ಬೆಂಗಳೂರು; ಕರ್ನಾಟಕದಲ್ಲಿ ಮಾತ್ರ ಸಿಲಿಂಡರ್ ಸಮಸ್ಯೆ ಎಂಬ ಬಿಜೆಪಿ ಟೀಕೆಗೆ ಸಿಎಂ ಸಿದ್ದರಾಮಯ್ಯ ಟಕ್ಕರ್ ಕೊಟ್ಟಿದ್ದಾರೆ.
ಅಂಥವರು ಸಿಲಿಂಡರ್ ಪೂರೈಕೆ ಮಾಡಲಿ. ಯಾಕೆ ಕರ್ನಾಟಕ್ಕೆ ಮಲತಾಯಿ ಧೋರಣೆ ಮಾಡೋದು?. ರಾಜ್ಯಕ್ಕೆ ಅಗತ್ಯ ಸಿಲಿಂಡರ್ ಪೂರೈಕೆ ಮಾಡಲಿ ಎಂದು ಕೇಂದ್ರಕ್ಕೆ ಸಿಎಂ ಒತ್ತಾಯಿಸಿದ್ದಾರೆ.
ಕೊಂಡಜ್ಜ ಬಸಪ್ಪ ಸಭಾಂಗಣದಲ್ಲಿ ನಡೆದ ಲಂಕೇಶ್ ಅವರ ಟೀಕೆ ಟಿಪ್ಪಣಿ ೩ ಸಂಪುಟಗಳ ಹಾಗೂ ಲಂಕೇಶ್ ಕಥೆಗಳ ಆಡಿಯೋ ಬುಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಲಂಕೇಶ್ ಅವರು ಅಧ್ಯಾಪಕರಾಗಿ, ಸಾಹಿತಿಯಾಗಿ, ನಿರ್ದೇಶಕ ರಾಗಿ, ಪತ್ರಿಕೋದ್ಯಮದ ಮುಖ್ಯಸ್ಥರಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ನನಗೆ ಲಂಕೇಶ್ ಅವರಿಗೆ ಪರಿಚಯ ಆಗಿದ್ದು ನಮ್ಮೂರಲ್ಲಿ. ನಮ್ಮ ಊರಿನ ಪಕ್ಕದಲ್ಲೇ ಸಿನಿಮಾ ಮಾಡಿದ್ದು. ಕುಪ್ಪೇಗಾಲಕ್ಕೆ ವಾರಕ್ಕೆ ಹೋಗ್ತಿದೆ, ಸಿನಿಮಾದವರನ್ನ ಕಂಡ್ರೆ ಆಗ ಆಗ್ತಿರಲಿಲ್ಲ. ಲಂಕೇಶ್ ಅವರು ಗೊಣಗುತ್ತಿದ್ದರು, ನಾನು ಹಿಂದೆ ಟೀಕೆ ಮಾಡ್ತಿದ್ದೆ.. ಆಗ ಪರಿಚಯ ಆಯಿತು.ಅಲ್ಲಿಂದ ಅವರ ಅಭಿಮಾನಿನೇ ಆಗಬಿಟ್ಟೆ. ಲಂಕೇಶ್ ಅವರು ಸಹಜವಾಗಿ ಮಾತಾಡುತ್ತಿದ್ದರು, ನಾಟಕೀಯ ಮಾತು ಆಡುತ್ತಿರಲಿಲ್ಲ. ಕೆಲ ವಿಚಾರದಲ್ಲಿ ಸಿಟ್ಟು ಮಾಡಿಕೊಳ್ಳುವವರು. ಲಂಕೇಶ್ ಪತ್ರಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಲಂಕೇಶ್ ಅವರು ಬಹುಮುಖ ಪ್ರತಿಭೆ,ನಮ್ಮನ್ನ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ನನ್ನನ್ನ ಹೊಗಳಿ ಬರೆದಿದ್ದರು, ತೆಗಳಿ ಬರೆದಿದ್ದರು ಎಂದಿದ್ದಾರೆ.
ನಾನು ಇಸ್ಪಿಟ್ ಗುಲಾಂ ಮಾಡಿದ ಮೋಸ ಅಂತ ಬರೆದಿದ್ದರು. ನಾನು ವಕೀಲ ಆಗಿದ್ದಾಗ ಇಸ್ಪಿಟ್ ಆಡುತ್ತಿದ್ದರು, ಅದು ಅವರಿಗೆ ಗೊತ್ತಾಗಿತ್ತು. ಕೋರ್ಟ್ ಅವಧಿ ಮುಗಿದ್ಮೇಲೆ ನಾನು ಕಾರ್ಡ್ಸ್ ಆಡುತ್ತಿದ್ದೆ. ನೀನು ಲೋಕಸಭೆಗೆ ನಿಲ್ಲಲೇಬೇಕು ಅಂತ ಹೇಳಿದರು, ಆದ್ರೆ ನಾನು ನಿಲ್ಲಲಿಲ್ಲ. ಸಿದ್ದರಾಮಯ್ಯ ಗೆ ೧೦೦ ಕುರಿ ಲೆಕ್ಕ ಹಾಕೋಕೆ ಬರಲ್ಲ, ಇವರು ರಾಜ್ಯದ ಹಣಕಾಸು ಲೆಕ್ಕ ಹೇಗೆ ಹಾಕ್ತಾರೆ ಎಂದು ಬರೆದಿದ್ದರು. ಲಂಕೇಶ್ ಪತ್ರಿಕೆ ಯಲ್ಲಿ ಬಂದಿದ್ದನ್ನೂ ನಾನು ಚಾಲೆಂಜ್ ಆಗಿ ತೆಗೆದುಕೊಂಡೇ ಸವಾಲಾಗಿ ಸ್ವೀಕಾರ ಮಾಡಿ ಮೊದಲ ಬಜೆಟ್ ಮಂಡಿಸಿದ್ದೆ. ಆ ಮೇಲೆ ನನ್ನನ್ನೂ ಹೊಗಳಿ ಬರೆದಿದ್ದರು. ಅವರಿಗೆ ಅನ್ನಿಸಿದ್ದು ಬರೆದಿದ್ದರು.ಅವರು ನನ್ನನ್ನ ತೆಗಳಿ ಬರೆಯದಿದ್ದರೆ ನಾನು ೧೭ನೇ ಬಜೆಟ್ ಮಂಡಿಸುತ್ತರಲಿಲ್ಲ.ಲಂಕೇಶ್ ಅವರು ಅಷ್ಟೇ ಪ್ರೀತಿ ಮಾಡುತ್ತಿದ್ದರು. ಕಾಂಗ್ರೆಸ್ ಟೀಕೆ ಮಾಡುತ್ತಿದ್ದರು, ಆದ್ರೆ ಕಾಂಗ್ರೆಸ್ ರಾಜ್ಯದಲ್ಲಿ ಇರಬೇಕು ಅಂತ ಹೇಳುತ್ತಿದ್ದರು.ಜೆ ಹೆಚ್ ಪಟೇಲ್ ಅವರನ್ನೂ ಟೀಕೆ ಮಾಡಿದರು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಲಂಕೇಶ್ ಕೋಮುವಾದಕ್ಕೆ ವಿರುದ್ಧ ವಾಗಿ ಇರುತ್ತಿದ್ದರು. ಈಗ ಕೋಮುವಾದ ವಿಜೃಂಭಣೆಯಿಂದ ನೋಡುತ್ತಿದ್ದಾರೆ.ನಾವು ಸಮಾಜದ ಹಿತ ಬಯಸಬೇಕು. ಗೌರಿ ಲಂಕೇಶ್ ಅವರು ಇಂಗ್ಲಿಷ್ ವರದಿಗಾರರಾಗಿದ್ದರು, ಅವರು ಹೋರಾಟಗಾರ್ತಿ.ಯಾರಿಗೆ ಬರವಣಿಗೆ ಗುಣ ಇದ್ರೆ, ಶಕ್ತಿ ಇದ್ರೆ ಅದನ್ನ ಗುರುತಿಸಿ ಬರೆಸುತ್ತಿದ್ದರು. ಲಂಕೇಶ್ ಪತ್ರಿಕೆ ಸರಕಾರದ ಮೇಲೆ ಅವಲಂಬನೆ ಆಗಿರಲಿಲ್ಲ. ಯಾವುದೇ ಮುಲಾಜು ಇಲ್ದೇ ಇರಬೇಕು ಅಂತಿದ್ದರು. ಲಂಕೇಶ್ ಅವರು ಸಿಗರೇಟು ಸೇದುತಿದ್ದರು, ನಮಗೇ ಸಿಗರೇಟು ಸೇದಿಸುತ್ತಿದ್ದರು. ಅವರು ಅಂತ್ಯಕ್ರಿಯೆಯಲ್ಲಿ ನಾನು ಭಾಗಿಯಾಗಿದ್ದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಸಿಲಿಂಡರ್ ಅಭಾವ ವಿಚಾರದ ಬಗ್ಗೆ ಮಾತನಾಡಿದ ಅವರು ಸರ್ಕಾರದ ವತಿಯಿಂದ ಉತ್ತರ ಕೊಟ್ಟಿದ್ದಾರೆ. ವಿಧಾನಸಭೆ,ಪರಿಷತ್ ನಲ್ಲಿ ಉತ್ತರ ಕೊಟ್ಟಿದ್ದೇವೆ. ನಾನು ಪತ್ರ ಕೂಡ ಬರೆದಿದ್ದೇನೆ. ಅಭಾವ ತಪ್ಪಿಸಲು ಬೇರೆ ಪ್ರಯತ್ನ ಮಾಡ್ಬೇಕು ಎಂದು ಒತ್ತಾಯ ಮಾಡ್ತೀವಿ. ಹೊಟೇಲ್ ಗಳನ್ನ ನಿಲ್ಲಿಸಿದ್ರೆ ಜನಜೀವನ ಅಸ್ತವ್ಯಸ್ತವಾಗುತ್ತೆ ಎಂದ ಸಿಎಂ ಸಿದ್ದರಾಮಯ್ಯ ಸಿಲಿಂಡರ್ ಅಭಾವ ತಪ್ಪಿಸಲು ಬೇರೆ ದೇಶಗಳಿಂದ ತರಿಸಲಿ. ಹೊಟೇಲ್ ಗಳಿಗೆ ಪೂರೈಕೆ ನಿಂತ್ರೆ ಕಷ್ಟ ಆಗುತ್ತೆ. ಜನಜೀವನ ಅಸ್ತವ್ಯಸ್ತೆ ಆಗುತ್ತೆ. ಹರ್ದೀಪ್ ಪುರಿ ಸಿಂಗ್ ಅವರು ತೊಂದರೆ ಆಗದಂತೆ ನೋಡಿಕೊಳ್ತೇವೆ ಅಂದಿದ್ದಾರೆ.ಆ ಕೆಲಸ ಬೇಗ ಕೇಂದ್ರ ಸಚಿವರು ಮಾಡಲಿ ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರದ ವತಿಯಿಂದ ಉತ್ತರ ಕೊಟ್ಟಿದ್ದಾರೆ. ಎರಡೂ ಕಡೆ ಉತ್ತರ ನೀಡಲಾಗಿದೆ. ನಾನು ಕೂಡ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ.ಅಭಾವ ತಪ್ಪಿಸೋಕೆ ಬೇರೆ ದೇಶಗಳಿಂದ ತರಿಸೋ ಪ್ರಯತ್ನ ಮಾಡಬೇಕು. ಈಗಲೂ ಕೇಂದ್ರಕ್ಕೆ ಒತ್ತಾಯ ಮಾಡುತ್ತೇನೆ. ಹೋಟೆಲ್ ಮೇಲೆ ಅವಲಂಬನೆ ಆಗೋರು ಹೆಚ್ಚು. ಹೋಟೆಲ್ ನಿಲ್ಲಿಸಿದ್ರೆ ಬಹಳ ಕಷ್ಟ ಆಗುತ್ತದೆ. ಇಡೀ ಜನಜೀವನ ಅಸ್ತವ್ಯಸ್ತ ಆಗುತ್ತದೆ.ಹರ್ದೀಪ್ ಸಿಂಗ್ ಪುರಿ ತೊಂದ್ರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ತೊಂದ್ರೆ ಆಗದಂತೆ ನೋಡಿಕೊಳ್ಳಿ ಎಂದು ಒತ್ತಾಯ ಮಾಡುತ್ತೇನೆ ಎಂದ ಅವರು ಕರ್ನಾಟಕದಲ್ಲಿ ಯಾಕೆ ಸಮಸ್ಯೆ ಅಂತ ಬಿಜೆಪಿ ಯವರ ಪ್ರಶ್ನೆ ವಿಚಾರದ ಬಗ್ಗೆ ಮಾತನಾಡಿದ ಅವರು ಹಾಗಾದ್ರೆ ಕೇಂದ್ರ ದವರು ಸಪ್ಪೈ ಮಾಡಲಿ. ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡುತ್ತಿದ್ದರಲ್ಲ ಹಾಗಾದ್ರೆ ಸಪ್ಲೈ ಮಾಡಲಿ, ಇಟ್ಕೊಂಡು ಏನು ಮಾಡಬೇಕು ನಾವು ಎಂದಿದ್ದಾರೆ.











