ಮನೆ Latest News ಸಿಎಂ ತಪ್ಪಿಲ್ಲ ಅಂದ್ರೆ 14 ಸೈಟ್ ಯಾಕೆ ವಾಪಾಸ್ ಕೊಟ್ರು?; ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆ

ಸಿಎಂ ತಪ್ಪಿಲ್ಲ ಅಂದ್ರೆ 14 ಸೈಟ್ ಯಾಕೆ ವಾಪಾಸ್ ಕೊಟ್ರು?; ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆ

0

ಬೆಂಗಳೂರು; ಸಿಎಂ ತಪ್ಪಿಲ್ಲ ಅಂದ್ರೆ 14 ಸೈಟ್ ಯಾಕೆ ವಾಪಾಸ್ ಕೊಟ್ರು? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಬಿಜೆಪಿ-ಜೆಡಿಎಸ್ ಈ ವಿಚಾರದಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ್ವಿ. ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡಿದ್ವಿ. ಇಡೀ‌ ದೇಶದ ದೊಡ್ಡ ದೊಡ್ಡ ವಕೀಲರು ವಾದ ಮಾಡಿ ಹೋದಂತಹ ಕೇಸ್. ತಪ್ಪಿಲ್ಲ ಅಂದ್ರೆ 14 ಸೈಟ್ ಯಾಕೆ ವಾಪಾಸ್ ಕೊಟ್ರು?. ಎ೧,ಎ೨,ಎ೩ ಇವರ ತಪ್ಪಿಲ್ಲ ಅಂತ ಲೋಕಾಯುಕ್ತ ಹೇಳುತ್ತೆ. ಲೇಔಟ್ ಅಕ್ರಮ, ಅದು ಅವರಿಗೆ ಗೊತ್ತೇ ಇಲ್ಲ ಅಂತಾರೆ. 50:50 ಸೈಟ್ ಬೇಕು ಅಂದಾಗ ಮಾತ್ರ ನೋಡಿದ್ದಾರೆ. ಸಿದ್ದರಾಮಯ್ಯನವರು ಇದರಲ್ಲಿ ಒಂದು ಫೋನ್ ಕಾಲ್ ಕೂಡ ಮಾಡಿಲ್ಲ. ಒಂದು ಪತ್ರ ಕೂಡ ಬರೆದಿಲ್ಲ, ಸಿಕ್ಕಿ ಹಾಕಿಕೊಳ್ಳೋಕೆ‌ ಅವರು ಮೂರ್ಖರಾ? ಇದು ಪೂರ್ವ ನಿಯೋಜಿತವಾದ ವರದಿ ಎಂದಿದ್ದಾರೆ.

ಏನು ಇಲ್ಲ ಅಂದ್ರೆ ಅಷ್ಟು ಖರ್ಚು ಮಾಡಿ ಯಾಕೆ ವಕೀಲರನ್ನ ಕರೆ ತಂದ್ರಿ?. ಹಳ್ಳಿಯ ವಕೀಲರ ಬಳಿಯೇ ಕೇಸ್ ಎದುರಿಸಬಹುದಿತ್ತು ಅಲ್ವಾ ?. ಇದು ಮುಚ್ಚು ಹಾಕುವ ಹುನ್ನಾರ. ಪೊಲೀಸ್ ಅಧಿಕಾರಿಗೆ ವರ್ಗಾವಣೆ ಬೇಕು, ಪ್ರಮೋಷನ್ ಬೇಕು ಅದಕ್ಕೆ ಹೀಗೆ ಮಾಡಿದ್ದಾರೆ. ಸಿಬಿಐ ತನಿಖೆಗೆ ಕೊಟ್ರೆ ಮಾತ್ರ ಸತ್ಯಾಸತ್ಯತೆ ಹೊರ ಬರುತ್ತೆ. ಲೋಕಾಯುಕ್ತ ವರದಿ ನಾಳೆ ಕೊಡ್ತಿದ್ದಾರೆ. ಅವರು ಅಧಿಕಾರಿಗಳ ಮೇಲೆ ಗೂಬೆ ಕೂರಿಸುತ್ತಾರೆ. ಸಿಎಂ ಹಾಗೂ ಅವರ ಕುಟುಂಬದವರು ಇನೋಸೆಂಟ್, ಮುಗ್ಧರು. ಕ್ಲೀನ್ ಚೀಟ್ ಅಲ್ಲ, ನಿರ್ಮಾ ಪೌಡರ್, ಶರ್ಫು ಹಾಕಿ ತೊಳೆದು ಬಿಟ್ಟಿದ್ದಾರೆ. ಎಂದಿದ್ದಾರೆ.

ಬೆಂಗಳೂರು ಟೂ ಮೈಸೂರು ಪಾದಯಾತ್ರೆ ವಿಫಲ ವಿಚಾರದ ಬಗ್ಗೆ ಮಾತನಾಡಿದ ಅವರು ಪಾದಯಾತ್ರೆ ಹಿನ್ನೆಡೆ ಆಗಿಲ್ಲ, ನಮಗೆ ಗೆಲುವಾಗಿದೆ. ನಾವು ಹೋರಾಟ ಮಾಡಿಲ್ಲ ಅಂದಿದ್ರೆ 14 ಸೈಟ್ ವಾಪಾಸ್ ಕೊಟ್ರು. 300 ಕೋಟಿ ಆಸ್ತಿ ಸೀಝ್ ಮಾಡಿದ್ದಾರೆ. ಇನ್ನೂ ಸಾವಿರಾರು ಕೋಟಿ ಸೀಝ್  ಆಗುತ್ತೆ. ಬಿ ರಿಪೋರ್ಟ್ ನ ಕೋರ್ಟ್ ಸ್ವೀಕಾರ ಮಾಡ್ಬೇಕು. ಲೋಕಾಯುಕ್ತ ಬಿ ರಿಪೋರ್ಟ್ ನಿಂದ 100% ಬೇಜಾರಾಗಿದೆ. ನಮಗಿಂತ ಜಾಸ್ತಿ 200% ಕಾಂಗ್ರೆಸ್ ನ ಕೆಲ ನಾಯಕರಿಗೆ ಬೇಜಾರಾಗಿದೆ. ಸಿಎಂ ಕನಸು ಇಟ್ಟಿಕೊಂಡವರಿಗೆ ನಿದ್ರೆ ಇಲ್ಲ. ಅವರ ಕನಸು ನುಚ್ಚು ನೂರಾಗಿ ಹೋಗಿದೆ. ಫೆ.21ರಂದು ಸಭೆಯಲ್ಲಿ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾಳೆ ಬೆಂಗಳೂರಿನಲ್ಲಿ ಸಭೆ ಸೇರುತ್ತಿದ್ದೇವೆ

ನಾಳೆ ನಾವು 10 ಜನ ಸೇರುತ್ತಿದ್ದೇವೆ. ಮುಡಾ ಪ್ರಕರಣದ ಬಗ್ಗೆ ಚರ್ಚೆ ಮಾಡುತ್ತೇವೆ . ಪೊನ್ನಣ್ಣ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಲೂಟಿ‌ ಆಗದಿದ್ದರೆ ಸೈಟ್ ಯಾಕೆ ವಾಪಾಸ್ ಕೊಟ್ರು?. ನಾವು ಹೋರಾಟ ಮಾಡಿದ್ದಕ್ಕೆ ಇಷ್ಟೆಲ್ಲ ಬೆಳವಣಿಗೆ ಆಗಿದೆ . 3-4 ಸಾವಿರ ಕೋಟಿ ರೂ. ಈ ಪ್ರಕರಣದ ಹಿಂದಿದೆ. ಎಲ್ಲವೂ ರಿಕವರಿ ಆಗಬೇಕಿದೆ ಎಂದರು.