ಮನೆ Latest News ಸಿಎಂ, ಡಿಸಿಎಂ ಅಧಿಕಾರದ ಕಚ್ಚಾಟದಲ್ಲಿ ಮುಳುಗಿದ್ದಾರೆ; ಚಿತ್ರದುರ್ಗದಲ್ಲಿ ವಿಪಕ್ಷ ನಾಯಕ ಆರ್ ಅಶೋಕ ಹೇಳಿಕೆ

ಸಿಎಂ, ಡಿಸಿಎಂ ಅಧಿಕಾರದ ಕಚ್ಚಾಟದಲ್ಲಿ ಮುಳುಗಿದ್ದಾರೆ; ಚಿತ್ರದುರ್ಗದಲ್ಲಿ ವಿಪಕ್ಷ ನಾಯಕ ಆರ್ ಅಶೋಕ ಹೇಳಿಕೆ

0

ಬೆಂಗಳೂರು; ಸಿಎಂ, ಡಿಸಿಎಂ ಅಧಿಕಾರದ ಕಚ್ಚಾಟದಲ್ಲಿ ಮುಳುಗಿದ್ದಾರೆ ಎಂದು ಚಿತ್ರದುರ್ಗದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ರಾಜ್ಯದಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿ ಉಳಿದಿವೆ.65 ಸಾವಿರ ಹುದ್ದೆ ಭರ್ತಿಗೆ ಫೈನಾನ್ಸ್ ಇಲಾಖೆ ಆದೇಶಿಸಿ 6 ತಿಂಗಳಾಗಿದೆ. ರಾಜ್ಯ ಸರ್ಕಾರ 2ವರ್ಷದಲ್ಲಿ ಒಬ್ಬರಿಗೂ ಉದ್ಯೋಗ ನೀಡಿಲ್ಲ. ಸಿಎಂ, ಡಿಸಿಎಂ ಅಧಿಕಾರದ ಕಚ್ಚಾಟದಲ್ಲಿ ಮುಳುಗಿದ್ದಾರೆ. ಡಿಸಿಎಂ ಡಿಕೆಶಿಗೆ ಸಿಎಂ ಉದ್ಯೋಗ ಬೇಕು. ಸಿಎಂಗೆ ಎರಡೂವರೆ ವರ್ಷ ಇದ್ದದ್ದು 5ವರ್ಷ ಉದ್ಯೋಗ ಬೇಕು. ಎಂ, ಡಿಸಿಎಂಗೆ ಆದಾಯ ಬರುವ ಉದ್ಯೋಗ ಬೇಕು. ಹುಬ್ಬಳ್ಳಿಯಲ್ಲಿ ಉದ್ಯೋಗಕ್ಕಾಗಿ ಹೋರಾಟದಲ್ಲಿ ಭಾಗಿ ಆಗುತ್ತೇನೆ.ರಾಜ್ಯ ಕಾಂಗ್ರೆಸ್  ಸರ್ಕಾರ ಪಾಪರ್ ಆಗಿದೆ ಎಂದಿದ್ದಾರೆ.

ಸಚಿವ ಸಂಪುಟ ಪುನರಚನೆಗೆ ಕೈ ಶಾಸಕರ ಪತ್ರ ವಿಚಾರದ ಬಗ್ಗೆ ಮಾತನಾಡಿದ ಕಾದು ಕಾದು ಕಾಂಗ್ರೆಸ್ ಶಾಸಕರು ಸುಸ್ತಾಗಿದ್ದಾರೆ. ಮೊದಲ ಸಲ‌ ಶಾಸಕರಾದ 30ಜನ ಬೇಡಿಕೆಯಿಟ್ಟಿದ್ದಾರೆ. ಇದಾದ ಬಳಿ ಎರಡನೇ ಸಲ ಶಾಸಕರಾದವರಿಂದ ಬೇಡಿಕೆ. ಅಭಿವೃದ್ಧಿಗೆ ಹಣ ಇಲ್ಲ ಎಂದು ಶಾಸಕರಿಂದ ಫಾರೆನ್ ಟೂರ್. ರಾಜ್ಯ ಕಾಂಗ್ರೆಸ್ ಸರ್ಕಾರ ಐಸಿಯುನಲ್ಲಿದ್ದಂತಿದೆ.ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಟ್ರಾಪ್ ವಿಚಾರದ ಬಗ್ಗೆ ಮಾತನಾಡಿದ ಅವರುತಪ್ಪು ಮಾಡಿರೋರು ಯಾರೇ ಆದರೂ ಶಿಕ್ಷೆ ಆಗಬೇಕು. ಈಗಾಗಲೇ ನೋಟಿಸ್ ನೀಡಲು ನಾವು ಸೂಚಿಸಿದ್ದೇವೆ. ಯಾರೋ ಸ್ವಾಮೀಜಿ ಕುತಂತ್ರದ ಆಡಿಯೋ ಬಿಡುಗಡೆ ಆಗಿದೆ. ತನಿಖೆಯಿಂದ ಸತ್ಯಾಸತ್ಯತೆ ಹೊರಗಡೆ ಬರಲಿ.ಕೈ ಶಾಸಕ ಸೈಲ್ ಜೈಲಿಗೆ ಹೋಗಿ ಬಂದರಲ್ಲ ಕಾಂಗ್ರೆಸ್ ಏನು ಕ್ರಮ ಕೈಗೊಂಡಿದೆ.ಕಾಂಗ್ರೆಸ್ ಶಾಸಕ ಕುಲಕರ್ಣಿ ಮರ್ಡರ್ ಕೇಸಲ್ಲಿದ್ದಾರೆ. ಚಿತ್ರದುರ್ಗ ಶಾಸಕ  ವಿರೇಂದ್ರ ಪಪ್ಪಿಯ 150ಕೋಟಿ ಸೀಜ್. ಸೀಜ್ ಆಗದೇ ಇರೋದು 1500 ಕೋಟಿ ಇದೆ.ಕಾಂಗ್ರೆಸ್ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ನಮಗೆ ಪ್ರಶ್ನೆ ಮಾಡ್ತಾರೆ ಎಂದಿದ್ದಾರೆ.