ಬೆಂಗಳೂರು; ಕೇಂದ್ರ ಸರ್ಕಾರದ ವಿರುದ್ಧ ಫ್ರೀಡಂ ಪಾರ್ಕಿನಲ್ಲಿ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ನಡೆಯಿತು. ಡಿಸಿಎಂ ಡಿ ಕೆ ಶಿವಕುಮಾರ್ , ಸಚಿವ ಶಿವಾನಂದ ಪಾಟೀಲ್, ಕೆಜೆ ಜಾರ್ಜ್ ಕೆ ಎಚ್ ಮುನಿಯಪ್ಪ ಶರಣಬಸಪ್ಪ ದರ್ಶನಾಪುರ ಎನ್ ಎಸ್ ಭೋಸರಾಜು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಫ್ರೀಡಂ ಪಾರ್ಕಿನಲ್ಲಿ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ಹಿನ್ನೆಲೆ ರಸ್ತೆ ಮಾರ್ಗ ಬದಲು ಮಾಡಲಾಗಿತ್ತು. ಕೆಆರ್ ಸರ್ಕಲ್ ನಿಂದ ಫ್ರೀಡಂ ಪಾರ್ಕ್ ಮೂಲಕ ಶೇಷಾದ್ರಿಪುರಂ ಗೆ ತೆರಳುವ ರಸ್ತೆ ಮಾರ್ಗ ಬದಲಾವಣೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಬೆಂಗಳೂರು ತುಮಕೂರು ಕೋಲಾರ ಚಿಕ್ಕಬಳ್ಳಾಪುರ ರಾಮನಗರ ಭಾಗದಿಂದ ಪ್ರತಿಭಟನೆಗೆ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದರು. ಗ್ಯಾಸ್ ಬೆಲೆ ಏರಿಕೆ ಪೆಟ್ರೋಲ್ ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ ಬಿಜೆಪಿ ಸರ್ಕಾರ ಬಂದಾಗಿನಿಂದ ಜನರ ಸುಲಿಗೆ ಆಗುತ್ತಿದೆ ನಮ್ಮ ಹಳ್ಳಿಯ ತಿಪ್ಪಣ್ಣ ತಿಮ್ಮಕ್ಕ ಬಡವರಾಗ್ತಿದಾರೆ. ಅಂಬಾನಿ ಅದಾನಿ ಮಾತ್ರ ಶ್ರೀಮಂತ ಆಗ್ತಿದ್ದಾರೆ ಎಂದರು. ತಿಗಣೆ ರಕ್ತ ಹೀರಿದ ಹಾಗೆ ಜಿಗಣೆ ರಕ್ತ ಹೀರಿದ ಹಾಗೇ ಕೇಂದ್ರ ಸರ್ಕಾರ ಸುಲಿಗೆ ಮಾಡ್ತಿದೆ. ಟ್ಯಾಕ್ಸ್ ೨೨% ಗೆ ಇಳಿಸಲಾಗಿದೆ ಎಂದರು.
ಮಾಜಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮಾತನಾಡಿ ಕಾರ್ಪೋರೇಟ್ ಬಿಜೆಪಿಯವರಿಗೆ ಮರ್ಯಾದೆಯೇ ಇಲ್ಲ. ಜನಾಕ್ರೋಶ ಯಾತ್ರೆಯನ್ನ ಮಾಡ್ತಿದ್ದಾರೆ.೨ ಕೋಟಿ ಉದ್ಯೋಗ ಕೊಡ್ತೇವೆ ಅಂದ್ರು. ಅದರ ವಿರುದ್ಧ ಪ್ರತಿಭಟನೆ ಮಾಡಿ. ೧೫ ಲಕ್ಷ ಅಕೌಂಟಿಗೆ ಹಾಕ್ತೇವೆ ಅಂದ್ರು. ಅದರ ಬಗ್ಗೆ ನೀವು ಜನಾಕ್ರೋಶ ಯಾತ್ರೆ ಮಾಡಿ. ರಾಜ್ಯದ ೧೯ ಎಂಪಿಗಳು ದಂಡಪಿಂಡಗಳು. ರಾಜ್ಯದ ಬಗ್ಗೆ ಯಾವತ್ತಾದ್ರೂ ಧ್ವನಿ ಎತ್ತಿದ್ದಾರಾ?. ಕುಮಾರಸ್ವಾಮಿಯವರೇ ಧ್ವನಿ ಎತ್ತಿದ್ರಾ?. ಮೇಕೆದಾಟು ಯೋಜನೆ ಬಗ್ಗೆ ಮನಸ್ಸು ಮಾಡಿದ್ರಾ? ನಿಮಗೆ ರಾಜ್ಯದ ಜನರ ಅಭಿವೃದ್ಧಿ ಬೇಕಿಲ್ಲ. ಇಡಿ,ಐಟಿ,ಸಿಬಿಐ ಬಿಜೆಪಿ ಫ್ರಂಟ್ ಆರ್ಗನೈಸೇಷನ್. ರಾಹುಲ್,ಸೋನಿಯಾ ಮೇಲೆ ಚಾರ್ಜ್ ಶೀಟ್ ಹಾಕಿದ್ದಾರೆ. ಅದರಲ್ಲಿ ಯಾವುದೇ ತಪ್ಪಾಗಿಲ್ಲ. ಒಂದು ರೂ ವಹಿವಾಟು ನಡೆದಿಲ್ಲ. ಅಂತಾದ್ರ ಮೇಲೆ ಕೇಸ್ ಹಾಕ್ತಾರೆ. ಅವರಿಗೆ ನೊಟೀಸ್ ಕೊಡ್ತೀರ.ದೇಶಕ್ಕಾಗಿ ಸ್ವಾತಂತ್ರ್ಯ ಕೊಟ್ಡ ಪರಿವಾರ ಅವರದ್ದು. ಅವರ ಮೇಲೆ ಇಲ್ಲಸಲ್ಲದ ಪ್ರಯತ್ನ ಮಾಡ್ತಿದ್ದೀರಾ? ಎಂದ್ರು.











