ಬೆಂಗಳೂರು; ಇಂದು ದಿ.ಸರ್ದಾರ್ ವಲ್ಲಭಭಾಯ್ ಪಟೇಲ್‌ರವರ ಜನ್ಮದಿನ ಹಿನ್ನೆಲೆ ದಿ.ಸರ್ದಾರ್ ವಲ್ಲಭಭಾಯ್ ಪಟೇಲ್‌ರವರ ಭಾವಚಿತ್ರಕ್ಕೆ ಸಿಎಂ ಪುಷ್ಪ ನಮನ ಸಲ್ಲಿಸಿದ್ರು. ಈ ವೇಳೆ ಸಿಎಂ ಸಿದ್ದರಾಮಯ್ಯ ರಾಷ್ಟ್ರೀಯ ಏಕತಾ ದಿವಸ ಆಚರಣೆ ಮತ್ತು ಪ್ರತಿಜ್ಞಾ ವಚನ ಭೋದಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರತಿಜ್ಞಾ ವಚನ ಭೋದಿಸಿದರು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮಾಜಿ ಸಚಿವ ಹೆಚ್.ಎಂ ರೇವಣ್ಣ, ಶಾಸಕ ಬಸವಂತಪ್ಪ ಸೇರಿ ಹಲವರು ಭಾಗಿಯಾಗಿದ್ದರು.
ಬಳಿಕ ಕೆಪಿಸಿಸಿ ಕಚೇರಿ ಯಲ್ಲಿ ನಡೆದ ಇಂದಿರಾ ಗಾಂಧಿ ಪುಣ್ಯಸ್ಮರಣಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾದ್ರು. , ಸಚಿವ ಹೆಚ್ ಸಿ ಮಹದೇವಪ್ಪ, ಹೆಚ್ ಎಂ ರೇವಣ್ಣ, ರಾಜ್ಯ ಸಭಾ ಸದಸ್ಯ ಜೆಸಿ ಚಂದ್ರಶೇಖರ್, ಸಲೀಮ್ ಅಹ್ಮದ್ ಸೇರಿ ಹಲವರು ಭಾಗಿಯಾಗಿದ್ರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಇಂದು ಕೆಪಿಸಿಸಿ ವತಿಯಿಂದ ಇಂದಿರಾಗಾಂಧಿ ಪುಣ್ಯತಿಥಿ ಇದೆ, ಜೊತೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಇದೆ. ಎರಡನ್ನೂ ಕೂಡ ಕೆಪಿಸಿಸಿ ಆಚರಿಸುತ್ತಿದೆ. ಇಂದಿರಾ ಗಾಂಧಿ ಅವರಿಗೆ ಬಹಳ ಧೈರ್ಯ ಇರೋ ಮಹಿಳೆ, ಅವರನ್ನ ದುರ್ಗೆ ಅಂತ ವಾಜಪೇಯಿ ಕರೆದಿದ್ದರು. ಬಾಂಗ್ಲಾ ವಿಭಾಗ ಆದಾಯ ವಾಜಪೇಯಿ ಹೇಳಿದ್ದು ನೀನು ಸಾಧಾರಣದವಳು ಅಲ್ಲಮ್ಮ, ದುರ್ಗೆ ದುರ್ಗೆ ಎಂದಿದ್ದರು. ಹಿಂದೆ ಪಾಕಿಸ್ತಾನ ಸೋತು ೯೩ ಸಾವಿರ ಸೈನಿಕರು ಶರಣಾಗಿದ್ದರು. ಹೀಗಾಗಿ ಅವರನ್ನ ದುರ್ಗೆ ಅಂತ ಕರಿತಿದ್ದರು..ಅವರು ಈ ದೇಶವನ್ನ ದೀರ್ಘ ಕಾಲ ಆಳುತ್ತಾರೆ. ಬಡತನ ಹೊಗಲಾಡಿಸಲು ಗರೀಬಿ ಹಠಾವೋ ಘೋಷಣೆ ಮಾಡ್ತಾರೆ. ಇಡೀ ದೇಶದಲ್ಲಿ ಅಸಮಾನತೆ ಇದೆ. ಹಿಂದಿನ ಕಾಲದಲ್ಲಿ ಜನ ಬಡವರಿದ್ದರು, ಈಗ ಕಡಿಮೆಯಾಗಿದೆ.ಹಾಗಾಗಿ ೨೦ ಅಂಶ ಇರೋ ಕಾರ್ಯಕ್ರಮ ಜಾರಿಗೆ ತಂದಿದ್ದರು ಎಂದರು.
ಸರ್ವರಿಗೂ ಸಮಾನ ಅವಕಾಶ ಇದೆ. ಅಸಮಾನತೆ ಯಾಕೆ ನಿರ್ಮಾಣ ಆಯ್ತು ದೇಶದಲ್ಲಿ?. ಜಾತಿ ವ್ಯವಸ್ಥೆ ಯಿಂದ ಅಸಮಾನತೆ ನಿರ್ಮಾಣ ಆಯ್ತು. ಅವಕಾಶ ಸಿಗದಿರೋದ್ರಿಂದ ಅಸಮಾನತೆ ಉಂಟಾಯಿತು. ಮೂರು ವರ್ಣದವರಿಗೆ ಮಾತ್ರ ಅವಕಾಶ ಸಿಗ್ತಿತ್ತು. ಹೆಣ್ಮಕ್ಕಳಿಗೆ ಬಸವಣ್ಣ ನವರು ಸಮಾನ ಅವಕಾಶ ನೀಡುತ್ತಿದ್ದರು. ಬಸವಣ್ಣ ನವರನ್ನು ಸಾಂಸ್ಕೃತಿಕ ನಾಯಕ ಅಂತ ನಮ್ಮ ಸರ್ಕಾರ ಘೋಷಣೆ ಮಾಡಿತ್ತು. ಬಿಜೆಪಿ ಅವರು ಬುರುಡೆ ಹೊಡೀತಾರೆ, ಅವರೇನು ಮಾಡಿದರು?. ಸರ್ಕಾರಿ ಕಚೇರಿಯಲ್ಲಿ ಫೋಟೋ ಇಟ್ಟವರು ನಾವು, ಎದೆತಟ್ಟಿ ಹೇಳಿಕೊಳ್ಳಬೇಕು. ಇದು ಮಾಡಿದ್ದು ಕಾಂಗ್ರೆಸ್ ನವರು , ಬಿಜೆಪಿ ಅವರಲ್ಲ.ಇಂದಿರಾ ಗಾಂಧಿ ಪುಣ್ಯತಿಥಿ ಇದೆ, ಅವರನ್ನ ಸ್ಮರಣೆ ಮಾಡಿಕೊಳ್ಳೋಣ. ಅವರು ಹುತಾತ್ಮರಾಗಿದ್ದರು, ಅವರು ಆದರ್ಶ ಬಿಟ್ಟು ಹೋಗಿದ್ದಾರೆ, ಅದನ್ನ ಪಾಲಿಸೋಣ ಎಂದು ತಿಳಿಸಿದರು.
ಪಟೇಲರು ಇಡೀ ದೇಶದ ಪ್ರಧಾನಿ ಆಗಿದ್ದರು. ೫೬೨ ಸಂಸ್ಥಾನ ಇದ್ವು, ಕೆಲವರು ಭಾರತಕ್ಕೆ ಸೇರಿಕೊಳ್ಳೋಕೆ ಮುಂದಾಗಲಿಲ್ಲ. ಹೈದ್ರಾಬಾದ್ ನಿಜಾಮರು ಮುಂದೆ ಬರಲಿಲ್ಲ. ನಮ್ದೇ ದೇಶ ಮಾಡಿಕೊಳ್ಳೋಣ ಎಂದು ಮುಂದಾಗಿದ್ದರು. ಪಟೇಲರು ಗೃಹ ಮಂತ್ರಿ ಆಗಿದ್ದರು, ಅವಕಾಶ ಕೇಳಿ ಹೈದ್ರಾಬಾದ್ ಸ್ವತಂತ್ರ ಭಾರತದಲ್ಲಿ ಸೇರಿಕೊಂಡಿದೆ. ಅದಕ್ಕಾಗಿ ಅವರನ್ನ ಉಕ್ಕಿನ ಮನುಷ್ಯ ಅಂತಾ ಕರೆಯುತ್ತೇವೆ. ಬಿಜೆಪಿ ಅವರು ನೆಹರು ಅವರನ್ನ ಖಂಡಮ್ ಮಾಡ್ತಾರೆ. ಪಟೇಲ್ ತ್ಯಾಗ ಬಲಿದಾನ ಮಾಡಿದ್ದಾರೆ, ನೆಹರು ಅವರು ಮಾಡಿದ್ದಾರೆ. ತ್ಯಾಗವನ್ನ ಇಬ್ಬರೂ ಮಾಡಿದ್ಸಾರೆ. ಸ್ವತಂತ್ರ ಆಗಿರಲು ಅವರೆಲ್ಲಾ ಕಾರಣ. ಬಿಜೆಪಿಗರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಗಿರಾಕಿಗಳು. ಈಗ ಮಹಾನ್ ದೇಶಭಕ್ತರಂತೆ ಮಾತಾಡ್ತಾರೆ, ಇದು ಡೊಂಗಿತನ ಅಂತ ಕರೀತಿನಿ ನಾನು. ಸ್ವತಂತ್ರ ತಂದವರು, ಹೋರಾಡಿದವರು ಕಾಂಗ್ರೆಸ್ ನವರು ಮಾತ್ರ. ೧೦೦ ವರ್ಷ ಆಯ್ತು ಆರ್ ಎಸ್ ಎಸ್ ಆರಂಭವಾಗಿ ಸ್ವತಂತ್ರ ಹೋರಾಟ ಜೋರಾಗಿ ನಡೀತು. ಹೆಗಡೆವಾರ್ ಅವರು ಯಾವತ್ತೂ ಕೂಡ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿ ಎಂದು ಕರೆ ಕೊಟ್ಟಿಲ್ಲ. ಆರ್ ಎಸ್ ಎಸ್ ಬ್ರಿಟಿಷರ ಜೊತೆ ಶಾಮೀಲಾಗಿದ್ದರು. ಸಂವಿಧಾನ ಸಾವರ್ಕರ್ ಮತ್ತು ಗೋಲ್ವಾಲ್ಕರ್ ವಿರೋಧ ಮಾಡಿದರು.ಅವರು ಯಾವತ್ತೂ ಸಂವಿಧಾನ ಪರ ಇಲ್ಲ, ಅವರು ಮನುವಾದಿಗಳು.ಇದರ ವಿರುದ್ದವಾಗಿಯೇ ದೇಶದ ಒಗ್ಗಟ್ಟಿಗಾಗಿ ಕಾಂಗ್ರೆಸ್ ಸ್ವತಂತ್ರ ಹೋರಾಟ ಮಾಡಿತ್ತು ಎಂದರು.











