ಬೆಂಗಳೂರು; 40% ಆರೋಪದಲ್ಲಿ ಬಿಜೆಪಿಗೆ ಕ್ಲೀನ್ ಚೀಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಹಗರಣ ಒಂದೊಂದಾಗಿ ಹೊರಗೆ ಬರುತ್ತೆ. ಬಿಜೆಪಿಗೆ ಜೈಲಿಗೆ ಹೋಗಲು ಯಾಕಿಷ್ಟು ಅರ್ಜೆಂಟ್ ಎಂದು ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.
40% ಆರೋಪದಲ್ಲಿ ಬಿಜೆಪಿಗೆ ಕ್ಲೀನ್ ಚೀಟ್ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು ಆ ಒಂದು ಪ್ರಕರಣದಲ್ಲಿ ಎನು ಬಂದಿದೆಯೋ ಗೊತ್ತಿಲ್ಲ. ಜಸ್ಟೀಸ್ ನಾಗಮೋಹನ್ ದಾಸ್ ಕಮಿಟಿ ವರದಿ ಬರಬೇಕಿದೆ. ಕೋವಿಡ್ ಬಗ್ಗೆ ಆರೋಪ ಸಾಬೀತು ಆಗ್ತಿದೆ. ಗಂಗಾ ಕಲ್ಯಾಣ ಆಗಿಲ್ಲ ಅಂದ್ರು. ಆದ್ರೆ ಅರೆಸ್ಟ್ ಆಗಿಲ್ವಾ?. ಕೋರೋನಾ ಹಗರಣ ಆಗಿಲ್ಲ ಅಂದ್ರು. ಈಗ ನ್ಯೂಸ್ ಆಗ್ತಿದೆ. ಒಂದೊಂದಾಗಿ ಹೊರಗೆ ಬರುತ್ತೆ. ಬಿಜೆಪಿಗೆ ಜೈಲಿಗೆ ಹೋಗಲು ಯಾಕಿಷ್ಟು ಅರ್ಜೆಂಟ್ ಎಂದಿದ್ದಾರೆ.
ಸದನ ನಡೆಸಲು ವಿಳಂಬ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಅವರ ಕಾಲದಲ್ಲಿ ಎಷ್ಟು ಸದನ ನಡೆಸಿದ್ದಾರೆ.ಸದನ ನಡೆಯುತ್ತದೆ. ಕೋವಿಡ್ ಬಗ್ಗೆ ಅಚರು ಚರ್ಚೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರದ್ದು 60% ಸರ್ಕಾರ ; ರಾಜ್ಯ ಸರ್ಕಾರದ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ
ಬೆಂಗಳೂರು; ಕಾಂಗ್ರೆಸ್ ಸರ್ಕಾರದ್ದು 60% ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ವಿರೋಧ ಪಕ್ಷದ ನಾಯಕನಾಗಿ ಇಂದಿಗೆ ಒಂದು ವರ್ಷ ತುಂಬಿದೆ. 40% ಆರೋಪದಿಂದ ಮುಕ್ತ ಆಗಿದ್ದೀವಿ. ಕಾಂಗ್ರೆಸ್ ನ ಟೂಲ್ ಕಿಟ್ ರೀತಿ, ಕೆಂಪಣ್ಣ, ಪದ್ಮರಾಜ್ ನ ಟೂಲ್ ಕಿಟ್ ರೀತಿ ಬಳಕೆ ಮಾಡಿಕೊಂಡಿದ್ದರು. ಗುತ್ತಿಗೆದಾರ 6 ವರ್ಷ ಕೆಲಸ ಮಾಡೇ ಇಲ್ಲ. ನಿರುದ್ಯೋಗಿ ಗುತ್ತಿಗೆದಾರರು ಸೇರಿಕೊಂಡು 40% ನಮ್ಮ ಮೇಲೆ ಆರೋಪ ಮಾಡಿದ್ದಾರೆ. ಕೋವಿಡ್ ಹಗರಣ ಅಂತಲೂ ಹೇಳುತ್ತಿದ್ದಾರೆ. 40% ಸರ್ಕಾರ ಅಂತ 16 ತಿಂಗಳು ನೀವು ಸಾಭೀತು ಮಾಡೋಕೆ ಆಗಲಿಲ್ಲ. ಕೋರ್ಟ್ ನಲ್ಲೂ ದಾಖಲೆಯೇ ಕೊಡಲಿಲ್ಲ, ವಿಚಾರಣೆಗೂ ಹಾಜರಾಗಿಲ್ಲ.6 ವರ್ಷ ಕೆಲಸ ಮಾಡೇ ಇಲ್ಲ, ಕಮಿಷನ್ ಎಲ್ಲಿಂದ ಕೊಡ್ತಾರೆ ಅಂತ ಕೇಸನ್ನ ಲೋಕಾಯುಕ್ತ ವಜಾ ಮಾಡಿದೆ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ್ದು 60% ಸರ್ಕಾರ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣವಾಗಿದೆ. ಆ ದುಡ್ಡು ಬಳ್ಳಾರಿಯ ಚುನಾವಣೆಗೆ ಹೋಗಿದೆ. ಅವರು ಎಲ್ಲರಿಗೂ ತಲಾ 500 ರೂ. ಕೊಟ್ಟಿದ್ದಾರೆ. ಸಿದ್ದರಾಮಯ್ಯ ನಿತ್ಯ ತೆರೆದ ಪುಸ್ತಕ ಅಂತಾರೆ. ದಿನಾ ಒಬ್ಬೊಬ್ಬ ಮಂತ್ರಿ ದರೋಡೆಯ ಪುಸ್ತಕವನ್ನ ತೆರೆಯುತ್ತಿದ್ದಾರೆ.ಕನ್ನಾ ಹಾಕುವ ಮಂತ್ರಿಗಳು ರಾಜ್ಯದಲ್ಲಿದ್ದಾರೆ ಎಂದಿದ್ದಾರೆ.
ಕಪ್ಪು ಚುಕ್ಕೆ ಇಲ್ಲ ಅಂತ ಸಿದ್ದರಾಮಯ್ಯ ಹೇಳ್ತಾನೇ ಜರ್ತಾರೆ.ತಪ್ಪು ಮಾಡದಿದ್ದರೆ 14 ಸೈಟ್ ಯಾಕೆ ವಾಪಾಸ್ ಕೊಟ್ರಿ? ಏಕವಚನದಲ್ಲಿ ಮಾತನಾಡೋರನ್ನ ಹೊಡಿಯೋಕೆ ಹೋಗ್ತಾರೆ. ಹೇಳಿದ್ರೆ ಹಳ್ಳಿಯಿಂದ ಬಂದವನು ಅಂತ ಸಬೂಬು ಕೊಡ್ತಾರೆ. ನಾನು ಸೈಟ್ ವಾಪಾಸ್ ಕೊಡಲಿಲ್ಲ, ನನ್ನ ಹೆಂಡತಿ ಗೊತ್ತಿಲ್ಲದೆ ಕೊಟ್ರು ಅಂತಾರೆ. ಹಿಂದುಳಿದ ವರ್ಗ ತೆಗೆದು , ಮುಸಲ್ಮಾನರ ಚಾಂಪಿಯನ್ ಸಿದ್ದರಾಮಯ್ಯ. ಮುಸಲ್ಮಾನರ ಹೀರೋ ಆಗೋಕೆ ಹೊರಟಿದ್ದಾರೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
40% ಕಮೀಷನ್ ಆರೋಪ ಸುಳ್ಳು ಎಂಬ ವರದಿ: ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ
ಬೆಂಗಳೂರು; 40% ಕಮೀಷನ್ ಆರೋಪ ಸುಳ್ಳು ಎಂಬ ವರದಿ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಆಗ ಅವರ ವಿರುದ್ದ ಆರೋಪ ಬಂದಿತ್ತು. ಕೆಂಪಣ್ಣ ಅವರು ಪ್ರಧಾನಿ ಅವರಿಗೆ ದೂರು ಕೊಟ್ಠಿದ್ದರು. ಅದೇ ಕಾರಣಕ್ಕೆ ಜನರ ಹಿತ ಕಾಪಾಡುವ ದೃಷ್ಟಿಯಿಂದ ಹೋರಾಟ ಮಾಡಿದ್ದು. ಆದ್ರೆ ಅವರು ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ಬರೀ 40% ಪರ್ಸೆಂಟ್ ಯಿಂದ ಮಾತ್ರ ಸರ್ಕಾರ ಬಂದಿದ್ದು ಅನ್ನೋದು ಸುಳ್ಳು ಎಂದಿದ್ದಾರೆ.
ಕೆಂಪಣ್ಣ ಅವರು ಆಗ ಸರ್ಕಾರದಲ್ಲಿ ಭ್ರಷ್ಟಾಚಾರ ಜಾಸ್ತಿಯಾಗಿದೆ ಎಂದು ದೂರಿದ್ದರು. ಹಣ ತೆಗೆದುಕೊಳ್ಳುತ್ತಾರೆ ಎಂದು ಪ್ರಧಾನಿಗೆ ದೂರು ನೀಡಿದ್ದರು. ಇದಕ್ಕಾಗಿ ಜನರ ಹಿತದೃಷ್ಟಿಯಿಂದ ಪ್ರಶ್ನೆ ಮಾಡಿದ್ವಿ. ಆದ್ರೆ ಯಾವ ಆಧಾರದ ಮೇಲೆ ಸುಳ್ಳು ಎಂದಿದ್ದಾರೆ ಗೊತ್ತಿಲ್ಲ. ಆದ್ರೆ ನಾವು ಜನರಿಗೆ ಗ್ಯಾರಂಟಿ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದೆವು. ಆದ್ರೆ 40% ಆರೋಪದಿಂದ ಮಾತ್ರ ಸರ್ಕಾರ ಬಂದಿದ್ದು ಅನ್ನೋದು ಸುಳ್ಳು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.