ಮನೆ Latest News ಶಕ್ತಿ ಯೋಜನೆಯಡಿ ಬರೋಬ್ಬರಿ 500 ಕೋಟಿ ಮಹಿಳೆಯರ ಪ್ರಯಾಣ: ಮಹಿಳಾ ಪ್ರಯಾಣಿಕರಿಗೆ ಟಿಕೆಟ್ ವಿತರಿಸಿದ ಸಿಎಂ...

ಶಕ್ತಿ ಯೋಜನೆಯಡಿ ಬರೋಬ್ಬರಿ 500 ಕೋಟಿ ಮಹಿಳೆಯರ ಪ್ರಯಾಣ: ಮಹಿಳಾ ಪ್ರಯಾಣಿಕರಿಗೆ ಟಿಕೆಟ್ ವಿತರಿಸಿದ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು ; ಶಕ್ತಿ ಯೋಜನೆಯಡಿ ಬರೋಬ್ಬರಿ 500 ಕೋಟಿ ಮಹಿಳೆಯರಿ ಪ್ರಯಾಣ ಮಾಡಿದ್ದು ಈ ಹಿನ್ನೆಲೆ  ಮಹಿಳಾ ಪ್ರಯಾಣಿಕರಿಗೆ ವಿಂಡ್ಸರ್ ವೃತ್ತದ ಬ್ರಿಡ್ಜ್ ಬಳಿ ಸಿಎಂ ಸಿದ್ದರಾಮಯ್ಯ ಟಿಕೆಟ್ ವಿತರಿಸಿದರು. ಮಹಿಳಾ ಪ್ರಯಾಣಿಕರಿಗೆ ಇಳಕಲ್ ಸೀರೆ, ಸಿಹಿ ಹಾಗೂ ಹೂಗುಚ್ಚ ನೀಡಿದರು. ಸಿಎಂ ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವರು ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ 5 ಗ್ಯಾರೆಂಟಿ ಯೋಜನೆಗಳನ್ನ 2023ರ ವಿಧಾನಸಭೆ ಚುನಾವಣೆಯಲ್ಲಿ‌ ಘೋಷಣೆ ಮಾಡಿದ್ವಿ. ಕ್ಯಾಬಿನೆಟ್ ಮೀಟಿಂಗ್ ಮಾಡಿ ಕೂಡಲೇ ಜಾರಿಗೆ ತರುವುದಾಗಿ ತೀರ್ಮಾನ ಮಾಡಿದ್ವಿ. ಮೇ 20,2023ರಲ್ಲಿ ನಾವು ಅಧಿಕಾರಕ್ಕೆ ಬಂದಿದ್ವಿ. ಜೂನ್ 11,2023ರಂದು ಶಕ್ತಿ ಯೋಜನೆ ಕೊಟ್ವಿ. ಅಂದಿನಿಂದ ಎಲ್ಲಾ ಹೆಣ್ಣು ಮಕ್ಕಳು ಉಚಿತವಾಗಿ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾರೆ. 500 ಕೋಟಿ ಟ್ರಿಪ್ ಗಳನ್ನ ಹೆಣ್ಣು ಮಕ್ಕಳು ಮಾಡಿದ್ದಾರೆ. ರಾಮಲಿಂಗಾರೆಡ್ಡಿ ಮುಂದಾಳತ್ವದಲ್ಲಿ ನಡೆಯುತ್ತಿದೆ. ಇಂದು ಸಾಂಕೇತಿಕವಾಗಿ ಟಿಕೆಟ್ ಕೊಟ್ಟಿದ್ದೇವೆ ಎಂದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ ಶಕ್ತಿ ಯೋಜನೆ ಆರಂಭಿಸಿ ಎರಡು ವರ್ಷ ಒಂದು ತಿಂಗಳಾಯ್ತು.ಸರ್ಕಾರ ಬಂದ 21 ದಿನದಲ್ಲೇ ಶಕ್ತಿ ಯೋಜನೆ ಪ್ರಾರಂಭಿಸಿದ್ವಿ.ಆಗ ಅನೇಕ ಸಮಸ್ಯೆಗಳಿದ್ವು, ಅದನ್ನೆಲ್ಲ ನಿವಾರಿಸಿಕೊಂಡು 500 ಕೋಟಿ ಮಹಿಳೆಯರ ಪ್ರಯಾಣ ಆಗಿದೆ. ಹೀಗಾಗಿ ಇಂದು ಸಾಂಕೇತಿಕವಾಗಿ ಸಿಎಂ ಮಹಿಳೆಯರಿಗೆ ಟಿಕೆಟ್ ಕೊಟ್ಟಿದ್ದಾರೆ. ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ ನಷ್ಟದಲ್ಲಿರುವ ವಿಚಾರದ ಬಗ್ಗೆ ಶಕ್ತಿ ಯೋಜನೆಯಿಂದ ನಷ್ಟ ಆಗಲ್ಲ. ಟೀಕೆ ಮಾಡುವವರು ಯೋಜನೆ ಮಾಡ್ಬೇಕು.ಬಿಎಂಟಿಸಿ ಮಾತ್ರವ್ಲದೆ ಕರ್ನಾಟಕ ಹಾಗೂ ಭಾರತದಲ್ಲಿರುವ ಸಾರಿಗೆ ಇರಬಹುದು.ಪ್ರಪಂಚದಲ್ಲಿನ ಯಾವುದೇ ಸಾರಿಗೆ ಇಲಾಖೆ ಲಾಭದ ಉದ್ದೇಶದಿಂದ ಬಸ್ ಸಂಚರಿಸುವುದಿಲ್ಲ. ಸಾರ್ವಜನಿಕರ ಅನುಕೂಲಕ್ಕೆ ಬಸ್ ಸಂಚರಿಸುತ್ತೆ. ನಮಗೆ 40% ನಷ್ಟ ಆದ್ರೂ ಬಸ್ ಸಂಚಾರ ಮಾಡ್ತೀವಿ. ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಅಲ್ವಾ .25% ನೋ ಪ್ರಾಫಿಟ್, ನೋ ಲಾಸ್ ಇರುತ್ತೆ. 25% ಲಾಭ ಇರುತ್ತೆ, ಇದಕ್ಕೆ ದೇಶದ ಎಲ್ಲಾ ಸರ್ಕಾರಗಳು‌ ಸಾರ್ವಜನಿಕ ಸಾರಿಗೆ ಸಪೋರ್ಟ್ ಮಾಡ್ತಾರೆ ಎಂದರು.

ಗ್ಯಾರೆಂಟಿ ಯೋಜನೆಗಳು ಮುಂದುವರಿಯುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ನಿಮಗ್ಯಾಕೆ ಡೌಟ್? ಈ ಕಾರ್ಯಕ್ರಮಗಳು ಮುಂದುವರಿಯುತ್ತೆ. ಬಿಜೆಪಿಯವರಿಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಅವರು ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ ಮಾಡ್ತಿದ್ದಾರೆ ಅಷ್ಟೆ ಎಂದರು. ಸಾರಿಗೆ ನೌಕರರ ಬೇಡಿಕೆ ಈಡೇರಿಸುವ ವಿಚಾರದ ಬಗ್ಗೆ ಮಾತನಾಡಿದ ಅವರು ಸಿಎಂ ಹಣಕಾಸು ಸಚಿವರು, ಅವರ ನೇತೃತ್ವದಲ್ಲಿ ತೀರ್ಮಾನ ಆಗ್ಬೇಕು. ಸಿಎಂ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಸಮಸ್ಯೆ ಬಗೆಹರಿಯಬೇಕು, ಇವತ್ತಲ್ಲ ನಾಳೆ ಆಗೇ ಆಗುತ್ತೆ ಎಂದು ತಿಳಿಸಿದರು.