ಬೆಂಗಳೂರು: ಸತತ ಸೋಲಿನಿಂದ ಕಾಂಗ್ರೆಸ್ ನವರು ಹತಾಶರಾಗಿದ್ದಾರೆ ಎಂದು ಬೆಂಗಳೂರಿನಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಹದೇವಪುರದಲ್ಲಿ ಮತಗಳವು ಆರೋಪದ ಬಗ್ಗೆ ರಾಹುಲ್ ಗಾಂಧಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಅವರ ಮುಖ್ಯ ಉದ್ದೇಶ ಸೆಲೆಕ್ಟಿವ್ ಆಗಿ ಮಾತಾಡಿದ್ದಾರೆ. ಸಂವಿಧಾನ ಬದ್ಧ ಸಂಸ್ಥೆಗಳ ಮೇಲೆ ಮಾತಾಡಿ ಅವುಗಳನ್ನು ನಿಷ್ಕ್ರಿಯ ಮಾಡಲು ಹೊರಟಿದ್ದಾರೆ. ಸತತ ಸೋಲಿನಿಂದ ಕಾಂಗ್ರೆಸ್ ನವರು ಹತಾಶರಾಗಿದ್ದಾರೆ. ಮುಂದಿನ ದಿನದಲ್ಲಿ ಮತ್ತಷ್ಟು ಸೋಲಾಗಲಿದೆ. 2009-2014ರಲ್ಲಿ ಯುಪಿಎ ಅಧಿಕಾರ ಇತ್ತು. ಮಹದೇವಪುರದಲ್ಲಿ ಅವತ್ತು ಕೂಡ ಹೆಚ್ಚು ಮತದಾನ ಆಗಿದೆ. 2014ರಲ್ಲಿ ಅವತ್ತೇ ಒಂದು ಲಕ್ಷಕ್ಕೂ ಹೆಚ್ಚು ಮತದಾರರು ಸೇರ್ಪಡೆ ಆಗಿದ್ದಾರೆ ಎಂದರು.
ಆಗ ಯುಪಿಎ ಮೇಲೆ ಆರೋಪ ಮಾಡಿದ್ರಾ ಯಾರಾದರೂ? 136 ಸೀಟ್ ಗೆಲ್ಲುತ್ತೇವೆ ಅಂತಾ ಡಿ.ಕೆ. ಶಿವಕುಮಾರ್ ಹೇಳಿದ್ದರು. ಅದು ಹೇಗೆ? ನಮಗೆ ಅವತ್ತೇ ಗುಮಾನಿ ಬಂತು. ಅದು ಹೇಗೆ ಅಷ್ಟು ಕರಾರುವಕ್ಕಾಗಿ ಹೇಳಿದರು?. ಮಹದೇವಪುರದಲ್ಲಿ ಹೆಚ್ಚು ವಲಸಿಗರು ಇದ್ದಾರೆ. ಅವರ ಪಕ್ಷದಿಂದಲೂ ಬಿಎಲ್ಎ 1, ಬಿಎಲ್ಎ 2 ಇರುತ್ತಾರೆ. ನಕಲಿ ಮತದಾನ ಆಗಿದೆ ಎಂದಾಗ ಅವರು ಏನು ಮಾಡುತ್ತಿದ್ದರು?. ವಯನಾಡು ಕ್ಷೇತ್ರದಲ್ಲಿಯೂ ಬಹಿರಂಗ ಮಾಡಲಿ. ಈಗ ರಾಹುಲ್ ಮಾಡಿರುವ ಆರೋಪಕ್ಕೆ ದಾಖಲೆ ಕೊಡಬೇಕು. ಎನ್ಜಿಒ ಕೊಟ್ಟ ಮಾಹಿತಿಯನ್ನು ಇಟ್ಟುಕೊಂಡು ಹೀಗೆ ಹೇಳುತ್ತಿದ್ದಾರೆ. ಮತದಾರರಿಗೆ ರಾಹುಲ್ ಗಾಂಧಿ ಅವಮಾನ ಮಾಡಿದ್ದಾರೆ. ಮೋದಿ ಆ ರೀತಿ ಮಾಡುವುದಿದ್ದರೆ ಸಂಪೂರ್ಣ ಮೆಜಾರಿಟಿ ಬರುತ್ತಿತ್ತು. 32 ಸೀಟ್ ಕಡಿಮೆ ಆಗಿದೆ, ಅಕ್ರಮ ಮಾಡುವುದಾಗಿದ್ದರೆ ಗೆಲ್ಲುತ್ತಿರಲಿಲ್ವಾ?. ಎಲೆಕ್ಷನ್ ಕಮಿಷನ್ ಗೆ ಯಾವ ಅಧಿಕೃತ ದಾಖಲೆ ಕೊಡುತ್ತೀರಾ?. ದೆಹಲಿಯಲ್ಲಿ ಕುಳಿತು ದಾಖಲೆ ಸಮೇತ ದೂರು ಕೊಡುತ್ತೇವೆ ಅಂತಾ ಹೇಳಿದರು. ಚುನಾವಣಾ ಆಯೋಗಕ್ಕೆ ಭೇಟಿ ನೀಡಲಿಲ್ಲ ಯಾಕೆ?.ಬೆಂಗಳೂರಿಗೆ ಬಂದು ಮತದಾರರನ್ನು ಅವಮಾನ ಮಾಡಿದ್ದಾರೆ. ಆರೋಪ ಮಾಡಿ ಪಲಾಯನವಾದ ಮಾಡಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ಸಂಸದ ಡಾ. ಸುಧಾಕರ್ ಮೇಲೆ ಎಫ್ಐಆರ್ ದಾಖಲು ವಿಚಾರದ ಬಗ್ಗೆ ಮಾತನಾಡಿ ದುರಂತ ಆಗಿದ್ದಕ್ಕೆ ನಮಗೂ ದು:ಖ ಇದೆ. ಆದರೆ ಇಂತಹ ವಿಚಾರದಲ್ಲಿ ರಾಜಕೀಯ ಮಾಡಬಾರದು. ಇಂತಹ ಘಟನೆ ಆದಾಗ ತಕ್ಷಣಕ್ಕೆ ಎಫ್ಐಆರ್ ಆಗಿಲ್ಲ. ಇನ್ನೂ ಘಟನೆಯ ಪ್ರಾಥಮಿಕ ತನಿಖೆ ಆಗಿಲ್ಲ. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೇ ಕೆಲಸ ಮಾಡಬೇಕು. ಸುಧಾಕರ್ ಹೆಸರು ಇದೆ, ಆದರೆ ಅವರ ಪಾತ್ರ ಇಲ್ಲ. ಅದನ್ನು ಪ್ರೂವ್ ಮಾಡಲು ಅವಕಾಶ ಇದೆ, ಪಾತ್ರ ಇಲ್ಲ ಎನ್ನುವುದನ್ನು ಪ್ರೂವ್ ಮಾಡುತ್ತಾರೆ. ಈ ಪ್ರಕರಣದಲ್ಲಿ ರಾಜಕೀಯ ದುರುದ್ದೇಶದಿಂದ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದರು.