ಮನೆ Latest News ಬೆಂಗಳೂರು; ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗಿ ಪ್ರಾಸಿಕ್ಯೂಷನ್‌ ಟೆನ್ಶನ್ ಹಗುರಾಗಿಸಿಕೊಂಡ ಸಿಎಂ ಸಿದ್ದರಾಮಯ್ಯ

ಬೆಂಗಳೂರು; ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗಿ ಪ್ರಾಸಿಕ್ಯೂಷನ್‌ ಟೆನ್ಶನ್ ಹಗುರಾಗಿಸಿಕೊಂಡ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು; ಮೂಡ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ ಇದನ್ನು ಪ್ರಶ್ನಿಸಿ ಇಂದು ಸಿಎಂ ಸಿದ್ದರಾಮಯ್ಯ ಅವರು ಇಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ನಲ್ಲಿ ಆ ಅರ್ಜಿಯ ವಿಚಾರಣೆ ನಡೆಯುತ್ತಿದ್ದರೆ ಇತ್ತ  ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ಟೆನ್ಶನ್ ಮರೆಯಲು ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗಿಯಾಗಿ ಮನಸ್ಸು ಹಗುರ ಮಾಡಿಕೊಂಡ್ರು.

ಫೋಟೋ ಜರ್ನಲಿಸ್ಟ್ ಸಂಘದ ವತಿಯಿಂದ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ  ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗಿಯಾದ್ರು. ಛಾಯಾ ಚಿತ್ರಪ್ರದರ್ಶನವನ್ನು ಉದ್ಘಾಟಿಸಿದ ಅವರು ತಮ್ಮದೇ ಛಾಯಾಚಿತ್ರದ ಫೋಟೋ ಕ್ಲಿಕ್ಕಿಸಿದರು. ತಮ್ಮದೇ ಹಲವು ಫೋಟೋಗಳನ್ನು ನೋಡಿ ಸಿಎಂ ಎಂಜಾಯ್ ಮಾಡಿದ್ರು.

ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆ ಕೋರಿ ಹೈಕೋರ್ಟ್ ಗೆ ಸಿಎಂ ಸಿದ್ದರಾಮಯ್ಯ ಅರ್ಜಿ‌

ಬೆಂಗಳೂರು; ಮೂಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರೋದನ್ನು ವಿರೋಧಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಹೈ ಕೋರ್ಟ್‌ ಗೆ ಸಿಎಂ ಸಿದ್ದರಾಮಯ್ಯ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ಪರ ಹೈಕೋರ್ಟ್‌ ಗೆ ವಕೀಲರಾದ ಕಪಿಲ್‌ ಸಿಬಲ್, ಅಭಿಷೇಕ್‌ ಮನು ಸಿಂಘ್ವಿ ಅವರು ಅರ್ಜಿಯನ್ನು ಸಲ್ಲಿಸಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ವಾದ ಮಂಡಿಸಿದ ಸಿಎಂ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ,ರಾಜ್ಯಪಾಲರು ಸರಿಯಾಗಿ ಪರಿಶೀಲನೆ ನಡೆಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ ಎಂದು ವಾದ ಮಂಡಿಸಿದರು.ಇನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಯವರ  ಪರವಾಗಿ ವಕೀಲ ತುಷಾರ್  ಮೆಹ್ತಾ ಅವರು ಮಂಡಿಸಿದರು.ಈ ವೇಳೆ ತುಷಾರ್ ಮೆಹ್ತಾ ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಬೇಕು ಎಂದು ಮನವಿ ಮಾಡಿದರು. ಆಗ ಮಧ್ಯ ಪ್ರವೇಶಿಸಿದ ಸಿಎಂ ಪರ ವಕೀಲರಾದ ಅಭಿಷೇಕ್ ಮನು ಸಿಂಗ್ವಿ, ನಾಳೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ಇದೆ. ಮಧ್ಯಂತರ ಆದೇಶ ಬೇಕಿರುವುದರಿಂದ ಇಂದೇ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು. ರಾಜ್ಯಪಾಲರ ಕಚೇರಿಗೆ ಅರ್ಜಿಯ ಪ್ರತಿ ನೀಡಲಾಗಿದೆ ನಿಜ. ಹಾಗಂದ ಮಾತ್ರಕ್ಕೆ ಅವರ ವಾದ ಕೇಳಬೇಕಿಲ್ಲ ಎಂದು ಸಿಎಂ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.

ಇನ್ನು ವಾದ ಮುಂದುವರಿಸಿದ ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಮುಡಾ ಫೈಲ್ ಬಗ್ಗೆ ಸಿಎಂ ನಿರ್ಧಾರ ತೆಗೆದುಕೊಂಡಿಲ್ಲ.ಹೊಸ ಬಿಎನ್‌ಎಸ್ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಲಾಗಿದೆ.ಶೋಕಾಸ್‌ನಲ್ಲಿ ದೂರುದಾರರ ದೂರಿನ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಸ್ನೇಹಪ್ರಿಯ ಕೃಷ್ಣ, ಪ್ರದೀಪ್ ದೂರಿನ ಪ್ರಸ್ತಾಪವಿಲ್ಲ ಎಂದರು. ಅಲ್ಲದೇ ಟಿ.ಜೆ.ಅಬ್ರಹಾಂ ದೂರಿಗೆ ಮಾತ್ರ ಶೋಕಾಸ್‌ ನೋಟಿಸ್‌ ನೀಡಲಾಗಿದೆ.ಸರ್ಕಾರದ ವಿರುದ್ಧ ರಾಜ್ಯಪಾಲರು ಅಂದೇ ತೀರ್ಮಾನ ಮಾಡಿದ್ದಾರೆ.ಬಾಕಿಯಿದ್ಧ 12 ದೂರುಗಳ ಬಗ್ಗೆ ಕ್ರಮ ಕೈಗೊಂಡಿಲ್ಲ. 2004ರಲ್ಲಿ ಸಿಎಂ ಬಾಮೈದನಿಗೆ ಮಾರಾಟವಾಗಿದೆ.2005ರಲ್ಲಿ ಕೃಷಿ ಜಮೀನಾಗಿ ಪರಿವರ್ತಿಸಲಾಗಿದೆ. 2010ರಂದು ಸಿಎಂ ಪತ್ನಿಗೆ ಸಹೋದರ ದಾನಪತ್ರ ನೀಡಿದ್ದಾರೆ ಎಂದ್ರು.

ಇನ್ನು ರಾಜ್ಯಪಾಲರ ಪರ ತುಷಾರ್ ಮೆಪ್ತಾ ವಾದ ಮಾಡುತ್ತಾ ಎಂ.ಪಿ. ತೀರ್ಪು ಈ ಕೇಸಿಗೆ ನೇರವಾಗಿ ಹೊಂದುತ್ತದೆ.ಕ್ಯಾಬಿನೆಟ್ ನಿರ್ಣಯದ ಉದ್ದೇಶ ಸಿಎಂ ರಕ್ಷಿಸುವುದು.ರಾಜ್ಯಪಾಲರಿಗೆ ಸ್ವತಂತ್ರ ಅಧಿಕಾರವಿದೆ.ಐವರು ಪೀಠ ರಾಜ್ಯಪಾಲರ ಪರ ತೀರ್ಪು ನೀಡಿದೆ.ಕಾರಣ ನೀಡಿಯೇ ರಾಜ್ಯಪಾಲರು ತೀರ್ಮಾನಿಸಿದ್ದಾರೆ.ಎಂ.ಪಿ. ತೀರ್ಪು ಈ ಕೇಸಿಗೆ ನೇರವಾಗಿ ಹೊಂದುತ್ತದೆ.ಹೀಗಾಗಿ ಯಾವುದೇ ಮಧ್ಯಂತರ ತಡೆ ನೀಡಬಾರದು ರಾಜ್ಯಪಾಲರ ಆದೇಶಕ್ಕೆ ಯಾವುದೇ ತಡೆಯಾಜ್ಞೆ ನೀಡಬಾರದು.ರಾಜ್ಯಪಾಲರ ಆದೇಶಕ್ಕೆ ಯಾವುದೇ ತಡೆಯಾಜ್ಞೆ ನೀಡಬಾರದು.ಎಲ್ಲಾ ಕಾನೂನಿನ ಪಾಂಡಿತ್ಯ ಇರುವ ಉತ್ತರ ನೀಡಲಾಗಿದೆ.ಹೀಗಾಗಿ ಯಾವುದೇ ಮಧ್ಯಂತರ ತಡೆ ನೀಡಬಾರದು.ರಾಜ್ಯಪಾಲರ ಆದೇಶಕ್ಕೆ ಯಾವುದೇ ತಡೆಯಾಜ್ಞೆ ನೀಡಬಾರದು ಎಂದರು.