ಬೆಂಗಳೂರು; ಕಾಂಗ್ರೆಸ್ ನಲ್ಲಿ ಸಾಲು ಸಾಲು ಡಿನ್ನರ್ ಪಾರ್ಟಿ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು ಇದು ಒಂದು ರೀತಿಯ ಸಿಎಂಗೆ ಬೀಳ್ಕೊಡುಗೆ ಕಾರ್ಯಕ್ರಮ ಎಂದಿದ್ದಾರೆ.
ಸಾಲು ಸಾಲು ಡಿನ್ನರ್ ಪಾರ್ಟಿ ಮಾಡಿ, ಸಿಎಂಗೆ ಬೀಳ್ಕೊಡುಗೆ ಸಮಾರಂಭ ಕೊಡ್ತಿದ್ದಾರೆ. ಒದ್ದು ಕಿತ್ಕೊತೀನಿ ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇವರಿಗೆ ಡಿಸೆಂಬರ್ ವರೆಗೆ ಡೆಡ್ ಲೈನ್ ಇದೆ. ಒಡನಾಡಿಯಾಗಿದ್ದ ಸಿದ್ದರಾಮಯ್ಯಗೆ ಈ ಡಿನ್ನರ್ ಪಾರ್ಟಿ ಫೇರ್ ವೇಲ್ ಪಾರ್ಟಿ ಇದ್ದ ಹಾಗೆ. ಈ ಹಿಂದೆ ಮೇಯರ್ ಅವಧಿ ಮುಗಿದ ಮೇಲೆ ನಾವು ಬೀಳ್ಕೊಡುಗೆ ಇಟ್ಟುಕೊಳ್ತಿದ್ವಿ.ಆ ರೀತಿ ಆಗಿದೆ ಇವರ ಡಿನ್ನರ್ ಮೀಟಿಂಗ್. ಡಿಕೆಶಿ ಯಾವಾಗ ಡಿನ್ನರ್ ಹಾಕಿಸುತ್ತಾರೋ ಆಗ ಈ ಸರ್ಕಾರ ಬೀಳುತ್ತೆ ಅಂತ ಅರ್ಥ. ಹೆಚ್ಚು ಹೆಚ್ಚು ಡಿನ್ನರ್ ಮೀಟಿಂಗ್ ಮಾಡೋದರಿಂದ ಆದಷ್ಟು ಬೇಗ ಸಿದ್ದರಾಮಯ್ಯ ಮನೆಗೆ ಹೋಗ್ತಾರೆ. 20 ಸಾರಿ ನಾನೇ ಸಿಎಂ, ನಾನೇ ಸಿಎಂ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಎಸ್.ಎಂ ಕೃಷ್ಣ ಅವರು ಸಿಎಂ ಆಗಿದ್ದಾರೆ ಈ ರೀತಿ ಪದೇ ಪದೇ ಹೇಳುತ್ತಿರಲಿಲ್ಲ ಎಂದಿದ್ದಾರೆ.
ಆರ್.ಅಶೋಕ್ ಅವಧಿಯಲ್ಲಿ ಬಸ್ ಪ್ರಯಾಣ ಜಾಸ್ತಿ ಮಾಡಲಾಗಿತ್ತು ಎಂಬ ರಾಮಲಿಂಗಾರೆಡ್ಡಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಸಂಸ್ಥೆಯನ್ನ ಪಾಪರ್ ಸ್ಥಿತಿಗೆ ತಂದವರು ಯಾರು?. ನಾವು ಎಲ್ಲ ಜಿಲ್ಲೆಗಳಲ್ಲೂ ಬಸ್ ನಿಲ್ದಾಣ ಮಾಡಿದ್ದೀವಿ. ಟಿಟಿಎಂಸಿಗಳನ್ನ ಮಾಡಿದ್ದೀವಿ. ಅತಿ ಹೆಚ್ಚು ಆದಾಯ ಮಾಡಿದ್ದೇ ನಮ್ಮ ಸರ್ಕಾರ. 2013ರಲ್ಲಿ ನಾನು ಅಧಿಕಾರ ಬಿಟ್ಟಿದ್ದು. ಆಗ ಸಾರಿಗೆ ಸಂಸ್ಥೆಗಳು ಲಾಭದಲ್ಲಿ ಇದ್ದವು. ಒಂದು ಸಾವಿರ ಕೋಟಿ ರೂ. ಲಾಭ ಇಟ್ಟು ನಾನು ಹೋಗಿದ್ದೇನೆ . ಕೋವಿಡ್ ವೇಳೆ ಸ್ವಲ್ಪ ಲಾಸ್. ನಮಗೆ ಮಾತ್ರವಲ್ಲ, ಎಲ್ಲ ದೇಶಗಳಲ್ಲೂ ಲಾಸ್. ಕೋವಿಡ್ ವೇಳೆ ಇಡೀ ಪ್ರಪಂಚದಲ್ಲಿ ಲಾಸ್ ಆಗಿದೆ. 2017-18ರಲ್ಲಿ ನೀವು ಎಷ್ಟು ಲಾಭ ತೋರಿಸಿ ಹೋದ್ರಿ? ಲೆಕ್ಕಾ ಕೊಡಿ. ಬಿಜೆಪಿ ಅವಧಿಯಲ್ಲಿ ಏರಿಕೆ ಮಾಡಿಲ್ಲ ಅಂತ ಅವರೇ ಹೇಳಿದ್ದಾರೆ.ನಾವು ಮನೆಹಾಳರು ಅದಕ್ಕೆ ಏರಿಕೆ ಮಾಡಿದ್ದೀವಿ ಅಂತ ಹೇಳಿದ್ದಾರೆ. ನೌಕರರ ತುಟ್ಟಿಭತ್ಯ ಏರಿಕೆ ಆಗಿಲ್ವಾ ?.ಸಂಬಳ, ಟಿಎಡಿಎ, ಪೆಟ್ರೋಲ್, ಡೀಸೆಲ್ ದರ ಏರಿಕೆ ಸಾಮಾನ್ಯ ಎಂದಿದ್ದಾರೆ.
ಕೋವಿಡ್ ಕಷ್ಟಕರವಾದ ಕಾಲ. ಆಗಲೇ ನಾವು ದರ ಏರಿಕೆ ಮಾಡಿಲ್ಲ. ಈಗ ಯಾಕೆ ದರ ಏರಿಕೆ ಮಾಡಿದ್ರಿ?. ಗ್ಯಾರೆಂಟಿ, ಗ್ಯಾರೆಂಟಿ, ಗ್ಯಾರೆಂಟಿ ಇದರಿಂದಲೇ ದರ ಏರಿಕೆ. ಕಾಂಗ್ರೆಸ್ ನವರಿಗೆ ಆಫೀಸ್ ಮಾಡಿಕೊಟ್ಟಿದ್ದಾರೆ. ಅವರಿಗೆ, ಅವರ ಕಚೇರಿಗೆ ಸುಣ್ಣಬಣ್ಣ ಬಳಿಸುತ್ತಿದ್ದಾರೆ, ಇದಕ್ಕೆ ದರ ಏರಿಕೆ ಮಾಡ್ತಿದ್ದಾರೆ. ಇದನ್ನೆಲ್ಲ ತಪ್ಪಿಸಿದ್ರೆ 15% ಅಲ್ಲ, 5%. ಮಾಡಬಹುದಿತ್ತು ಎಂದರು.
ಚೀನಾ ವೈರಸ್ ಭೀತಿಗೆ ಆರೋಗ್ಯ ಇಲಾಖೆ ಜನ ಭಯಪಡಬಾರದು ಅಂತ ಈ ರೀತಿ ಹೇಳುತ್ತಿರಬಹುದು.ಯಾರೂ ನೆಗ್ಲೆಟ್ ಮಾಡಬಾರದು. ವೈರಸ್ ಮಾರಣಾಂತಿಕವಾಗಿದೆ. ಉದ್ದ, ಅಗಲ ಗೊತ್ತಾಗುವುದಿಲ್ಲ. ಈ ಹಿಂದೆ ಕೊರೊನಾ ಪ್ರಾರಂಭವಾಗಿದ್ದೇ ಚೈನಾದಲ್ಲಿ. ಅದೇ ದೇಶದಲ್ಲೇ ಇದು ಪ್ರಾರಂಭ ಆಗಿರಬಹುದು. ಅಲ್ಲಿ ಬೆಡ್ ಕೂಡ ಸಿಗ್ತಾ ಇಲ್ಲ. ಆರೋಗ್ಯ ರಾಜ್ಯ ಸರ್ಕಾರ್ ವ್ಯಾಪ್ತಿಯಲ್ಲಿ ಬರುತ್ತೆ. ಆಸ್ಪತ್ರೆ, ಸೌಕರ್ಯಗಳನ್ನ ಸರ್ಕಾರ ಒದಗಿಸಬೇಕು. ಆಕ್ಸಿಜನ್ ಲಭ್ಯತೆಗಳ ಪರಿಶೀಲನೆ ನಡೆಸಬೇಕು. ಬೆಡ್ ಗಳನ್ನೂ ಜಾಸ್ತಿ ಮಾಡಬೇಕು. ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಹೆಚ್ಚಳ ಮಾಡ್ಬೇಕು ಎಂದು ತಿಳಿಸಿದ್ರು.
ಟಾಸ್ಕ್ ಫೋರ್ಸ್ ಮಾಡೊಲ್ಲ ಎಂಬ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ಬಗ್ಗೆ ಮಾತನಾಡಿ ಯುದ್ದ ಬಂದಾಗ ಕತ್ತಿ ಎತ್ತಿಕೊಂಡು ಹೋಗುವುದಲ್ಲ. ಆರೋಗ್ಯ ಇಲಾಖೆ ತಯಾರಾಗುರಬೇಕು. ಟಾಸ್ಕ್ ಪೋರ್ಸ್ ಮಾಡೋದು ಸೂಕ್ತ. ಇಲಾಖೆ ಅಧಿಕಾರಿಗಳು ಖಾಲಿ ಕೂತಿದ್ದಾರೆ. ಪೂರ್ವ ಸಿದ್ದತೆ ಆಗಬೇಕು. ವೈರಸ್ ಸಮಸ್ಯೆ ಇಲ್ಲಾ ಅಂದ್ರೆ ಬೇರೆ ರೋಗಿಗಳಿಗೆ ಅನುಕೂಲ ಆಗುತ್ತೆ. ಆಕ್ಸಿಜನ್ ಬೆಡ್ ಕೊಡದ ಕಾರಣ ಬಾಣಂತಿಯರ ಸಾವಿಗೆ ಇದೂ ಒಂದು ಕಾರಣ. ಎಷ್ಟು ಆಕ್ಸಿಜನ್ ಬೆಡ್ ಇದೆ, ಕಾರ್ಯನಿರ್ವಹಿಸುತ್ತಿದೆ ಅಂತ ಮಾಹಿತಿ ಸಂಗ್ರಹಿಸಬೇಕು. ಸಾಲ ತೆಗೆದುಕೊಳ್ಳುವ ಸ್ಥಿತಿ ಇಲ್ಲ, ಎಲ್ಲವೂ ಮುಗಿದು ಹೋಗಿದೆ ಎಂದರು.
ಮೈತ್ರಿ ಬಗ್ಗೆ ಜೆಡಿಎಸ್ ಶಾಸಕರ ಅಸಮಾಧಾನ ವಿಚಾರದ ಬಗ್ಗೆ ಮಾತನಾಡಿ ನಾನು ಕುಮಾರಸ್ವಾಮಿ ಹಾಲು ಜೇನಿನಂತೆ ಕೆಲಸ ಮಾಡುತ್ತಿದ್ದೇವೆ. ಇಡೀ ಪಕ್ಷ ಒಟ್ಟಿಗೆ ಇದೆ. ಕಾಂಗ್ರೆಸ್ ಹುಳಿ ಹಿಂಡುವ ಕೆಲಸ ಮಾಡೋದು ಬೇಡ. ಚನ್ನಪಟ್ಟಣದಲ್ಲಿ ನಾನೂ ಚುನಾವಣೆಗೆ ಹೋಗಿದ್ದೆ ಎಂದು ಹೇಳಿದ್ರು.