ಮನೆ Latest News ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ನಿಂದ ಆಯುಕ್ತೆಗೆ ಬೆದರಿಕೆ ಪ್ರಕರಣ: ಕೇಂದ್ರ ಸಚಿವ ಕುಮಾರಸ್ವಾಮಿ ಪ್ರತಿಕ್ರಿಯೆ

ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ನಿಂದ ಆಯುಕ್ತೆಗೆ ಬೆದರಿಕೆ ಪ್ರಕರಣ: ಕೇಂದ್ರ ಸಚಿವ ಕುಮಾರಸ್ವಾಮಿ ಪ್ರತಿಕ್ರಿಯೆ

0

ಬೆಂಗಳೂರು: ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ನಿಂದ ಆಯುಕ್ತೆಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ನಿರಂತರವಾಗಿ ಈ ಸರ್ಕಾರದಲ್ಲಿ ಈ ಸರ್ಕಾರ ಬಂದ ನಂತರ ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡೋದು ಜಾಸ್ತಿ ಆಗಿದೆ. ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಅಧಿಕಾರದಲ್ಲಿ ಇರೋ ಮೇಲಿನವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕಾನೂನುಬಾಹಿರ ತೀರ್ಮಾನ ಮಾಡಿಸ್ತಿದ್ದಾರೆ. ಸರ್ಕಾರ ಸರಿ ಇಲ್ಲದೆ ಹೋದ್ರೆ ಇವೆಲ್ಲ ನಡೆಯುತ್ತದೆ. ಮೇಟಿ ಸರಿಯಾಗಿದ್ದರೆ ಇದ್ಯಾವುದು ಆಗೊಲ್ಲ ಅನ್ನೋದು ನನ್ನ ಅಭಿಪ್ರಾಯ. ಸಿಎಸ್ ಅವರು ಅದರ ಬಗ್ಗೆ ರಿಯಾಕ್ಷನ್ ಮಾಡೇ ಇಲ್ಲ. ಇವತ್ತು ಹಬ್ಬ ಇರೋದ್ರಿಂದ ಮಾತಾಡಿಲ್ಲ. ‌ನಾಳೆ ಈ ಬಗ್ಗೆ ಮಾತಾಡ್ತೀನಿ ಎಂದಿದ್ದಾರೆ.

ಇಂತ ಘಟನೆಗಳು ನಡೆದಾಗ ಸರ್ಕಾರ ಕ್ರಮ ತೆಗೆದುಕೊಂಡಿದ್ದರೆ ಈ ತರಹದ ಘಟನೆಗಳು ನಡೆಯುತ್ತಿರಲಿಲ್ಲ. ಯಾರೇ ತಪ್ಪು ಮಾಡಿದರು ಕ್ರಮ ಆಗಬೇಕು. ಈ  ಬಗ್ಗೆ ಸರ್ಕಾರ ಗಂಭೀರವಾಗಿ  ತೆಗೆದುಕೊಳ್ಳಬೇಕು. ಯಾವ ಪಕ್ಷದ ಕಾರ್ಯಕರ್ತ ಅನ್ನೋದಕ್ಕಿಂತ  ಅಧಿಕಾರಿಗಳ ಜೊತೆ ಹೇಗೆ ನಮ್ಮ ನಡವಳಿಕೆ ಹೇಗೆ ಇರಬಹುದು ಅನ್ನೋದು ಮುಖ್ಯ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡೋಕೆ ಆಗೊಲ್ಲ. ಅದನ್ನ ಬಹಳ ನೋಡಿದ್ದೇನೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕಾನೂನುಬಾಹಿರ ಕೆಲಸ ಮಾಡಿಸುತ್ತಾರೆ. ವಿಕಾಸಸೌಧದಲ್ಲಿ ಕಟ್ಟಡ ಕಟ್ಟೋವಾಗ ನಿಯಮ ಮೀರಿ ಕಂಟ್ರಾಕ್ಟರ್ ಗಳು ಕೆಲಸ ಮಾಡದೇ ಹೋದ್ರು ಬಿಲ್ ಕೊಟ್ಟಿದ್ದಾರೆ.8 ವರ್ಷಗಳ ನಂತರ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಅಂತ ಲೋಕಾಯುಕ್ತ ತೀರ್ಪು ಕೊಟ್ಟಿದೆ. ಅಧಿಕಾರಿಗಳು ಜನಪ್ರತಿನಿಧಿಗಳ ಒತ್ತಡಕ್ಕೆ ಕೆಲಸ ಮಾಡಬಾರದು. ಸರ್ಕಾರದ ನಿಯಮಾವಳಿ ಉಲ್ಲಂಘನೆ ಆಗದಂತೆ ಕೆಲಸ ಮಾಡಿ. ಪೋಸ್ಟಿಂಗ್ ಗಾಗಿ ಜನಪ್ರತಿನಿಧಿಗಳ ಒತ್ತಡಕ್ಕೆ ಅಧಿಕಾರಿಗಳು ಒಳಗಾಗಬಾರದು.ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದಿದ್ದಾರೆ.

ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕೀಯಕ್ಕೆ ಬರುತ್ತಾರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಯಾವ ಸಮಯಕ್ಕೆ ರಾಜ್ಯ ರಾಜಕೀಯಕ್ಕೆ ಬರಬೇಕು ಅಂತ ತೀರ್ಮಾನ ಮಾಡ್ತೀನಿ.ನಾನು ಎಲ್ಲಿರಬೇಕು ಅಂತ ರಾಜ್ಯದ ಜನ ತೀರ್ಮಾನ ಮಾಡ್ತಾರೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ 2028 ರ ಚುನಾವಣೆ ಸಮಯಕ್ಕೆ ರಾಜ್ಯ ರಾಜಕೀಯಕ್ಕೆ  ಮತ್ತೆ ಬರುವ ಸುಳಿವು ಕೊಟ್ಟಿದ್ದಾರೆ.