ಮನೆ Latest News ಶಾಸಕ‌ ಸ್ಥಾನದಿಂದ ಮುನಿರತ್ನರನ್ನ ಅನರ್ಹಗೊಳಿಸುವಂತೆ ಕಾಂಗ್ರೆಸ್ ಪಟ್ಟು ವಿಚಾರ; ಪ್ರಕರಣ ಕೋರ್ಟ್ ನಲ್ಲಿರುವಾಗ ಸದನದಲ್ಲಿ ಚರ್ಚೆ...

ಶಾಸಕ‌ ಸ್ಥಾನದಿಂದ ಮುನಿರತ್ನರನ್ನ ಅನರ್ಹಗೊಳಿಸುವಂತೆ ಕಾಂಗ್ರೆಸ್ ಪಟ್ಟು ವಿಚಾರ; ಪ್ರಕರಣ ಕೋರ್ಟ್ ನಲ್ಲಿರುವಾಗ ಸದನದಲ್ಲಿ ಚರ್ಚೆ ಆಗಬಾರದು ಎಂದ ಯತ್ನಾಳ್

0

ಬೆಳಗಾವಿ; ಶಾಸಕ‌ ಸ್ಥಾನದಿಂದ ಮುನಿರತ್ನರನ್ನ ಅನರ್ಹಗೊಳಿಸುವಂತೆ ಕಾಂಗ್ರೆಸ್ ಪಟ್ಟು ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪ್ರಕರಣ ಕೋರ್ಟ್ ನಲ್ಲಿರುವಾಗ ಸದನದಲ್ಲಿ ಚರ್ಚೆ ಆಗಬಾರದು ಎಂದಿದ್ದಾರೆ.

ಅವರ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯದಲ್ಲಿ ಇದ್ದಾಗ ಸದನದಲ್ಲಿ ಚರ್ಚೆ ಆಗಬಾರದು. ಅವರ ತಪ್ಪುಗಳಿಗೆ ನಮ್ಮ ಬೆಂಬಲ ಇಲ್ಲ. ಸದನದಲ್ಲಿ ಈ ವಿಚಾರ ಚರ್ಚೆ ಆಗೋದು ಒಳ್ಳೆಯದಲ್ಲ. ಸಾಕ್ಷಿಗಳ ಆಧಾರದ ಮೇಲೆ ಶಿಕ್ಷೆ ಆಗುತ್ತೆ. ನಿಜವಾಗಿ ಅಪರಾಧ ಮಾಡಿದ್ರೆ ಶಿಕ್ಷೆ ಆಗುತ್ತೆ. ನಾವೇ ಕ್ರಮ ತೆಗೆದುಕೊಳ್ಳೋದು ನ್ಯಾಯಾಲಯಕ್ಕೆ ತೋರುವ ಅಪಮಾನ ಎಂದಿದ್ದಾರೆ.

ಇದೇ ವೇಳೆ ಮಾಣಿಪ್ಪಾಡಿ ಆರೋಪದ ಬಗ್ಗೆ ಸದನದಲ್ಲಿ ಉಭಯ ನಾಯಕರ ಚರ್ಚೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಸಿಬಿಐಗೆ ಕೊಡಲಿ, ನಿನ್ನೆ ಪ್ರಿಯಾಂಕ್ ಖರ್ಗೆ ಮುಖ ನೋಡಬಾರದಿತ್ತು. ಸಿಎಂ ಹತಾಶರಾಗಿದ್ದಾರೆ, ಬಿಜೆಪಿಯವರನ್ನ ಸಿಲುಕಿಸಬೇಕು ಅಂತ ಇದ್ದಾರೆ. ತಾವೇ ಕೆಲವು ಜನಾಂಗದವರನ್ನ ಪ್ರಚೋದನೆ ಮಾಡುತ್ತಿದ್ದಾರೆ. ಬಿಜೆಪಿ ಮೇಲೆ ಸಿಎಂ ಸಿದ್ದರಾಮಯ್ಯಗೆ ಭಯ ಬಂದಿದೆ..ಸಿಬಿಐ ಪತ್ರ ಬರೆಯಲಿ, ಅವರೇ ತನಿಖೆ ಮಾಡ್ತಾರೆ. ಪ್ರಿಯಾಂಕ್ ಖರ್ಗೆ ವೀಡಿಯೋ ಅಂದ್ರು, ಆಡಿಯೋ ಮಾತ್ರ ಬಿಡುಗಡೆ ಮಾಡಿದ್ದಾರೆ ಎಂದರು.

ಬೆಳಗಾವಿ: ವಿಜಯೇಂದ್ರರ ಮಾತನಾಡೋದನ್ನ ಮೊದಲು‌ ಕಲಿಯಬೇಕು ಎಂದು ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಶಾಸಕ ಯತ್ನಾಳ್

ನಾವು ಸದನದಲ್ಲಿ ಒಳ್ಳೆಯ ಪರ್ಫಾಮೆನ್ಸ್ ಕೊಡ್ತಿದ್ದೀವಿ.ಇದನ್ನೆಲ್ಲ ಕೇಂದ್ರ ನೋಡಬೇಕು, ಇಂಟಲಿಜನ್ಸ್ ಇರುತ್ತೆ. ನಾವು ಏನೇನು ಚರ್ಚೆ ನಡೆಸಿದ್ದೇವೆ ಅಂತ ಗೊತ್ತಾಗುತ್ತದೆ. ಯಾರು ಯಾರಿಗೆ ಫೋನ್ ಮಾಡಿ ಏನು ಚರ್ಚೆ ನಡೆಸಿದ್ದಾರೆ. ಯಡಿಯೂರಪ್ಪ ಯಾವ ಮಾಜಿ ಶಾಸಕರಿಗೆ ಫೋನ್ ಮಾಡಿದ್ದಾರೆ? ರಾತ್ರಿ 12 ಗಂಟೆಗೆ ಯಡಿಯೂರಪ್ಪ ಒಬ್ಬ ಮಾಜಿ ಎಂಎಲ್ ಎಗೆ ಫೋನ್ ಮಾಡ್ತಾರೆ. ಐದು ವರ್ಷ ಆತ ಎಂಎಲ್ ಎ ಆಗಿದ್ದಾಗ ಆತನ ಮುಖವನ್ನೇ ಯಡಿಯೂರಪ್ಪ ನೋಡಿಲ್ಲ, ಫೋನ್ ಮಾಡಿಲ್ಲ.ಈಗ ನೀವೆಲ್ಲ ವಿಜಯೇಂದ್ರ ಜೊತೆಗಿರಬೇಕು. ಮುಂದೆ ನಮ್ಮ ಸರ್ಕಾರ ಬರುತ್ತೆ ಅಂತ ಫೋನ್ ಮಾಡ್ತಿದ್ದಾರೆ. ನಿಮ್ಮನ್ನ ಮಂತ್ರಿ ಮಾಡ್ತೀವಿ ಅಂತ ಹೇಳ್ತಿದ್ದಾರಂತೆ ಎಂದು ಬಾಂಬ್ ಸಿಡಿಸಿದ್ದಾರೆ. ಮುಂದಿನ‌ ಆಪರೇಷನ್ ಈಗಲೇ ಶುರುವಾಗಿದೆ ಎಂದಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಅವರು  ನಾವು ಯಾವುದೇ ಜನ್ಮದಿನ ಹುಟ್ಟು ಹಬ್ಬ, ಪುಣ್ಯ ತಿಥಿ‌ ಆಚರಣೆ ಮಾಡುವ ಕಾರ್ಯಕರ್ತರಲ್ಲ. ಹುಟ್ಟುಹಬ್ಬವನ್ನ ಅವರವರ ಮನೆಯಲ್ಲಿ ಮಾಡಿಕೊಳ್ಳಲಿ. ನಾನು ನನ್ನ ಸ್ವಂತ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳೊಲ್ಲ. ಮೊನ್ನೆ ನನ್ನ ಹುಟ್ಟುಹಬ್ಬದಂದು ಬೆಳಗ್ಗೆ 10ಕ್ಕೆ ಸದನದ ಒಳಗೆ ಹೋದ್ರೆ ರಾತ್ರಿ 10ಕ್ಕೆ ಮನೆಗೆ ಹೋಗಿದ್ದೀನಿ. ಯಾರೋ ಒಬ್ಬ ಬಂದು ಹಾರ ಹಾಕಿದ. ಹುಟ್ಟು ಹಬ್ಬ ಮಾಡಿಕೊಳ್ಳೋದು ಜಿಲ್ಲಾ ಪಂಚಾಯತ ಚುನಾವಣೆಗೆ ಅನುಕೂಲ‌ ಆಗುತ್ತೆ ಅಂತೆಲ್ಲ ಇಲ್ಲ. ನಾವು ವಕ್ಫ್ ವಿಚಾರವಾಗಿ ಹೋರಾಟ ಮಾಡ್ತೀವಿ. ವಕ್ಫ್ ನ ದೇಶದ್ಯಾಂತ ಕಿತ್ತು ಹಾಕಬೇಕು, ನಾವೂ ದಾವಣಗೆರೆಯಲ್ಲಿ ಸಮಾವೇಶ ಮಾಡ್ತೀವಿ. ಅವರ ಸಮಾವೇಶ ಮುಗಿದು ಒಂದು ವಾರದೊಳಗೆ ನಾವೂ ಸಮಾವೇಶ ಮಾಡ್ತೀವಿ ಎಂದಿದ್ದಾರೆ.

ನಮ್ಮ ಶಕ್ತಿ ಏನೂ ಎನ್ನೋದು ಅವರಿಗೆ ತೋರಿಸುತ್ತೇವೆ.ನಮ್ಮದು ಜನ ಶಕ್ತಿ, ಜನಪರ ಹೋರಾಟ. ಹುಟ್ಟುಹಬ್ಬದ ಹೋರಾಟ ಪುಣ್ಯ ತಿಥಿ ಹೋರಾಟ ಅಲ್ಲ ಎಂದಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು.ಪಕ್ಷದ ಆಂತರಿಕ ವಿಚಾರ ನಾನು ಹೇಳೊಲ್ಲ. ಆದರೆ ಯಡಿಯೂರಪ್ಪ ಏನು ನಡೆಸಿದ್ದಾರೆಂಬ ಮಾಹಿತಿ ನಿಮಗೆ ಕೊಟ್ಟಿದ್ದೇನೆ. ಯಾವುದೇ ಮಾಜಿ ಶಾಸಕನ ಬಳಿ ಮಾತುಕತೆ ನಡೆಸಿಲ್ಲ ಅಂತ ಯಡಿಯೂರಪ್ಪ ಹೇಳಿಕೆ ಕೊಡಲಿ ನೋಡೋಣ ಎಂದಿದ್ದಾರೆ.