ಬೆಂಗಳೂರು; ಶಿಗ್ಗಾಂವಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಜ್ಜಂಪೀರ್ ಖಾದ್ರಿ ಅವರ ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ ಅವರು ಯಶಸ್ವಿಯಾಗಿದ್ದಾರೆ. ಜಮೀರ್ ಅಹ್ಮದ್ ಅಜ್ಜಂಪೀರ್ ಖಾದ್ರಿಯನ್ನ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಕರೆತಂದರು, ಈ ವೇಳೆ ಅಜ್ಜಂಪೀರ್ ಖಾದ್ರಿ ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ಸುಮಾರು ಅರ್ಧ ಗಂಟೆ ಖಾದ್ರಿ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚಿಸಿದ್ದಾರೆ.ನಾಮಪತ್ರ ವಾಪಸ್ ಪಡೆಯುವಂತೆ ಸಿಎಂ ಸೂಚನೆ ನೀಡಿದ್ದಾರೆ.ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು, ಬಿಜೆಪಿ ಅಭ್ಯರ್ಥಿ ಯನ್ನ ಸೋಲಿಸಬೇಕು. ನೀನು ಪಕ್ಷದ ಪರ ಕೆಲಸ ಮಾಡು ಎಂದು ಖಾದ್ರಿ ಮನವೊಲಿಸಿದ್ದಾರೆ ಸಿಎಂ ಸಿದ್ದರಾಮಯ್ಯ.ಬೆಳಗ್ಗೆಯಷ್ಟೇ ಶಿಗ್ಗಾಂವಿಯಿಂದ ಖಾದ್ರಿ ಅವರನ್ನು ಜಮೀರ್ ಅಹ್ಮದ್ ಕರೆ ತಂದಿದ್ದರು, ಕೊನೆಗೆ ನಗು ಮುಖದಲ್ಲೇ ಸಿಎಂ ಜೊತೆ ಫೋಟೋಗೆ ಅದ್ದಂಪೀರ್ ಖಾದ್ರಿ ಪೋಸ್ ಕೊಟ್ಟಿದ್ದಾರೆ.ಬಳಿಕ ಸಿಎಂ ನಿವಾಸದಿಂದ ಜಮೀರ್ ಮತ್ತು ಖಾದ್ರಿ ತೆರಳಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್ ಇವತ್ತು ಮೂರು ಕಡೆ ನಾಮಪತ್ರ ಸಲ್ಲಿಕೆ ಕೆಲಸ ಮುಗಿದೆ.ಆದ್ರೆ ಶಿಗ್ಗಾಂವಿ ಯಲ್ಲಿ ಸ್ವಲ್ಪ ತಡ ಆಯ್ತು.ಕೆಲ ಕಾರ್ಯಕರ್ತರ ಒತ್ತಡದ ಮೇರೆಗೆ ಖಾದ್ರಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು.ಹಿಂದೆ ನಾನೇ ಅವರನ್ನ ಪಕ್ಷಕ್ಕೆ ಕರೆತಂದಿದ್ದು. ಕಳೆದ ಎಲೆಕ್ಷನ್ ನಲ್ಲೇ ಅವರಿಗೆ ಟಿಕೆಟ್ ನೀಡಬೇಕಿತ್ತು.ಆದ್ರೆ ಪಕ್ಷ ಇನ್ನೊಂದು ಜಾನ್ಸ್ ಕೊಡಬೇಕೆಂದು ಪಠಾಣ್ ಗೆ ಟಿಕೆಟ್ ನೀಡಿದೆ.ಖಾದ್ರಿಯವರಿಗೆ ಹೊಸ ಜವಾಬ್ದಾರಿ ನೀಡುವ ಕುರಿತು ಮಾತಾಡಿದ್ದೇವೆ ಎಂದರು. ಇವತ್ತು ಸಿಎಂ ಕೂಡ ಖಾದ್ರಿ ಜೊತೆ ಮಾತಾಡಿದ್ದಾರೆ. ನಾನು ಮಾತಾಡಿದ್ದೇವೆ.ಖಾದ್ರಿ ಅವರಿಗೆ ಗೌರವ ಕೊಡಬೇಕು.3೦ ರಂದು ನಾಮಪತ್ರ ಹಿಂಪಡೀತಾರೆ. ಪಕ್ಷ ಗೆಲ್ಲಿಸಿಕೊಂಡು ಬರ್ತಾರೆ, ಕೆಲಸ ಮಾಡುತ್ತಾರೆ ಎಂದರು.
ಅಜ್ಜಂಪೀರ್ ಖಾದ್ರಿ ಮಾತನಾಡಿ ನಾನು ಕಾಂಗ್ರೆಸ್ ನ ಶಿಸ್ತಿನ ಕಾರ್ಯಕರ್ತ. ಐದು ಬಾರಿ ಚುನಾವಣೆಗೆ ನಿಂತಿದ್ದೇವೆ.ನಾಲ್ಕು ಬಾರಿ ಸೋತು ಒಂದು ಬಾರಿ ಗೆದ್ದಿದ್ದೇನೆ.೨೦೦೦ ರಲ್ಲಿ ನಾನು ಡಿಕೆ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಸೇರಿದೆ.ನಮಗೆ ಪಕ್ಷ ಮುಖ್ಯ ವ್ಯಕ್ತಿ ಮುಖ್ಯ ಅಲ್ಲ.ಜಮೀರ್ ಅವರು ಸಿಎಂ ಬಳಿ ಕರೆದೊಯ್ದು ಮಾತಾಡಿಸಿದರು.ನಮ್ಮ ಮೇಲೆ ಜವಾಬ್ದಾರಿ ಇದೆ, ನೀನು ಹಿಂದೆ ಸರೀಬೇಕು ಎಂದು ಹೇಳಿದರು. ಆದ್ರೆ ನಾನು ಆಗಲ್ಲ ಅಂತ ಹೇಳಿದೆ.ಆದ್ರೆ ಒತ್ತಾಯ ಮಾಡಿದರು.ಹೀಗಾಗಿ ವರಿಷ್ಠ ರ ಬಗ್ಗೆ ಅಭಿಮಾನ ಇದೆ ಎಂದರು.ಡಿ ಕೆ ಅವರು ನನ್ನ ಸೇರಿಸಿಕೊಳ್ಳುವಾಗ ಕೆಲ ಭರವಸೆ ನೀಡಿದರು. ಅದ್ರಂತೆ ನಾನು ಕೆಲಸ ಮಾಡಿದ್ದೇನೆ.ಆದರೆ ಇವತ್ತು ಪಕ್ಷ ಹೇಳಿದಂತೆ ಕೆಲಸ ಮಾಡುತ್ತೇನೆ.ಬಿಜೆಪಿ ಸೋಲಬೇಕು ಕಾಂಗ್ರೆಸ್ ಸೋಲಬೇಕು.ಡಿಸಿಎಂ ಡಿಕೆ, ಜಮೀರ್ ಹೇಳಿದಂತೆ ಕೇಳುತ್ತೇವೆ.ಕಾರ್ಯಕರ್ತರ ಅಭಿಪ್ರಾಯ ಕೇಳಬೇಕು ಎಂದು ಮನವಿ ಮಾಡಿದ್ದೀನಿ.ಅದ್ರಂತೆ ನಮ್ಮ ಕಾರ್ಯಕರ್ತರ ಜೊತೆ ಇಲ್ಲಿಗೆ ಬಂದು ಡಿಸಿಎಂ ಜೊತೆ ಮಾತನಾಡಿಸುತ್ತೇವೆ.ನಾನು ಸಿಎಂ ಬಳಿಯೂ ಒಪ್ಪಿದ್ದೆ.. ಇಲ್ಲಿಯೂ ಒಪ್ಪಿದ್ದೇನೆ ಎಂದರು,