ಮನೆ Latest News ಹೈಕಮಾಂಡ್ ತೀರ್ಮಾನ ಎಲ್ಲರಿಗೂ ಅನ್ವಯ : ಪವರ್ ಶೇರಿಂಗ್ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಹೈಕಮಾಂಡ್ ತೀರ್ಮಾನ ಎಲ್ಲರಿಗೂ ಅನ್ವಯ : ಪವರ್ ಶೇರಿಂಗ್ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

0

ಬೆಂಗಳೂರು; ಪವರ್ ಶೇರಿಂಗ್ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗರಂ ಆಗಿಯೇ ಉತ್ತರಿಸಿದ ಅವರು ಎಷ್ಟು ಸಲ ಹೇಳಬೇಕು. ಅದು ಹೈಕಮಾಂಡ್ ತೀರ್ಮಾನ ಮಾಡುವ ವಿಚಾರ. ಅವರು ಹೇಳಿದ ಹಾಗೆ ಪಾಲಿಸುತ್ತೇವೆ. ಹೈಕಮಾಂಡ್ ತೀರ್ಮಾನ ಎಲ್ಲರಿಗೂ ಅನ್ವಯ ಎಂದಿದ್ದಾರೆ.

ಇ ಖಾತಾ ಅಭಿಯಾನಕ್ಕೆ ಚಾಲನೆ ವಿಚಾರದ ಬಗ್ಗೆ ಮಾತಾನಾಡಿದ ಅವರು ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಲಾಗಿತ್ತು. ಆ ಸಮಿತಿ ವರದಿ ಕೊಟ್ಟ ಬಳಿಕ ಒಂದು ಕಾನೂನು ತರಲಾಗಿದೆ. ಅದರ ಪ್ರಕಾರ ರೆವಿನ್ಯೂ ಬಡಾವಣೆ, ಸೈಟ್, ಮನೆಗಳು ಅನೇಕ ಸೌಲಭ್ಯಗಳನ್ನು ಕೊಟ್ಟಿದ್ದೇವೆ. ಅವರು ಯಾರೂ ಸರ್ಕಾರಕ್ಕೆ  ಕಂದಾಯ ಕಟ್ಟುತ್ತಿಲ್ಲ. ಅದಕ್ಕಾಗಿ ಬಿ ಖಾತಾ ಅಭಿಯಾನ ಮಾಡಲು ಸೂಚನೆ ಕೊಟ್ಟಿದ್ದೇನೆ ಎಂದರು.

ಕಂಪ್ಯೂಟರ್ ಆಪರೇಟರ್ ಹಾಗೂ ವಿಲೇಜ್ ಅಕೌಂಟೆಂಟ್ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ನನಗೆ ಅದರ ಬಗ್ಗೆ  ಗೊತ್ತಿಲ್ಲ. ಕಂದಾಯ ಸಚಿವರು ಅದನ್ನು ನೋಡ್ತಾರೆ ಎಂದ್ರು. ಸಚಿವ ಕೆ.ಎನ್ ರಾಜಣ್ಣ ಹಾಗೂ ಡಿಕೆಶಿ ಪರಸ್ಪರ ಹೇಳಿಕೆಗಳ ವಿಚಾರದ ಬಗ್ಗೆ ಮಾತನಾಡಿ  ಈಗ ಕಾಂಟ್ರೋವರ್ಸಿ ವಿಚಾರ ನಾನು ಮಾತಾಡಲ್ಲ. ಡಿಕೆಶಿ, ರಾಜಣ್ಣ ಅವರವರ ಅಭಿಪ್ರಾಯಗಳನ್ನು ಹೇಳಿದ್ದಾರೆ ಎಂದು ತಿಳಿಸಿದ್ರು.ಇದೇ ವೇಳೆ ದಲಿತ ಸಂಘಟನೆಗಳ ಜೊತೆ ಬಜೆಟ್ ಪೂರ್ವಭಾವಿ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು ಅವರ ಸಲಹೆಗಳನ್ನು ಕೇಳಿದ್ದೇವೆ.ಕೆಲವರು ಮೌಖಿಕವಾಗಿ, ಕೆಲವರು ಬರವಣಿಗೆ ಮೂಲಕ ಅಭಿಪ್ರಾಯಗಳನ್ನು ಕೊಟ್ಟಿದ್ದಾರೆ ಎಂದು ತಿಳಿಸಿದ್ರು.

ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಹಣ ವಿಳಂಬದ ಬಗ್ಗೆ ಅವರಿಗೆ ಹೇಳಿದ್ದೇನೆ, ಕೊಡ್ತಾರೆ. ಈಗ ಕಾಲು ನೋವು ಹೆಚ್ಚಾಗಿದೆ. ಎಲ್ಲೂ‌ ಹೋಗುವ ಹಾಗಿಲ್ಲ, ಹಾಗಾಗಿ ವಿಳಂಬವಾಗಿದೆ. ನೋವು ಕಡಿಮೆ ಆದ ಬಳಿಕ ಇದರ ಬಗ್ಗೆ ಗಮನ ಹರಿಸುತ್ತೇನೆ.ದೆಹಲಿಯವರೇ ಇಲ್ಲಿಗೆ ಬರ್ತಾರೆ. ಅಥವಾ ನಾನೇ ದೆಹಲಿಗೆ ಹೋಗ್ತೇನೆ ಎಂದು ಸಿಎಂ ಹೇಳಿದ್ದಾರೆ.