ಮನೆ Latest News ಮುಡಾ ಸೈಟ್ ಅಕ್ರಮ ಹಂಚಿಕೆ ಪ್ರಕರಣ; ವಿಚಾರಣೆಗೆ ಹಾಜರಾದ ಸಿಎಂ ಸಿದ್ದರಾಮಯ್ಯ

ಮುಡಾ ಸೈಟ್ ಅಕ್ರಮ ಹಂಚಿಕೆ ಪ್ರಕರಣ; ವಿಚಾರಣೆಗೆ ಹಾಜರಾದ ಸಿಎಂ ಸಿದ್ದರಾಮಯ್ಯ

0

ಮೈಸೂರು; ಮುಡಾ ಸೈಟು ಅಕ್ರಮ ಹಂಚಿಕೆ ಹಗರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಅಧಿಕಾರಿಗಳು ಇಂದು ವಿಚಾರಣೆಗೆ ಬರುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದರು ಅದರಂತೆ ಸಿಎಂ ಸಿದ್ದರಾಮಯ್ಯ ಅವರು ಇಂದು  ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ್ರು.

ಬೆಳಗ್ಗೆ 10 ಗಂಟೆಗೆ ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಸುಮಾರು 12 ಗಂಟೆಯವರೆಗೆ ಅಂದರೆ ಸುಮಾರು 2 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ರು. ಸಿದ್ದರಾಮಯ್ಯ ಅವರು ತಮ್ಮ 40 ವರ್ಷದ ರಾಜಕೀಯ ಜೀವನಲ್ಲಿ ಇದೇ ಮೊದಲ ಬಾರಿಗೆ  ಪ್ರಕರಣವೊಂದರ ಆರೋಪಿಯಾಗಿ ವಿಚಾರಣೆ ಎದುರಿಸಿದ್ರು.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದ ಎ2 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಎ3 ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ, ಹಾಗೇನೆ ಸೈಟು ಮಾರಾಟ ಮಾಡಿದ ದೇವರಾಜು ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಇನ್ನು ವಿಚಾರಣೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮೈಸೂರು:ಸೈಟ್ ವಿಚಾರ ಎಲ್ಲವೂ ಕಾನೂನು ಪ್ರಕಾರವೇ ನಡೆದಿದೆ. ಬಿಜೆಪಿ ಜೆಡಿಎಸ್‌ ಅವರು ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ನಾನು ಲೋಕಾಯುಕ್ತ ಅವರು ಕೇಳಿದ  ಎಲ್ಲಾ ಪ್ರಶ್ನೆಗಳಿಗೆ ಉತ್ತರ  ಕೊಟ್ಟಿದ್ದೇನೆ. ಅವರು ಎಲ್ಲಾ ರೆಕಾರ್ಡ್ ಮಾಡಿಕೊಂಡಿದ್ದಾರೆ.ಲೋಕಾಯುಕ್ತ ಅಧಿಕಾರಿಗಳು ಮುಂದಿನ ತನಿಖೆ ಮಾಡ್ತಾರೆ ಎಂದರು.

ನಾವು ಸೈಟ್ ವಾಪಸ್ಸು ನೀಡಿರೋದು ತಪ್ಪು ಮಾಡಿದ್ದೇವೆ ಅಂತಾ ಅಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ರು ಅಂತಾ ನನ್ನ ಹೆಂಡತಿ ತೀರ್ಮಾನ ತಗೊಂಡಿರೋದು. ಈ ಕೇಸ್‌ಗಳನ್ನು ನಮ್ಮ ಬಳಿ ಇರುವ ಲಾಯರ್‌ಗಳು ಫೇಸ್ ಮಾಡ್ತಾರೆ. ಸುಳ್ಳು ಆರೋಪಗಳು ಬಂದಾಗ ವಿಚಾರಣೆಗೆ ಹಾಜರಾಗಬೇಕಾಗಿದೆ.ನನ್ನ ಬಳಿ ಯಾವುದೇ ಡಾಕ್ಯುಮೆಂಟ್ ಇಲ್ಲ. ಇದು ನನಗೆ ಸಂಬಂಧವೇ ಇಲ್ಲ.ಕೋರ್ಟ್‌ನಲ್ಲಿ ತೀರ್ಮಾನ ಆಗುವವರೆಗೆ ಅದು ಆರೋಪ ಅಷ್ಟೇ.ಇದು ನನಗೆ ಕಪ್ಪು ಮಸಿ ಅಲ್ಲ, ಆರೋಪ ಅಷ್ಟೇ. ಲೋಕಾಯುಕ್ತ ಅವರಿಗೆ ನಾನು ಎಲ್ಲಾ ಉತ್ತರ ಕೊಟ್ಟಿದ್ದೇನೆ, ಕೊಡ್ತೀನಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡುವುದಕ್ಕೆ ಲೋಕಾಯುಕ್ತ ಅಧಿಕಾರಿ ಎಷ್ಟು ಧೈರ್ಯ ಮಾಡಬಹುದು; ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ಬೆಂಗಳೂರು; ಮುಡಾ ಅಕ್ರಮ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಲೋಕಾಯುಕ್ತದಲ್ಲಿ ವಿಚಾರಣೆಗೆ ಹಾಜರಾದ್ರು. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಪ್ರಶ್ನೆ ಮಾಡುವುದಕ್ಕೆ ಲೋಕಾಯುಕ್ತ ಅಧಿಕಾರಿಗೆ ಎಷ್ಟು ಧೈರ್ಯ ಮಾಡಬಹುದು.ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು. ೧೦ ಗಂಟೆಗೆ ಸಿದ್ದರಾಮಯ್ಯ ತನಿಖೆಗೆ ಹೋಗಿದ್ದಾರೆ. ಎರಡು ತಾಸಿಗೆ ವಿಚಾರಣೆ ಮುಗಿದು ಹೋಗುತ್ತದೆ. ಇದು ಪೂರ್ವ ನಿರ್ಧರಿತ. ಈ ವಿಚಾರಣೆಯಿಂದ ಸತ್ಯ ಹೊರಗೆ ಬರುವುದು ಸಾಧ್ಯವೇ ಇಲ್ಲ ಎಂದಿದ್ದಾರೆ.

ಇವರೇ ಸ್ಕ್ರಿಪ್ಟ್ ಬರೆದುಕೊಟ್ಟು ಇವರೇ ಉತ್ತರ ಕೊಟ್ಟು ಹೀಗೇ ಕೇಳಬೇಕು ಎಂದು ಇವರೇ ಹೇಳಿಕೊಟ್ಟಿದ್ದಾರೆ.ಇಷ್ಟೇ ಪ್ರಶ್ನೆ ಕೇಳ್ತಾರೆ, ಇಷ್ಟೇ ಸಮಯಕ್ಕೆ ಮುಗಿಯುತ್ತದೆ ಎಂಬುದು ಮೊದಲೇ ಸಿದ್ದರಾಮಯ್ಯ ಗೆ ಗೊತ್ತಾ? ಇದೆಲ್ಲ ಸ್ಟೇಜ್ ಮ್ಯಾನೇಜ್ಡ್ ವಿಚಾರಣೆ ಎಂದಿದ್ದಾರೆ. ನಿಮ್ಮನ್ನು ಕಂಡು ಲೋಕಾ ಅಧಿಕಾರಿಗಳಿಗೆ ಭಯ ಬಂದಿರಬೇಕು. ಎಲ್ಲರ ಬಗ್ಗೆಯೂ ಮಾತನಾಡುವ ಸಿಎಂ ನೀವು ಮಾತ್ರ ಹೇಗೆ ಅಧಿಕಾರದಲ್ಲಿ ಇರ್ತೀರಿ? ನಾಗೇಂದ್ರನ್ನ ಜೈಲಿಗೂ ಕಳಿಸಿದ್ರಿ, ರಾಜೀನಾಮೆ ಪಡೆದು ಕೆಳಗೆ ಇಳಿಸಿದ್ರಿ.ಲೋಕಾ ಅಧಿಕಾರಿಗಳು ನಿಮ್ಮನ್ನು ಪ್ರಶ್ನೆ ಮಾಡುವುದಕ್ಕೆ ಸಾಧ್ಯ ಇಲ್ಲ. ವಿಚಾರಣೆಗೆ ಬರಲಿಲ್ಲ ಅಂತ ಅನಿಸಿಕೊಳ್ಳಬಾರದು ಅಂತ ಹೋಗಿದ್ದಾರೆ. ನಿಮ್ಮ ಟಿಪಿ ನೋಡಿದರೆ ಗೊತ್ತಾಗುತ್ತದೆ ಇದು ಪೂರ್ವನಿರ್ಧರಿತ. ಕೋರ್ಟ್ ಗೂ ನಾವು ಹೋಗುತ್ತೇವೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.