ಮನೆ Latest News ಬಿ ಕೆ ಹರಿಪ್ರಸಾದ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

ಬಿ ಕೆ ಹರಿಪ್ರಸಾದ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

0

ಬೆಂಗಳೂರು: ಬಿ ಕೆ ಹರಿಪ್ರಸಾದ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದರು. ಈ ಭೇಟಿ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಹರಿಪ್ರಸಾದ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಹರಿಪ್ರಸಾದ್ ಅವರು ಬ್ರೇಕ್ ಫಾಸ್ಟ್ ಗೆ ಕರೆದಿದ್ದರು. ಬರುತ್ತೇನೆ ಎಂದಿದ್ದೆ.ಅದರಂತೆ ಇಲ್ಲಿಗೆ ಬಂದಿದ್ದೆ. ರಾಜಕೀಯ ಚರ್ಚೆ ಸೇರಿ ಮಂಗಳೂರಿನ ವಿಚಾರ ಚರ್ಚೆ ಮಾಡಿದ್ದೇವೆ . ಅದರಲ್ಲಿ ಮಂಗಳೂರು ವಿಚಾರ ಚರ್ಚೆ ಯಾಗಿದೆ. ಅಲ್ಲಿಗೆ ಸೌಹಾರ್ದತೆ ಬರಬೇಕು.. ಹಿಂದುಗಳು ಮುಸ್ಲಿಂ ನಡುವೆ ಯಾವುದೇ ದ್ವೇಷ ಇರಬಾರದು. ಸೌಹಾರ್ದತೆ ಬರಬೇಕು ಎಂದು ಚರ್ಚೆ ಮಾಡಿದ್ದೇವೆ. ನಾನು ಹರಿಪ್ರಸಾದ್ ಗೆ ಮಂಗಳೂರಿಗೆ ಹೋಗಿ ಬನ್ನಿ ಎಂದಿದ್ದೇನೆ.ಅಲ್ಲಿನ ಪರಿಸ್ಥಿತಿ ಬಗ್ಗೆ ಅವಲೋಕಿಸಿ ಬನ್ನಿ ಎಂದಿದ್ದೇನೆ ಹೇಳಿದ್ದಾರೆ.

ನಾಳೆ ಮಳೆ ಸಂಬಂಧ ಡಿಸಿ ಗಳ ಜೊತೆ ಸಭೆ ವಿಚಾರದ ಬಗ್ಗೆ ಮಾತನಾಡಿದ ಡಿಸಿಗಳು, ಸಿಇಒಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸೆಕ್ರೆಟರಿ ಜೊತೆ ಮಳೆ ಸಭೆ ಮಾಡುತ್ತೇನೆ. ಎರಡು ದಿನ ಸಭೆ ಮಾಡುತ್ತೇನೆ, ನಾಳೆ ಮತ್ತು ನಾಡಿದ್ದು ಸಭೆ ಇದೆ.ಎಲ್ಲರೂ ಭಾಗಿಯಾಗ್ತಾರೆ ಎಂದರು. ಮಂಗಳೂರಲ್ಲಿ ಸಾಲು ಸಾಲು ಹತ್ಯೆ ವಿಚಾರದ ಬಗ್ಗೆ ಮಾತನಾಡಿದ ಯಾರೇ ಎಷ್ಟೇ ಪ್ರಭಾವಿ ಇದ್ದರೂ ಕೂಡ ಕಾನೂನು ರೀತಿ ಕ್ರಮ ತೆಗೆದುಕೊಳ್ಳುತ್ತೇವೆ. ಯಾರು ಕಾನೂನಿನಿಂತ ದೊಡ್ಡ ವರು ಅಲ್ಲ, ಕಾನೂನೇ ಎಲ್ಲರಿಗಿಂತ ದೊಡ್ಡದು. ಕಾನೂನಿನ ರೀತಿ ಕ್ರಮ ತೆಗೆದುಕೊಳ್ಳಿ ಎಂದರು.

ಇನ್ನು  ಕಾಂಗ್ರೆಸ್ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಮಾತನಾಡಿ ಮಂಗಳೂರು ಗಲಭೆ ವಿಚಾರವಾಗಿ ಮಾತ್ರ ಚರ್ಚೆ ‌ಮಾಡಿದ್ದೇವೆ.ಸಿಕ್ಕಾಪಟ್ಟೆ ಕೊಲೆಯಾಗುತ್ತಿವೇ ಮಾತನಾಡಬೇಕು ಅಂದ್ರು. ನಾನೇ ಬರ್ತೇನೆ ಅಂತ ಮನೆಗೆ ಬಂದ್ರು. ಮಂಗಳೂರಿನಲ್ಲಿ ಶಾಂತಿ ನೆಲೆಸಬೇಕು. ಈ ಬಗ್ಗೆ ಚರ್ಚೆ ಮಾಡಿದ್ದೇವೆ. ನನಗೂ ಮಂಗಳೂರು ಹೋಗಿ ಶಾಂತಿ ಸಭೆ ಮಾಡಲು ಹೇಳಿದ್ದಾರೆ. ಸಿಎಂ ಮತ್ತು ನನ್ನ ನಡುವೆ ಯಾವುದೇ ಅಸಮಾಧಾನವಿಲ್ಲ.ರಾಜಕೀಯ ಏನು ಚರ್ಚೆ ಮಾಡಿಲ್ಲ ಎಂದರು.