ಮನೆ Latest News ಈ ಸಮಸ್ಯೆಗಳಿಗೆ ಪರಿಹಾರ ಈ ದೇಶದಲ್ಲಿ ಇಲ್ಲ ಅಂತ ಕಾಂಗ್ರೆಸ್ ಶಾಸಕರಿಗೆ ಅನ್ನಿಸಿದೆ, ಹಾಗಾಗಿ ಫಾರಿನ್...

ಈ ಸಮಸ್ಯೆಗಳಿಗೆ ಪರಿಹಾರ ಈ ದೇಶದಲ್ಲಿ ಇಲ್ಲ ಅಂತ ಕಾಂಗ್ರೆಸ್ ಶಾಸಕರಿಗೆ ಅನ್ನಿಸಿದೆ, ಹಾಗಾಗಿ ಫಾರಿನ್ ಟ್ರಿಪ್ ಹೋಗಿದ್ದಾರೆ; ಶಾಸಕರ ಟ್ರಿಪ್ ಗೆ ಸಿಟಿ ರವಿ ಲೇವಡಿ.

0

ಬೆಂಗಳೂರು; ಈ ಸಮಸ್ಯೆಗಳಿಗೆ ಪರಿಹಾರ ಈ ದೇಶದಲ್ಲಿ ಇಲ್ಲ ಅಂತ ಕಾಂಗ್ರೆಸ್ ಶಾಸಕರಿಗೆ ಅನ್ನಿಸಿದೆ, ಹಾಗಾಗಿ ಫಾರಿನ್ ಟ್ರಿಪ್ ಹೋಗಿದ್ದಾರೆ ಎಂದು ಕಾಂಗ್ರೆಸ್  ಶಾಸಕರ ಟ್ರಿಪ್ ಗೆ ಸಿಟಿ ರವಿ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಶಾಸಕರ ಫಾರಿನ್ ಟ್ರಿಪ್ ವಿಚಾರದ ಬಗ್ಗೆ ಮಾತನಾಡಿದ ಅವರು ಬೆಂಗಳೂರಿನಲ್ಲಿ ತಾಯಿ-ಮಗು ಗುಂಡಿಗೆ ಬಲಿಯಾಗಿದ್ದಾರೆ. ನೂರಾರು ಜನ ಬೆಂಗಳೂರು ಗುಂಡಿಗೆ ಬಲಿಯಾಗಿದ್ದಾರೆ. ಅಭಿವೃದ್ಧಿ ನಿಂತ ನೀರಾಗಿದೆ. ಪರಿಹಾರದ ಹಣ ಕೊಡದೇ ಇರೋದಕ್ಕೆ KSRTCಗೆ ಬಸ್ ಸೀಜ್ ಆಗಿದೆ. ಈ ಸಮಸ್ಯೆಗಳಿಗೆ ಪರಿಹಾರ ಈ ದೇಶದಲ್ಲಿ ಇಲ್ಲ ಅಂತ ಅವರ ಶಾಸಕರಿಗೆ ಅನ್ನಿಸಿದೆ. ಇದರ ಪರಿಹಾರಕ್ಕಾಗಿ ಅರಬ್, ಯುರೋಪ್ ನಲ್ಲಿ ಸಿಗುತ್ತೆ ಅಂತ ವಿದೇಶಕ್ಕೆ ಹೋಗ್ತಾ ಇದ್ದಾರೆ ಅನ್ನಿಸುತ್ತೆ. ಇಲ್ಲಿರೋ ರಾಜಕೀಯ ನೇತೃತ್ವ, ಇಲ್ಲಿನ ವ್ಯವಸ್ಥೆ ನ್ಯಾಯ ಕೊಡೋಕೆ ಸಾಧ್ಯವಿಲ್ಲ ಅಂತ ಆಡಳಿತ ಪಕ್ಷದ ಶಾಸಕರಿಗೆ ಅನ್ನಿಸಿದೆ.ಇದಕ್ಕೆ ವಿದೇಶದಲ್ಲಿ ಪರಿಹಾರ ಸಿಗಬಹುದು ಎಂಬ ಆಶಾ ಭಾವನೆಯಲ್ಲಿ ಹೋಗ್ತಾ ಇದ್ದಾರೆ. ಯಾರು ತಪ್ಪು ತಿಳಿಯಬೇಡಿ ಎಂದು ಲೇವಡಿ ಮಾಡಿದ್ದಾರೆ.

ಅವರ ನಾಯಕತ್ವದ ಮೇಲೆ ನಂಬಿಕೆ ಇಲ್ಲ ಅವರಿಗೆ. ಸಮಸ್ಯೆ ಬಗೆಹರಿಸೋ ವಿಶ್ವಾಸ ಇಲ್ಲ. ವಿದೇಶಕ್ಕೆ ಪರಿಹಾರ ಹುಡುಕಿಕೊಂಡು ಹೋಗ್ತಾ ಇದ್ದಾರೆ. ಅವರ ಬಗ್ಗೆ ತಪ್ಪು ತಿಳಿಯಬೇಡಿ. ಅವರಿಗೆ ‌ಪ್ರೋತ್ಸಾಹ ಕೊಡಿ. ಇಲ್ಲಿನ ಸಮಸ್ಯೆ, ಅನ್ಯಾಯದ ವಿರುದ್ದ ಪ್ರತಿಭಟಿಸಿ ಫಾರಿನ್ ಗೆ ಹೋಗ್ತಾ ಇದ್ದಾರೆ ಎಂದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕಲ್ಲು ತೂರಾಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಕಲ್ಲು ತೂರಾಟವಾದಾಗ 112 ದೂರು ಕೊಟ್ಟಿದ್ದಾರೆ. ರೆಡ್ ಹ್ಯಾಂಡ್ ಅಗಿ ಇಡಿದಾಗ ಎಲ್ಲರು 16,17 ವಯಸ್ಸಿನವರು . ಅವರ ಪರ ಸಮರ್ಥನೆಗೆ ಕೆಲವರು ಪೊಲೀಸ್ ಸ್ಟೇಷನ್ ಗೆ ಬಂದಿದ್ದಾರೆ. ಪದೇ ಪದೇ ಚಿಕ್ಕಮಗಳೂರಿನಲ್ಲಿ ಇಂತಹ ಘಟನೆಗಳು ಮರುಕಳಿಸ್ತಿದ್ದಾವೆ. ಕ್ಷೇತ್ರದ ಜನರು ಆತಂಕದಲ್ಲಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಮೊಕದ್ದಮೆ ದಾಖಲಾಗಿದೆ. ಯಾವ ಉದ್ದೇಶಕ್ಕೆ ಹೀಗೆ ಮಾಡಿದ್ದಾರೆ. ಅದ್ರಲ್ಲಿ ಒಂದೇ ಮನೆಗೆ ಕಲ್ಲು ತೂರಾಟ ಮಾಡಿರೋದು ಯಾಕೆ..? ಇದರ ಬಗ್ಗೆ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ.