ಮನೆ Latest News ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಪ್ರತಿಭಟನೆ

0

ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಯಿತು. ಬೆಳಗಾವಿಯ ಸುವರ್ಣಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್  ಎಂಬಿ ಪಾಟೀಲ್, ಬಿಕೆ ಹರಿಪ್ರಸಾದ್, ತನ್ವೀರ್ ಸೇಠ್, ಸಲೀಂ ಅಹಮದ್, ಮಾಗಡಿ ಬಾಲಕೃಷ್ಣ, ಬೇಳೂರು ಗೋಪಾಲಕೃಷ್ಣ ಸೇರಿ ಶಾಸಕರು ಸಚಿವರು ಭಾಗಿಯಾಗಿದ್ದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಬಿಜೆಪಿಯವರು ಕೇಸ್ ಹಾಕಿಸಿದರು. ಸುಬ್ರಹ್ಮಣ್ಯಂ ಸ್ವಾಮಿ ಕಂಪ್ಲೆಂಟ್ ಕೊಟ್ರು ಅಂತ ಮಾಡಿದ್ರು. ನನಗೂ ನಮ್ಮ ತಮ್ಮನಿಗೂ ನೊಟೀಸ್ ಕೊಟ್ಟಿದ್ರು. ದಿವಗಂತ ಶಾಮನೂರು ಕುಟುಂಬಸ್ಥರು ಯಂಗ್ ಇಂಡಿಯಾಗೆ ದುಡ್ಡು ಕೊಟ್ಟಿದ್ರು. ಷೇರ್ ಹೋಲ್ಡರ್ ಆಗಿದ್ರು ಅವರಿಗೂ ನೊಟೀಸ್ ಕೊಟ್ಟಿದ್ರು. ನಾನೂ ಸಿಎಂ ಶಾಸಕರು ಎಲ್ಲರೂ ಕೆಲಸ ಮಾಡ್ತಾರೆ. ಶಾಸಕರು ಸಚಿವರು ನಿಗಮಗಳಿಗೆ ಚೇರಮನ್ ಆಗಿರ್ತಾರೆ. ನಾವು ಅಧಿಕಾರದಿಂದ ಹೋದಮೇಲೆ ಚೇರ್ಮನ್ ಶಿಪ್ ಹೋಗುತ್ತದೆ. ಕಾಂಗ್ರೆಸ್ ಭವನ ಟ್ರಸ್ಟ್ ಗೆ ನಾನು ಸಿಎಂ ಅಧ್ಯಕ್ಷರು ಮೆಂಬರ್. ಹಾಗಂತ ಕಾಂಗ್ರೆಸ್ ಆಸ್ತಿ ನಮ್ಮ ಆಸ್ತಿ ಆಗೋಯ್ತಾ?. ನನಗೂ ನೊಟೀಸ್ ಕೊಟ್ಟಿದ್ದು ನನ್ನ ತಮ್ಮನಿಗೂ ನೊಟೀಸ್ ಕೊಟ್ಟಿದ್ದಾರೆ ಎಂದಿದ್ದಾರೆ.

ಎಫ್ ಐ ಆರ್ ಕಾಪಿ ಕೊಡಿ ಅಂತ ನಾನು ಪತ್ರ ಬರೆದಿದ್ದೆ. ಎಫ್ಐಆರ್ ಕಾಪಿ ಕೊಡಿ ಅಂದ್ರೆ ಕೊಡ್ತಿಲ್ಲ. ನನ್ನ ಸ್ವಂತ ದುಡ್ಡನ್ನು ನಾನು ಯಾರಿಗಾದ್ರೂ ಕೊಡ್ತೀನಪ್ಪ?. ನನ್ನ ಮೇಲೂ ಪಿಎಂಎಲ್ಎ ಕೇಸ್ ಹಾಕಿಸಿ ಜೈಲಿಗೆ ಹಾಕಿದ್ರು ಆಮೇಲೆ ಕೇಸ್ ಏನಾಯ್ತು?. ಕೋಲಾರದಲ್ಲಿ ಭಾಷಣ ಮಾಡಿದ್ರೆ ರಾಹುಲ್ ಗಾಂಧಿ ಎಂಪಿ ಸೀಟನ್ನೇ ವಜಾ ಮಾಡಿಸಿದ್ರಲ್ಲ ಎಲ್ಲಾದ್ರೂ ಉಂಟೇನ್ರಿ? ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಮಾತನಾಡಿ ಬಿಜೆಪಿಯವರ ದ್ವೇಷದ ರಾಜಕಾರಣ.ಬಿಜೆಪಿ ಎಲ್ಲೆಲ್ಲಿ ಅಧಿಕಾರದಲ್ಲಿದೆ ಎಲ್ಲ ಕಡೆ ಕಾಂಗ್ರೆಸ್ ನವರನ್ನು ಟಾರ್ಗೆಟ್ ಮಾಡಿ ಅವರನ್ನು ಕೋರ್ಟ್ ಗೆ ಅಲೆಸುವ ಕೆಲಸ ಮಾಡುತ್ತದೆ. ಕಾಂಗ್ರೆಸ್ ನವರನ್ನು ಅಪರಾಧಿಗಳನ್ನಾಗಿ ಮಾಡುತ್ತದೆ ಬಿಜೆಪಿ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಹೀಗೆ ಮಾಡುತ್ತದೆ.  ಭ್ರಷ್ಟಾಚಾರ ತಾಂಡವವಾಡುತ್ತಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ರಾಷ್ಟ್ರವನ್ನು ಬಹಳ ಸಾಲಗಾರ ದೇಶವನ್ನಾಗಿ ಮಾಡಲಾಗಿದೆ. ೫೩ ಲಕ್ಷ ಕೋಟಿ ಮನಮೋಹನ್ ಸಿಂಗ್ ಅವಧಿಯಲ್ಲಿ ಇದ್ದ ಸಾಲ ಈಗ ೨೦೦ ಲಕ್ಷ ಕೋಟಿ ಸಾಲ ಹೆಚ್ಚಾಗಿದೆ. ಇವರು ಬಂದ ಮೇಲೆ ೧೪೮ ಲಕ್ಷ ಕೋಟಿ ಸಾಲ ಮಾಡಿದೆ. ಮನಮೋಹನ್ ಸಿಂಗ್ ಹೋಗಿ ೧೧ ವರ್ಷ ಆಗಿದೆ. ಇಷ್ಟು ವರ್ಷಗಳಲ್ಲಿ ಇಷ್ಡು ದೊಡ್ಡ ಮೊತ್ತದ ಸಾಲ ಮಾಡಿದ್ದಾರೆ. ಇದನ್ನು ಯಾರು ಮಾಡಿದ್ರು? ಮೋದಿ ಬಿಜೆಪಿ ಇದನ್ನು ಮುಚ್ಚಿಕೊಳ್ಳಲು ನಮ್ಮ ಮೇಲೆ ಕೇಸ್ ಹಾಕ್ತಾರ ಎಂದು ಪ್ರಶ್ನಿಸಿದ್ದಾರೆ.

ಎಂ ನರೇಗಾ ಹೆಸರನ್ನೂ ಚೇಂಜ್ ಮಾಡಿದಾರೆ. ಮಹಾತ್ಮಾ ಗಾಂಧಿ ಹೆಸರಿದ್ರೆ ಏನಾಗ್ತಿತ್ತು ಇವರಿಗೆ?.ಮೊದಲಿನಿಂದಲೂ ಬಿಜೆಪಿ ಯವರಿಗೆ ಗಾಂಧಿ ಕಂಡ್ರೆ ಆಗಲ್ಲ. ನೆಹರೂ ಕಂಡ್ರೆ ಆಗಲ್ಲ ಅಂಬೇಡ್ಕರ್ ಕಂಡ್ರೆ ಆಗಲ್ಲ . ಕೊನೆಗೆ ಬಡವರನ್ನು ಕಂಡ್ರೂ ಬಿಜೆಪಿಗೆ ಆಗಲ್ಲ. ಮೊದಲು ಗ್ಯಾರಂಟಿ ವಿರೋಧಿಸಿದ್ರು, ಈಗ ಅವರೇ ಟ್ವೀಟ್ ಮಾಡ್ತಿದ್ದಾರೆ. ಕೋರ್ಟ್ ನಲ್ಲಿ ನಮಗೆ ನ್ಯಾಯ ಸಿಕ್ಕಿದೆ. ಕಾಂಗ್ರೆಸ್ ನವರು ಕೈ ಕಟ್ಟಿ ಕೂರುವವರಲ್ಲ. ಬಿಜೆಪಿಯದ್ದು ದ್ವೇಷದ ರಾಜಕಾರಣ. ಮುಂದೆ ಇವರು ನರೇಗಾ ಯೋಜನೆಗೆ ಜಿ ಮೋದಿ ಜಿ ಅಂತನೂ ಹೆಸರಿಡಬಹುದು. ರಾಜಭವನ ಹೆಸರು ಬದಲಾಯಿಸಿದರು.ರಾಜಭವನ ಸರ್ಕಾರದ ಆಸ್ತಿ ಅದನ್ನು ಹೆಸರು ಬದಲಾಯಿಸಲು ಬರಲ್ಲ. ರಾಜಭವನ ರಾಜ ಭವನ ಅಂತಲೇ ಇರಬೇಕಾಗುತ್ತದೆ ಎಂದಿದ್ದಾರೆ.