ಬೆಂಗಳೂರು; ಬಿಜೆಪಿ ಜೆಡಿಎಸ್ ನಾಯಕರು ಬಾಯಿಗೆ ಬಂದಂತೆ ಮಾತಾಡಿದ್ದಾರೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಮದ್ದೂರು ಪ್ರಕರಣದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು ಯಾವುದೇ ಒಂದು ಸಮಾಜಕ್ಕೆ ಪದ ಹೋಲಿಕೆ ಮಾಡುವ ಪ್ರಶ್ನೆ ಬರಬಾರದು. ಈ ಸಂದೇಶವನ್ನು ನಾವು ಮದ್ದೂರಿನ ಘಟನೆ ಮೂಲಕ ಕೊಟ್ಟಿದ್ದೇವೆ. ಆ ನಂತರವೂ ಬಂದ್ ಮಾಡಿದ್ರು, ಸಾಮೂಹಿಕ ಗಣೇಶ ವಿಸರ್ಜನೆ ಮೆರವಣಿಗೆ ಮಾಡಿದ್ರು. ಬಿಜೆಪಿ ಜೆಡಿಎಸ್ ನಾಯಕರು ಬಾಯಿಗೆ ಬಂದಂತೆ ಮಾತಾಡಿದ್ದಾರೆ.ಅದು ಸಮಾಜದ ಕದಡುವ, ವಾತವರಣ ಕಲುಷಿತ ಗೊಳಿಸೋಕಾ..? ಕೋಮ ಸಂಘರ್ಷ ಸೃಷ್ಟಿ ಮಾಡುವುದಾ ಅಂತಾ ಯೋಚಿಸಬೇಕು ಎಂದಿದ್ದಾರೆ.
ಅವರು ಎಲ್ಲರಿಗೂ ನಾನು ಬುದ್ದಿ ಹೇಳೋಕೆ ಹೋಗಲ್ಲ.ತಪ್ಪು ಮಾಡಿದ ಕೂಡಲೇ ನಾವು ತಕ್ಷಣವೇ ಕ್ರಮ ತಗೊಂಡಿದ್ದೇವೆ. ತನಿಖೆ ಕೂಡ ಮಾಡಿದ್ದೇವೆ, ಮುಂದೆ ಏನಾದರೂ ಇದ್ದರೆ ಸಲಹೆ ಕೊಡಲಿ, ನಡೆಯ ಬಗ್ಗೆ ತಪ್ಪು ಆಗಿದ್ರೆ ಅದನ್ನು ಹೇಳಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಸ್ಟೇಜ್ ನಲ್ಲಿ ನಿಂತುಕೊಂಡು ಮಾತಾಡ್ತಾರೆ ಅಂದರೆ ಅವರಿಗೆ ಮಂಡ್ಯ ಜಿಲ್ಲೆಯಲ್ಲಿ ಶಾಂತಿ ಬೇಕಿಲ್ಲ.ಪ್ರಚೋದನೆ ಮಾಡಬೇಕೆಂದೇ ಮಾತಾಡಿದ್ದಾರೆ. ಮಳವಳ್ಳಿ ಯಲ್ಲಿ ಬಂದ್ ಮಾಡಿದ್ದಾರೆ, ಅದು ವಿಫಲ ಆಗಿದೆ.ಮೊನ್ನೆ ಮದ್ದೂರಲ್ಲಿ ೩೦ ಪರ್ಸೆಂಟ್ ಅಷ್ಟೇ ಬಂದ್ ಆಗಿದೆ.ಇನ್ಮುಂದೆ ಆದರೂ ಮಂಡ್ಯ ಜಿಲ್ಲೆಗೆ ಒಳ್ಳೆಯದಕ್ಕೆ ಬನ್ನಿ.ಸಿಟಿ ರವಿ ಒಬ್ಬ ಮಾಜಿ ಮಂತ್ರಿ, ನ್ಯಾಷನಲ್ ಜನರಲ್ ಸೆಕ್ರೆಟರಿ.ಕಾಲು ಮುರೀತಿವಿ, ಕೈ ಮುರೀತ್ತೀವಿ ಅಂದರೆ ಏನು ಅರ್ಥ..?. ನಮಗೂ ಬಾಯಿಗೆ ಬರುತ್ತೆ ಅಂತಾ ಹೇಳೋಕೆ ಆಗುತ್ತಾ..?. ಸಿಟಿ ರವಿ ಇನ್ನೂ ಕಲಿಯಲ್ಲ ಅನ್ಸುತ್ತೆ. ಎಫ್ಐರ್ ಗೆ ಹೆದರಬೇಡಿ ಅಂತಾ ನಾನು ಹೇಳಲ್ಲ.ಕಾನೂನು ಇರೋದು ತಪ್ಪು ಮಾಡಿದವರ ಕ್ರಮ ತಗೊಳ್ಳೋಕೆ. ಅವರು ಹೆದರುತ್ತಾರೋ, ಅಥವಾ ಇನ್ನೊಂದು ಮಾಡ್ತಾರೋ. ಈಗಾಗಲೇ ತಪ್ಪು ಮಾಡಿದ ಮುಸ್ಲಿಂ ಯುವಕರನ್ನು ಅರೆಸ್ಟ್ ಮಾಡಿದ್ದೇವೆ.ನಾಳೆ ಅವರು ಬಂದು ಹೆದರಲ್ಲ ಅಂದ್ರೆ ಏನ್ ಮಾಡೋದು..? ಕಾನೂನು ಇರೋದು ತಪ್ಪು ಮಾಡಿದವರ ಕ್ರಮಕ್ಕಾಗಿ.ಘಟನೆ ಸಂಬಂಧ ಪೂರ್ವ ನಿಯೋಜಿತನಾ..? ಅಥವಾ ಅವರ ಹಿನ್ನೆಲೆ ಏನೆಂದು ತನಿಖೆ ನಡೆಯುತ್ತಿದೆ.ಈ ಘಟನೆ ಯನ್ನು ಮದ್ದೂರಿನ ಮುಸ್ಲಿಂರು ಖಂಡಿಸಿದ್ದಾರೆ. ನಾವೆಲ್ಲರೂ ಅಣ್ಣ ತಮ್ಮಂದಿರ ಇರಬೇಕು.ಇದರಲ್ಲಿ ನಮ್ಮ ಹುಡುಗರು ತಪ್ಪು ಮಾಡಿದ್ದಾರೆ. ಕ್ರಮ ತೆಗೆದುಕೊಳ್ಳಲಿ, ಇದರಲ್ಲಿ ನಾವು ಮಧ್ಯ ಪ್ರವೇಶ ಮಾಡಲ್ಲ ಎಂದು. ನಿನ್ನೆಯ ಗಣಪತಿ ವಿಸರ್ಜನೆ ವೇಳೂ ಅವರು ಏನೂ ಕೂಡ ಮಾತಾಡಿಲ್ಲ.ಅವರು ಯಾರು ಪ್ರೋತ್ಸಾಹ ಮಾಡಿಲ್ಲ, ಮದ್ದೂರಿನ ಗಣೇಶ ಮೆರವಣಿಗೆಗೆ ಸಹಕಾರ ಕೊಟ್ಟಿದ್ದಾರೆ. ಮಸೀದಿ ಮುಂದೆಯೇ ನಿನ್ನೆ ಗಣೇಶ ಮೆರವಣಿಗೆ ಹೋಗಿದ್ದಾರೆ.ಅದಕ್ಕೂ ನಿನ್ನೆ ಅನುಮತಿ ಕೊಡಲಾಗಿತ್ತು ಎಂದರು.
ಸರ್ಕಾರದ ವಿರುದ್ಧ ನೇಪಾಳದ ರೀತಿಯ ಯುವಕರು ಎಚ್ಚೆತ್ರು ಕೊಳ್ಳಬೇಕೆಂಬ ಸುಮಲತಾ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಸುಮಲತಾ ಮೇಡಂ, ಸಿಟಿ ರವಿ, ನಮ್ಮ ಅಶೋಕ್ .ಎಲ್ಲರ ಮಾತನ್ನು ಕೇಳಿದ್ದೇನೆ ಎಂದು ಕೈ ಮುಗಿದು ಚಲುವರಾಯಸ್ವಾಮಿ ಹೊರಟು ಹೋಗಿದ್ದಾರೆ.











