ಮನೆ Latest News ನಟಿ ತಮನ್ನಾ ರಾಯಭಾರಿ‌ ಮಾಡಿದಕ್ಕೆ ಆಕ್ಷೇಪ‌ ವಿಚಾರ:ಬೆಂಗಳೂರಿನಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ

ನಟಿ ತಮನ್ನಾ ರಾಯಭಾರಿ‌ ಮಾಡಿದಕ್ಕೆ ಆಕ್ಷೇಪ‌ ವಿಚಾರ:ಬೆಂಗಳೂರಿನಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ

0

ಬೆಂಗಳೂರು: ನಟಿ ತಮನ್ನಾ ರಾಯಭಾರಿ‌ ಮಾಡಿದಕ್ಕೆ ಆಕ್ಷೇಪ‌ ವಿಚಾರಕ್ಕೆ ಬೆಂಗಳೂರಿನಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

 

ಕೆಎಸ್ ಡಿ ಎಲ್ ಕನ್ನಡದ ಹೆಮ್ಮೆಯ ಸಂಸ್ಥೆ.ವಿಲ್ ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಸಂಸ್ದೆ. ಮೊದಲು ಅವ್ಯವಹಾರ, ಅಶಿಸ್ತು ಎಲ್ಲಾ ಇತ್ತು. ಚೇರ್ಮನ್ ಕೂಡ ಜೈಲ್ ಗೆ ಹೋಗಿದ್ರು. ಒಂದೇ ಶಿಪ್ಟ್ ಕೆಲಸ ಆಗ್ತಿತ್ತು, ಈಗ ಮೂರು ಶಿಪ್ಟ್ ಮಾಡಲಾಗಿದೆ. ಅನೇಕ ಅವ್ಯವಹಾರಗಳನ್ನ ತಡೆಯಲಾಗಿದೆ. ಶೇ.೪೦ರಷ್ಟು ಉತ್ಪಾದನೆ ಮಾಡಲಾಗಿದೆ. ನಾನು ಕನ್ನಡದ ಅಸ್ಮಿತೆ ಬಗ್ಗೆ ಗೌರವವುಳ್ಳವನು. ಇದೊಂದು‌ ಟ್ರೇಡ್ ಬ್ಯುಸಿನೆಸ್ ಇದ್ದಂತೆ. ಇದನ್ನ ವಿಶ್ವಕ್ಕೆ ಪ್ರಮೋಟ್ ಮಾಡಬೇಕಿದೆ. ಯುರೋಪ್ ನಲ್ಲಿ ಜಾಸ್ಮಿನ್ ಗೆ ಬೇಡಿಕೆ ಇದೆ ಎಂದಿದ್ದಾರೆ.

 

ಶೇ. ೨೩ರಷ್ಟು ಬೇಡಿಕೆ ಅಚೀವ್ ಮಾಡಲಾಗಿದೆ.

ನಮ್ಮ ನಿರೀಕ್ಷೆ ೫ ಸಾವಿರ ಕೋಟಿ ರೂ.ಗೆ ಹೋಗಬೇಕು. ತಮನ್ನಾ ವಿಚಾರದಲ್ಲಿ ಕಮಿಟಿ ಮಾಡಲಾಗಿತ್ತು. ರಶ್ಮಿಕಾ ಮಂದಣ್ಣ ಬೇರೆ ಕಡೆ ಸಹಿ ಮಾಡಿದ್ದಾರೆ. ಅವರನ್ನ ಕೇಳಿದ್ದಕ್ಕೆ ಆಗಲ್ಲ ಅಂದ್ರು. ಪೂಜಾ ಹೆಗ್ಡೆ, ಕೆ.ಆರ್. ಅಡ್ವಾಣಿ ಆಗಲ್ಲ ಅಂದ್ರು. ತಮನ್ನಾ ೨.೮ ಕೋಟಿ ಪಾಲೋವರ್ಸ್ ಹೊಂದಿದ್ದಾರೆ. ದೀಪಿಕಾ ಪಡುಕೋಣೆ ನಮ್ಮ ಬಜೆಟ್ ಗೆ ಆಗ್ಲಿಲ್ಲ. ಕನ್ನಡದ ಕಲಾವಿದರ ಬಗ್ಗೆ ಗೌರವ ಇದೆ. ಇದು ಟೆಂಡರ್ ವರ್ಕ್ ಅಲ್ಲ, ಎಲ್ಲರೂ ಅರ್ಥೈಸಿಕೊಳ್ಳಬೇಕು. ೫ ಸಾವಿರ ಕೋಟಿಗೆ ಉತ್ಪನ್ನಗಳನ್ನ ತೆಡೆದುಕೊಂಡು ಹೋಗಬೇಕು.ಇದರಿಂದ ನಮ್ಮ ಕನ್ಮಡದ ಸಂಸ್ಥೆ ಬೆಳೆಯಲಿದೆ ಎಂದರು.

 

 

 

ಮೈಸೂರು ಸ್ಯಾಂಡಲ್ ಸೋಪ್ ಗೆ ತಮನ್ನಾ ರಾಯಭಾರಿ. ಮೈಸೂರು ಸ್ಯಾಂಡಲ್ ಸೋಪ್ ಕನ್ನಡದ ಹೆಮ್ಮೆ. ಒಂದು ಕಾಲದಲ್ಲಿ ಗತವೈಭವ ಹೊಂದಿದ ನಿಗಮ. ಮೈಸೂರು ಸ್ಯಾಂಡಲ್ ಸಂಸ್ಥೆಯನ್ನ ಮತ್ತೆ ಕಟ್ಟಬೇಕು. ಪ್ರಾಮಾಣಿಕ ಅಧಿಕಾರಿಯನ್ನ ನೇಮಕ ಮಾಡಿದ್ದೇವೆ. ನಾವೂ ೪೦% ಉತ್ಪಾದನೆ ಹೆಚ್ಚಳ ಮಾಡಿದ್ದೇವೆ.

ಪ್ರಸ್ತುತ ೧೭೮೮ ಕೋಟಿ ವ್ಯಾಪಾರ ಮಾಡಿದೆ. ಈ ಭಾರಿ ೪೧೫ ಕೋಟಿ‌ ನಿವ್ವಳ ಲಾಭ ಮಾಡಿದ್ದೇವೆ. ಸಂಸ್ಥೆಯ ಗತವೈಭವವನ್ನ ಸ್ಥಾಪನೆ ಮಾಡ್ತೇವೆ. ವಚನ ಸಾಹಿತ್ಯದ ನೆಲೆಯಿಂದ‌ ಬಂದವನು. ಕನ್ನಡದ ಬಗ್ಗೆ ಹೆಮ್ಮೆ ಇರುವವರು ನಾವು. ನನ್ನ ಅಧಿಕಾರಾವಧಿಯಲ್ಲಿ ಏನಾದ್ರು ಸಾಧಿಸಬೇಕು. ಅದಕ್ಕೆ ಈ ಪ್ರಯತ್ನ ಮಾಡ್ತಿದ್ದೇವೆ. ಕೇರಳದವರು ನಮ್ಮ‌ ಮಾದರಿಯಲ್ಲೇ ಮಾಡಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ ಮಾದರಿ ಮಾಡಿದ್ದಾರೆ. ನಮ್ಮದನ್ನ ಕಾಪಿ ಮಾಡಿದಕ್ಕೆ ಸುಪ್ರೀಂಗೆ ಹೋಗ್ತೇವೆ. ಡೂಪ್ಲಿಕೇಟ್ ತಡೆಗೆ ಬದ್ಧರಾಗಿದ್ದೇವೆ ಎಂದರು.

 

ಪರಮೇಶ್ವರ್ ಸಂಸ್ಥೆ ಮೇಲೆ ಇಡಿ ದಾಳಿ ವಿಚಾರದ ಬಗ್ಗೆ ಮಾತಾಡಿದ ಅವರು ಪರಮೇಶ್ವರ್ ಪ್ರಾಮಾಣಿಕ‌ ಸಚಿವರು. ಅವರ ಶಿಕ್ಷಣ ಸಂಸ್ಥೆಗಳೇ ಬೇರೆ, ಅವರ ವ್ಯವಹಾರವೇ ಬೇರೆ. ಎರಡಕ್ಕೂ ಸಂಬಂಧ ಕಟ್ಟಲು‌ ಆಗಲ್ಲ. ಬಿಜೆಪಿಗೆ ಸೆಳೆಯೋ ಪ್ರಯತ್ನವೇ ಎಂಬ ಪ್ರಶ್ನೆ. ಬಿಜೆಪಿ, ಜೆಡಿಎಸ್ ನವರೇ ನಮ್ಮಲ್ಲಿ‌ ಬರ್ತಾರೆ. ಕೆಲವು ತಾಂತ್ರಿಕ‌ ತೊಂದರೆಗಳಿವೆ. ಸಮಯ ಬಂದಾಗ ಅವರು ಬರ್ತಾರೆ. ಕಾಂಗ್ರೆಸ್ ನೇತೃತ್ವದಲ್ಲೇ ಎರಡು ಪಕ್ಷ ಸೇರ್ಪಡೆಯಾಗುತ್ವೆ ಎಂದಿದ್ದಾರೆ

ಪರಮೇಶ್ವರ್ ಇಡಿ ದಾಳಿಗೆ ಕೈ ನಾಯಕರು ಕಾರಣ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ‌ ವಿಚಾರದ ಬಗ್ಗೆ ಮಾತಾಡಿದ ಅವರು ಪ್ರಹ್ಲಾದ್ ಜೋಶಿಗೆ ಟಾಂಗ್ ನೀಡಿದ್ದಾರೆ. ಇಡಿ ದಾಳಿ ಬಗ್ಗೆ ಅವರಿಗೆ ಮಾಹಿತಿ ಇರಬಹುದು. ಇಡಿ ಅವರ ಹಿಡಿತದಲ್ಲೇ ಇದೆ ಅಲ್ವಾ?. ಜೋಶಿಯವರಿಗೆ ಧೈರ್ಯ ಇಲ್ವಾ?. ಯಾರು ದಾಖಲೆ ಕೊಟ್ರು ಅಂತ ಸಾಬೀತು ಪಡಿಸಲಿ. ಇಡಿಯವರು ಜೋಶಿಗೆ ರಿಪೋರ್ಟ್ ಮಾಡ್ತಾರಾ? ಎಂದು ಪ್ರಹ್ಲಾದ್ ಜೋಶಿಗೆ ಎಂ ಬಿ ಪಾಟೀಲ್ ಟಾಂಗ್ ಕೊಟ್ಟಿದಾರೆ.