್ವಲ್ ವೀಡಿಯೋದಲ್ಲಿ ನನ್ನ ತಾಯಿ ಇರೋ ಬಗ್ಗೆ ಸ್ನೇಹಿತನಿಂದ ತಿಳಿಯಿತು. ಆ ಬಳಿಕ ಮನೆಯಲ್ಲಿದ್ದ ನನ್ನ ತಾಯಿಯನ್ನು ಭವಾನಿ ರೇವಣ್ಣ ಅವರ ಸಂಬಂಧಿ ಸತೀಶ್ ಬಾಬು ಎಂಬವರು ರೇವಣ್ಣ ಹಾಗೂ ಭವಾನಿ ರೇವಣ್ಣ ಅವರು ಬರಲು ಹೇಳಿದ್ದಾರೆ ಎಂದು ಕರೆದುಕೊಂಡು ಹೋಗಿದ್ದಾರೆ. ಆದರೆ ಹಾಗೇ ಕರೆದುಕೊಂಡು ಹೋದವರು ತಾಯಿಯನ್ನು ವಾಪಾಸ್ ಕರೆ ತಂದಿಲ್ಲ. ಆಕೆಯನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದ. ಅದರಂತೆ ರೇವಣ್ಣ ಮೊದಲ ಆರೋಪಿ, ಭವಾನಿ ಎರಡನೇ ಆರೋಪಿ, ಸತೀಶ್ ಬಾಬು ಮೂರನೇ ಆರೋಪಿಯೆಂದು ದೂರು ದಾಖಲಾಗಿತ್ತು.