ರಾಜ್ಯದ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಭರ್ಜರಿ ಗೆಲುವು ಸಾಧಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಸಚಿವರು ಹಾಗೂ ಶಾಸಕರ ನಿಯೋಗ ಭೇಟಿ ಮಾಡಿ ಧನ್ಯವಾದ ಹೇಳಿದ್ರು. ಕೈ ನಾಯಕರು ಸಿಹಿ ತಿನ್ನಿಸಿ ಶುಭಾಶಯ ಹೇಳಿದರು.
ಇನ್ನು ಕೇರಳದ ವಯನಾಡು ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಗೆಲುವು ಹಿನ್ನೆಲೆ ಪ್ರಿಯಾಂಕಾ ಗಾಂಧಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ ಹೇಳಿದ್ದಾರೆ. ದೂರವಾಣಿ ಮೂಲಕ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ.ಭಾರಿ ಬಹುಮತದ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿ ದ್ದಾರೆ. ಕರ್ನಾಟಕದಲ್ಲೂ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದಕ್ಕೆ ಸಿಎಂ ಗೆ ಪ್ರಿಯಾಂಕಾ ಗಾಂಧಿ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು ಸಚಿವ ಕಾಂಗ್ರೆಸ್ ಗೆಲುವಿನ ಬಗ್ಗೆ ಮಾತನಾಡಿದ ಎಂ.ಬಿ ಪಾಟೀಲ್ ರಾಜ್ಯದಲ್ಲಿ ಮೂರಕ್ಕೆ ಮೂರು ಕ್ಷೇತ್ರ ಗೆದ್ದಿದ್ದೇವೆ. ಬಿಜೆಪಿಯ ವಿರುದ್ಧ ಜನ ತಿರುಗಿದ್ದಾರೆ. ಝಾರ್ಖಾಂಡ್ ನಲ್ಲಿ 47 ಸೀಟು ಮುಂದೆ ಇದ್ದೀವಿ.ಅಲ್ಲಿಯೂ ನಾವು ಸರ್ಕಾರ ರಚನೆ ಮಾಡ್ತೀವಿ. ಇವಿಎಂ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಆ ಬಗ್ಗೆ ನಾನು ಮಾತಾಡುವುದಿಲ್ಲ. ಹೈಕಮಾಂಡ್ ಮಾತನಾಡುತ್ತಾರೆ. ಕಾಂಗ್ರೆಸ್ ಮತ, ಯೋಗೇಶ್ವರ್ ಮತ ಶಕ್ತಿಯಾಗಿ ಹೊರ ಬಂದಿದೆ.ಕುಟುಂಬ ರಾಜಕಾರಣ ನಮಗೆ ಪ್ಲಸ್ ಪಾಯಿಂಟ್ ಆಗಿದೆ.ಸರ್ಕಾರ ಕೊತ್ತೊಗಿಯಬೇಕೆಂಬ HDD ಹೇಳಿಕೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಇದು ಜನರ ಕೈಯಲ್ಲಿದೆ, ಯಾರ ಬಳಿಯೂ ಇಲ್ಲ ಎಂದಿದ್ದಾರೆ.











