ಮನೆ Latest News ಶಿಕ್ಷಕರ ದಿನಾಚರಣೆ ಪ್ರಯುಕ್ತ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ; 2025-26ನೇ ಸಾಲಿನ ರಾಜ್ಯಮಟ್ಟದ ಉತ್ತಮ...

ಶಿಕ್ಷಕರ ದಿನಾಚರಣೆ ಪ್ರಯುಕ್ತ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ; 2025-26ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿತರಣೆ

0

ಬೆಂಗಳೂರು: ಶಿಕ್ಷಕರ ದಿನಾಚರಣೆ ಪ್ರಯುಕ್ತ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. 2025-26ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿತರಿಸಲಾಯಿತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು.  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಪ್ರಾಥಮಿಕ ಶಾಲೆಯ 20, ಪ್ರೌಢಶಾಲೆಯ 11 ಶಿಕ್ಷಕ ಹಾಗೂ 8 ಪಿಯು ಉಪನ್ಯಾಸಕರು, ಪಿಯು ಕಾಲೇಜಿನ ಇಬ್ಬರು ಪ್ರಾಂಶುಪಾಲರಿಗೆ ಪ್ರಶಸ್ತಿ ನೀಡಲಾಯಿತು. ಒಟ್ಟು 41 ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಪ್ರಶಸ್ತಿ ವಿತರಿಸಿಲಾಯಿತು. ಎರಡು ಶಾಲೆಗಳಿಗೆ ಎಚ್.ಜಿ. ಗೋವಿಂದೇಗೌಡ ಪ್ರಶಸ್ತಿ ನೀಡಲಾಯಿತು.ಸಿಎಂ ಸಿದ್ದರಾಮಯ್ಯ  ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಸಿಎಂ ಪ್ರತೀ ವರ್ಷ ಸೆ ೫ ರಂದು ಶಿಕ್ಷಕರ ದಿನಾಚರಣೆ ಆಚರಿಸುತ್ತಿದ್ದೇವೆ. ಸರ್ವಪಲ್ಲಿ , ಭಾರತ ರತ್ನ ರಾಧಾಕೃಷ್ಣನ್ ಅವ್ರ ಜನ್ಮದಿನದ ಪ್ರಯುಕ್ತ ಶಿಕ್ಷಕರ ದಿನಾಚರಣೆ ಮಾಡುತ್ತೇವೆ. ಅವರು ಮೊದಲು ಶಿಕ್ಷಕರಾಗಿದ್ದರು. ಮೈಸೂರಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು.ಅವ್ರು ಆದರ್ಶ ಶಿಕ್ಷಕರಾಗಿದ್ದರು. ಬಹಳ ಮೇಧಾವಿ, ಬುದ್ದಿವಂತ ರಾಗಿದ್ದರು. ಹೀಗಾಗಿ ಅವ್ರು ರಾಷ್ಟ್ರಪತಿ ಸ್ಥಾನ ಅಲಂಕರಿಸಿದರು.  ನಾವು ಅವರನ್ನ ಗೌರಿಸಬೇಕು, ಸ್ಮರಿಸಬೇಕಾಗಿದೆ. ಅವ್ರ ಮಾರ್ಗದರ್ಶನ ದಲ್ಲಿ ನಡೆಯೋ ಪ್ರಯತ್ನ ಮಾಡಬೇಕು, ಆದರ್ಶ ಪಾಲನೆ ಮಾಡಬೇಕು. ನಮ್ಮ ಸರ್ಕಾರದ ಇಬ್ಬರು ಸಚಿವರು ಇದ್ದಾರೆ. ಇನ್ನೂ ೬೦ ವರ್ಷ ಆಗಿಲ್ಲ ಇಬ್ಬರೂ ಉತ್ಸಾಹ ಇರೋ ಯುವಕರು, ಅದಕ್ಕಾಗಿ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಚಿವ ಸ್ಥಾನ ನೀಡಲಾಗಿದೆ ಎಂದರು.

೬೫ಕ್ಕೂ ಹೆಚ್ಚು ಸಾವಿರ ಕೋಟಿ ಶಿಕ್ಷಣ ಕ್ಕಾಗಿ ಖರ್ಚು ಮಾಡುತ್ತಿದ್ದೇವೆ. ನಮ್ಮ ಬಜೆಟ್ ೪.೦೯ ಲಕ್ಷ ಕೋಟಿ ಇದೆ. ಬೇರೆ ಯಾವ ಇಲಾಖೆಗೂ ಇಷ್ಟೊಂದು ಹಣ ಖರ್ಚು ಮಾಡುತ್ತಿಲ್ಲ. ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು. ಹಾಗಾಗಿ ಸರ್ಕಾರ ನಿರೀಕ್ಷೆ ಮಾಡುತ್ತಿದೆ, ಶಿಕ್ಷಕರ ಮೂಲಕ ನಾವು ನಿರೀಕ್ಷೆ ಮಾಡುತ್ತೇವೆ. ವೈಚಾರಿಕತೆ, ವೈಜ್ಞಾನಿಕ ವಾಗಿ, ಸಮಾಜದ ಸಮಸ್ಯೆಗೆ ಸ್ಪಂದಿಸುವ ವಿದ್ಯೆ ಆಗಬೇಕು. ಮಾಹಿತಿ ಕೋಡೋದಷ್ಟೇ ವಿದ್ಯೆ ಅಲ್ಲ. ಇಟ್ಸ್ ಎಂಬ ಕವಿ ಅವರು ಪಾತ್ರೆ ತುಂಬಿಸೋ ವಿಧ್ಯೆ ಆಗಬಾರದು ಅಂತಾರೆ. ನಮ್ಮ ಕಲಿಕೆಯ ಕಿಡಿ ಹೊತ್ತಬೇಕು, ಅಂಥ ವಿಧ್ಯೆ ಆಗಬೇಕು, ಆ ಜವಾಬ್ದಾರಿ ಶಿಕ್ಷಕರ ಮೇಲಿದೆ.ಶೂದ್ರರು ವಿಧ್ಯೆ ಕಲಿಯೋಕೆ ಅವಕಾಶ ಇರಲಿಲ್ಲ. ಆದ್ರೆ ಸಂವಿಧಾನ ಜಾರಿಯಾದ್ಮೇಲೆ ಎಲ್ಲರಿಗೂ ವಿಧ್ಯೆ ಕಲಿಯೋಕೆ ಅವಕಾಶ ಇದೆ. ನಮ್ಮ ಸರ್ಕಾರ ಬಂದ್ಮೇಲೆ‌ಶಾಲಾ ಕಾಲೇಜಲ್ಲಿ ಸಂವಿಧಾನ ಪೀಠಿಕೆ ಓದೋಕೆ ಹೇಳಿದ್ವಿ, ಅದನ್ನ ಅರ್ಥ ಮಾಡಬೇಕಾಗುತ್ತದೆ. ಸಮಾಜನತೆ, ಸ್ವಾತಂತ್ರ್ಯ, ಭ್ರಾತೃತ್ವ ಮುಖ್ಯ. ಇದನ್ನು ಅಳವಡಿಕೆ ಮಾಡಬೇಕಾಗುತ್ತದೆ. ಮನುಷ್ಯತ್ವ ಇಲ್ದೇ ಇದ್ರೆ ನಾಗರೀಕ ನಾಗೋಕೆ ಸಾಧ್ಯವಿಲ್ಲ ಎಂದು ತಿಳಿಸಿದರು.

ಸೈನಿಕರು, ಅನ್ನದಾತರು, ಶಿಕ್ಷಕರು ವಿದ್ಯೆ ಕೊಡಿಸೋ ಕೆಲಸ ಮಾಡ್ತಾರೆ. ಎಂಥಾ ವಿಧ್ಯೆ ಕಲಿತಿದ್ದೇವೆ ಅನ್ನೋದು ಮುಖ್ಯ. ನಮ್ಮಲ್ಲಿ ಜಾತಿ ವ್ಯವಸ್ಥೆ ಇದೆ. ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆ ಹುಟ್ಟು ಹಾಕಿದರು, ಆದ್ರೆ ಈಗ ಬದಲಾವಣೆ ಆಗಬೇಕು. ಮೂಡನಂಬಿಕೆ ನಮ್ಮಲ್ಲಿದ್ದಾವೆ, ಮೌಢ್ಯವಿದೆ. ವಿದ್ಯೆ ಕಲಿತ್ಮೇಲೆ ಜಾತಿ ವ್ಯವಸ್ಥೆ ಗೆ ಈಡಾಗಬಾರದು. ವಿದ್ಯಾರ್ಥಿಗಳನ್ನ ಉತ್ತಮ ರೀತಿಯಲ್ಲಿ ತಯಾರಿಸಬೇಕು. ಪರಧರ್ಮ ಸಹಿಷ್ಣುತೆ ಮೈಗೂಡಿಸಿಕೊಳ್ಳೋ ವ್ಯವಸ್ಥೆ ಆಗಬೇಕು. ಅನೇಕ ಧರ್ಮ, ಜಾತಿ ನಮ್ಮಲ್ಲಿದ್ದಾವೆ. ಎಲ್ಲಾ ಧರ್ಮ ಸಮಾನತೆಯಿಂದ ನೋಡಿಕೊಳ್ಳಬೇಕು. ವಿದ್ಯಾವಂತರು ಇನ್ನೂ, ಮೌಢ್ಯ, ಮೂಢನಂಬಿಕೆ ನಂಬುತ್ತಾರೆ. ಇದರಿಂದ ವಿದ್ಯಾವಂತರ ಲಕ್ಷಣ ಅಲ್ಲ ಎಂದು ಹೇಳಿದರು.

ಧರ್ಮ,ಜಾತಿ ಹೆಸರಲ್ಲಿ ಸಮಾಜ ಒಡೆಯೋಕೆ ಹೋಗಬಾರದು. ಮನುಷ್ಯನ ನಡುವೇ ಪ್ರೀತಿಸಿಬೇಕು, ಧ್ವೇಷಿಸಬಾರದು. ಅದನ್ನ ಪೂರ್ಣ ಮಾಡೋ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರು ತಮ್ಮ ನಡವಳಿಕೆ ಯಲ್ಲಿ ಒಳ್ಳೇ ಮೌಲ್ಯ, ಗುಣ ಬೆಳಸಿಕೊಳ್ಳಬೇಕು ಎಂದ ಅವರು ಪ್ರೋ ನಂಜುಂಡಸ್ವಾಮಿ ಅವರು ನನಗೆ ಪ್ರೇರಣೆ. ನಾನು ರಾಜಕೀಯ ಕ್ಕೆ ಬರೋದಕ್ಕೆ ಅವರೇ ಕಾರಣಕರ್ತರು. ನಾನು ಸಮಾಜ ಸೇವೆ ಮಾಡೋಕೆ ರಾಜಕೀಯ ಕ್ಕೆ ಬಂದೆ. ವಿಧ್ಯಾರ್ಥಿಗಳ ಮೇಲೆ ಛಾಪು ಮೂಡಿಸಬೇಕಾದವರು ನೀವು. ಇತಿಹಾಸ ನಾವು ತಿಳಿದುಕೊಳ್ಳಬೇಕು ಎಂದರು.