ಬೆಂಗಳೂರು; ಒಳಮೀಸಲಾತಿ ಕುರಿತಂತೆ ಗೃಹ ಕಚೇರಿ ಕೃಷ್ಣದಲ್ಲಿ ಮಹತ್ವದ ಸುದ್ದಿಗೋಷ್ಟಿ ನಡೆಯಿತು. ಸಿಎಂ ಸಿದ್ದರಾಮಯ್ಯ ಬದಲಿಗೆ ಹಿರಿಯ ಸಚಿವರಿಂದ ಸುದ್ದಿಗೋಷ್ಟಿ ನಡೆಯಿತು. ಸುದ್ದಿಗೋಷ್ಟಿ ಯಲ್ಲಿ ಸಚಿವ ಪರಮೇಶ್ವರ್, ಹೆಚ್ ಸಿ ಮಹದೇವಪ್ಪ, ಮುನಿಯಪ್ಪ, ಆರ್ ಬಿ ತಿಮ್ಮಾಪುರ ಭಾಗಿಯಾಗಿದ್ದರು.
ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಹೆಚ್ ಸಿ ಮಹಾದೇವಪ್ಪ ಸಿಎಂ ಅಧ್ಯಕ್ಷತೆಯಲ್ಲಿ ಹಿರಿಯ ಸಚಿವರ ಜೊತೆ ಸುದೀರ್ಘ ಸಭೆ ನಡೀತು.ಸಭೆಯಲ್ಲಿ ಎಲ್ಲಾ ಸಚಿವರು, ನಾಗಮೋಹನ್ ದಾಸ್, ಅಧಿಕಾರಿಗಳು ಇದ್ದರು. ಸುದೀರ್ಘ ವಾಗಿ ಒಳಮೀಸಲಾತಿ ಜಾರಿಗಾಗಿ ಆಗಿರೋಪ್ರಗತಿಯ ಮಾಹಿತಿ ನೀಡಿದ್ದಾರೆ. ಆದಷ್ಟು ಬೇಗ ಒಳಮೀಸಲಾತಿ ಜಾರಿಗೆ ಪ್ರಸ್ತಾಪ ಇಟ್ಟಿದ್ದಾರೆ ಎಂದರು.
ದತ್ತಾಂಶ ಆಧಾರದ ಮೇಲೆ ಸುದೀರ್ಘ ಚರ್ಚೆ ಮಾಡಿದ್ದೇವೆ. ವಾರದ ಒಳಗೆ ದಾಸ್ ಅವರು ಮಧ್ಯಂತರ ವರದಿ ನೀಡ್ತಾರೆ.ಆ ವರದಿ ಮೇಲೆ ಒಳಮೀಸಲಾತಿ ಜಾರಿ ಕುರಿತು ಸೂಕ್ತ ಕ್ರಮ ಮೇಲೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಎಲ್ಲಾ ವಿಷ್ಯ ಗಳನ್ನ ಚರ್ಚೆ ಮಾಡಿ ನಮ್ಮ ಗಮನಕ್ಕೆ ತಂದಿದ್ದಾರೆ. ನಾವು ಒಳಮೀಸಲಾತಿ ಜಾರಿ ಮಾಡಬೇಕು ಅನ್ನೋದು ನಮ್ಮ ಬದ್ಧತೆ.ಆದ್ರೆ ದತ್ತಾಂಶ ಆಧಾರದ ಮೇಲೆ ಜಾರಿಗೆ ನಮ್ಮ ಆಸೆ. ಮಧ್ಯಂತರ ವರದಿ ಬಂದ್ಮೇಲೆ ಮುಂದಿನ ಕ್ರಮ. ಇನ್ನೊಂದು ವಾರದಲ್ಲಿ ಮಧ್ಯಂತರ ವರದಿ ನೀಡ್ತಾರೆ.ಒಳಮೀಸಲಾತಿ ಜಾರಿ ಮಾಡಬೇಕು ಅನ್ನೋದು ಸರ್ಕಾರದ ಒಲವು.ವರದಿ ಬಂದ್ಮೇಲೆ ಚರ್ಚೆ ಮಾಡಿ ಮುಂದಿನ ಕ್ರಮ ಎಂದಿದ್ದಾರೆ.
ಯಾವ ಸಮುದಾಯ ವೂ ಇಷ್ಟೇ ಕೊಡಿ ಎಂದು ಕೇಳಿಲ್ಲ.ಬಹುತೇಕ ಎಲ್ಲಾ ಇಲಾಖೆಗಳು ದತ್ತಾಂಶ ನೀಡಿವೆ. ಎಲ್ಲಾ ವಿಷ್ಯ ಗಳ ಕುರಿತು ಅಧ್ಯಕ್ಷ ರು ಚರ್ಚೆ ಮಾಡಿದ್ದಾರೆ.ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಕೋಡೋಕೆ ಈಗಾಗಲೇ ಹೇಳಿದ್ದೇವೆ ಎಂದ ಅವರು ಸಂವಿಧಾನ ಬದಲಾವಣೆ ಬಗ್ಗೆ ಡಿಕೆ ಹೇಳಿದ್ದಾರೆ ಎಂಬ ಹೇಳಿಕೆ ಬಗ್ಗೆ ಮಾತನಾಡಿ ಸಂವಿಧಾನ ರಕ್ಷಣೆ ವಿಷ್ಯ ವೇ ನಮ್ಮ ಕಾಂಗ್ರೆಸ್ ಹೋರಾಟ. ಸಂವಿಧಾನ ರಕ್ಷಣೆ ಮಾಡಬೇಕು ಎಂದು ಕಾರ್ಯಕ್ರಮ ಮಾಡಿವೆ. ಅವರೇ ಹೇಳಿದ್ಮೇಲೆ ಎಲ್ಲವೂ ಮುಗೀತು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.











