ಮನೆ Latest News ಕಿತ್ತೂರು ವಿಜಯ ಜ್ಯೋತಿ ಯಾತ್ರೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಕಿತ್ತೂರು ವಿಜಯ ಜ್ಯೋತಿ ಯಾತ್ರೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

0

ಬೆಂಗಳೂರು; ಕಿತ್ತೂರು ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗ ಚಾಲನೆ ಇಂದು ಚಾಲನೆ ನೀಡಿದ್ರು. ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಹೆಚ್ ಕೆ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.

ಇನ್ನು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅ.23, 24 ಮತ್ತು 25 ಕಿತ್ತೂರಿನಲ್ಲಿ‌ ಕಿತ್ತೂರು ಉತ್ಸವ ನಡೆಯಲಿದೆ.ಅದರ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಯುದ್ಧವಾಗಿ 200 ವರ್ಷಗಳಾಗಿದೆ. ಹೀಗಾಗಿ ವಿಜಯೇತ್ಸವ ಆಚರಣೆ ಮಾಡಲಾಗುತ್ತಿದೆ.ಇಂದಿನಿಂದ ಎಲ್ಲಾ ಜಿಲ್ಲೆಗಳಲ್ಲಿ ಕಿತ್ತೂರು ವಿಜಯ ಜ್ಯೋತಿ ಪ್ರವಾಸ ಮಾಡಿ ಕಿತ್ತೂರು ತಲುಪಲಿದೆ ಎಂದರು.

ನಾವು 23,24 ಮತ್ತು 25ರಂದು ಕಿತ್ತೂರಿನಲ್ಲಿ ವಿಜಯೋತ್ಸವ ಮಾಡುತ್ತೇವೆ.ಕಿತ್ತೂರು ರಾಣಿ ಚೆನ್ನಮ್ಮನವರು ನಮಗೆಲ್ಲ ಸ್ವಾಭಿಮಾನದ ಸಂಕೇತ ಎಂದರು.ಅವರು ಬ್ರಿಟಿಷರು ವಿಧಿಸಿದ ತೆರಿಗೆ ವಿರೋಧ ಮಾಡಿ, ದತ್ತು ಮಕ್ಕಳಿಗೆ ಹಕ್ಕಿಲ್ಲ ವಿರೋಧ ಮಾಡಿ, ಬ್ರಿಟಿಷರಿಗೆ ತೆರಿಗೆ ಕೊಡಲ್ಲ‌ ಅಂತ ನೇರವಾಗಿ ಹೇಳಿದ ದಿಟ್ಟ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ.ಸಂಗೊಳ್ಳಿ ರಾಯಣ್ಣ ಸಹ ಇವರ ಸೈನ್ಯದಲ್ಲೇ ಇದ್ದರು.ಮೊದಲನೇ ಯುದ್ಧದಲ್ಲಿ‌ ಚೆನ್ನಮ್ಮಗೆ ಜಯ ಆಗುತ್ತೆ.ಎರಡನೇ ಯುದ್ಧದಲ್ಲಿ‌ ಬ್ರಿಟಿಷರು ಹೆಚ್ಚು ಸೈನ್ಯದಿಂದ ಬಂದು ಕಿತ್ತೂರು ಆಕ್ರಮಿಸುವ ಕೆಲಸ ಆಗುತ್ತೆ, ಚೆನ್ನಮ್ಮ‌ ಸೆರೆಯಾಗುತ್ತಾರೆ.ರಾಣಿ ಚನ್ನಮ್ಮ, ರಾಯಣ್ಣರಿಂದ ದೇಶ ನಾಡಿನ ಪ್ರೇಮ ಮತ್ತು ಸ್ವಾಭಿಮಾನವನ್ನ ಪಡೆಯಬೇಕು .ದೇಶದ ಎಲ್ಲ‌ ರಾಣಿಯರಲ್ಲಿ ಕಿತ್ತೂರು ರಾಣಿ ಮುಂಚೂಣಿಯಲ್ಲಿರುತ್ತಾರೆ.ಕಿತ್ತೂರು ಉತ್ಸ ಕಿತ್ತೂರಿನಲ್ಲಿ ಆಚರಣೆ ಮಾಡಲಾಗುತ್ತಿದೆ.ರಾಜ್ಯ ಸರ್ಕಾರ ಅಭಿವೃದ್ಧಿ, ಕಾರ್ಯಕ್ರಮಕ್ಕೆ ಎಲ್ಲ ನೆರವು ನೀಡ್ತಿದ್ದೀವಿ ಎಂದರು,

ಇನ್ನು ಇದೇ ವೇಳೆ ಕಿತ್ತೂರು ಉತ್ಸವದ ಬ್ಯಾನರ್, ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ಕಿತ್ತೂರು ಉತ್ಸವ ಜ್ಯೋತಿ ಬೆಳಗುವ ವೇಳೆ ಸಿಎಂ ಸಿದ್ದರಾಮಯ್ಯ ಬಟ್ಟೆಗೆ ಜ್ಯೋತಿ ಬೆಳಗುವ ವೇಳೆ ಬೆಂಕಿ ಸ್ಪರ್ಶವಾಗಿದೆ.ಉತ್ಸವಕ್ಕೆ ಹಸಿರು ನಿಶಾನೆ ತೋರುವ ವೇಳೆಯಲ್ಲಿ ಬೆಂಕಿ ಸ್ಪರ್ಶವಾಗಿದೆ. ಗನ್ ಮ್ಯಾನ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.