ಬೆಂಗಳೂರು; ಕಾಂಗ್ರೆಸ್ ಪ್ರತಿ ಬಜೆಟ್ ನಲ್ಲಿ ಎಸ್ ಸಿ ಪಿ ಟಿ ಎಸ್ ಪಿ ಹಣವನ್ನ ದುರ್ಬಳಕೆ ಮಾಡ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಇವತ್ತು ವಿಶೇಷ ಸಭೆ ಮತ್ತು ಕಾರ್ಯಾಗಾರ ಮಾಡಿದೆ. ಈ ಸರ್ಕಾರ ಪ್ರತಿ ಸಲವೂ ಕೂಡ ಎಸ್ ಇ ಪಿ ಟಿಎದ್ ಪಿ ಹಣ ದುರ್ಬಳಕೆ ಮಾಡ್ತಿದೆ. ೧೫ ಸಾವಿರ ಕೋಟಿ ರೂಪಾಯಿ ಹಣ ಆರ್ಥಿಕ ಹಣ ಸಮುದಾಯದ ಉದ್ಧಾರಕ್ಕೆ ಇಟ್ಟಿರುವ ಹಣ ಗ್ಯಾರಂಟಿ ಗಾಗಿ ಡೈವರ್ಟ್ ಮಾಡಿಕೊಂಡಿದೆ. ಮಾರ್ಚ್ 7 ಕ್ಕೆ ಸಿಎಂ ಬಜೆಟ್ ಮಂಡಿಸುತ್ತಿದ್ದಾರೆ. ಅಲ್ಲಿಯೂ ಕೂಡ ೧೮-೨೦ ಸಾವಿರ ಕೋಟಿ ಗ್ಯಾರಂಟಿ ಗಾಗಿ ಡೈವರ್ಟ್ ಮಾಡ್ತಿದ್ದಾರೆ. ಹೀಗಾಗಿ ಹದಿನಾಲ್ಕು ತಂಡಗಳಲ್ಲಿ ಜಾಗೃತಿ ಮೂಡಿಸುವ ಸಜ್ಜಾಗಿದ್ದೇವೆ. ಹೀಗಾಗಿ ಅವರ ಹಣ ಅವರಿಗಾಗಿಯೇ ಬಳಕೆಯಾಗಬೇಕು ಎಂದರು.
ಕಾಂಗ್ರೆಸ್ ಪ್ರತಿ ಬಜೆಟ್ ನಲ್ಲಿ ಎಸ್ ಸಿ ಪಿ ಟಿ ಎಸ್ ಪಿ ಹಣವನ್ನ ದುರ್ಬಳಕೆ ಮಾಡ್ತಿದೆ. ಕಳೆದ ಬಜೆಟ್ ನಲ್ಲೂ ಸುಮಾರು ೧೫ -೧೬ ಸಾವಿರ ಕೋಟಿ ಹಣ ದುರ್ಬಳಕೆ ಮಾಡಿದೆ. ಈ ಹಣವನ್ನ ಗ್ಯಾರಂಟಿಗೆ ಡೈವರ್ಟ್ ಮಾಡಿದೆ. ಈ ಬಾರಿ ಸಿಎಂ ಮತ್ತೊಂದು ಬಜೆಟ್ ಮಾಡ್ತಾ ಇದಾರೆ. ಈ ಬಾರಿಯೂ ಸುಮಾರು ೧೫ ಸಾವಿರ ಕೋಟಿ ಹಣ ದುರ್ಬಳಕೆ ಮಾಡ್ತಾರೆ ಎಂಬ ಮಾಹಿತಿ ಇದೆ. ಹೀಗಾಗಿ 14 ತಂಡ ಮಾಡಿ ಪ್ರವಾಸ ಮಾಡಿ ಬಿಜೆಪಿ ಜಾಗೃತಿ ಮಾಡ್ತಿವಿ ಎಂದ ಅವರು ಸಿಎಂ ಗೆ ಕ್ಲೀನ್ ಚಿಟ್ ನೀಡಿರುವ ವಿಚಾರದ ಬಗ್ಗೆ ಮಾತನಾಡಿ ಎಲ್ಲಾ ಇಲಾಖೆಯ ಬಗ್ಗೆ ಪ್ರಿಯಾಂಕ್ ಖರ್ಗೆ ಏನ್ ಹೇಳ್ತಾರೆ ಅಂತ ಮುಖ್ಯ ಅಲ್ಲ.ಸಿಎಂ ಕುರಿತು ಬಿ ರಿಪೋರ್ಟ್ ಕೊಟ್ಟಿರೋದು ಅಚ್ಚರಿಯಲ್ಲ. ರಾತ್ರಿ 8 ಗಂಟೆಗೆ ಸಿಎಂ ಕುಟುಂಬದವರು ಲೋಕಾಯುಕ್ತ ಕಚೇರಿ ಹೋಗಿ ಬರ್ತಿದ್ದರು. ಇದರಲ್ಲಿ ಸಿಎಂ ಅವರಿಗೆ ಕ್ಲೀನ್ ಚಿಟ್ ಕೊಟ್ಟಿರೋದು ಅಚ್ಚರಿಯಲ್ಲ. ಸಿಎಂ ಅವರು ಮುಡಾದಲ್ಲಿ ಹಗರಣ ಆಗಿಲ್ಲ ಎಂದು ಹೇಳಿದ್ದರು ಎಂದು ತಿಳಿಸಿದ್ರು.
ಮೂಡ ಹಗರಣದಲ್ಲೊ ಸಿಎಂ ಗೆ ಕ್ಲೀನ್ ಚಿಟ್ ಆಶ್ಚರ್ಯ ತಂದಿಲ್ಲ. ಎಲ್ಲಾ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಏನ್ ಹೇಳ್ತಾರೆ ಮುಖ್ಯ ಅಲ್ಲ. ಸಿಎಂ ಕುಟುಂಬಸ್ಥರು ಮಾವನ ಮನೆಗೆ ಹೋದಂಗೆ ಲೋಕಾಯುಕ್ತ ಕಚೇರಿಗೆ ಹೋಗಿ ಬಂದಿದ್ದಾರೆ. ಇದರಲ್ಲೇ ತನಿಖೆ ಹೇಗೆ ನಡೆದಿದೆ ಎಂದು ಗೊತ್ತಾಗುತ್ತೆ . ಸಿದ್ದರಾಮಯ್ಯ ಅವರೇ ಈ ಹಿಂದೆ ಮುಡಾದಲ್ಲಿ ಅಕ್ರಮ ಆಗಲೇ ಇಲ್ಲ ಎಂದಿದ್ರು. ನಮ್ಮ ಮೂಡ ಪಾದಯಾತ್ರೆ ಬಳಿಕ ಸೈಟ್ ವಾಪಸ್ ನೀಡಿದ್ರು. ಏನು ಅಕ್ರಮ ಆಗಿಲ್ಲ ಅಂತಾದ್ರೆ ಯಾಕೆ ಸೈಟ್ ವಾಪಸ್ ಮಾಡಿದ್ರೆ.ಇದು ನಮ್ಮ ಪ್ರಶ್ನೆ.ಸಿದ್ದರಾಮಯ್ಯ ಕುಟುಂಬಕ್ಕೆ ಕೊಟ್ಟಿರುವುದು ಫೇಕ್ ಕ್ಲೀನ್ ಚಿಟ್ ಎಂದು ಗರಂ ಆಗಿದ್ದಾರೆ.
ತಾವು ಆಗಲಿ ತಮ್ಮ ಕುಟುಂಬಕ್ಕೆ ಅಕ್ರಮ ನಿವೇಶನ ಬಂದಿಲ್ಲ ಅಂದ್ರೆ ಯಾಕೆ ಮರಳಿ ಕೊಟ್ಟಿದ್ದು.ಲೋಕಾಯುಕ್ತ ಅವರು ಕ್ಲೀನ್ ಚಿಟ್ ಕೊಟ್ಟಿದ್ದಾರೆ ಅಂದ್ರೆ ಅದನ್ನ ಪ್ರಶ್ನೆ ಮಾಡಬೇಕು.ಸಿಎಂ ಅವರಿಗೆ ಕೊಟ್ಟಿರೋ ಕ್ಲೀನ್ ಚಿಟ್ ಫೇಕ್ ಕ್ಲೀಟ್ ಇದು ಎಂದ ಅವರು ಯತ್ನಾಳ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಅವರು ಏನೇನು ಆರೋಪ ಮಾಡುತ್ತಿದ್ದಾರೆ, ಅದನ್ನ ಪಟ್ಟಿ ಮಾಡಿಕೊಳ್ಳುತ್ತೇನೆ. ಆದಕ್ಕೆ ಉತ್ತರ ಕೊಡುತ್ತೇನೆ. ಯಾವ ಸಂದರ್ಭದಲ್ಲಿ ಉತ್ತರ ನೀಡಬೇಕೋ ಅದನ್ನ ಕೊಡುತ್ತೇವೆ.ಅವರು ಹಿರಿಯರು ಇದ್ದಾರೆ, ಏಕ ವಚನದಲ್ಲಿ ಮಾತಾಡಿದ್ದಾರೋ ಅದಕ್ಕೆ ತಲೆ ಕೆಡಿಸಿಕೊಳ್ಳೋದಿಲ್ಲ. ಸಮಯ ಬಂದಾಗ ಅದಕ್ಕೆ ಉತ್ತರ ಕೊಡುತ್ತೇನೆ ಎಂದಿದ್ದಾರೆ.