ಬೆಂಗಳೂರು; ಮೂರು ಕ್ಷೇತ್ರದ ಉಪಚುನಾವಣೆ ಯಲ್ಲಿ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಮುಖದಲ್ಲಿ ಖುಷಿ ಎದ್ದು ಕಾಣ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಖುಷಿ ಅಲ್ಲ. ರೆಸ್ಟ್ ತೆಗೆದುಕೊಳ್ಳುತ್ತಿದ್ದೆ ಎಂದಿದ್ದಾರೆ.
ಮೂರು ಕ್ಷೇತ್ರದ ಉಪಚುನಾವಣೆ ಯಲ್ಲಿ ನನಗೆ ಇದ್ದ ಮಾಹಿತಿ ಪ್ರಕಾರ ಮೂರು ಚುನಾವಣೆಯಲ್ಲಿ ಗೆಲ್ಲುತ್ತೇವೆ ಅಂತಾ. ಆ ನಿರೀಕ್ಷೆಯಲ್ಲಿ ಮೂರು ಉಪಚುನಾವಣೆ ಗೆದ್ದಿದ್ದೇವೆ. ಪಠಾಣ್ ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ೧೩ ಸಾವಿಕ್ಕೂ ಹೆಚ್ಚು ಮತ, ಯೋಗೇಶ್ವರ್ ಅವರು ೨೫ ಸಾವಿರಕ್ಮೂ ಹೆಚ್ಚು ಮತದಿಂದ ಗೆದ್ದಿದ್ದಾರೆ. ಸಂಡೂರಲ್ಲಿ ತುಕಾರಾಂ ಪತ್ನಿ ಅನ್ನಪೂರ್ಣ ಅವರು ೯೬೦೦ ಚಿಲ್ಲರೆ ಮತದಿಂದ ಗೆದ್ದಿದ್ದಾರೆ. ಬಿಜೆಪಿಯವರು ಮೂರು ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಎಲ್ಲಾ ಕಡೆ ಹೇಳುತ್ತಿದ್ದರು. ಅವರು ನಮ್ಮ ಸರ್ಕಾರ ಬಂದ್ಮೇಲೆ ನಮ್ಮ ಮೇಲೆ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿದ್ದರು. ನಮ್ಮ ಕಾರ್ಯಕ್ರಮ ದ ಬಗ್ಗೆ ಅಪಪ್ರಚಾರ ಮಾಡಿದರು. ಸುಳ್ಳು ಆರೋಪಗಳು ವಾಲ್ಮೀಕಿಯಲ್ಲಿ ಭ್ರಷ್ಟಾಚಾರ ಆಗಿದೆ. ಅದಕ್ಕೆ ಸಿಎಂ ಕಾರಣ, ಮುಡಾದಲ್ಲೂ ಸಿಎಂ ಕಾರಣ ಅಂತೇಳಿದರು. ಸಿದ್ದರಾಮಯ್ಯ ಅವರದ್ದು ಪಾತ್ರ ಇಲ್ಲದಿದ್ದರೂ ಇದೆ ಅಂತೇಳಿದರು.
ಗ್ಯಾರಂಟಿ ಯೋಜನೆ ಬಗ್ಗೆ ಏನ್ ಅಪಪ್ರಚಾರ ಮಾಡಿದರು?. ಮೋದಿ ಅವರು ಏನ್ ಹೇಳಿದರು. ಇದು ರಾಂಗ್ ಫೈನಾನ್ಸಿಯಲ್ ಪ್ರೋಗ್ರಾಂ ಅಂತ ಹೇಳಿದರು. ಜಾರ್ಖಂಡ್, ಮಹಾರಾಷ್ಟ್ರದಲ್ಲೂ ಜಾಹೀರಾತು ಕೊಟ್ಟರು. ಇಲ್ಲಿ ಐದು ಗ್ಯಾರಂಟಿ ಜಾರಿ ಮಾಡಿಲ್ಲ ಎಂದು ಜಾಹೀರಾತು ಕೊಟ್ಟಿದ್ದಾರೆ. ೭೦೦ ಕೋಟಿ ಅಬಕಾರಿ ಇಲಾಖೆಯಲ್ಲಿ ಖರ್ಚು ಮಾಡಿ ಮಹಾರಾಷ್ಟ್ರ ಚುನಾವಣೆ ಕೊಟ್ಟಿದ್ದಾರೆ ಎಂದುಹೇಳಿದ್ದಾರೆ. ಇದು ಸಾಬೀತು ಮಾಡಿದರೆ ರಾಜಕೀಯ ದಿಂದ ಹೊರಗೆ ಹೋಗುತ್ತೇನೆ. ಸತ್ಯ ಹೇಳಲಿ,ಆದ್ರೆ ದ್ವೇಷದ ರಾಜಕಾರಣ ಮಾಡಬಾರದು. ಅಪಪ್ರಚಾರ ಸುಳ್ಳು ಆರೋಪ ಮಾಡಬಾರದು. ಅದಕ್ಕೆಲ್ಲಾ ಇವತ್ತು ಮತ್ತು ೧೩ ರಂದು ಜನ ಉತ್ತರ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಜನರ ತೀರ್ಪನ್ನು ಸ್ವಾಗತಿಸುತ್ತೇವೆ; ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಹೇಳಿಕೆ
ಬೆಂಗಳೂರು; ಉಪಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲು ಉಂಟಾಗಿದ್ದು ಈ ಬಗ್ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಪ್ರತಿಕ್ರಿಯಿಸಿದ್ದಾರೆ. ಜನರ ತೀರ್ಪನ್ನು ಸ್ವಾಗತಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಅಭೂತಪೂರ್ವ ಬೆಂಬಲ ಕೊಟ್ಟಿದ್ದಾರೆ. ಜಾರ್ಖಂಡ್ ನಲ್ಲಿಯೂ ಬಹುಮತದತ್ತ ಸಾಗುವ ವಿಶ್ವಾಸ ಇದೆ. ರಾಜ್ಯದಲ್ಲಿ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಶ್ರಮ ವಹಿಸಿದ್ದಾರೆ. ಸರ್ಕಾರದಿಂದ ಅಧಿಕಾರ, ಹಣ ದುರುಪಯೋಗ ಆಗಿದೆ. ತುಷ್ಟೀಕರಣದ ಪರಾಕಾಷ್ಠೆ ತಲುಪಿ ಒಂದು ವರ್ಗದ ಮತ ಸಂಪೂರ್ಣ ಅವರಿಗೆ ಸಿಕ್ಕಿದೆ. ಗಣೇಶ ಚರ್ತುರ್ಥಿ ವೇಳೆಯೂ ಸರ್ಕಾರ ಅದೇ ರೀತಿ ನಡೆದುಕೊಂಡಿದೆ. ಒಂದು ವರ್ಗದ ತುಷ್ಟೀಕರಣದಿಂದ ಮತಗಳ ಕ್ರೋಢೀಕರಣದಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ನಾವು ಜನರಿಗೆ ಅರಿವು ಮೂಡಿಸಲು ಸಾಧ್ಯವಾಗಿಲ್ಲ. 11-15% ಒಂದು ವರ್ಗ ಕಾಂಗ್ರೆಸ್ ಗೆ ಮತ ಹಾಕಿದೆ. ಅದಾಗಿಯೂ ಅವರು ಗೆದ್ದಿದ್ದು 2-3% ಓಟ್ ನಲ್ಲಿ .ಪ್ರತಿ ಗ್ರಾಮ ಪಂಚಾಯತ್ ಗೆ ಮಿನಿಸ್ಟರ್ ಗೆ ಟಾರ್ಗೆಟ್ ಕೊಟ್ಟಿದ್ದರು. ಲೀಡ್ ರೀಚ್ ಆಗದಿದ್ದರೆ ಸಚಿವ ಸ್ಥಾನವೇ ಹೋಗುತ್ತದೆ ಎಂದಿದ್ದರು. ಆಡಳಿತ ಯಂತ್ರ ಸರ್ಕಾರದ ಪರವಾಗಿ ಕೆಲಸಕ್ಕೆ ಬಳಕೆ ಆಗಿದೆ. ಜನರಿಂದ ಕಿತ್ತು ಜನರಿಗೆ ಕೊಡುವ ಗ್ಯಾರಂಟಿ. ಮನೆಯಿಂದ 4 ಸಾವಿರ ಕಿತ್ತು 2 ಸಾವಿರ ಹಾಕಿದರು. ಇದೆಲ್ಲಾ ಬಿಜೆಪಿ ಸೋಲಿಗೆ ಕಾರಣ. ಸಂಡೂರಿನಲ್ಲಿ ಇದುವರೆಗೂ ಬಿಜೆಪಿ ಗೆದ್ದಿಲ್ಲ. ವಾಲ್ಮೀಕಿ ನಿಗಮದ ಅಕ್ರಮ ಜನರ ಮನಸ್ಸು ತಟ್ಟುತ್ತದೆ ಅಂದುಕೊಂಡಿದ್ದೆವು ಎಂದು ಅವರು ಹೇಳಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ ಉಪಚುನಾವಣೆಯಲ್ಲಿ ಜನರ ತೀರ್ಪಿಗೆ ತಲೆ ಬಾಗುತ್ತೇವೆ ಎಂದಿದ್ದಾರೆ. ಗೆಲ್ಲಲು ಕಾರಣವಿದ್ದಂತೆ ಸೋಲಿಗೂ ಕಾರಣವಿದೆ.. ಅಭ್ಯರ್ಥಿಯನ್ನು ಕೊನೆ ಗಳಿಗೆಯಲ್ಲಿ ತೀರ್ಮಾನ ಮಾಡಿದೆವು. ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಇಬ್ಬರೂ ಮಕ್ಕಳನ್ನ ನಿಲ್ಲಿಸಲ್ಲ ಎಂದಿದ್ದರು. ಅದೂ ಕೂಡಾ ಮೈನಸ್ ಪಾಯಿಂಟ್. ನಿಖಿಲ್ ಕುಮಾರಸ್ವಾಮಿಗೆ ಅದೃಷ್ಟವಿಲ್ಲ ಎನಿಸುತ್ತದೆ. ಅರ್ಜುನನ ಪಾತ್ರ ಮಾಡುತ್ತಾರೆ ಅಂತ ಅಂದುಕೊಂಡಿದ್ದೆವು. ಮತ್ತೆ ಜನ ಅವರಿಗೆ ಅಭಿಮನ್ಯುವಿನ ಪಾತ್ರ ಕೊಟ್ಟಿದಾರೆ. ಎರಡು ಬಾರಿ ಸೋತು ಈ ಬಾರಿ ಗೆಲ್ಲುತ್ತಾರೆ ಅಂದ್ಕೊಂಡಿದ್ದೆವು. ಕಾಂಗ್ರೆಸ್ ಹಣದ ಹೊಳೆ ಹರಿಸಿದೆ. ಅಭಿವೃದ್ದಿ ಕಾರ್ಯಕ್ಕೆ ಸಮಸ್ಯೆ ಆಗುತ್ತದೆ ಎಂದು ಜನ ಮತ ಹಾಕಿದ್ದಾರೆ. ತಪ್ಪನ್ನು ಸರಿಪಡಿಸಿಕೊಳ್ಳುತ್ತೇವೆ. ಪಕ್ಷವನ್ನು ಇನ್ನಷ್ಟು ಸಧೃಡ ಮಾಡುತ್ತೇವೆ. ಈ ಗೆಲುವಿನಿಂದ ಕಾಂಗ್ರೆಸ್ ಗೆ ಕಿರೀಟ ಬಂದಿಲ್ಲ. ಹಣ, ಅಧಿಕಾರ ದುರ್ಬಳಕೆ ಮಾಡಿ ಗೆದ್ದಿದ್ದಾರೆ. ಇದರಲ್ಲಿ ಕಾಂಗ್ರೆಸ್ ಚಮತ್ಕಾರ ಏನಿಲ್ಲ. ಚುನಾವಣಾ ತಯಾರಿಯನ್ನು ನಾವು ಇನ್ನಷ್ಟು ಬೇಗ ಮಾಡಬೇಕಿತ್ತು. ಎಲ್ಲವನ್ನೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಸೋಲನ್ನೇ ಗೆಲುವಾಗಿಸುವ ಶಕ್ತಿ ನಮಗಿದೆ. ಕಾಂಗ್ರೆಸ್ ನ ಪಾಪದ ಕೊಡ ತುಂಬಿಲ್ಲ.ಪಾಪದ ಕೊಡ ತುಂಬಲಿ, ಅವನತಿಗೆ ಹೋಗುತ್ತದೆ.ಇದು ಸಿದ್ದರಾಮಯ್ಯ ಗೆಲುವೂ ಅಲ್ಲ, ಡಿ.ಕೆ. ಶಿವಕುಮಾರ್ ಗೆಲುವೂ ಅಲ್ಲ.ಕಾಂಚಾಣದ ಗೆಲುವು ಇದು ಎಂದಿದ್ದಾರೆ.