ಮನೆ Latest News ಸಿಐಡಿಗೆ ವಹಿಸುವುದು ಸತ್ಯ ಹೊರಗೆ ಬರಲಿ ಅಂತ ಅಲ್ವಾ?; ಸಚಿವ ಮಹಾದೇವಪ್ಪ ಪ್ರಶ್ನೆ

ಸಿಐಡಿಗೆ ವಹಿಸುವುದು ಸತ್ಯ ಹೊರಗೆ ಬರಲಿ ಅಂತ ಅಲ್ವಾ?; ಸಚಿವ ಮಹಾದೇವಪ್ಪ ಪ್ರಶ್ನೆ

0

ಬೆಂಗಳೂರು; ಸಿ ಟಿ ರವಿ ಪ್ರಕರಣವನ್ನು ಸಿಐಡಿಗೆ ವಹಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಮಹಾದೇವಪ್ಪ  ಪ್ರತಿಕ್ರಿಯಿಸಿದ್ದಾರೆ. ಸತ್ಯ ಹೊರಗೆ ಬರಲಿ ಅಂತ ಅಲ್ವಾ? ಎಂದು ಸಚಿವ ಮಹಾದೇವಪ್ಪ ಪ್ರಶ್ನೆ ಮಾಡಿದ್ದಾರೆ.

ಜನಪ್ರತಿನಿದಿಗಳು ಎಚ್ಚರಿಕೆ ಪದ ಬಳಸಬೇಕು. ವ್ಯಕ್ತಿಗತವಾಗಿ ಮಾತನಾಡುವಾಗ ಹುಷಾರಾಗಿ ಮಾತನಾಡಬೇಕು.ಭಾಷೆ, ಪದ ಬಳಕೆ ಹಿಡಿತದಲ್ಲಿರಬೇಕು. ಸರಿಯಾದ ಪದ ಬಳಕೆ ಮಾಡಿದ್ರೆ ಯಾರಿಗೂ ತೊಂದರೆ ಆಗಲ್ಲ. ವ್ಯಕ್ತಿಗತ ಹೇಳಿಕೆ ನೀಡಲೇ ಬಾರದು ಅಂತಿದ್ದಾರೆ.ನಾವೇ ಸಂವಿಧಾನದ ರಚನೆ ಮಾಡುವವರು. ನಾವೇ ಹಾಗೆ ಮಾತನಾಡಿದ್ರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಜನರಿಗೆ ನಾವು ಏನು ಸಂದೇಶ ಕೊಡ್ತೇವೆ ಎಂದಿದ್ದಾರೆ.

ಇನ್ನು ಬಿಜೆಪಿಯಿಂದ ಬೆಳಗಾವಿ ಚಲೋ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಬಿಜೆಪಿಗೆ ಇದು ಹೊಸ ವಿಚಾರ ಅಲ್ಲ. ಚಳುವಳಿ ಹತ್ತಿಕ್ಕುವುದು ಬಿಜೆಪಿ ಸಿದ್ದಾಂತ. ಪ್ರಜಾಪ್ರಭುತ್ವ ನಾಶ ಮಾಡುವುದೇ ಬಿಜೆಪಿ. ಗಾಂಧಿಯನ್ನು ಗೊಡ್ಸೆ ಕೊಂದಿದ್ದೆ ಇದೆ ಕಾರಣಕ್ಕೆ. ಈಗ ಬಿಜೆಪಿ ಚಾಳಿ ಅದೇ ಮುಂದುವರಿಸುತ್ತೆ. ಆದ್ರೆ ಕಾನೂನು ಅದರ ಕೆಲಸ ಮಾಡುತ್ತೆ. ಹಿಂದೆ ಯಡಿಯೂರಪ್ಪ ವಿರುದ್ಧ ಅವಿಶ್ವಾಸ ನಿರ್ಣಯ ಬಂತು. ಅವಾಗ ಇದೆ ಬಿಜೆಪಿ ಸರ್ಕಾರ ಇತ್ತು. ಬಿದರಿ ಕಮಿಷನರ್ ಆಗಿದ್ರು. ಅವತ್ತು ಸದನದಲ್ಲಿ ಅವರೆ ಆಕ್ರಮಣ ಮಾಡಿಕೊಂಡಿದ್ರು ಎಂದಿದ್ದಾರೆ.

ಬಿಜೆಪಿ‌ ಕೇಸರಿ ಶಾಲು ಹಾಕಿದ ತಕ್ಷಣ ದುಶ್ಯಾಸನರು ಯುಧಿಷ್ಠಿರ ಆಗೋದಿಲ್ಲ;  ಸಿ ಟಿ ವಿರುದ್ಧ ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ

ಬೆಂಗಳೂರು;ಬಿಜೆಪಿ‌ ಕೇಸರಿ ಶಾಲು ಹಾಕಿದ ತಕ್ಷಣ ದುಶ್ಯಾಸನರು ಯುಧಿಷ್ಠಿರ ಆಗೋದಿಲ್ಲ ಎಂದು ಸಿ ಟಿ ವಿರುದ್ಧ ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಸಿಟಿ ರವಿ ಅವಾಚ್ಯ ಶಬ್ದ ಬಳಕೆ ಸಂಬಂಧ ಸಿಐಡಿಗೆ ವಹಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಬಿಜೆಪಿ‌ ಕೇಸರಿ ಶಾಲು ಹಾಕಿದ ತಕ್ಷಣ ದುಶ್ಯಾಸನರು ಯುಧಿಷ್ಠಿರ ಆಗೋದಿಲ್ಲ. ಸದನದಲ್ಲಿ ಒಬ್ಬ ಮಹಿಳೆಗೆ ಅವರು ಮಾತನಾಡಿದ್ದಾರೆ. ಬಿಜೆಪಿ ಅವರು ಏನೂ ಆಗೇ ಇಲ್ಲ ಅಂತಾರೆ. ಮಾಧ್ಯಮದಲ್ಲಿ ಬಂದ ವಿಡಿಯೋ ಕಾಂಗ್ರೆಸ್ ನವರು ಬಿಟ್ಟಿದ್ದು ಅಂತಾರೆ. ಪಾಕಿಸ್ತಾನ ಯುದ್ಧ ಗೆದ್ದ ರೀತಿ ಆಡ್ತಾ ಇದ್ದಾರೆ. ಅವರಲ್ಲಿ ಒಬ್ಬರಿಗೊಬ್ಬರಿಗೆ ಹೊಂದಾಣಿಕೆನೇ ಇಲ್ಲ. ವಿಡಿಯೋ ಎಫ್ ಎಸ್ ಎಲ್ ಗೆ ಹೋಗಿದೆಯಲ್ವಾ, ರಿಪೋರ್ಟ್ ಬರಲಿ ಗೊತ್ತಾಗುತ್ತೆ. ಸಿಐಡಿ ಗೆ ಕೊಟ್ಟಿದ್ರೆ ಸತ್ಯಾಂಶ ಬರಲಿ ಬಿಡಿ. ಅನೇಕ ಶಾಸಕರು ನಾವೂ ಕೇಳಿಸಿಕೊಂಡಿದ್ದೇವೆ ಅಂದಿದ್ದಾರೆ ಎಂದರು.

ಕಾಂಗ್ರೆಸ್ ಅಧಿವೇಶನನ ಸಮಯದಲ್ಲಿ ಪ್ರತಿಭಟನೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಮೊದಲು ಬಿಎಸ್ ವೈ ಮನೆ ಮುಂದೆ ಪ್ರತಿಭಟನೆ ಮಾಡಲಿ. ಪೋಕ್ಸೋ ಕೇಸ್ ಗೆ ಇಷ್ಟೊಂದು ಫ್ರೀ ಬಿಡ್ತಾರಾ..? ಆ ವಿಡಿಯೋದ್ದು ಎಫ್ ಎಸ್ ಎಲ್ ರಿಪೋರ್ಟ್ ಬಂದಿದೆಯಲ್ವಾ? ಅದಕ್ಕೆ ಏನಂತಾರೆ ವಿಜಯೇಂದ್ರ ಎಂದ ಅವರು, ಮುನಿರತ್ನ ವಿಚಾರ ಏನಾಯ್ತು. ಎಲ್ಲರದ್ದೂ ತ್ರಿಶಂಕು ಸ್ಥಿತಿ ಇದೆ. ಅದಕ್ಕೆ ಸಿಟಿ ರವಿ ಬೆನ್ನಿಗೆ ಒಗ್ಗಾಟ್ಟಾಗಿ ನಿಂತಿದ್ದಾರೆ. ಅದನ್ನ ಅವರೂ ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಎನ್ ಕೌಂಟರ್ ಮಾಡುವ ಅನುಮಾನ ಅನ್ನೋ ಸಿಟಿ ರವಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಈಗಾಗಲೇ ಪೊಲೀಸರು ಹೇಳಿದ್ರಲ್ವಾ ಎನ್ ಕೌಂಟರ್ ಅಂದ್ರಲ್ವಾ ಇವರು, ಮೊಬೈಲ್ ಯಾರ ಕೈಯಲ್ಲಿ ಇತ್ತು? ಮೊಬೈಲ್ ಇಸ್ಕೊಳ್ಳೋದು ಒಂದು ಪ್ರೊಸಿಝರ್. ಲೈವ್ ಲೊಕೇಷನ್ ಯಾರ ಕಳಿಸಿದ್ದು ಹಾಗಾದ್ರೆ. ಎಲ್ಲವನ್ನೂ ಅವರೇ ಹೇಳ್ತಾ ಇದ್ದಾರೆ.ಆ ಪಟ್ಟಿ ಹಾಕಿದ್ದಾರಲ್ವಾ ಎಷ್ಟು ಸ್ಟಿಚ್ ಬಿದ್ದಿದ್ದಾವೆ. ಆ ಪಟ್ಟಿಯಿಂದ ಒಂದು ತಿಂಗಳು ಆಚೆ ಬರಲ್ಲ. ಬ್ರೈನ್ ಸರ್ಜರಿ ಆದಂಗೆ ಹಾಕಿದ್ದಾರೆ. ಇಷ್ಟೇನಾ ಇವರ ಎನರ್ಜಿ? ರಾಜಕೀಯಕ್ಕಾಗಿ ಮಾಡ್ತಾ ಇದ್ದಾರೆ ಎಂದಿದ್ದಾರೆ.

ಸಭಾಪತಿ ಇದು ಮುಗಿದ ಅಧ್ಯಾಯ ಅಂತಿದ್ದಾರೆ ಎಂಬ ಹೇಳಿಕೆ ಬಗ್ಗೆ ಮಾತನಾಡಿದ ಅವರು ಅವರ ರೆಕಾರ್ಡ್ ನಲ್ಲಿ ಇಲ್ಲ ಅದು. ಹಾಗಾಗಿ ರೂಲಿಂಗ್ ಕೊಟ್ಟಿದ್ದಾರೆ. ಅಧಿಕೃತ ರೆಕಾರ್ಡ್ ಕೂಡ ಆಗಿದೆ. ಮಾಧ್ಯಮಗಳ ವಿಡಿಯೋ ಇದೆ. ದೂರುದಾರೆ ಹೇಳ್ತಾ ಇರೋದು ದಾಖಲೆ ಇದೆ ಅಂತ. ಆಗ ತನಿಖೆ ಮಾಡಲೇಬೇಕಾಗುತ್ತದೆ. ಸದನದಲ್ಲಿ ಏನು ಮಾತನಾಡಿದ್ರು ನಡೆಯುತ್ತಾ?ಈಗ ಸಾಕ್ಷಿ ಸಿಕ್ಕಿದೆ ಅದರ ರಿಪೋರ್ಟ್ ಬರಲಿ. ಇಲ್ಲ ಸಲ್ಲದನ್ನ ಹೇಳ್ತಾ ಇದ್ದಾರೆ. ಆಕ್ಷನ್ ಗೆ ರಿಯಾಕ್ಷನ್ ಬರ್ತಾ ಇದೆ.ಲಜ್ಜೆ ಗೆಟ್ಟವರು ಇವರು. ವೀರ ಶೂರ ಅಂತಾರಲಾ ಇಷ್ಟೆನಾ ಮಹಿಳೆಯರಿಗೆ ಗೌರವ ಕೊಡೋದು. ಸಮರ್ಥನೆ ಮಾಡ್ತಾ ಇದ್ದಾರಲಾ ಇವರು ಇದು ಸರೀನಾ ಎಂದು ಪ್ರಶ್ನೆ ಮಾಡಿದ್ದಾರೆ.