ಬೆಂಗಳೂರು; ಪ್ರಾಸಿಕ್ಯೂಷನ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರಿಂದ ರಾಜ್ಯಪಾಲರ ಟೀಕೆ ಹಿನ್ನೆಲೆ ಸಚಿವ ಜಮೀರ್ ಅಹಮದ್, ಐವಾನ್ ಡಿಸೋಜ ಮತ್ತು ಬೆಳ್ತಂಗಡಿ ರಕ್ಷಿತ್ ಶಿವರಾಂ ವಿರುದ್ಧ ಬಿಜೆಪಿ ದೂರು ನೀಡಿದೆ.
ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಶಾಸಕ ಸಿಮೆಂಟ್ ಮಂಜು ಅವರು ದೂರು ದಾಖಲಿಸಿದ್ದಾರೆ. ಸಚಿವ ಜಮೀರ್ ಅಹಮದ್, ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಮತ್ತು ಬೆಳ್ತಂಗಡಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ದೂರು ನೀಡಲಾಗಿದೆ.
ಸಚಿವ ಜಮೀರ್ ಅಹಮದ್ ರಾಜ್ಯಪಾಲರ ವಿರುದ್ದ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಐವಾನ್ ಡಿಸೋಜ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ.ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ನೀಡಿದ್ದರು. ಇನ್ನು ದೂರು ನೀಡಿದ ಬಳಿಕ ಮಾತನಾಡಿದ ದೂರಿನ ಬಳಿಕ ಶಾಸಕ ಸಿಮೆಂಟ್ ಮಂಜು ಕಾನೂನು ಸುವ್ಯವಸ್ಥೆ ಹಾಳಾದರೆ ಅದಕ್ಕೆ ರಾಜ್ಯಪಾಲರೇ ಹೊಣೆ ಅಂದಿದ್ದಾರೆ.ಇದನ್ನ ಖಂಡಿಸಿ ದೂರು ನೀಡಿದ್ದೇವೆ.ತನಿಖೆಗೆ ಅವಕಾಶ ಕೊಟ್ಡಿದ್ದಕ್ಕೆ ರಾಜ್ಯಪಾಲರ ಭಾವಚಿತ್ರಗಳಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ.ಜಮೀರ್ ಅಹ್ಮದ್ ಖಾನ್ ರಾಜ್ಯಪಾಲರಿಗೆ ಧಮ್ಕಿ ಹಾಕಿದ್ದಾರೆ.ಜೊತೆಗೆ ರಕ್ಷಿತ್ ಶಿವರಾಮ್, ಐವಾನ್ ಡಿಸೋಜ ವಿರುದ್ಧವೂ ದೂರು ನೀಡಿದ್ದೇವೆ.ಐವಾನ್ ಡಿಸೋಜಾ ಬಾಂಗ್ಲಾ ಮಾದರಿಯಲ್ಲಿ ರಾಜಭವನಕ್ಕೆ ನುಗ್ತೇವೆ ಅಂದಿದ್ದಾರೆ.ಇದರ ವಿರುದ್ಧವೂ ನಾವು ದೂರು ದಾಖಲಿಸಿದ್ದೇವೆ ಎಂದರು.
ಇದೇ ಮಾತನಾಡಿದ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಸಲ್ಮಾನ್ ಖುರ್ಷಿದ್ ಬಳಿಕ ರಾಜ್ಯದಲ್ಲೂ ರಾಜ್ಯಪಾಲರ ವಿರುದ್ಧ ಮಾತಾಡೋಕೆ ಶುರು ಮಾಡಿದ್ದಾರೆ.ಕರ್ನಾಟಕವನ್ನ ಎಟಿಎಂ ಸರ್ಕಾರವನ್ನಾಗಿ ಮಾಡಿಕೊಂಡಿದ್ದಾರೆ.ಐವಾನ್ ಡಿಸೋಜಾ, ರಕ್ಷಿತ್ ಶಿವರಾಮ್ ಕೂಡ ಅಡ್ವೋಕೇಟ್.ಹೀಗೆಲ್ಲಾ ಮಾತಾಡಬಾರದು ಅಂತಾ ಗೊತ್ತಿದ್ರೂ ಮಾತಾಡಿತದ್ದಾರೆ.ಜನರಿಗೆ ಪ್ರಚೋದನೆ ,ದಂಗೆ ಏಳುವಂತಹ ಹೇಳಿಕೆ ಕೊಟ್ಡಿದಾರೆ.ಕಾನೂನು ಸುವ್ಯವಸ್ಥೆ ನೋಡಿಕೊಳ್ಳಬೇಕಾದ ಜವಬ್ದಾರಿ ಇದೆ.ಪೊಲೀಸ್ ಇಲಾಖೆ ಸುಮೊಟೋ ಕೇಸ್ ದಾಖಲಿಸಿಕೊಳ್ಖಬೇಕಿತ್ತು.. ಆದ್ರೆ ಮಾಡಲಿಲ್ಲ.ಆಡಳಿತ ಪಕ್ಷದವರ ಶಬ್ದ ಸಂವಿಧಾನದ ಹುದ್ದೆಗೆ ಮಾಡಿದ ಅಗೌರವ..ಲೀಸರು ಕಠಿಣ ಕ್ರಮ ಕೈಗೊಳ್ಳಬೇಕು.ರಾಜ್ಯದಲ್ಲಿ ಭಯದ ವಾತಾವರಣ ಉಂಟು ಮಾಡಿದ್ದಾರೆ ಎಂದಿದ್ದಾರೆ.
ಇನ್ನು ಪ್ರಾಸಿಕ್ಯೂಷನ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರಿಂದ ರಾಜ್ಯಪಾಲರ ಟೀಕೆ ಹಿನ್ನೆಲೆ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.ಸಿದ್ದರಾಮಯ್ಯನವರ ಸಚಿವರು ದಲಿತ ಕುಟುಂಬದ ಸನ್ಮಾನ್ಯ ರಾಜ್ಯಪಾಲರನ್ನು ‘ನಾಲಾಯಕ್’ ಎಂದು ಕರೆದಿದ್ದಾರೆ.ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ದಲಿತರೇ.ಹಾಗಾದರೆ ಅವರೂ ‘ನಾಲಾಯಕ’ರೇ? ಎಂದು ಪ್ರಶ್ನಿಸಿದ್ದಾರೆ.ರಾಹುಲ್ ಗಾಂಧಿಯವರ ಅರಾಜಕತೆಯ ಸೂತ್ರವನ್ನೇ ಕಾಂಗ್ರೆಸ್ ಎಲ್ಲ ಕಡೆ ಪಾಲಿಸುತ್ತಿದೆ ಎಂದಿದ್ದಾರೆ.
ಇದರ ಮಧ್ಯೆ ಪ್ರಾಸಿಕ್ಯೂಷನ್ ವಿಚಾರದಲ್ಲಿ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರ ಟೀಕೆ ಹಿನ್ನೆಲೆ ಬಿಜೆಪಿಯಿಂದ ಮತ್ತೊಂದು ದೂರು ದಾಖಲಾಗಿದೆ. ಸಚಿವರಾದ ಜಮೀರ್ ಅಹಮದ್, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಮತ್ತು ಶಾಸಕ ಕೆ.ವೈ. ನಂಜೇಗೌಡ ವಿರುದ್ಧ ಬಿಜೆಪಿ ದೂರು ನೀಡಿದೆ.ಡಿಜಿಪಿಗೆ ಬಿಜೆಪಿ ನಿಯೋಗ ದೂರು ನೀಡಿದೆ.ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಶಾಸಕ ಸಿಮೆಂಟ್ ಮಂಜು ಮತ್ತು ಮಾಜಿ ಸಂಸದ ಎಸ್. ಮುನಿಸ್ವಾಮಿ ಅವರಿಂದ ದೂರು ಸಲ್ಲಿಕೆಯಾಗಿದೆ. ಜಾತಿ ನಿಂದನೆ ಮತ್ತು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ದೂರು ಕೊಟ್ಟಿದ್ದಾರೆ.