ಮನೆ Latest News 72ನೇ ಸಹಕಾರ ಸಪ್ತಾಹ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ

72ನೇ ಸಹಕಾರ ಸಪ್ತಾಹ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು; 72ನೇ ಸಹಕಾರ ಸಪ್ತಾಹ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ರು.ಅದಕ್ಕೂ ಮುನ್ನ  ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಪ್ರಥಮ ಅಧ್ಯಕ್ಷ ಬಿ.ಎಸ್.ವಿಶ್ವನಾಥ ಪುತ್ಥಳಿಯನ್ನು ಸಿಎಂ ಸಿದ್ದರಾಮಯ್ಯ ಅನಾವರಣಗೊಳಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು ಆವರಣದಲ್ಲಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಮಂಡಳಿಯ ಅಧ್ಯಕ್ಷ ಜಿ.ಟಿ‌.ದೇವೇಗೌಡ , ಶಾಸಕರಾದ ಷಡಕ್ಷರಿ, ಎಸ್ ಟಿ ಸೋಮಶೇಖರ್, ನಂಜೇಗೌಡ, ಅಲ್ಲಮ ಪ್ರಭು ಪಾಟೀಲ್, ಎ.ಸಿ ಶ್ರೀನಿವಾಸ್, ಪುಟ್ಟರಂಗಶೆಟ್ಟಿ, ಪ್ರಕಾಶ್ ಕೋಳಿವಾಡ ಸೇರಿ ಹಲವರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಸಿಎಂ ಅವರು 72ನೇ ಸಹಕಾರ ಸಪ್ತಾಹ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಸಹಕಾರ ಮಂಡಳಿ ಹಮ್ಮಿಕೊಂಡಿದೆ. ಬಿ ಎಸ್ ವಿಶ್ವನಾಥ್ ಪುಥ್ಥಳಿ ಅನಾವರಣ ಮಾಡಲಾಗಿದೆ. ಇವರು ಶಿವಮೊಗ್ಗ ದ ತೀರ್ಥಹಳ್ಳಿಯವರು . ರಾಷ್ಟ್ರ ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಹಕಾರ ಮುಖಂಡರಾಗಿದ್ರು.ಯುವಕರು ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಬಿ ಎಸ್ ವಿಶ್ವನಾಥ್ ಅವರ ಆದರ್ಶ ಗಳನ್ನು ಎಲ್ಲರೂ ಪಾಲಿಸುವ ಕೆಲಸ ಮಾಡಬೇಕು. ಎಲ್ಲರಿಗೂ ಅಭಿನಂದನೆಗಳು ಎಂದರು.

ಭಾರತದ ಸಹಕಾರ ರಾಜಧಾನಿ ಎಂದು ಕರ್ನಾಟಕವನ್ನ ಕರೆಯುತ್ತಾರೆ. ನೆಹರು ದೇಶದ ಮೊದಲ ಪ್ರಧಾನಿ. ಇವತ್ತು ಅವರು ಹುಟ್ಟಿದ ದಿನ, ಹೀಗಾಗಿ ಒಂದು ವಾರ ಸಹಕಾರಿ ಸಪ್ತಾಹ ಮಾಡ್ತಿದ್ದೇವೆ. ನೆಹರು ಅವರು ಸಹಕಾರ ಕ್ಷೇತ್ರ ಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಗ್ರಾಮೀಣ ಬದುಕು ಉಜ್ವಲಗೊಳಿಸಲು, ಅಭಿವೃದ್ಧಿಗೊಳಿಸಲು ಸಹಕಾರಿ ಮುಖ್ಯ ಎಂದು ನಂಬಿದ್ದರು. ಮಹಾತ್ಮ ಗಾಂಧಿಯವರ ಇದನ್ನೇ ನಂಬಿದ್ದರು. ನೆಹರು ಹಳ್ಳಿ ಸರ್ವತೋಮುಖ ಅಭಿವೃದ್ಧಿ ಆಗಬೇಕಾದ್ರೆ ಒಂದುಬಶಾಲೆ, ಸಹಕಾರ ಸಂಘ, ಆಸ್ಪತ್ರೆ ಬೇಕು ಎಂದಿದ್ದರು. ಆ ಮೂಲಕ ಹಳ್ಳಿಯ ಸರ್ವತೋಮುಖ ಅಭಿವೃದ್ಧಿ ಆಗ್ತದೆ. ಸಹಕಾರಿ ಸಂಘದ ಮೂಲಕ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಮಾಡಲು ಸಾಧ್ಯ. ಇವತ್ತು ದೇಶದಲ್ಲಿ ಅನೇಕ ಸಹಕಾರಿ ಸಂಘಗಳಿದ್ದಾವೆ ಹೇಳಿದರು.

ಹಾಲು ಉತ್ಪಾದಕ ಸಂಘಗಳು ಸಹಕಾರಿ ಕ್ಷೇತ್ರದಲ್ಲಿ ಅಭಿವೃದ್ಧಿ ಹೆಚ್ಚಿಸಿದೆ. ಒಂದು ಬಾರಿ ಹಾಲಿನ ಬಗ್ಗೆ ಟೀಕೆಯಾಗಿತ್ತು.ಹಳ್ಳಿಯಲ್ಲಿರೋ ಹಾಲು ನಗರಕ್ಕೆ ಬರ್ತದೆ. ನಗರದ ಆಲ್ಕೋಹಾಲ್ ಹಳ್ಳಿಗೆ ಬರ್ತಿದೆ ಅಂತ ಟೀಕೆ ಆಗಿತ್ತು. ಆದ್ರೆ ಆ ತರಹ ಇಲ್ಲ, ಸಣ್ಣ ಸಣ್ಣ ಹಾಲು ಉತ್ಪಾದಕ ಸಂಘಗಳಿಂದ ಅಭಿವೃದ್ಧಿ ಆಗ್ತಿದೆ. ಎಲ್ಲ ಹಳ್ಳಿಯಲ್ಲಿಯೂ ಹಾಲು ಉತ್ಪಾದಕ ಸಂಘ ಇದೆ. ಚನ್ನಪಟ್ಟಣ ಉಪ‌ ಚುನಾವಣೆಯಲ್ಲಿ ಸಂಜೆ ವೇಳೆ ಜನರೇ ಸಿಗಲ್ಲ ಅಂತಿದ್ರು. ಸಹಕಾರ ಇಲಾಖೆಯಿಂದ ಸಾಲ ಕೊಡ್ತಿದ್ದೇವೆ ಎಂದ ಅವರು  ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ಬಡ್ಡಿ ದರ ಹೇಳಿ ಸಾಲದ ಮಾಹಿತಿ ಹಂಚಿಕೊಂಡಿದ್ದಾರೆ.

ಇದೇ ವೇಳೆ ರಾಜಣ್ಣ ಬಂದಿಲ್ವಾ ಎಂದು ಸಿಎಂ ಕೇಳಿದರು. ರಾಜಣ್ಣ ಬಂದಿಲ್ಲ ಎಂದಿದ್ದಕ್ಕೆ ಈಗ ಸಹಕಾರ ಇಲಾಖೆ ನಾನೇ ಮಂತ್ರಿಯಾಗಿದ್ದೇನೆ. ಈ ಇಲಾಖೆಗೆ ಪರ್ಮನೆಂಟ್ ಆಗಿರಲ್ಲ ಎಂದು ಸಿಎಂ ಹೇಳಿದ್ದಾರೆ. ಸಹಕಾರಿ ಸಪ್ತಾಹದ ವೇದಿಕೆಯಲ್ಲಿ ಸಚಿವ ಸಂಪುಟದ ಪುನರ್ ರಚನೆ ಬಗ್ಗೆ ಸುಳಿವು ಕೊಟ್ಟಿದ್ದಾರೆ ಎಂದರು.