ಮನೆ ಪ್ರಸ್ತುತ ವಿದ್ಯಮಾನ ಸಿಎಂ ರಾಜೀನಾಮೆಗೆ ಕ್ಷಣಗಣನೆ ಆರಂಭವಾಗಿದೆ: ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ಫೋಟಕ ಹೇಳಿಕೆ.

ಸಿಎಂ ರಾಜೀನಾಮೆಗೆ ಕ್ಷಣಗಣನೆ ಆರಂಭವಾಗಿದೆ: ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ಫೋಟಕ ಹೇಳಿಕೆ.

0

ಮೈಸೂರು; ಸಿಎಂ ರಾಜೀನಾಮೆಗೆ ಕ್ಷಣಗಣನೆ ಆರಂಭವಾಗಿದೆ, ದಸರಾ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡೋದು ಫಿಕ್ಸ್ ಅಂತಾ ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ‌. ಅಂತಹ ಕೆಟ್ಟ ಪರಿಸ್ಥಿತಿ ಸಿಎಂಗೆ ಬಂದೊದಗಿದೆ. ಮತ್ತೊಂದು ಕಡೆ ಸಚಿವರು ರಾಜ್ಯ ಪ್ರವಾಸ ಮಾಡ್ತಿಲ್ಲ‌‌. ಅಭಿವೃದ್ದಿ ಕೆಲಸಗಳ ಮಾತೇ ಇಲ್ಲ. ಸಿದ್ದರಾಮಯ್ಯರೇ ಮುಖ್ಯಮಂತ್ರಿಯಾಗಿರ್ತಾರೆ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಸತೀಶ್ ಜಾರಕಿಹೊಳಿಯರನ್ನ ದೆಹಲಿಗೆ ಸಿದ್ದರಾಮಯ್ಯರೇ ಕಳುಹಿಸಿಕೊಟ್ಟಿದ್ದಾರೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೆ ಕೊಡ್ತಾರೆ.ನಮ್ಮ ಪಾದಯಾತ್ರೆಯ ಸಮಾರೋಪವಾದ ದಿನದಿಂದಲೇ ರಾಜೀನಾಮೆಗೆ ಕ್ಷಣಗಣನೆ  ಆರಂಭವಾಗಿದೆ ಎಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ನಾನು ರಾಜಕೀಯ ಹೇಳಿಕೆಯನ್ನ ಕೊಡ್ತಿಲ್ಲ. ದಸರಾ ಸಂದರ್ಭದಲ್ಲಿ ಹೇಳ್ತಿದ್ದೇನೆ ಯಾವ ಸಂದರ್ಭದಲ್ಲಿಯಾದ್ರು ರಾಜೀನಾಮೆ ಕೊಡ್ತಾರೆ.ರಾಜೀನಾಮೆ ಕೊಡುವ ವಾತಾವರಣ ನಿರ್ಮಾಣವಾಗಿದೆ. ಹೈಕಮಾಂಡ್ ಕೂಡ ರಾಜೀನಾಮೆ ಪಡೆಯುವ ಚಿಂತನೆ ಮಾಡಿದೆ.ಹೈಕಮಾಂಡ್ ಏನ್ ಚರ್ಚೆ ಮಾಡ್ತಿದೆ ಎಂದು ಸಿದ್ದರಾಮಯ್ಯರಿಗೂ ಗೊತ್ತಿದೆ.ನಮ್ಮ ಉದ್ದೇಶ ಸಿದ್ದರಾಮಯ್ಯ ಇಳಿಸಬೇಕೆಂಬುದಲ್ಲ. ಭ್ರಷ್ಟ ಕಾಂಗ್ರೆಸ್, ಸಿಎಂ ರನ್ನ ರಾಜ್ಯಕ್ಕೆ ಶಾಪವಾಗಿದೆ‌.ಆ ನಿಟ್ಟಿನಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಂದರ್ಭದಲ್ಲಿ ನಿಂತಿದ್ದೇವೆ‌.ದಸರಾ ಆದ ಮೇಲೆ ರಾಜೀನಾಮೆ ಕೊಡುವ ಬಗ್ಗೆ ಮಾಹಿತಿ ಇದೆ ಎಂದಿದ್ದಾರೆ,

ಇನ್ನು ಸಿಎಂ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅಷ್ಟೇ ಅಲ್ಲ. ಏಳೆಂಟು ಜನ ಸಿಎಂ ಖುರ್ಚಿಗೆ ಟವಲ್ ಹಾಕಿ ಕುಳಿತಿದ್ದಾರೆ.ಯಾರು ಮುಖ್ಯಮಂತ್ರಿಯಾಗ್ತಾರೆ ನಮಗೆ ಗೊತ್ತಿಲ್ಲ ಎಂದರು. ಅದು ಕಾಂಗ್ರೆಸ್ ಪಕ್ಷದ ಆಂತರೀಕ ವಿಚಾರ.  ಆದ್ರೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಸತ್ಯ ಎಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ ಚಾಮುಂಡಿಬೆಟ್ಟದಲ್ಲಿ ಜಿಟಿಡಿ ಮಾರ್ಮಿಕ ಹೇಳಿಕೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು  ಜಿಟಿಡಿ ಹೇಳಿಕೆ ಜೆಡಿಎಸ್ ಪಕ್ಷದ ಆಂತರೀಕ ವಿಚಾರ. ಅದನ್ನ ಸರಿ ಮಾಡಿಕೊಳ್ಳುವ ಶಕ್ತಿ ಕುಮಾರಸ್ವಾಮಿ ಅವರಿಗಿದೆ. ಅದು ಅವರ ವೈಯಕ್ತಿಕ ವಿಚಾರ. ನಾನು‌ ಅದರ ಬಗ್ಗೆ ಟೀಕೆ ಮಾಡಲ್ಲ ಎಂದರು. ಇದೇ ವೇಳೆ ಮಳೆಯಿಂದ ಬೆಂಗಳೂರಲ್ಲಿ ಸಾಕಷ್ಟು ತೊಂದರೆ ಆಗಿರುವ ಬಗ್ಗೆ ಮಾತನಾಡಿದ ಅವರು ರಾಜ್ಯದಲ್ಲಿ ಎಲ್ಲಿದೆ ಸರ್ಕಾರ ಎಂದು ಪ್ರಶ್ನಿಸಿದ್ದಾರೆ. ಅಜಾಗರಕತೆ ಸೃಷ್ಟಿಯಾಗಿದೆ. ಅಭಿವೃದ್ದಿ ಇಲ್ಲ, ಸಚಿವ ರಾಜ್ಯ ಪ್ರವಾಸ ಮಾಡ್ತಿಲ್ಲ. ರಾಜ್ಯ ಸರ್ಕಾರ ಬದಿಕಿದ್ಯೋ ಸತ್ತಿದ್ಯೋ ಎಂದು ಜನರೇ ಪ್ರಶ್ನೆ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು ರಾಧಮೋಹನ್ ಜೀ ಕುಮಾರಸ್ವಾಮಿ ದೆಹಲಿಯಲ್ಲಿ ಭೇಟಿ ಮಾಡಿದ್ರು‌‌. ಅಲ್ಲಿ ಏನೇನ್‌ ಚರ್ಚೆಯಾಗಿದೆ ನನಗೆ ಮಾಹಿತಿ ಇಲ್ಲ. ಪಕ್ಷದ ವರಿಷ್ಠರ ಜೊತೆ ಮಾತನಾಡ್ತೇನೆ.ಯೋಗೇಶ್ವರ್ ಗೆ ಕ್ಷೇತ್ರದಲ್ಲಿ ತನ್ನದೆ ಶಕ್ತಿಯಿದೆ.

ಟಿಕೆಟ್ ಕೇಳೋದು ನ್ಯಾಯ ಸಮ್ಮತವಾಗಿದೆ ಎಂದು ಚನ್ನಪಟ್ಟಣ ಟಿಕೆಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಅವರು ರಿಯ್ಯಾಕ್ಟ್ ಮಾಡಿದ್ರು.