ಬೆಂಗಳೂರು; ಮುಡಾ ಕೇಸ್ನಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ಚಿಟ್ ಸಿಕ್ಕಿದೆ. ಎ೧ ಸಿದ್ದರಾಮಯ್ಯ, ಎ೨ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ಕ್ಲೀನ್ಚಿಟ್ ಸಿಕ್ಕಿದೆ. ಅಲ್ಲದೇ, ಸಿಎಂ ವಿರುದ್ಧ ಸಾಕ್ಷ್ಯಾಧಾರ ಇಲ್ಲ ಎಂದು ವರದಿ ನೀಡಲಾಗಿದೆ. ಇದರ ಬೆನ್ನಲ್ಲೇ ದೂರುದಾರ ಸ್ನೇಹಮಯಿ ಕೃಷ್ಣಗೆ ಲೋಕಾಯುಕ್ತ ನೋಟಿಸ್ ನೀಡಿದೆ. ಮುಡಾ ಅಕ್ರಮದಲ್ಲಿ ಸಿಎಂ ಮತ್ತು ಕುಟುಂಬಸ್ಥರ ಅಕ್ರಮಕ್ಕೆ ಸಾಕ್ಷಿ ಇಲ್ಲ . ನಾಲ್ವರ ವಿರುದ್ಧ ಸಾಕ್ಷ್ಯಗಳ ಕೊರತೆಯಿಂದ ಆರೋಪ ಸಾಬೀತಾಗಿಲ್ಲ ಎಂದು ಲೋಕಾಯುಕ್ತ ಹೇಳಿದೆ. ಅಲ್ಲದೇ ಲೋಕಾಯುಕ್ತ ವರದಿ ವಿರೋಧಿಸುವುದಾದರೆ ಕೋರ್ಟ್ಗೆ ಹೋಗಲು ಸ್ನೇಹಮಯಿ ಕೃಷ್ಣಗೆ ನೋಟಿಸ್ ನೀಡಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಯಾವುದೇ ತನಿಖೆಯ ರಿಪೋರ್ಟ್ ನ ಪೊಲೀಸರು ಕೋರ್ಟ್ ಗೆ ಸಲ್ಲಿಸಿದಾಗ ದೂರುದಾರರಿಗೆ ನೋಟಿಸ್ ಕೊಡುವಂತದ್ದು ಸಾಮಾನ್ಯವಾಗಿ ಪ್ರಕ್ರಿಯೆ. ಈ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣ ದೂರುದಾರರು ಅವರಿಗೆ ಲೋಕಾಯುಕ್ತ ನೊಟೀಸ್ ನೀಡಿದ್ದಾರೆ. ಅದರ ಅರ್ಥ ತನಿಖೆ ಪೂರ್ಣಗೊಂಡಿದೆ ಎಂದು ನೋಟಿಸ್ ಜಾರಿ ಮಾಡಿದ್ದಾರೆ . ಮುಂದಿನ ಪ್ರಕ್ರಿಯೆಗಳು ಏನಿದ್ದರೂ ಕೂಡ ನ್ಯಾಯಾಲಯದಲ್ಲಿ ನಡೆಯುತ್ತದೆ. ದೂರುದಾರರಿಗೆ ವರದಿ ಪ್ರತಿ ಸಿಕ್ಕಿದ್ಯೋ ಇಲ್ಲವೋ ಗೊತ್ತಿಲ್ಲ ನಾನಂತೂ ನೋಡಿಲ್ಲ. ಮಧ್ಯಂತರ ವರದಿ ಅಂತಿಮ ವರದಿ ಎಂಬ ಪ್ರಶ್ನೆ ಬರುವುದಿಲ್ಲ . ಕ್ರಿಮಿನಲ್ ಇನ್ವೆಸ್ಟಿಗೇಷನ್ ನಲ್ಲಿ ಮಧ್ಯಂತರ ಪೂರ್ಣ ವರದಿ ಎಂಬುದು ಬರುವುದಿಲ್ಲ. ಯಾವುದೇ ತನಿಖೆ ನಡೆದ ನಂತರ ಮುಂದಿನ ತನಿಖೆಗೆ ಅವಕಾಶ ಇರುತ್ತದೆ. ವರದಿ ಸಲ್ಲಿಸಿದಾಗ ಅಂತಿಮ ವರದಿಯೇ ಅಂತಿಮ ವರದಿಯನ್ನೇ ಸಲ್ಲಿಸಿರುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ದೂರುದಾರ ಸ್ನೇಹಮಯಿ ಕೃಷ್ಣ ಅವರು ಬಿ ರಿಪೋರ್ಟ್ ಸಿಲ್ಲಿಸಿರೋದು ಗೊತ್ತಾಗಿದೆ. ಆದರೆ ಸಿಎಂ ಸಿದ್ದರಾಮಯ್ಯಗೆ ಶಿಕ್ಷೆ ಕೊಡಿಸದಿದ್ದರೆ ನಾನು ಸ್ನೇಹಮಯಿ ಕೃಷ್ಣನೇ ಅಲ್ಲ ಎಂದು ಛಾಲೆಂಜ್ ಹಾಕಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಶಿಕ್ಷೆ ಕೊಡಿಸದೆ ಇದ್ದರೆ ನಾನು ಸ್ನೇಹಮಯಿ ಕೃಷ್ಣನೇ ಅಲ್ಲ ಎಂದಿದ್ದಾರೆ. ನನಗೆ ಲೋಕಾಯುಕ್ತದ ಮೇಲಿನ ಅನುಮಾನ ಹೆಚ್ಚಾಗಿದೆ. ಲೋಕಾಯುಕ್ತ ಅಧಿಕಾರಿಗಳು ತಮ್ಮ ಆತ್ಮಸಾಕ್ಷಿ ಮಾರಿಕೊಂಡಿದ್ದಾರೆ. ನಾನು ಸಾಕಷ್ಟು ಸಾಕ್ಷಿಗಳನ್ನು ಕೊಟ್ಟಿದ್ದೇನೆ. ಹೀಗಿದ್ದರೂ ಲೋಕಾಯುಕ್ತ ನಾಲ್ವರ ವಿರುದ್ಧದ ಆರೋಪದಲ್ಲಿ ಸಾಕ್ಷಿಗಳ ಕೊರತೆಯಿದೆ ನೀವು ಕೋರ್ಟ್ ಅಲ್ಲಿ ಪ್ರಶಂಸೆ ಅಂತ ನೋಟಿಸ್ ಕೊಟ್ಟಿದೆ. ಹಾಗಾಗಿ ನನಗೆ ಲೋಕಾಯುಕ್ತ ಮೇಲೆ ಅನುಮಾನ ಹೆಚ್ಚಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ತನಿಖೆ ಇನ್ನು ಬಾಕಿರುವಾಗಲೇ ಮಧ್ಯಂತರ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಅದಕ್ಕೆ ಅವರಿಗೆ ನಾಚಿಕೆ ಆಗಬೇಕು ಎಂದು ಸ್ನೇಹಮಯಿಕೃಷ್ಣ ವಾಗ್ದಾಳಿ ನಡೆಸಿದ್ದಾರೆ.











