ಹೊಸಪೇಟೆಯಲ್ಲಿ ನಡೆದ ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗಿಯಾದರು. ರಾಹುಲ್ ಗೆ ಸಿಎಂ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಿಸಿಎಂ ಡಿ ಕೆ ಶಿವಕುಮಾರ್, ಇಂದನ ಸಚಿವ ಕೆ ಜೆ ಜಾರ್ಜ್ ರಣದೀಪ್‌ಸಿಂಗ್ ಸುರ್ಜೆವಾಲಾ, ಸಾಥ್ ನೀಡಿದರು.
ಮಡಿಕೆಗಳಿಗೆ ಧಾನ್ಯ ತುಂಬುವ ಮೂಲಕ ಸಮಾವೇಶಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಮಡಿಕೆಗಳಿಗೆ ರಾಗಿ ಜೋಳ ಭತ್ತವನ್ನು ಮೊರದಲ್ಲಿ ಹಾಕಿ ಉದ್ಘಾಟನೆ ಮಾಡಲಾಗಿಯಿತು. ಬಳಿಕ ರಾಹುಲ್ ಗಾಂಧಿ ಹಕ್ಕು ಪತ್ರ ವಿತರಣೆ ಮಾಡಿದರು. 1,11,111 ಕುಟುಂಬಗಳಿಗೆ ಕಂದಾಯ ಗ್ರಾಮ ಹಕ್ಕು ಪತ್ರ ವಿತರಣೆ ಮಾಡಿದರು. ರಾಹುಲ್ ಗಾಂಧಿ ಸಾಂಕೇತಿಕವಾಗಿ ಕಂದಾಯ ಹಕ್ಕು ಪತ್ರ ವಿತರಣೆ ಮಾಡಿದರು.
ಬಳಿಕ ಇಂದಿರಾ ಗಾಂಧಿ ಪ್ರತಿಮೆ ಉದ್ಘಾಟನೆ ಮಾಡಿದರು. ಹೊಸಪೇಟೆ ಜಿಲ್ಲಾ ಮೈದಾನಕ್ಕೆ ಹಿಂದೊಮ್ಮೆ ಇಂದಿರಾ ಗಾಂಧಿ ಆಗಮಿಸಿದ್ದರು. ಇಂದಿರಾ ಭೇಟಿ ಕೊಟ್ಟ ನೆನಪಿಗೆ ಪ್ರತಿಮೆ ಲೋಕಾರ್ಪಣೆ ಮಾಡಲಾಯಿತು. ರಾಹುಲ್ ಗಾಂಧಿ ಪ್ರತಿಮೆ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ಪೂರ್ಣವಾಗಿದೆ. ಚುನಾವಣೆ ಸಮಯದಲ್ಲಿ ನಿಮಗೆ ಭರವಸೆ ನೀಡಿದ್ದೆವು. ನಾಲ್ಕು ಗ್ಯಾರಂಟಿಗಳನ್ನು ನೀಡುವ ಭರವಸೆ ನೀಡಿದ್ದೆವು. ಗ್ಯಾರಂಟಿಗಳನ್ನು ಪೂರೈಸಲು ಆಗುವುದಿಲ್ಲ ಅಂತ ಪ್ರಧಾನಿ ಮೋದಿಯವರು ಬಿಜೆಪಿ ಯವರು ಟೀಕಿಸಿದ್ದರು. ಗೃಹ ಲಕ್ಷ್ಮಿ ಮೊದಲ ಗ್ಯಾರಂಟಿ ಒಂದು ಕೋಟಿ ಮಹಿಳೆಯರಿಗೆ ತಲುಪುತ್ತಿದೆ. ಸಂತೋಷದಿಂದ ನಾನು ಹೇಳಬಲ್ಲೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೋಟ್ಯಾಂತರ ಮಹಿಳೆಯರ ಖಾತೆಗೆ ನೇರವಾಗಿ ಹಣ ಹಾಕಿದೆ. ಗೃಹ ಜ್ಯೋತಿ ಗ್ಯಾರಂಟಿ ಮೂಲಕ ವಿದ್ಯುತ್ ಸೌಲಭ್ಯ ಸಿಗುತ್ತಿದೆ.ಈ ಆಶ್ವಾಸನೆ ಕೂಡ ನಾವು ಪೂರೈಸಿದ್ದೇವೆ ಎಂದರು.
ಸಾವಿರಾರು ಕೋಟಿ ರೂಪಾಯಿ ನೇರವಾಗಿ ಫಲಾನುಭವಿಗಳ ಅಕೌಂಟ್ ಗೆ ಹೋಗುತ್ತಿದೆ. ನಿಮ್ಮ ಹಣ ನಿಮ್ಮ ಜೇಬಿಗ ಹೋಗಬೇಕು ಎಂಬುದು ನಮ್ಮ ಉದ್ದೇಶ. ಬಿಜೆಪಿಯವರು ಕೆಲವೊಂದು ಕುಟುಂಬ ಗಳಿಗೆ ಮಾತ್ರ ಹಣ ಹೋಗಬೇಕು ಎಂದು ಬಯಸುತ್ತದೆ. ಬಡ ಜನರ ಜೇಬಿಗೆ ಶ್ರಮಿಕರ ಆದಿವಾಸಿಗಳ ಜೇಬಿಗೆ ಹಣ ಹೋಗಬೇಕು ಎಂಬುದು ನಮ್ಮ ಉದ್ದೇಶ. ಒಂದು ಪೈಸೆ ನಿಮ್ಮ ಖಾತೆಗೆ ಹಾಕಿದರೆ ಅದೇ ಹಣ ಮಾರುಕಟ್ಟೆಗ ಬರುತ್ತದೆ. ಇದರಿಂದ ಉತ್ಪಾದನೆ ಹೆಚ್ಚಾಗುತ್ತದೆ ಹಳ್ಳಿ ಹಳ್ಳಿಯಲ್ಲಿ ಹಣ ಚಲಾವಣೆ ಆಗುತ್ತದೆ ಎಂದು ತಿಳಿಸಿದರು.
ಕರ್ನಾಟಕದ ಅರ್ಥ ವ್ಯವಸ್ಥೆ ಬಲಿಷ್ಟವಾಗುತ್ತದೆ. ಬಿಜೆಪಿಯವರು ಒಂದೆರಡು ಕೋಟ್ಯಾಧಿಪತಿಗಳಿಗೆ ಸೇರಬೇಕು ಎಂದು ಬಯಸುತ್ತಾರೆ. ಈ ಕೋಟ್ಯಾಧಿಪತಿಗಳು ಲಂಡನ್‌ನಲ್ಲಿ ಮತ್ತೊಂದು ದೇಶದಲ್ಲಿ ಆಸ್ತಿ ಖರೀದಿಸುತ್ತಾರೆ. ಅವರಿಂದ ಉದ್ಯೋಗ ನಾಶವಾಗುತ್ತದೆ ನಮ್ಮಿಂದ ಉದ್ಯೋಗ ಸೃಷ್ಟಿ ಆಗುತ್ತದೆ. ಅವರ ವ್ಯವಸ್ಥೆಯಿಂದ ಅನಾರೋಗ್ಯ ಹೆಚ್ಚಾದರೆ ಆಸ್ಪತ್ರೆಗೂ ದುಡ್ಡು ಇರುವುದಿಲ್ಲ. ಬಿಜೆಪಿ ಮಾಡೆಲ್ ನಿಂದ ಲಕ್ಷಾಂತರ ರೂಪಾಯಿ ವಿದ್ಯಾರ್ಜನೆಗೆ ಖರ್ಚಾಗುತ್ತದೆ. ನಮ್ಮ ಮಾಡೆಲ್ ನಲ್ಲಿ ನಾವು ನಿಮ್ಮ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಣ ನೀಡುತ್ತೇವೆ. ಕರ್ನಾಟಕದಲ್ಲಿ ಹಲವಾರು ಮಂದಿ ಬಳಿ ಜಮೀನಿದೆ ಆದರೆ ಅದಕ್ಕೆ ಸೂಕ್ತ ದಾಖಲೆ ಆಧಾರಗಳೇ ಇಲ್ಲ. ಆದಿವಾಸಿಗಳು ದಲಿತರು ಗ್ರಾಮಗಳು ಅಂತಲೇ ಗುರುತಿಸಲ್ಪಡುತ್ತಿಲ್ಲ. ಆಸ್ತಿ ದಾಖಲೆಗಳು ಆಸ್ತಿ ಹಕ್ಕುಗಳೇ ಇವರಿಗೆ ಇಲ್ಲದಂತಾಗಿತ್ತು. ಹಲವಾರು ವರ್ಷಗಳಿಂದ ಈ ಕುಟುಂಬಗಳಿಗೆ ಭೂಮಿ ಮೇಲೆ ಹಕ್ಕೇ ಇರಲಿಲ್ಲ. ನಾನು ಈ ವಿಷಯದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ ಗಮನಕ್ಕೆ ತಂದಿದ್ದೆ. ಅತ್ಯಂತ ವಿಶ್ವಾಸದಿಂದ ಹೇಳುತ್ತೇನೆ ನಿಮಗೆ ಹಕ್ಕು ನೀಡುವ ಕೆಲಸದಲ್ಲಿ ನಾವು ಯಶಸ್ಸು ಕಾಣುತ್ತೇವೆ.ಒಂದು ಲಕ್ಷ ಕುಟುಂಬಗಳಿಗೆ ಕಂದಾಯ ಗ್ರಾಮ ಹಕ್ಕು ನೀಡಿದ್ದೇವೆ ಎಂದರು. ನಾವು ಭರವಸೆ ಕೊಟ್ಟಿದ್ದು ಐದು ಗ್ಯಾರಂಟಿ ಆದ್ರೂ ನಾವು ಪೂರೈಸಿದ್ದು ಆರು ಗ್ಯಾರಂಟಿ ಎಂದರು.