ಮನೆ Latest News ಕಾಂಗ್ರೆಸ್ ರಾಜ್ಯದ ಜನರ ಜೇಬಿನ ದರೋಡೆ ಮಾಡುತ್ತಿದೆ: ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಆಶೋಕ್...

ಕಾಂಗ್ರೆಸ್ ರಾಜ್ಯದ ಜನರ ಜೇಬಿನ ದರೋಡೆ ಮಾಡುತ್ತಿದೆ: ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಆಶೋಕ್ ಹೇಳಿಕೆ

0

ಬೆಂಗಳೂರು; ಕಾಂಗ್ರೆಸ್ ರಾಜ್ಯದ ಜನರ ಜೇಬಿನ ದರೋಡೆ ಮಾಡುತ್ತಿದೆ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಆಶೋಕ್ ಹೇಳಿದ್ದಾರೆ.

ರಾಜ್ಯ ಸರ್ಕಾರದಿಂದ ದಿನನಿತ್ಯ ಬೆಲೆ ಏರಿಕೆ ರಗಳೆ ಆಗುತ್ತಿದೆ. ಯಾವುದೇ ತೆರಿಗೆ ಹಾಕದೇ ಗ್ಯಾರಂಟಿಗಳನ್ನು ಕೊಟ್ಟು ಕರ್ನಾಟಕವನ್ನು ದೇವಲೋಕ ಮಾಡುತ್ತೇವೆ ಅಂದಿದ್ದರು.ಐದು ಗ್ಯಾರಂಟಿಗೆ ಎಷ್ಟು ಬೇಕು ಅಷ್ಟು ತೆರಿಗೆ ಹಾಕಿದ್ದಾರೆ. ಬೆಲೆ ಏರಿಕೆ ಜನರು ತಾಳಲು ಆಗುತ್ತಿಲ್ಲ, ಅದಕ್ಕೆ 2 ಸಾವಿರ ಕೊಟ್ಟು ಜನರಿಗೆ ಸಮಾಧಾನ ಮಾಡುತ್ತಿದ್ದೇವೆ ಅಂತ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬೆಲೆ ಏರಿಕೆ ಮಾಡಿ ಇಲ್ಲಿ 2 ಸಾವಿರ ಕೊಡುವುದು ಮೋಸ. ಕಾಂಗ್ರೆಸ್ ರಾಜ್ಯದ ಜನರ ಜೇಬಿನ ದರೋಡೆ ಮಾಡುತ್ತಿದೆ ಎಂದಿದ್ದಾರೆ.

ನೆನ್ನೆ ಮೈಸೂರಿನಲ್ಲಿ ಯಶಸ್ವಿಯಾಗಿ ಜನಾಕ್ರೋಶ ಆಗಿದೆ. ಜನರ ವಿಶ್ವಾಸವನ್ನು ಸರ್ಕಾರ ಕಳೆದುಕೊಂಡಿದೆ. ಚುನಾವಣೆ ಬಂದಾಗ ವಿರೋಧ ಅಲೆ ಬರುತ್ತದೆ. ಈ ಸರ್ಕಾರ ಬಂದ ಒಂದು ವರ್ಷಕ್ಕೆ ವಿರೋಧ‌ ಅಲೆ ಬಂದಿದೆ.ಒಬ್ಬರಿಗೆ ಕೆಪಿಸಿಸಿ ಕುರ್ಚಿ ಉಳಿಸಿಕೊಳ್ಳುವ ಯೋಚನೆ.ಮತ್ತೊಬ್ಬರಿಗೆ ಸಿಎಂ ಕುರ್ಚಿ ಉಳಿಸಿಕೊಳ್ಳುವ ಚಿಂತನೆ ಎಂದಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರದಿಂದ ಬೆಲೆ ಏರಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು  ಗ್ಯಾಸ್ ಸಿಲಿಂಡರ್ 50 ರೂ. ಹೆಚ್ಚಾಗಿದೆ, ಇದು ಹೊರೆ  ಆಗಲ್ಲ. ಹೋಗಿ ದೆಹಲಿ ಕಛೇರಿ ಎದುರು ಪ್ರತಿಭಟನೆ ಮಾಡಿ.ನಮಗೆ ಹೇಳಲು ಬರಬೇಡಿ ಎಂದಿದ್ದಾರೆ.

ಹಳೆ ಸಿದ್ದರಾಮಯ್ಯಗೂ ಹೊಸ ಸಿದ್ದರಾಮಯ್ಯ ಬಹಳ ವ್ಯತ್ಯಾಸ ಇದೆ ಸಿದ್ದರಾಮಯ್ಯಗೆ ಮರೆವು ಹೆಚ್ಚಾಗಿದೆ.ಕೇಂದ್ರ ಸರ್ಕಾರ ಯಾಕೆ ನಮಗೆ ಕಪಾಳ ಮೋಕ್ಷ ಮಾಡುತ್ತದೆ?. ಸಂಸದರು ಆಯ್ಕೆಯಾಗಿರುವುದು ಏನಕ್ಕೆ?. ಸರ್ಕಾರಿ ನೌಕರರಿಗೂ ಹಣ ಕೊಡಲೂ ಇವರ ಬಳಿ ಹಣವಿಲ್ಲ. ಆಸ್ಪತ್ರೆಯಲ್ಲಿ ಡಾಕ್ಟರ್ ಗಳಿಗೆ ಎರಡು ತಿಂಗಳಿಗೊಮ್ಮೆ ಸಂಬಳ ಕೊಡುತ್ತಿದ್ದಾರೆ.ಸರ್ಕಾರ ದಿವಾಳಿ ಆಗಿದೆ, ಸಂಬಳ ಕೊಡುವ ಯೋಗ್ಯತೆ ಇಲ್ಲ.ನೀವು ಪಾಪರ್ ಆಗಿಲ್ಲ ಅಂದ್ರೆ 15000  ಕೋಟಿ ಸಾಲ ಯಾಕೆ ಮಾಡಿದ್ರಿ?.ಸಾಲ ಮಾಡುವುದರಲ್ಲಿ ಸಿದ್ದರಾಮಯ್ಯ ಗಿನ್ನೆಸ್ ರೆಕಾರ್ಡ್ ಮಾಡಿದ್ದಾರೆ ಎಂದರು.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಒಪ್ಪಂದದ ಮೇಲೆ ಅಧಿಕಾರದಲ್ಲಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕರು ಯಾರನ್ನೇ ಕೇಳಿದರೂ ಹೇಳುತ್ತಾರೆ.ಡಿ.ಕೆ. ಶಿವಕುಮಾರ್ ಸಿಎಂ ಆಗುವುದರಲ್ಲಿ ಅನುಮಾನ ಇಲ್ಲ.ಡಿ.ಕೆ. ಶಿವಕುಮಾರ್ ಕೇಂದ್ರ ನಾಯಕರಿಗೆ ಒಳ್ಳೆಯ ಪೇಮೆಂಟ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಪೇಮೆಂಟ್ ಮಾಡುವುದರಲ್ಲಿ ಎಡವುತ್ತಿದ್ದಾರೆ. ಸಿದ್ದರಾಮಯ್ಯನ ಇಳಿಸಲು ಡಿ‌.ಕೆ. ಶಿವಕುಮಾರ್ ಹಿಂದುಳಿದ ವರ್ಗದ ಸಮಾವೇಶ ಮಾಡುತ್ತಿದ್ದಾರೆ .ಚಿನ್ನ ಕಳ್ಳತನ ಕೇಸ್, ರಾಜಣ್ಣ ಹನಿಟ್ರ್ಯಾಪ್ ಕೇಸ್ ಮುಚ್ಚಿ ಹಾಕಿದ್ರಿ. ಮುಚ್ಚಿ ಹಾಕುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು. ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಬಗ್ಗೆ ಕುಮಾರಸ್ವಾಮಿ ಜೊತೆ ಮಾತನಾಡಿದ್ದೇನೆ.ಅಧಿವೇಶನದ ಒಳಗಡೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಜೆಡಿಎಸ್ ಜೊತೆ ಚರ್ಚೆ ಮಾಡಿ ಮಾಡಿದ್ದೇವೆ.ಅವರ ಹೋರಾಟ ಅವರು ಮಾಡುತ್ತಾರೆ, ನಮ್ಮ ಹೋರಾಟ ನಾವು ಮಾಡುತ್ತಿದ್ದೇವೆ.ಮೈಸೂರು ಹೋರಾಟ ಆದ ಮೇಲೆ ಅವರು ಕೂಡಾ ಅವರದ್ದೇ ಹೋರಾಟ ಮಾಡುತ್ತಿದ್ದಾರೆ.ಮುಂದಿನ ದಿನಗಳಲ್ಲಿ ಹೊರಗಡೆ ಆಗುವ ಹೋರಾಟ ಒಟ್ಟಾಗಿ ಮಾಡಬೇಕು ಎಂಬ ವಿಚಾರ ನಾನು ಕುಮಾರಸ್ವಾಮಿ ಬಳಿ ಚರ್ಚೆ ಮಾಡುತ್ತೇನೆ ಎಂದರು.

ಉತ್ತರ ಪ್ರದೇಶದಿಂದ ಗ್ಯಾರಂಟಿಗಳ ಬಗ್ಗೆ ಅಧ್ಯಯನ ಮಾಡಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ನನಗೆ ಅದರ ಬಗ್ಗೆ ಮಾಹಿತಿ‌ ಇಲ್ಲ.ಯಾವ ತಂಡ ಅಧ್ಯಯನಕ್ಕೆ ಬಂದಿತ್ತು ಎಂಬ ಬಗ್ಗೆ ತಿಳಿದುಕೊಳ್ಳುತ್ತೇನೆ.ಇದು ಬೋಗಸ್ ಗ್ಯಾರಂಟಿ ಅಂತ ಅವರಿಗೂ ತಿಳಿಸಿ ಹೇಳುತ್ತೇವೆ ಎಂದಿದ್ದಾರೆ.