ಮನೆ Latest News ರಾಜ್ಯ ಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ ಹಾಗೂ ಸುವರ್ಣೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಭಾಗಿ

ರಾಜ್ಯ ಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ ಹಾಗೂ ಸುವರ್ಣೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಭಾಗಿ

0

ಬೆಂಗಳೂರು; ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಬೆಂಗಳೂರು ಅರಮನೆ ಮೈದಾನದ ತ್ರಿಪುರವಾಸಿಯಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ ಹಾಗೂ ಸುವರ್ಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ  ಸಿಎಂ ಸಿದ್ದರಾಮಯ್ಯ , ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಘದ ಪದಾಧಿಕಾರಿಗಳು ಸೇರಿ ಹಲವರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ನೀವು ದೇಶದ ಭವಿಷ್ಯ ರೂಪಿಸುವವರು. ಸ್ವಾತಂತ್ರ ಬಂದಾಗ ಶಿಕ್ಷಣ 12-15% ಇತ್ತು. ಈಗ ಸುಮಾರು 24% ತಲುಪಿದೆ. ಶಿಕ್ಷಣ ಕ್ಷೇತ್ರ ಅವಲೋಕಿಸಿದಾಗ ಗುಣಮಟ್ಟದ ಶಿಕ್ಷಣ ಸಿಕ್ಕಿದ್ಯಾ?. ಸಮಾಜದ ಸಮಸ್ಯೆಗೆ ಸ್ಪಂದಿಸುವ ಶಿಕ್ಷಣ ಸಿಕ್ಕಿದ್ಯಾ?. ನಿಮ್ಮ‌ ತಪ್ಪಲ್ಲ, ಸಮಾಜದ ಪರಿಸ್ಥಿತಿ ಹಾಗಿದೆ. ಜಾತಿ ವ್ಯವಸ್ಥೆಯಲ್ಲಿ ನಿರೀಕ್ಷೆಯಷ್ಟೂ ಬದಲಾವಣೆ ಆಗಿಲ್ಲ.ತರಗತಿಯಲ್ಲೇ ಭವಿಷ್ಯ ಕುಂಠಿತ ಆಗುವ ಕೆಲಸ ಆಗುತ್ತೆ ಎಂದರು.

ಆರ್ಟಿಕಲ್ 51/1 ನಲ್ಲಿ‌ ವೈಚಾರಿಕತೆಯ ಶಿಕ್ಷಣ ಸಿಗಬೇಕು .ಮೌಢ್ಯ, ಜಾತಿ ವ್ಯವಸ್ಥೆಯಿಂದ ಕೂಡಿರುವ ಸಮಾಜ,ಸಮಾಜ ಬದಲಾವಣೆ ಆಗದೆಯೇ ಅಸಮಾನತೆಯಿಂದ ಮುಖ್ಯ ವಾಹಿನಿಗೆ ಬರೋಕೆ ಸಾಧ್ಯವಿಲ್ಲ.ನಾವು ವೈವಿಧ್ಯಮಯ ಸಮಾಜಕ್ಕೆ ಕಾಲಿಡುತ್ತಿದ್ದೇವೆ.ಮೌಢ್ಯತೆ, ಅಸಮಾನತೆ ಸಮಾಜದಲ್ಲಿ ಇರುವಾಗ ಸಮಾನತೆಯ ಕಡೆಗೆ ಕೊಂಡೊಯ್ಯಬೇಕು. ಇದು‌ ಶಿಕ್ಷಕರಿಂದ ಮಾತ್ರ ಸಾಧ್ಯ.ಸಾಮಾನ್ಯರನ್ನ ಅಸಮಾನ್ಯರನ್ನಾಗಿ ಮಾಡುವ ಶಕ್ತಿ ಶಿಕ್ಷಕರಿಗಿದೆ. ಹುಟ್ಟಿನಿಂದ ಯಾರೂ ದಡ್ಡರಲ್ಲ.ಕೆಳ ವರ್ಗ, ಮೇಲ್ವರ್ಗ, ಬಡವರ್ಗದಿಂದಲೂ ಶಿಕ್ಷಕರು ಬಂದಿದ್ದಾರೆ. ಬುದ್ಧಿ, ಕರುಣೆ ಮತ್ತು ಕೌಶಲ್ಯದ ಬಗ್ಗೆ ತಿಳಿದುಕೊಳ್ಳಬೇಕು.ಆಗ ಮಾತ್ರ ನಾವು ವಿಕಸವಾಗಲು ಸಾಧ್ಯ. ಇದನ್ನ ನಾನಲ್ಲ, ಗಾಂಧೀಜಿ ಹೇಳಿದ್ದಾರೆ.ಶಿಕ್ಷಕರನ್ನ ನಾನು ಗೌರವದಿಂದ ಕಾಣ್ತೇನೆ ಎಂದು ತಿಳಿಸಿದರು.

ಮೌಢ್ಯವನ್ನ ನೀವೇ ಆಚರಿಸಬೇಡಿ. ನಿಮ್ಮ‌ ನಡವಳಿಕೆ ಮಕ್ಕಳ ಮೇಲೆ ದೊಡ್ಡ ಪ್ರಭಾವ ಬೀರುತ್ತೆ. ನಿಮ್ಮ ನಡವಳಿಕೆ ಶುದ್ದವಾಗಿರಬೇಕು .ಪ್ರಾಥಮಿಕ ಶಾಲಾ ಶಿಕ್ಷಕರ ನಡಳವಡಿಕೆಯನ್ನೇ ಮಕ್ಕಳ ಪಾಲಿಸ್ತಾರೆ. ಸಿಎಂ ಭಾಷಣದ ವೇಳೆ ಶಾಲಾ ಶಿಕ್ಷಕರು Ops ಜಾರಿಗೆ ಒತ್ತಾಯಿಸಿದ್ದಾರೆ. ನಿಮ್ಮ ಬೇಡಿಕೆ ಈಡೇರಿಕೆಗೆ ಮಾಡುವ ಕೆಲಸ ಮಾಡೋಣ.ನಿಮ್ಮ ಕರ್ತವ್ಯ, ನಿಮ್ಮ ಜವಾಬ್ದಾರಿ ನೀವು ನಿಭಾಯಿಸಿ ಎಂದು ಸಿಎಂ ಭರವಸೆ ನೀಡಿದ್ದಾರೆ.