ಬೆಂಗಳೂರು: ಜಾತಿ ಗಣತಿ ಬಗ್ಗೆ ಪರಿಷತ್ ಸದಸ್ಯ ನಾಗರಾಜ್ ಯಾದವ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಗೊಲ್ಲ ಸಮುದಾಯ ವಿಚಾರವಾಗಿ ಆಕ್ಷೇಪ ಇದೆ. ನಾವು ೨೫ ಲಕ್ಷಕ್ಕೂ ಹೆಚ್ಚು ಜನ ಇದ್ದೇವೆ.ಆದರೆ ೧೦ ಲಕ್ಷ ಮಾತ್ರ ತೋರಿಸಿದ್ದಾರೆ.ಇದನ್ನ ಮೊದಲು ಸರಿ ಮಾಡಬೇಕಿದೆ.ಮೊದಲು ೯೫ ಜಾತಿಗಳು ಕೆಟಗರಿ ೧ ರಲ್ಲಿ ಇತ್ತು ಮೀಸಲಾತಿ ಪ್ರಮಾಣ ಕಡಿಮೆ ಇತ್ತು. ಇದೀಗ ೧೪೭ ಜಾತಿಗಳನ್ನು ಕೆಟಗರಿ ೧ ನಲ್ಲಿ ಸೇರಿಸಲಾಗಿದೆ. ಗೊಲ್ಲರಲ್ಲಿಯೇ ೨೮ ಉಪ ಜಾತಿ ಇದೆ. ಅದರಲ್ಲಿ ಯಾದವ ಸಮುದಾಯ ಒಂದು. ಗೊಲ್ಲ ಸಮುದಾಯವನ್ನು ಕೆಟಗರಿ ೧ಎ ನಲ್ಲಿ ಹಾಕಿದ್ದಾರೆ ಎಂದಿದ್ದಾರೆ.ಆದರೆ ಯಾದವ ಸಮುದಾಯವನ್ನ ೧ಬಿ ಗೆ ಹಾಕಿದ್ದಾರೆ. ಹೀಗಾಗಿ ನಾನು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತೇನೆ.ಜನಸಂಖ್ಯೆ ಅನುಗುಣವಾಗಿ ಕೆಟಗರಿ ನೋಡಬೇಕು.ತೆಲಂಗಾಣದಂತೆ ಇಲ್ಲೂ ಮೀಸಲಾತಿ ವಿಸ್ತರಣೆ ಮಾಡಬೇಕು ಎಂದಿದ್ದಾರೆ.
ಕೆಟಗರಿ-೧ ಗೆ ಕ್ರೀಮಿ ಲೇಯರ್ ಹಾಕಬೇಕು ಅಂತ ಶಿಫಾರಸ್ಸು ಮಾಡಿದ್ದು ಯಾವ ನ್ಯಾಯ?. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಕ್ರೀಮಿಲೇಯರ್ ಶಿಫಾರಸನ್ನು ಒಪ್ಪಲೇಬಾರದು. ನಮ್ಮ ಸಮುದಾಯ ಹಿಂದುಳಿದಿದೆ. ಅದರೂ ಕ್ರೀಮಿಲೇಯರ್ ಹಾಕಿದ್ದಾರೆ ಇದು ಸರಿಯಲ್ಲ. ಸಚಿವರ ಪಾದಾರವಿಂದಗಳಿಗೆ ಕೈ ಮುಗಿದು ಪ್ರಾರ್ಥನೆ.ಯಾವುದೇ ಕಾರಣಕ್ಕೂ ಕೆನೆಪದರ ನೀತಿಯನ್ನು ಒಪ್ಪಬೇಡಿ. ೧೪೭ ಜಾತಿಗಳನ್ನು ಕೆಟಗರಿ೧ ರಲ್ಲಿ ಸೇರಿಸಿದ್ದಕ್ಕೆ ಕನಿಷ್ಟ ೮-೧೦% ಮೀಸಲಾತಿ ನೀಡಲೇಬೇಕು ಎಂದಿದ್ದಾರೆ.
ನಾವು ಯಾವುದೇ ಮೀಸಲಾತಿ ಯ ವಿರೋಧಿ ಅಲ್ಲ: ಮಾಜಿ ಸಿಎಂ ಸದಾನಂದಗೌಡ ಹೇಳಿಕೆ
ಬೆಂಗಳೂರು: ನಾವು ಯಾವುದೇ ಮೀಸಲಾತಿ ಯ ವಿರೋಧಿ ಅಲ್ಲ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾವು ಯಾವುದೇ ಮೀಸಲಾತಿ ಯ ವಿರೋಧಿ ಅಲ್ಲ. ಆದ್ರೆ ತಪ್ಪು ಲೆಕ್ಕಾಚಾರ ಮಾಡೋ ಮೂಲಕವೇ ಯಾರದ್ದೋ ಶಕ್ತಿ ಕುಂದಿಸೋ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಸಮುದಾಯದ ಮೂಲಕ ವಿರೋಧ ಮಾಡುತ್ತಿದ್ದಾರೆ.ಯಾವುದೇ ಪ್ರತಿಷ್ಟೆಗೆ ಯಾವುದೇ ಸಮುದಾಯ ಯಾಕೆ ವಿರೋಧ ಮಾಡುತ್ತಿದೆ?.ಸಮುದಾಯದ ಲೆಕ್ಕ ಕಡಿಮೆ ಮಾಡಿ ಹಕ್ಕು ಮೊಟಕುಗೊಳಿಸೋ ಯತ್ನ ಮಾಡುತ್ತಿದ್ದಾರೆ.ಕಾಂತರಾಜು ಅವರ ವರದಿ ವೈಜ್ಞಾನಿಕ ವಾಗಿ ನಡೆದಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಯಾರೋ ಮನೆಗೆ ಹೋಗಿದ್ದಾರೆ ಅಂದ್ರೆ ಹೇಗೆ? .ನಾನು ಶ್ರೀಗಳ ಜೊತೆ ಮಾತಾಡಿಲ್ಲ, ಅವರು ಜೊತೆ ಮಾತಾಡುತ್ತೇವೆ.ಇನ್ನೂ ಚರ್ಚೆ ಆಗಬೇಕು, ನಿರ್ಧಾರ ಆಗ್ಬೇಕು. ನಾವು ಮೀಸಲಾತಿ ವಿರೋಧಿಗಳು ಅಲ್ಲ.ತಪ್ಪು ಲೆಕ್ಕ ಕೊಡಲಾಗಿದೆ, ಸಂಖ್ಯೆಗಳನ್ನು ಕಮ್ಮಿ ಮಾಡಿ ಯಾರದ್ದೋ ಶಕ್ತಿ ಕುಂದಿಸುವ ಪ್ರಯತ್ನ ನಡೀತಿದೆ. ಸಿದ್ದರಾಮಯ್ಯ ಅವರ ಈ ಪ್ರಯತ್ನಗಳನ್ನು ನಮಗಮ ಸಮಾಜ ಸಹಿಸಲ್ಲ. ವರದಿಯನ್ನು ವೈಜ್ಞಾನಿಕವಾಗಿ ಮಾಡಲಿ.ಎಲ್ರೂ ವರದಿ ವೈಜ್ಞಾನಿಕವಾಗಿ ಇಲ್ಲ ಅಂತಿದ್ರೂ ಸಿದ್ದರಾಮಯ್ಯ ಕಿವುಡರಾಗಿದ್ದಾರೆ.ಸಿದ್ದರಾಮಯ್ಯ ಹೀಗೇ ಮುಂದುವರೆದರೆ, ಅವರು ಅವರ ಕೊನೆಯ ದಿನಗಳನ್ನು ಎಣಿಸಬೇಕಾಗುತ್ತದೆ ಎಂದಿದ್ದಾರೆ.
ಮಲೆಯಾಲಂನಲ್ಲಿ ಎಂಟು ಎಂಟು ಅಂದ್ರೆ ಹದಿನೆಂಟು ಅನ್ನೋ ಮಾತಿದೆ.. ಅದರಂತಾಗಿದೆ ಜಾತಿ ಜನಗಣತಿ ವರದಿ.ಸಮುದಾಯಗಳ ತಪ್ಪು ಲೆಕ್ಕ ಕೊಡುವ ಸಿದ್ದರಾಮಯ್ಯ ವ್ಯವಹಾರಗಳನ್ನು ನಮ್ಮ ಸಮಾಜ ಒಪ್ಪಲ್ಲ.ಪ್ರಬಲ ಸಮುದಾಯಗಳ ವಿರೋಧ ಮೊದಲಿಂದಲೂ ಸಿದ್ದರಾಮಯ್ಯ ಮಾಡ್ತಾ ಬರ್ತಿದ್ದಾರೆ.ಈಗ ತಮ್ಮ ಪಕ್ಷದಲ್ಲಿ ತಮಗೊಬ್ಬ ಸ್ಪರ್ಧಿ ಇದ್ದಾರೆ ಅಂತ ನಿಮ್ಮ ವೈಯಕ್ತಿಕ ಪ್ರತಿಷ್ಠೆಗೆ ಇಡೀ ಸಮಾಜ ಯಾಕೆ ಬಲಿ ಕೊಡ್ತೀರಿ?.ನಮ್ಮ ಸಮುದಾಯದ ಸಂಖ್ಯೆ ಕಡಿಮೆ ಮಾಡಿ, ನಿಯಂತ್ರಣದಲ್ಲಿ ಇಟ್ಕೊಳ್ಳೋ ಪ್ರಯತ್ನ ಮಾಡಲಾಗ್ತಿದೆ.ಹಕ್ಕುಗಳನ್ನು ಕಿತ್ಕೊಳ್ಳೋ ಪ್ರಯತ್ನ ಮಾಡಿದರೆ ಸಿದ್ದರಾಮಯ್ಯ ಕೊನೇ ದಿನಗಳನ್ನು ಎಣಿಸುವ ಕಾಲ ಬರುತ್ತೆ.ತಮ್ಮ ಮನೆಗಳಿಗೆ ಸಮೀಕ್ಷೆ ಮಾಡೋರು ಬಂದಿಲ್ಲ ಅಂತ ಹೇಳೋರೇ ಹೆಚ್ಚು. ಹಿಂದುಳಿದ ಆಯೋಗದವ್ರು ಮನೆಗಳ ಸಮೀಕ್ಷೆ ಮಾಡದೇ ಕೂತ್ಕೊಂಡು ಸಿನಿಮಾ ನೋಡ್ತಿದ್ರಾ?.ಸಿದ್ದರಾಮಯ್ಯ ಅಹಂಕಾರದ ತುತ್ತ ತುದಿಗೆ ತಲುಪಿದ್ದಾರೆ.ನಾನು ವರದಿ ಬಗ್ಗೆ ಶ್ರೀಗಳ ಜತೆ ಇವತ್ತು ಮಾತಾಡ್ತೇನೆ, ಪಕ್ಷದವರ ಜತೆಗೂ ಮಾತಾಡ್ತೇನೆ. ಸಿದ್ದರಾಮಯ್ಯ ಅವರ ದುರಹಂಕಾರ ಪ್ರವೃತ್ತಿ, ಒಂದು ಸಮಾಜದ ಮೇಲೆ ಗದಾಪ್ರಹಾರ ನಾವು ಯಾವತ್ತಿಗೂ ಸಹಿಸಲ್ಲ.ಇವತ್ತು ಡಿಕೆಶಿ ಅವರ ಶಾಸಕರ ಸಭೆ ಕರೆದಿದ್ದಾರೆ. ನೋಡೋಣ ಏನಾಗುತ್ತೆ ಅಂತ ತಿಳ್ಕೊಂಡು ಮುಂದುವರೆಯುತ್ತೇವೆ ಎಂದಿದ್ದಾರೆ.