ಬೆಂಗಳೂರು; ಅಲೆಮಾರಿ ಜನಾಂಗದ ಮುಖಂಡರು, ಹೋರಾಟಗಾರರು ಮತ್ತು ಚಿಂತಕರುಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ರು. ಸುದೀರ್ಘ ಸಭೆ ನಡೆಸಿ ಬೇಡಿಕೆಗಳು ಮತ್ತು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಯಿತು. ಒಳಮೀಸಲಾತಿ ಕುರಿತಂತೆ ಸಿಎಂ ಚರ್ಚೆ ನಡೆಸಿದರು. ಕಾವೇರಿ ನಿವಾಸದಲ್ಲಿ ಸಭೆ ನಡೆಯಿತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂಎಲ್ಸಿ ರವಿಕುಮಾರ್ ಒಳ ಮೀಸಲಾತಿ ಬಗ್ಗೆ ಯಾರು ಖುಷಿಯಾಗಿ ಇಲ್ಲ.ಎಡ-ಬಲ ಯಾರು ಸಂತೋಷವಾಗಿ ಇಲ್ಲ. ನಾಗಮೋಹನ್ ದಾಸ್ ವರದಿ, ಮಾಧುಸ್ವಾಮಿ, ಸದಾಶಿವ ಅಯೋಗ ಏನ್ ಹೇಳಿದೆ.ಈ ವರ್ಷಗಳಿಗಿಂತ ಸಿದ್ದರಾಮಯ್ಯ ವರದಿ, ರಾಹುಲ್ ಮಾರ್ಗದರ್ಶನವೇ ಗ್ರೇಟಾ?. ಸಿದ್ದರಾಮಯ್ಯ ಕೊಟ್ಟ ಮೀಸಲಾತಿಯಲ್ಲಿ ವಾಸ್ತವಿಕತೆ ಏನಿದೆ. ಅಲೆಮಾರಿಗಳಿಗೆ ನ್ಯಾಯ ಸಿಕ್ಕಿಲ್ಲ. ಬೀದಿಯಲ್ಲಿ ಇದ್ದಾರೆ. ದೊಡ್ಡವರ ಜೊತೆ ಕುಸ್ತಿ ಆಡೋಕೆ ಅಲೆಮಾರಿಗಳಿಗೆ ಬಿಟ್ಟಿದ್ದಾರೆ. ಇದು ರಾಜಕೀಯ ನ್ಯಾಯನಾ?. ಒಳ ಮೀಸಲಾತಿ ಸಾಮಾಜಿಕ ಅನ್ಯಾಯದ ನಿರ್ಧಾರ ಇದು.ಇದಕ್ಕಾಗಿ ಎಲ್ಲರು ಹೋರಾಟ ಮಾಡ್ತಿದ್ದಾರೆ.ಒಳ ಮೀಸಲಾತಿ ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಈ ಬಗ್ಗೆ ಮಾತನಾಡಿ ಒಳ ಮೀಸಲಾತಿ ಬಗ್ಗೆ ನಿರ್ಧಾರ ಮಾಡಿದ್ರು. ಸದನ ನಡಯೋವಾಗ ಕ್ಯಾಬಿನೆಟ್ ಮಾಡಿ ಹೀಗೆ ನಿರ್ಧಾರ ಮಾಡಿದ್ರು ಲೀಕ್ ಆಯ್ತು. ಸಿಎಂ ಅವರು ಒಳ ಮೀಸಲಾತಿ ಸಂಬಂಧ ಸ್ಪಷ್ಟನೆ ಕೇಳಿದ್ರು ಉತ್ತರ ಕೊಡಲಿಲ್ಲ. ಯಾರಿಗೂ ಈ ಮೀಸಲಾತಿ ಯಲ್ಲಿ ನ್ಯಾಯ ಸಿಗಲಿಲ್ಲ. ಮಾಧುಸ್ವಾಮಿ, ಸದಾಶಿವ ಆಯೋಗ, ನಾಗಮೋಹನ್ ದಾಸ್ ವರದಿಯನ್ನು ನೀವು ಅಂಗೀಕಾರ ಮಾಡಲಿಲ್ಲ. ಕಾಂಗ್ರೆಸ್ ಮಾಡಿದ ಒಳ ಮೀಸಲಾತಿ ಇದು. ಇದು ರಾಜಕೀಯ, ಓಟ್ ಬ್ಯಾಂಕ್ ತೀರ್ಮಾನ. ನಾಗಮೋಹನ್ ದಾಸ್ ಆಯೋಗಕ್ಕೆ 115 ಕೋಟಿ ಖರ್ಚು ಮಾಡಿದ್ರಿ. ಇದು ನಷ್ಟ ಆಗಿಲ್ಲವಾ? ಒಳ ಮೀಸಲಾತಿ ಕೊಡೋ ಮಾನಸೀಕತೆ ನಿಮಗೆ ಇರಲಿಲ್ಲ. 59 ಜಾತಿಗಳು ಇವತ್ತು ಬೀದಿಯಲ್ಲಿ ನಿಂತಿದ್ದಾರೆ. 3 ವಿಭಾಗ ಯಾಕೆ ಮಾಡಿದ್ರು. ಸರ್ಕಾರ ಮೋಸ ವಂಚನೆ ಮಾಡ್ತಿದೆ. ಅಂಬೇಡ್ಕರ್ 101 ಜಾತಿಗೂ ನ್ಯಾಯ ಸಿಗಬೇಕು ಅಂದರು.ಈಗ 59 ಜಾತಿಗೆ ಅನ್ಯಾಯ ಮಾಡಿದ್ದಾರೆ.ಬೀದಿಯಲ್ಲಿ ಇದ್ದಾರೆ ಅವರಿಗೆ ನ್ಯಾಯ ಕೊಡೋರು ಯಾರು?. ಎಡ-ಬಲ- ಸ್ಪೃಶ್ಯ ಜಾತಿಗಳು 59 ಜಾತಿ ನಿಲ್ಲಬೇಕು. ಕುಲಶಾಸ್ತ್ರ ಅಧ್ಯಯನ ಮಾಡದೇ ಮೀಸಲಾತಿ ಕೊಟ್ಟಿದ್ದು ಸರಿಯಲ್ಲ.ಒಳ ಮೀಸಲಾತಿ ಯಲ್ಲಿ ದೊಡ್ಡ ಅನ್ಯಾಯ ಆಗಿದೆ.ನ್ಯಾಯ ಕೊಡದೇ ಹೋದ್ರೆ ಎಲ್ಲವು ಹೋರಾಟ ಮಾಡ್ತಾರೆ ಎಂದು ತಿಳಿಸಿದ್ದಾರೆ.
ಒಳ ಮೀಸಲಾತಿಯಲ್ಲಿ ಬೆಟ್ಟ ಅಗೆದು ಇಲಿ ತೆಗೆದಿದ್ದಾರೆ. ಬಿಲ್ ಪಾಸ್ ಬಿಟ್ಟು ಇನ್ನೇನು ಮಾಡಲಿಲ್ಲ. ಗಣಪತಿ ಉತ್ಸವ ಸಮಸ್ಯೆಗೂ ಈ ಸರ್ಕಾರ ಉತ್ತರ ಕೊಡಲಿಲ್ಲ. ರಾಜ್ಯಕ್ಕೆ ಒಂದೇ ನಿಯಮ ಇರಬೇಕು ಅಂತ ನಾವು ಬಾವಿಗೆ ಇಳಿದ್ವಿ.ಕೂಡಲೇ ಕಲಾಪ ಮುಂದೂಡಿದ್ರು ಎಂದು ಹೇಳಿದ್ದಾರೆ.











