ಮನೆ Latest News ಕಾಂಗ್ರೆಸ್ ‌ನವರು ಹಿಂದೂ ವಿರೋಧಿಗಳು: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ

ಕಾಂಗ್ರೆಸ್ ‌ನವರು ಹಿಂದೂ ವಿರೋಧಿಗಳು: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ

0

ಬೆಂಗಳೂರು; ಕಾಂಗ್ರೆಸ್ ‌ನವರು ಹಿಂದೂ ವಿರೋಧಿಗಳು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ‌ನವರು ಹಿಂದೂ ವಿರೋಧಿಗಳು. ಅದಕ್ಕೆ ವಿಶೇಷ ಅಧಿವೇಶನ ಕರೆದು ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಏನೆಲ್ಲಾ ನಾಟಕ ಮಾಡಿದರು. ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರನ್ನು ಖುಷಿ ಪಡಿಸಲು ನಾಟಕ ಮಾಡಿದರು. ಆದರೆ ಇದರಿಂದ ಯಾವುದೇ ಬದಲಾವಣೆ ಆಗಲ್ಲ. ಬಿಜೆಪಿ ರೈತ ಮೋರ್ಛಾ ಕೇಂದ್ರ ಬಜೆಟ್ ನಲ್ಲಿ ರೈತರಿಗೆ ಆಗುವ ಲಾಭಗಳ ಕುರಿತು ಗ್ರಾ.ಪಂ. ಮಟ್ಟದಲ್ಲಿ ಆಂದೋಲನ ಮಾಡಲಿದೆ. ಕಾಂಗ್ರೆಸ್ ನಾಯಕರಿಗೆ ಖಿನ್ನತೆ ಪ್ರಾರಂಭ ಆಗಿದೆ. ಆದ್ದರಿಂದ ಮತಿಭ್ರಮಣೆ ಆಗುವಂತೆ ವರ್ತಿಸುತ್ತಿದ್ದಾರೆ. ಬಿ.ಕೆ. ಹರಿಪ್ರಸಾದ್, ನಜೀರ್ ಅಹಮದ್, ಶಿವಲಿಂಗೇಗೌಡ ಸೇರಿ ಅವರ ವಯಸ್ಸಿಗೆ ಮರ್ಯಾದೆ ಕೊಡಬೇಕೇ ಹೊರತು ಅವರಿಗೆ ಮೂರು ಕಾಸಿನ ಮರ್ಯಾದೆ ಇಲ್ಲ.ಇಂತಹ ಲಜ್ಜೆಗೆಟ್ಟ ಕಾಂಗ್ರೆಸ್ ನಾಯಕರನ್ನು ಎಲ್ಲೂ ನೋಡಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ನಂಬಿಕೊಂಡು ಭವಿಷ್ಯ ಇಲ್ಲ ಎಂಬ ಕಾರಣಕ್ಕೆ ಕೆಟ್ಟ ಮಾತು ಆಡುತ್ತಿದ್ದಾರೆ ಎಂದರು.

ವಿಧಾನ ಪರಿಷತ್ ನಲ್ಲಿ ಸಿ‌.ಟಿ. ರವಿಯವರನ್ನು ಅಮಾನತು ಮಾಡಿದ್ದನ್ನು ಖಂಡಿಸುತ್ತೇನೆ. ಸರ್ಕಾರ ಕೆಲವರನ್ನೇ ಓಲೈಸುವ ತುಷ್ಟೀಕರಣ ಮಾಡುವ ಕೆಲಸ ಮಾಡುತ್ತಿದೆ. ಬಿ.ಕೆ. ಹರಿಪ್ರಸಾದ್ ಬಗ್ಗೆ ಕಾಳಜಿ ತೋರದ ಕಾಂಗ್ರೆಸ್ ನವರು ನಜೀರ್ ಅಹಮದ್ ಪರ ನಿಂತರು. ಅವರು ಮುಸ್ಲಿಂ ಎಂಬ ಕಾರಣಕ್ಕೆ ಪರ ನಿಂತರು. ಮುಸ್ಲಿಮರು ತಿರುಗಿ ಬಿದ್ದರೆ ಕಾಂಗ್ರೆಸ್ ಸರ್ವನಾಶ ಎಂಬ ಭಯ ಅವರಿಗೆ ಇದೆ. ಮುಸ್ಲಿಮರು ಯಾವತ್ತಿಗೂ ಧರ್ಮದ ಪರವೇ ಹೊರತು ಕಾಂಗ್ರೆಸ್ ಪರ ಬಿಜೆಪಿ ಪರ ಅಲ್ಲ. ತುಷ್ಟೀಕರಣದ ತುಚ್ಛ ಪರಮಾವಧಿಯನ್ನು ಕಾಂಗ್ರೆಸ್ ತಲುಪಿದೆ. ಬಚ್ಚಲು ಬಾಯಿಯ ರಾಜಕೀಯ ಮಾಡುವ ನಜೀರ್ ಅಹಮದ್ ಮುಂದೆ ಕೈ ಕಟ್ಟಿ ಕಾಂಗ್ರೆಸ್ ಶರಣಾಗತಿಯಾಗಿದೆ. ಅದಕ್ಕೆ ಓಲೈಸಲು ಸಿ.ಟಿ. ರವಿಯನ್ನು ಶಿಕ್ಷಿಸುವಂತೆ ಸಭಾಪತಿ ಮೇಲೆ ಒತ್ತಡ ಹೇರಿದ್ದಾರೆ.ಈ ವಿಚಾರದಲ್ಲಿ ಕಾನೂನಾತ್ಮಕ ಹೆಜ್ಜೆಯ ಬಗ್ಗೆ ಕೂಡಾ ನಾವು ಚಿಂತಿಸುತ್ತೇವೆ ಎಂದು ಹೇಳಿದರು.

ಸಭಾಪತಿ ಯಾವುದೇ ಪಕ್ಷಕ್ಕೆ ಸೇರಿದವರಲ್ಲ.ಆದರೆ ಸಭಾಪತಿಯವರು ಯೋಚನೆ ಮಾಡಬಹುದಾಗಿತ್ತು. ಬಿಜೆಪಿ ಸಭಾತ್ಯಾಗ ಮಾಡಿದ್ದ ವೇಳೆ ಅವರು ಸಿ.ಟಿ. ರವಿ ಅಮಾನತು ಘೋಷಣೆ ಮಾಡಿದರು ಎಂದ ಅವರು ಮೆಟ್ರೋ ಟಿಕೆಟ್ ದರ ಏರಿಕೆ ಸರಿಯಲ್ಲ. ಟಿಕೆಟ್ ದರ ರಾಜ್ಯ ಸರ್ಕಾರದ ಅನುಮತಿ ಇಲ್ಲದೇ ಮಾಡಲು ಆಗುವುದಿಲ್ಲ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಇಲ್ಲ. ಟಿಕೆಟ್ ದರ ಪರಿಷ್ಕರಣೆ ಸಮಿತಿ ರಾಜ್ಯ ಸರ್ಕಾರದ ಅಡಿ ಬರುತ್ತದೆ. ರಾಜ್ಯ ಸರ್ಕಾರ ಮತ್ತು ಈ ಸಮಿತಿ ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ. ದರ ಏರಿಕೆ ಪ್ರಸ್ತಾಪ ಯಾರ ಕಡೆಯಿಂದ ಬಂತು ಎನ್ನುವುದನ್ನು ನೋಡಬೇಕು. ಮೆಟ್ರೋ ಲಾಸ್ ನಲ್ಲಿದೆ‌ ಅಂತ ದರ ಏರಿಕೆ‌ ಮಾಡಲಾಗಿದೆಯಾ ಅಂತ ನೋಡಬೇಕು ಎಂದರು.

ಅಬಕಾರಿ ಇಲಾಖೆ ಹಗರಣ ವಿಚಾರದ ಬಗ್ಗೆ ಮಾತನಾಡಿ ಸಿಎಂ‌ ಹಾಗೂ ಸಚಿವರು ನಾವು ಲೂಟಿ ಮಾಡುವುದೇ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಸಂಘದ ಅಧ್ಯಕ್ಷ ಗುರುಸ್ವಾಮಿ 6 ಸಾವಿರ ಕೋಟಿ ರೂ. ಕೊಟ್ಟಿದ್ದೇವೆ ಅಂತಾರೆ. ಆಡಿಯೋ ಸಾಕ್ಷಿ ಇದೆ, ದೂರು ದಾಖಲಾಗಿದೆ. ಆಡಿಯೋ ಸಾಕ್ಷಿ ಆಗುತ್ತದೆ.ಅಧಿಕಾರಿಗಳ ಬಂಧನ ಆಗಿದೆ. ಸಚಿವರ ಮಗ ಹಣ ಪಡೆದಿರುವ ಬಗ್ಗೆ ಹೇಳಿದ್ದಾನೆ. ಕೋರ್ಟಿಗೆ ಹೋಗಿ ಎಲ್ಲವನ್ನೂ ಮಾಡಲು ಆಗಲ್ಲ. ಮತ್ತಷ್ಟು ಸಾಕ್ಷಿ ಸಿಕ್ಕಿದೆ, ಅದನ್ನು ಮುಂದೆ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು..