ಚಿಕ್ಕಬಳ್ಳಾಪುರ; 5 ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಭಾರತೀಯ ಜನತಾ ಪಕ್ಷದವರು ಹಗಲುಗನಸು ಕಾಣುತ್ತಿದ್ದಾರೆ. ಬಿಜೆಪಿಯವರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಬಿಜೆಪಿಯವರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ನಮ್ಮ ಸರ್ಕಾರ ಬಂಡೆ ರೀತಿ 5 ವರ್ಷಗಳ ಕಾಲ ಇರಲಿದೆ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಐ ಹ್ಯಾವ್ ನೋ ಅದರ್ ಆಪ್ಷನ್. ನಾನು ಸಪೋರ್ಟ್ ಮಾಡಲೇಬೇಕು, ಸಪೋರ್ಟ್ ಮಾಡ್ತೀನಿ. ನಾನು ಸಿಎಂ ಬೆನ್ನಿಗೆ ನಿಂತು ಸಹಕಾರ ಕೊಡ್ತೇನೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ಲಕ್ಷಾಂತರ ಕಾರ್ಯಕರ್ತರು ಪಕ್ಷವನ್ನ ಬೆಂಬಲಿಸಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧವಾಗಿರ್ತೇನೆ ಎಂದು ಅವರು ಹೇಳಿದ್ದಾರೆ
ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಮಹಾದೇವಪ್ಪ ಹೌದು ಅವರೆ ಸಿಎಂ ಆಗಿ ಇರ್ತಾರೆ. ನಿಮಗ್ಯಾಕೆ ಅನುಮಾನ. ಅವರೆ ಸ್ಪಷ್ಟನೆ ನೀಡಿದ ಮೇಲೆ ಮುಗಿತಲ್ಲ ಎಂದು ಹೇಳಿದ್ದಾರೆ.