ಬೆಂಗಳೂರು; ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ ಸರೆಂಡರ್ ಆಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗ್ತಿದೆ. ಗುತ್ತಿಗೆದಾರರು ಆಸ್ತಿ ಮಾರಿಕೊಳ್ಳುವಂತಾಗಿದೆ. ಬೆಂಗಳೂರಿನಲ್ಲಿ ಸ್ಕ್ವಯರ್ ಪಿಟ್ ಮೇಲೆ ದುಡ್ಡು ಹೊಡೆಯುತ್ತಿದ್ದಾರೆ. ಅಭಿವೃದ್ಧಿಗೆ ಹಣವಿಲ್ಲ, ಗ್ಯಾರೆಂಟಿಗಳು ಮೂಲೆ ಸೇರಿವೆ. ಇದೇ ರೀತಿ ಆದ್ರೆ ದೊಂಬಿ ಹೆಚ್ಚಾಗಲಿದೆ. ನಿರುದ್ಯೋಗಿಗಳು ಪ್ರತಿಭಟನೆ ಮಾಡ್ತಿದ್ದಾರೆ. ೨೦೦೦ ಸರ್ಕಾರಿ ಉದ್ದೆಗಳು ಖಾಲಿ ಇವೆ. ನಿರುದ್ಯೋಗಿಗಳು ದಂಗೆ ಹೇಳುವ ಪರಿಸ್ಥಿತಿ ಇದೆ. ನಾನು ರಾಜ್ಯಪಾಲರಿಗೆ ಮನವಿ ಮಾಡ್ತೇನೆ. ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಹಿಂದುಗಳ ಮೇಲೆ ಹಲ್ಲೆಯಾಗ್ತಿದೆ. ಪೊಲೀಸ್ ಠಾಣೆಗೆ ಬೆಂಕಿ ಹಾಕುವ ಟೀಂ ಇದೆ. ಮೊದಲಿನ ಸಿದ್ದರಾಮಯ್ಯ ಈಗಿಲ್ಲ. ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಗ್ಯಾರೆಂಟಿ ಬಿಟ್ಟರೆ ಮತ್ತೇನು ಇಲ್ಲ, ಕೋಮುಗಲಭೆಗಳು ಹೆಚ್ಚಾಗ್ತಿವೆ. ನೀರಾವರಿ ಯೋಜನೆಗೆ ಹಣ ಕೊಟ್ಟಿಲ್ಲ. ಕೃಷ್ಣಾ ಭಾಗ್ಯ ನಿಗಮಕ್ಕೆ ಒಂದು ಪೈಸೆ ಕೊಟ್ಟಿಲ್ಲ. ಈಗ ಕಾಂಗ್ರೆಸ್ ಶಾಸಕರಿಗೆ ೫೦ ಕೋಟಿ ಕೊಟ್ಟಿದ್ದಾರೆ. ವಿಪಕ್ಚ ಶಾಸಕರಿಗೆ ೨೫ ಕೋಟಿ ಕೊಟ್ಟಿದ್ದಾರೆ. ಉದ್ಯೋಗ ಸೃಷ್ಟಿ ಮಾಡುವ ಕೆಲಸ ಆಗ್ತಿಲ್ಲ. ಸರ್ಕಾರ ಸಮಗ್ರ ಅಭಿವೃದ್ಧಿಗೆ ಗಮನ ಕೊಡಬೇಕು. ಎಲ್ಲಾ ನೇಮಕಾತಿ ಸ್ಥಗಿತಗೊಂಡಿವೆ, ಎರಡೂವರೆ ವರ್ಷದಲ್ಲಿ ಸಾಧನೆ ಶೂನ್ಯ ಎಂದು ಸರ್ಕಾರದ ವಿರುದ್ಧ ಯತ್ನಾಳ್ ಆಕ್ರೋಶ ಹೊರ ಹಾಕಿದ್ದಾರೆ.
ಡಿ ಕೆ ಶಿವಕುಮಾರ್ ಗೆ ಹತಾಶೆಯಾಗಿದೆ. ಅವರು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ರು. ಅತಿರಥ ಮಹಾರಥ ಬಿಹಾರದಲ್ಲಿ ಪ್ರಚಾರ ಮಾಡಿದ್ರು. ತಿಂಗಳು ಗಟ್ಟಲೆ ದಾಖಲೆ ಮಟ್ಟದಲ್ಲಿ ಪ್ರಚಾರ ಮಾಡಿದ್ರು. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ ಸರೆಂಡರ್ ಆಗಿದೆ. ಇಲ್ಲಿ ಗೊಂದಲ ಸೃಷ್ಟಿಸಿದೆ ಸರ್ಕಾರ ಕಳೆದುಕೊಳ್ಳುವ ಭೀತಿ ಇದೆ. ಡಿಕೆ ಶಿವಕುಮಾರ್ ಗೆ ಶಾಸಕರ ಬಲವೇ ಇಲ್ಲ. ಎರಡೂವರೆ ವರ್ಷ ಸಿದ್ದರಾಮಯ್ಯ ಇರ್ತಾರೆ. ನಂತರ ಡಿಕೆಶಿ ಶಾಸಕರ ಜೊತೆ ಬರ್ತಾರೆ ಅಂತ. ಯತ್ನಾಳ್ ಇದಕ್ಕೆ ತೊಡಕಾಗಬಹುದು ಅಂತ ಇತ್ತು. ಹೀಗಂತ ಯತ್ನಾಳ್ ಉಚ್ಛಾಟನೆ ಮಾಡಿ ಅಂತ ಇಟ್ಟಿದ್ರು. ನಮ್ಮ ವರಿಷ್ಠರ ಮುಂದೆ ಇಟ್ಟಿದ್ರು. ಆದರೆ ಡಿಕೆಶಿವಕುಮಾರ್ ಕನಸು ನನಸಾಗ್ಲಿಲ್ಲ. ವಿಜಯೇಂದ್ರ ಉಪಮುಖ್ಯಮಂತ್ರಿ ಕನಸು ಕಂಡಿದ್ದ.ಇಬ್ಬರು ಇದ್ದಿದ್ದರೆ ಒಂದು ಗಿಡವೂ ಉಳಿತಿರಲಿಲ್ಲ ಎಲ್ಲವೂ ಸ್ವಚ್ಛವಾಗ್ತಿತ್ತು ಎಂದಿದ್ದಾರೆ.
ಪಾಪ ಶಿವಕುಮಾರ್ ಗೆ ಶಾಸಕರ ಬೆಂಬಲವಿಲ್ಲ. ದೆಹಲಿಯಲ್ಲಿ ಸೋನಿಯಾ ಮುಂದೆ ಓಡಾಡ್ತಿದ್ದಾರೆ. ರಾಹುಲ್‌ಗಾಂಧಿ ಮನೆ ಮುಂದೆ ಓಡಾಡ್ತಿದ್ದಾರೆ. ಬಿಹಾರಕ್ಕೆ ಇಷ್ಟು ಹಣ ಕೊಟ್ಟಿದ್ದೇನೆ. ನೀವು ಬೆಂಗಳೂರಿಗೆ ಬಂದ್ರೆ ವ್ಯವಸ್ಥೆ ಮಾಡ್ತೇನೆ.ಹೀಗಂತ ಅವರ ಮನೆ ಮುಂದೆ ಓಡಾಡ್ತಿದ್ದಾರೆ. ಆದರೆ ಅವರ ಕಡೆ ಹೈಕಮಾಂಡ್ ನೋಡ್ತಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.










