ಮನೆ Latest News ಅಮಿತ್ ಶಾ ಮಾತನ್ನು ಕಾಂಗ್ರೆಸ್ ತಿರುಚಿದೆ : ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಹೇಳಿಕೆ

ಅಮಿತ್ ಶಾ ಮಾತನ್ನು ಕಾಂಗ್ರೆಸ್ ತಿರುಚಿದೆ : ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಹೇಳಿಕೆ

0

ಬೆಂಗಳೂರು; ಅಮಿತ್ ಶಾ ಮಾತನ್ನು ಕಾಂಗ್ರೆಸ್ ತಿರುಚಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಹೆಚ್ಚೆಚ್ಚು ನೆನಪು ಮಾಡಿಕೊಳ್ಳುತ್ತಿದೆ. ಅಂಬೇಡ್ಕರ್ ಅವರನ್ನು ನಿಂದಿಸುವ ಯಾವ ಅವಕಾಶಗಳನ್ನೂ ಕಾಂಗ್ರೆಸ್ ಕಳೆದುಕೊಂಡಿರಲಿಲ್ಲ. ಅಂಬೇಡ್ಕರ್ ಜನಪ್ರಿಯತೆಯನ್ನು ಕಾಂಗ್ರೆಸ್ ಸಹಿಸಲಿಲ್ಲ. ಕಾಂಗ್ರೆಸ್ ಪ್ರಾಮಾಣಿಕರಾಗಿರುತ್ತಿದ್ದರೆ ಅಂಬೇಡ್ಕರ್ ಯಾಕೆ ಮಂತ್ರಿ ಮಂಡಲದಿಂದ ಹೊರಗೆ ಬಂದರು?. ಅಂಬೇಡ್ಕರ್ ಸೇವಕರಾಗಿದ್ದ ಕಾರಜೋಳಕರ್ ರನ್ನು ಅಂಬೇಡ್ಕರ್ ವಿರುದ್ಧವೇ ಚುನಾವಣೆಗೆ ನಿಲ್ಲಿಸಿ ಮನೆ ಮುರುಕತನವನ್ನು ಕಾಂಗ್ರೆಸ್ ಮಾಡಿತ್ತು. ಕಾರಜೋಳಕರ್ ಅವರಿಗೆ ಪದ್ಮಭೂಷಣ ಕೊಟ್ಟ ಅಪಕೀರ್ತಿ ಕಾಂಗ್ರೆಸ್ ನದ್ದು. ಕಾಂಗ್ರೆಸ್ ದುಷ್ಟತನವನ್ನು ಹಲವು ಬಾರಿ ಅಂಬೇಡ್ಕರ್ ಅವರೇ ದೇಶದ ಮುಂದೆ ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್ ನ ಸುಡುವ ಮನೆಯಲ್ಲಿ ಪರಿಶಿಷ್ಟರಿಗೆ ಭವಿಷ್ಯವೇ ಇಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಇಂದಿರಾಗಾಂಧಿ, ರಾಜೀವ್ ಗಾಂಧಿ ತಮಗೆ ತಾವೇ ಭಾರತ ರತ್ನ ಪ್ರಶಸ್ತಿ ಕೊಟ್ಟು ಕೊಂಡರು. ರಾಜ್ಯಸಭೆಯಲ್ಲಿ ಅಮಿತ್ ಷಾ ಕಾಂಗ್ರೆಸ್ ಬಂಡವಾಳ ಬಿಚ್ಚಿಡುವ ಕೆಲಸ ಮಾಡಿದ್ದಾರೆ. ಎಂದಿದ್ದಾರೆ.

ತಿರುಚುವುದೇ ಕಾಂಗ್ರೆಸ್ ಪಕ್ಷದ ಕೆಲಸ. ಅಮಿತ್ ಷಾ ಮಾತನ್ನೂ ಕಾಂಗ್ರೆಸ್ ತಿರುಚಿದೆ. ಜಾತಿ, ಧರ್ಮಗಳ‌‌ ನಡುವೆ ವಿಷ ಬೀಜ ಬಿತ್ತುವ‌ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅಂಬೇಡ್ಕರ್ ಸಂವಿಧಾನ ಭಾರತಕ್ಕಷ್ಟೇ ಅಲ್ಲ, ಜಗತ್ತಿಗೆ ದಾರಿ ದೀಪ. ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಾಧಿವೇಶನ ಆಯೋಜಿಸಿದ್ದಾರೆ. ಇಂದಿನ ಕಾಂಗ್ರೆಸ್ ಪಕ್ಷ ಶತಮಾನೋತ್ಸವ ಆಚರಿಸುತ್ತಿದೆ.  ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ನದ್ದು ಆಂದೋಲನ‌ ಆಗಿತ್ತು. ಇದು ಗಾಂಧಿ ಕಾಂಗ್ರೆಸ್ ಅಲ್ಲ, ನಕಲಿ ಕಾಂಗ್ರೆಸ್. ತಮ್ಮ ಬೇಳೆ ಬೇಯಿಸಿಕೊಳ್ಳಲು ನಕಲಿ ಕಾಂಗ್ರೆಸ್ ಮಹಾಧಿವೇಶನ ಮಾಡಲು ಹೊರಟಿದೆ. ರಾಜ್ಯದ ತೆರಿಗೆ ಹಣ ದುರುಪಯೋಗಪಡಿಸಿಕೊಂಡು ಮಹಾಧಿವೇಶನ. ಗಾಂಧಿ ಬಗ್ಗೆ ಮಾತಾಡುವ‌ ಯೋಗ್ಯತೆ ನಕಲಿ ಕಾಂಗ್ರೆಸ್ ಗೆ ಇಲ್ಲ. ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಮಹಾಧಿವೇಶನ ವಿರೋಧಿಸಿ ಧರಣಿ ಹಮ್ಮಿಕೊಂಡಿದ್ದೇವೆ ಎಂದರು.

ಗಾಂಧೀಜಿ ಅವರು ಬೆಳಗಾವಿ ಅಧಿವೇಶನ ಮಾಡಿ ನೂರು ವರ್ಷ ಆಗಿದೆ. ಗಾಂಧಿ ಅವರ ಬಗ್ಗೆ ನಮಗೆ ಅಪಾರ ಗೌರವ ಇದೆ. ಆದ್ರೆ ಇಲ್ಲಿ ಇರುವವರು ನಕಲಿ ಕಾಂಗ್ರೆಸ್ಸಿಗರು.  ಸ್ವಾತಂತ್ರ್ಯ ನಂತ್ರ ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದು ಗಾಂಧಿ ಹೇಳಿದ್ದರು. ಆದ್ರೆ ಇಂದಿರಾ, ರಾಹುಲ್ ಗಾಂಧಿ ಪೂರ್ವಜರು ಯಾರು. ಬೆಳಗಾವಿ ಯಲ್ಲಿ ಸಮ್ಮೇಳನ ಮಾಡುತ್ತಿದ್ದಾರೆ. ಗಾಂಧೀಜಿ ಅವರು ಸಿಂಪಲ್ ಆಗಿದ್ದರು. ಖಾದಿ ಬಿಟ್ಟರೇ ಅವರ ಮೈ ಮೇಲೆ ಏನೂ ಇರಲಿಲ್ಲ. ಗ್ರಾಮ ರಾಜ್ಯ ಹೋಗಿ ಆಡಂಬರದ ರಾಜ್ಯ ಆಗಿದೆ. ಮೋದಿ, ಅಮಿತ್ ಶಾ ಅವರನ್ನು ಯಾಕೆ ಕರೆದಿಲ್ಲ. ಕುಮಾರಸ್ವಾಮಿ, ಜೋಶಿ, ಸೋಮಣ್ಣ, ಶೋಭಾ ಅವರನ್ನು ಯಾಕೆ ಕರೆದಿಲ್ಲ. ಸರ್ಕಾರದ ಕಾರ್ಯಕ್ರಮ ಅಲ್ಲವೇ, ಪ್ರೋಟೋಕಾಲ್ ಪ್ರಕಾರ ಯಾಕೆ ಕರೆದಿಲ್ಲ. ಶೆಟ್ಟರ್ ಅವರು ಅಲ್ಲಿನ ಲೋಕಸಭೆ ಸದಸ್ಯರು. ಆದ್ರೆ ಅವರನ್ನೂ ಕರೆದಿಲ್ಲ. ನಾವು ಹೋಗುವುದಿಲ್ಲ ಎಂದು ಶೆಟ್ಟರ್ ಹೇಳಿದ್ದಾರೆ. ಇದು ಸರ್ಕಾರಿ ಕಾರ್ಯಕ್ರಮ ಆದರೂ ನಾವು ಹೋಗೋದಿಲ್ಲ. ಕಾಂಗ್ರೆಸ್ ನವರು ನಕಲಿ ಕಾಂಗ್ರೆಸ್ ನವರು, ನಕಲಿ ಗಾಂಧಿ. ಸರ್ಕಾರದ ಹಣವನ್ನ ಕಾಂಗ್ರೆಸ್ ಹಣವಾಗಿ ಖರ್ಚು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಅವರ ಶಕ್ತಿ ಏನು ಅನ್ನೋದು ಗೊತ್ತು. ನಾವು ೧೬ ರಾಜ್ಯದಲ್ಲಿ ಅಧಿಕಾರದಲ್ಲಿದ್ದೇವೆ, ಅವರು ನಾಲ್ಕೂ ಕೂಡ ಇಲ್ಲ. ಇಂಡಿ ಅಂತ ಮಾಡಿಕೊಂಡಿದ್ದಾರೆ, ಅದು ಚೂರು ಚೂರು ಆಗಿದೆ. ಕಾಂಗ್ರೆಸ್ ಅಧಿವೇಶನ ಸಂಬಂಧ‌ ನಾವು ನಾಳೆ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ,