ಬೆಂಗಳೂರು: ಸಿಎಂ ಸುತ್ತಾ ಇಂತ ಅಯೋಗ್ಯರನ್ನು ಇಟ್ಟುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ರಾಜ್ಯದಲ್ಲಿ ಏನ್ ಆಗ್ತಿದೆ ನಿತ್ಯ ಪರಿಸ್ಥಿತಿ ಹದಗೆಡ್ತಿದೆ, ಕಾನೂನು ಸುವ್ಯವಸ್ಥೆ ಮುರಿದು ಬೀಳ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ಯಾಕಿಷ್ಟು ದುಬುರ್ದ್ಧಿ. ಸಿಎಂ ಸುತ್ತಾ ಇಂತ ಅಯೋಗ್ಯರನ್ನು ಇಟ್ಟುಕೊಂಡಿದ್ದಾರೆ. ಹಿಂದುಗಳ ಮೇಲೆ ಕಲ್ಲು ಎಸೆತ, ಹಿಂದುಗಳ ಮೇಲೆ ಲಾಠಿ ಚಾರ್ಜ್. ಎರಡು ವರ್ಷ ಗಳಿಂದ ಓಲೈಕೆ ರಾಜಕಾರಣ ಹೆಚ್ಚಾಗಿದೆ. ದೇಶ ದ್ರೋಹಿಗಳ ಕೇಸ್ ಗಳನ್ನು ಕ್ಯಾಬಿನೆಟ್ ನಲ್ಲಿ ವಾಪಸ್ಸು ಪಡೆದ್ರು. ಇವೆಲ್ಲವೂ ಕೂಡ ಸಮಾಜಘಾತುಕ ಶಕ್ತಿ ಗಳಿಗೆ ಆನೆ ಬಲ ಬಂದಂತಾಗಿದೆ. ನಾವು ಏನು ಮಾಡಿದ್ರೂ ಸರಿ ಎಂಬ ಧೈರ್ಯದಲ್ಲಿ ನಿನ್ನೆ ಕಲ್ಲು ಎಸೆದಿದ್ದಾರೆ. ಹೆಣ್ಣು ಮಕ್ಕಳ ಮೇಲೆ ಲಾಠಿ ಜಾರ್ಜ್. ಚಲುವರಾಯಸ್ವಾಮಿ ಕರೆದ ಶಾಂತಿ ಸಭೆಯಲ್ಲಿ ಯಾರು ಬಂದಿಲ್ಲ. ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ಮಾತು ಗಮನಿಸಿದ್ರೆ ನಿಜಾಮರ ಆಡಳಿತದಲ್ಲಿ ಇದ್ದೀವಾ ಅನ್ನೋ ಭಾವನೆ ಮೂಡಿದೆ ಎಂದರು.
ನಮ್ಮ ರಾಜ್ಯದಲ್ಲಿ ಯಾಕೇ ಇಷ್ಟು ಗಲಾಟೆ ಆಗ್ತಿದೆ..?. ರಾಜ್ಯ ಸರ್ಕಾರದ ಅಲ್ಪಸಂಖ್ಯಾತ ಓಲೈಕೆ ರಾಜಕಾರಣ, ಕೇಸ್ ಗಳನ್ನು ಹಿಂಪಡೆದಿದ್ದು . ಇದೆಲ್ಲದರ ಪರಿಣಾಮವೇ ಇಂತಹ ಘಟನೆ ಗಳು ನಡೀತ್ತಿರೋದು. ಮಂಡ್ಯ ಎಸ್ಪಿ ಮನೆಯಿಂದ ಹೊರಗೆ ಬರಲ್ಲ, ಪೊಲೀಸರು ಅಸಹಾಯಕರಾಗಿದ್ದಾರೆ. ಭದ್ರಾವತಿ ಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಇವರಿಗ ಎಷ್ಟು ಧೈರ್ಯ, ಮೊದಲು ಇವರನ್ನು ಒದ್ದು ಒಳಗೆ ಹಾಕಬೇಕಿತ್ತು. ಮಸೀದಿ ಮುಂದೆ ಮೆರವಣಿಗೆ ಯಾಕೇ ಹೋಗಬಾರದು. ಮೊನ್ನೆ ದಿನ ಎಸ್ಪಿ ಕರೆಕ್ಟಾಗಿ ಇದ್ದಿದ್ರೆ ಯಾಕೇ ಆ ಗಲಾಟೆ ಆಗುತ್ತಿತ್ತು..?. ಮಂಡ್ಯ ದಲ್ಲಿ ಒಬ್ಬ ನಾಲಾಯಾಕ್ ಎಸ್ಪಿ. ಸಿದ್ದರಾಮಯ್ಯಗೆ ಹಿಂದುಗಳನ್ನು ಕಂಡರೆ ಆಗೋದಿಲ್ಲ.ನಿಮ್ಮ ಧೋರಣೆ ಸರಿಪಡಿಸಿಕೊಂಡಿಲ್ಲ ಅಂದರೆ, ಮುಂದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಹೇಳಿದರು.
ನಾಳೆ ನಾನು, ವಿರೋಧ ಪಕ್ಷದ ನಾಯಕರಾದ ಅಶೋಕ್, ಛಲವಾದಿ ನಾರಾಯಣಸ್ವಾಮಿ, ಅಶ್ವಥ್ ನಾರಾಯಣ್ ಸೇರಿ ಇತರೆ ಮುಖಂಡರು ಎಲ್ಲರೂ ಮದ್ದೂರಿಗೆ ಭೇಟಿ ಕೊಡ್ತಿದ್ದೇವೆ.ನಾಳೆ ಬೆಳಿಗ್ಗೆ 10.30ಕ್ಕೆ ಭೇಟಿ ಕೊಟ್ಟು, ಅಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಯಲ್ಲೂ ನಾವು ಭಾಗವಹಿಸುತ್ತೇವೆ ಎಂದರು. ನಮ್ಮ ರಾಜ್ಯದಲ್ಲಿ ಏನಾಗ್ತಿದೆ.?.ದಿನನಿತ್ಯ ಕಾನೂನು ಸುವ್ಯವಸ್ಥೆ ಮುರಿದುಬಿದ್ದಿದೆ. ಕಾಂಗ್ರೆಸ್ ಗೆ ಯಾಕೆ ಇಂತ ದುರ್ಬುದ್ದಿ ಬಂದಿದೆ. ಯಾಕೆ ಹಿಂದೂಗಳನ್ನ ಕಂಡ್ರೆ ಆಗಲ್ಲ. ಸಿಎಂ ಸುತ್ತ ಇಂತ ಅಯೋಗ್ಯರನ್ನೇ ಇಟ್ಟುಕೊಂಡಿದ್ದಾರೆ. ಹಿಂದೂಗಳ ಮೇಲೆ ಕಲ್ಲು ಹೊಡೀತಾರೆ. ಗಣಪತಿ ವಿಸರ್ಜನೆ ಮೆರವಣಿಗೆ ಮಾಡಲಾಗ್ತಿಲ್ಲ. ಕಾಂಗ್ರೆಸ್ ಓಲೈಕೆ ರಾಜಕಾರಣ ನಡೆಯುತ್ತಿದೆ.ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡಿದ್ರು, ಪೊಲೀಸ್ ಠಾಣೆಗೆ ಕಲ್ಲು ಹೊಡೆದು, ಬೆಂಕಿ ಹಚ್ಚಿದ್ರು. ಅವರ ಕೇಸ್‌ಗಳನ್ನೂ ವಾಪಸ್ ಪಡೆದ್ರು. ಸಮಾಜಘಾತುಕ ಶಕ್ತಿಗಳಿಗೆ ಶಕ್ತಿ ಬಂದಂತಾಗಿದೆ.ಇದರ ಪರಿಣಾಮವೇ ಮದ್ದೂರಿನಲ್ಲಿ ಹಿಂದೂ ಕಾರ್ಯಕರ್ತರು ಶಾಂತಿಯುತವಾಗಿ ಗಣಪತಿ ವಿಸರ್ಜನೆ ಮಾಡಲು ಮಸೀದಿ ಮುಂದೆ ಸಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕರ್ತರ ಮೇಲೆ ಕಲ್ಲು ಎಸೆದಿದ್ದಾರೆ, ಲಾಠಿ ಚಾರ್ಜ್ ಮಾಡಿದ್ದಾರೆ.ಚಲುವರಾಯಸ್ವಾಮಿ ಅವರು ಶಾಂತಿ ಸಭೆ ಕರೆದಿದ್ದಾರೆ. ಅದರಲ್ಲಿ ಯಾವ ಹಿಂದೂಪರ ಸಂಘಟನೆಗಳು ಭಾಗಿಯಾಗಿಲ್ಲ. ಸಚಿವರು, ಕಾಂಗ್ರೆಸ್ ನಾಯಕರ ಹೇಳಿಕೆ ಗಮನಿಸಿದ್ರೆ, ನಿಜಾಮರ ಕಾಲದಲ್ಲಿದ್ದೇವಾ ಅಂತ ನೆನಪಾಗ್ತಿದೆ. ಇಡೀ ದೇಶದಲ್ಲಿ ಗಣಪತಿ ಹಬ್ಬ ವಿಜೃಂಭಣೆಯಿಂದ ನಡೆಯುತ್ತೆ.ಎಲ್ಲಾ ಕಡೆ ಶಾಂತಿಯುತವಾಗಿ ನಡೆಯುತ್ತೆ, ನಮ್ಮಲ್ಲಿ ಯಾಕೆ ಗಲಭೆ ಆಗುತ್ತೆ.? .ಒಂದು ರಾಜ್ಯ ಸರ್ಕಾರದ ಓಲೈಕೆ ರಾಜಕಾರಣ.ದುಷ್ಕೃತ್ಯ ಮಾಡಿದವರ ಮೇಲೆ ಕೇಸ್ ವಾಪಸ್ ಪಡೆದಿದ್ದೇ ಕಾರಣ. ಎಸ್.ಪಿ ಅವರೇ ಇದ್ರು. ನಾಗಮಂಗಲದಲ್ಲಿ ಗಲಭೆ ಆದಾಗ, ಮದ್ದೂರಲ್ಲಿ ಗಹಟನೆ ನಡೆದಾಗಲೂ ಅವರೇ ಇದ್ದಾರೆ. ಎಸ್.ಪಿ ಮನೆಯಿಂದ ಹೊರಗೆ ಬರೋದಿಲ್ಲ ಅನಿಸ್ತಿದೆ.ಭದ್ರಾವತಿಯಲ್ಲಿ ಪಾಕಿಸ್ತಾನ ಪರ ಜಿಂದಾಬಾದ್ ಅಂತ ಕೂಗ್ತಾರೆ ಎಂದು ಆಕ್ರೋಶ ಹೊರ ಹಾಕಿದರು.
ಮಹದೇವಪ್ಪ ಹೇಳ್ತಾರೆ. ಮಾಡೋದು ಮಣ್ಣು ತಿನ್ನೋ ಕೆಲಸ, ಬಿಜೆಪಿ ಮೇಲೆ ಹಾಕ್ತೀರಾ.?. ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳನ್ನ ಕಂಡ್ರೆ ಆಗಲ್ಲ. ನಾನು ರಾಜ್ಯ ಗೃಹಸಚಿವರಿಗೆ ಒತ್ತಾಯ ಮಾಡ್ತೇನೆ ಎಂದರು. ನಾನು ಮುಸ್ಲಿಂ ಆಗಿ ಹುಟ್ಟಬೇಕು ಅಂತ ಭದ್ರಾವತಿ ಶಾಸಕ ಸಂಗಮೇಶ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಇದೇ ಮಾತನ್ನ ಹಿಂದೆ ಸಿದ್ದರಾಮಯ್ಯ ಅವರೂ ಹೇಳಿದ್ರು. ಸತ್ಯಶೋಧನಾ ಸಮಿತಿ ರಚನೆ ಮಾಡಿದ್ದೇವೆ. ಅವರು ವರದಿ ಕೊಡ್ತಾರೆ. ಮಧು ಬಂಗಾರಪ್ಪಗೆ ಅವರ ಇಲಾಖೆ ಸರಿಯಾಗಿ ನೋಡಿಕೊಳ್ಳಲಿ. ಅವರನ್ನ ಯಾರು ಕೇಳಿದ್ರು.? ಸರ್ಕಾರ ನಡೆಸ್ತಿದ್ದಾರೆ, ಸರಿಯಾಗಿ ಆಡಳಿತ ಮಾಡಬೇಕು.ಹಾಗಾದ್ರೆ ಘೋಷಣೆ ಮಾಡಲಿ ಸಿಎಂ, ನಾವು ಹಿಂದೂಪರ ಇಲ್ಲ ಅಂತ ಎಂದು ತಿಳಿಸಿದರು.
ವಿನಾಶಕಾಲೆ ವಿಪರೀತ ಬುದ್ದಿ. ಸಿಎಂ ಸುತ್ತ ಪಟ್ಟಭದ್ರ ಹಿತಾಸಕ್ತಿಗಳು ಇದೆ. ಅವರ ಹಿಂದೆ ಇರೋದು ನೋಡಿದ್ರೆ, ಅವರ ಕೇಡುಗಾಲ ಶುರುವಾಗಿದೆ. ನಾಳೆ ನಮ್ಮ ಎಲ್ಲಾ ಪಕ್ಷದ ಮುಖಂಡರು ಬೆಳಗ್ಗೆ 10 ಗಂಟೆಗೆ ಮದ್ದೂರಿಗೆ ಭೇಟಿ ಮಾಡ್ತಿದ್ದೇವೆ ಎಂದು ಹೇಳಿದರು.











