ಹಾಸನ ; ಸಿಎಂ ಸಿದ್ದರಾಮಯ್ಯ ಅವರು ಹಾಸನಾಂಬೆ ದೇವಿ ದರ್ಶನ ಪಡೆದರು. ದೇಗುಲಕ್ಕೆ ಆಗಮಿಸುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಕಲಾತಂಡಗಳೊಂದಗೆ ಜಿಲ್ಲಾಡಳಿತ ಭವ್ಯ ಸ್ವಾಗತ ಕೋರಿತು. ಚಾಮರ ಹಿಡಿದು ಮಂಗಳವಾದ್ಯಗಳೊಂದಿಗೆ ಹಾಸನಾಂಬೆ ದೇವಿ ದರ್ಶನಕ್ಕೆ ಜಿಲ್ಲಾಡಳಿತ ಕರೆದೊಯ್ಯಿತು. ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಂಸದ ಶ್ರೇಯಸ್‌ಪಟೇಲ್, ಶಾಸಕ ಕೆ.ಎಂ.ಶಿವಲಿಂಗೇಗೌಡ ಸಾಥ್ ನೀಡಿದ್ರು.
ಕಳೆದ ವರ್ಷ ನ.7 ರಂದು ಸಿಎಂ ಸಿದ್ದರಾಮಯ್ಯ ಹಾಸನಾಂಬೆ ದೇವಿ ದರ್ಶನ ಪಡೆದಿದ್ದರು. ಎರಡನೇ ಬಾರಿಗೆ ಹಾಸನಾಂಬೆ ದೇವಿ ದರ್ಶನವನ್ನು ಸಿಎಂ ಪಡೆದಿದ್ದಾರೆ.ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಡಿಸಿ ಸತ್ಯಭಾಮ, ಎಸ್ಪಿ ಮಹಮದ್ ಸುಜೀತಾ, ಆಡಳತಾಧಿಕಾರಿ ಮಾರುತಿ ಉಪಸ್ಥಿತರಿದ್ದರು.
ಇನ್ನು ಹಾಸನಾಂಬೆ ದೇವಿ ದರ್ಶನದ ಪಡೆದು ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕಳೆದ ವರ್ಷ ಹಾಸನಾಂಬೆ ಜಾತ್ರೆ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಕ್ತಿಯಿಂದ ಭಾಗವಹಿಸಿದ್ದೆ.ಹಾಸನಾಂಬೆ, ಸಿದ್ದೇಶ್ವರಸ್ವಾಮಿ, ಗಣಪತಿ ದರ್ಶನ ಪಡೆದ ದೇವರಲ್ಲಿ ಪ್ರಾರ್ಥನೆ ಮಾಡಿದ್ದೆ. 2024-20,25 ವರ್ಷದಲ್ಲಿ ಒಳ್ಳೆಯ ಮಳೆ, ಬೆಳೆ ಆಗಲಿ, ರೈತರು ಸುಬೀಕ್ಷವಾಗಿರಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ಈ ಬಾರಿ ಉತ್ತಮ ಮಳೆಯಾಗಿದೆ, ಬೆಳೆಯಾಗಿದೆ, ಎಲ್ಲಾ ಜಲಾಶಯಗಳು ತುಂಬಿವೆ. ಇವತ್ತು ಜಲಾನಯಗಳಲ್ಲಿ ಶೇ.90 ರಷ್ಟು ನೀರಿದೆ. ಎಲ್ಲಾ ರೈತರ ಮೊಗದಲ್ಲಿ ಮಂದಹಾಸ ಕಾಣುತ್ತಿದೆ, ರೈತರು ಖುಷಿಯಾಗಿದ್ದಾರೆ.ಎಲ್ಲರೂ ಅಧಿಕಾರ ಬೇಕು ಎನ್ನುವುದು ಸೇವೆ ಮಾಡಲಿಕ್ಕೆ. ನಮ್ಮ ಸಮಾಜದಲ್ಲಿ ಅಸಮಾನತೆ ಇದೆ, ಅದನ್ನು ಹೋಗಲಾಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಬಡವರಿಗೋಸ್ಕರ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆ.2023 ರಲ್ಲಿ ಮತ್ತೆ ಸಿಎಂ ಆಗುವ ಅವಕಾಶ ಸಿಕ್ಕಿದೆ. ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇನೆ.ಎಲ್ಲಾ ವರ್ಗದ, ಭಾಷೆಯ ಬಡವರಿಗೆ ಶಕ್ತಿ ಕೊಡುವ ಕೆಲಸ ಮಾಡಿದ್ದೇನೆ. ಆ ಕಾರ್ಯಕ್ರಮಗಳೇ ಐದು ಗ್ಯಾರೆಂಟಿ. ನಮ್ಮ ರಾಜಕೀಯ ವಿರೋಧಿಗಳು ಮಾಡಲು ಆಗಲ್ಲ. ಖಜಾನೆ ಖಾಲಿ ಆಗುತ್ತೆ ಎಂದು ಟೀಕೆ ಮಾಡಿದ್ರು. ಎಲ್ಲಾ ಟೀಕೆಗಳನ್ನು ಮೆಟ್ಟಿ ನಿಂತು ಐದು ಯೋಜನೆಗಳನ್ನು ಜಾರಿಗೆ ಮಾಡಿದ್ದೇವೆ. ಇವತ್ತು ಬಡವರು ಖುಷಿಯಾಗಿದ್ದಾರೆ. ಬಿಜೆಪಿ-ಜೆಡಿಎಸ್‌ನವರಿಗೆ ಸಮಾಧಾನವಿಲ್ಲ. ಬಡವರಿಗೆ ಸಾಮಾಜಿಕ ನ್ಯಾಯ ಕೊಡ್ತಿದ್ದೀವಿ, ಸಮಾದಲ್ಲಿ ಬದಲಾವಣೆ ತರಲು ಮಾಡುತ್ತಿದ್ದೇವೆ ಎಂದರು.
ಬಡವರ ವಿರುದ್ದವಾಗಿದ್ದವರು, ಅಭಿವೃದ್ಧಿ ವಿರುದ್ಧವಾಗಿ ಇದ್ದವರು ವಿರೋಧ, ಟೀಕೆ ಮಾಡ್ತಾರೆ.ಇವತ್ತು ಹಾಸನಾಂಬೆ, ಸಿದ್ದೇಶ್ವರ, ಗಣಪತಿ ದೇವರ ದರ್ಶನ ಪಡೆದಿದ್ದೇನೆ. ನನಗೆ ಒಳ್ಳೆಯದು ಆಗಬೇಕು ಎನ್ನುವುದಕ್ಕಿಂತ ಏಳು ಕೋಟಿ ಜನತೆಗೆ ಒಳ್ಳೆಯದಾಗಬೇಕು. ಅವರಿಗೆ ಒಳ್ಳೆಯದಾದರೆ ನಮಗೂ ಒಳ್ಳೆಯದಾಗುತ್ತೆ. ಬೇರೆಯವರಿಗೆ ಒಳ್ಳೆಯದು ಮಾಡು ಆಮೇಲೆ ನಮಗೆ ಮಾಡು ಎನ್ನಬೇಕು ಪ್ರಾರ್ಥನೆ ಫಲಿಸುತ್ತೆ. ನಾವು ಪರಸ್ಪರ ಪ್ರೀತಿಸಬೇಕು, ದ್ವೇಷ ಮಾಡಬಾರದು.ದ್ವೇಷ ಹರಡುವ ಕೆಲಸ ಮಾಡಬಾರದು, ಅವರಿಗೆ ತಕ್ಕ ಶಾಸ್ತಿ ಮಾಡಬೇಕು. ದೇವಿ ಅದೇ ರೀತಿ ಮಾಡಬೇಕು. ದುಷ್ಟರ ಶಿಕ್ಷಕ, ಶಿಷ್ಟ ರಕ್ಷಕ ಆಗಲಿ. ದಸಾರ ಹಬ್ಬ ಮಾಡುತ್ತೇವೆ ಈ ಬಾರಿ ವಿಜೃಂಭಣೆಯಿಂದ ಹಾಸನಾಂಬೆ ಜಾತ್ರಾ ಮಹೋತ್ಸವ ಮಾಡಿದ್ದಾರೆ ಎಂದಿದ್ದಾರೆ.
ರಾಜಣ್ಣ ಉಸ್ತುವಾರಿ ಸಚಿವರಾದ ಮೇಲೆ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ಮಾಡಿದ್ದಾರೆ. ರಾಜಣ್ಣ ಒತ್ತಾಯ ಮಾಡಿದ್ರು, ಹಾಗಾಗಿ ಹಾಸನಾಂಬೆ ದೇವಿ ದರ್ಶನಕ್ಕೆ ಎರಡನೇ ಬಾರಿ ಬಂದಿದ್ದೇನೆ. ಎಲ್ಲರಿಗೂ ಶಾಂತಿ, ನೆಮ್ಮದಿ ಕೊಡಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಕುವೆಂಪು ಅವರು ಸರ್ವಜನಾಂಗದ ಶಾಂತಿಯ ತೋಟ ಆಗಬೇಕು ಎಂದಿದ್ದಾರೆ.ಅದೇ ರೀತಿ ಸರ್ವ ಜನಾಂಗದ ತೋಟ ಆಗಬೇಕು .ಮುಂದಿನ ವರ್ಷವೂ ಒಳ್ಳೆಯ ಮಳೆ, ಬೆಳೆ ಆಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇವೆ.ಹಾಸನ ನಗರಸಭೆ ಇತ್ತು ಈಗ ಮೇಲ್ದರ್ಜೆಗೆ ಏರಿಸಬೇಕು ಎಂದು ಸಚಿವರು, ಶಾಸಕರು ಒತ್ತಾಯ ಮಾಡಿದ್ರು. ನಾನು ಹಾಸನಾಂಬೆ ಜಾತ್ರೆಗೆ ಬರುವ ಮುಂಚೆ ಕ್ಯಾಬಿನೆಟ್‌ನಲ್ಲಿ ಪ್ರಸ್ತಾವನೆ ತಂದಿದ್ದರು. ಹಾಸನ ಇನ್ಮೇಲೆ ಮಹಾನಗರಪಾಲಿಕೆ ಆಗಿದೆ.ನಗರಸಭೆ ಅಧ್ಯಕ್ಷರು ಇನ್ಮೇಲೆ ಮೇಯರ್.ನಗರಸಭೆಯನ್ನು ಮೇಲ್ದರ್ಜೆಗೆ ಏರಿಸಿದ್ದೇವೆ ಈಗ ಹಾಸನ ಮಹಾನಗರಪಾಲಿಕೆ ಆಗಿದೆ.ರಾಜಣ್ಣ ಹೇಮಾವತಿ ನದಿಗೆ ಬಾಗೀನ ಅರ್ಪಿಸಲು ಕರೆದಿದ್ದರು. ನಾನು ಕಾವೇರಿ, ತುಂಗಭದ್ರಾ, ಡ್ಯಾಂಗೆ ಬಾಗೀನ ಅರ್ಪಿಸುತ್ತಿದ್ದೆ, ಬರಲು ಆಗಲಿಲ್ಲ. ಈ ಬಾರಿ ಈ ಭಾಗದಲ್ಲಿ ರೈತರಿಗೆ ಯಾವುದೇ ತೊಂದರೆಯಾಗದೆ ನೀರು ಸಿಗುತ್ತೆ. ಹೇಮಾವತಿ ನದಿ ಬಳಿ ಉದ್ಯಾನವನ ಮಾಡಲು ಮನವಿ ಮಾಡಿದ್ದಾರೆ.ಜಲಾಶಯದ ಉದ್ಯಾನವನ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡ್ತೇವೆ ಎಂದರು.
ಹಾಸನದ ವಿಮಾನ ನಿಲ್ದಾಣವನ್ನು ತ್ವರಿತವಾಗಿ ಪೂರ್ಣಗೊಳಿಸುವ ಕೆಲಸ ಮಾಡ್ತೇವೆ. ಇವು ಹಾಸನಕ್ಕೆ ಆಗಬೇಕಾದ ಪ್ರಮುಖ ಕೆಲಸಗಳು. ಟೀಕೆ ಮಾಡ್ತಾರೆ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಬೇಕು. ಆಗ ಅರ್ಥಪೂರ್ಣ ಟೀಕೆ ಮಾಡಬೇಕು. ಟೀಕೆ ಸತ್ಯದ ಆಧಾರದ ಮೇಲೆ ಇರಬೇಕು. ಟೀಕೆಗಳು ವಸ್ತುಸ್ಥಿತಿ ಆಧಾರ, ಸತ್ಯ ಇದ್ದರೆ ಅರ್ಥ ಬರುತ್ತೆ. ಎಲ್ಲಾ ಮಂತ್ರಿಗಳು ರಾಜ್ಯದ ಜನರ ಪರವಾಗಿ ಕೆಲಸ ಮಾಡ್ತಿದ್ದಾರೆ. ಹಾಸನಾಂಬೆ ಜಾತ್ರೆ, ಸಿದ್ದೇಶ್ವರ ಜಾತ್ರೆ ಯಶಸ್ವಿಯಾಗಿದೆ.ರಾಮಲಿಂಗರೆಡ್ಡಿ ಮಾತು ಕಡಿಮೆ ಕೆಲಸ ಮಾಡ್ತಾರೆ. ಯಾವುದೇ ಇಲಾಖೆ ಕೊಟ್ಟು ಪರಿಣಾಮಕಾರಿಯಾಗಿ ಕೆಲಸ ಮಾಡ್ತಾರೆ.ಎಲ್ಲಾ ಅಧಿಕಾರಿಗಳು, ರಾಜಕಾರಣಿಗಳು ಹಾಸನಾಂಬೆ ಜಾತ್ರೆ ಯಶಸ್ವಿಗೆ ಕಾರಣರಾಗಿದ್ದಾರೆ. ಇಲ್ಲಿ ಹೆಣ್ಣುಮಕ್ಕಳು ಅಧಿಕಾರಿಗಳು ಜಾಸ್ತಿ ಇದ್ದಾರೆ.ನಮಗೆ ಲಿಂಗಭೇದ ಇಲ್ಲಾ ಒಳ್ಳೆಯ ಕೆಲಸ ಮಾಡಬೇಕು.ಜನರು, ಬಡವರ ಪರವಾಗಿ ಕೆಲಕ್ಕೆ ಸ್ಪಂದಿಸಬೇಕು. ಸರ್ಕಾರ ಮಾಡುವ ಕಾರ್ಯಕ್ರಮಗಳನ್ಜು ಜನರಿಗೆ ಮುಟ್ಟಿಸಬೇಕು.ಈ ಜಿಲ್ಲೆಯ ಅಧಿಕಾರಿಗಳು ಮಾಡ್ತಾ ಇದ್ದಾರೆ ಅವರಿಗೆ ಅಭಿನಂದನೆಗಳು ಎಂದರು.