ಬೆಂಗಳೂರು: ದುಬೈನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಕೇಂದ್ರ ಸಚಿವ ಹೆಚ್ ಡಿಕೆ ಭೇಟಿ ವಿಚಾರ ಸದ್ಯ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಈ ಬಗ್ಗೆ ಸಚಿವ ಚಲುವರಾಯಸ್ವಾಮಿ ಮಾತನಾಡಿದ್ದು ಭೇಟಿ ವೈಯಕ್ತಿಕ. ಇಲಾಖೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿರಬಹುದು ಎಂದಿದ್ದಾರೆ. ಅವರು ಪಕ್ಷಕ್ಕೆ ಸೀನಿಯರ್ ಇದ್ದಾರೆ. ಅವರನೇ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಗೆ ಹೋಗೊಕೆ ಆಗುತ್ತಾ..?. ಈ ಬಗ್ಗೆ ಅವರನ್ನೆ ಕೇಳಿದ್ರೆ ಸರಿಯಾದ ಉತ್ತರ ಸಿಗಬಹುದು ಎಂದಿದ್ದಾರೆ.
ಇನ್ನು ಹನಿಟ್ರ್ಯಾಪ್ ವಿಚಾರದ ಬಗ್ಗೆ ಮಾತನಾಡಿದ ಅವರು ಹನಿಟ್ರ್ಯಾಪ್ ವಿಚಾರವಾಗಿ ದೂರು ಕೊಡಲಿ ಅಂತ ಹೇಳಿದ್ದರು. ಅದರಂತೆ ದೂರು ಕೊಟ್ಟಿದ್ದಾರೆ ಗೃಹ ಸಚಿವರು ಇದ್ದಾರೆ. ಅದೆಲ್ಲವನ್ನೂ ಅವರು ನೋಡಿಕೊಳ್ತಾರೆ. ಯತ್ನಾಳ್ ಉಚ್ಚಾಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ಅವರ ಪಕ್ಷದ ವಿಚಾರ. ಅದರ ಬಗ್ಗೆ ನಾನು ಮಾತನಾಡಲ್ಲ.ಬಹಳ ದಿನದಿಂದ ಅವರ ಪಕ್ಷದಲ್ಲಿ ಆತಂರಿಕ ಜಗಳ ಇತ್ತು. ಈಗ ಅವರ ಮೇಲೆ ಕ್ರಮ ಆಗಿದೆ ಎಂದರು.
ಎಲ್ಲಾ ವಿಚಾರವೂ ಹೈಕಮಾಂಡ್ ನಾಯಕರಿಗೂ ಹೇಳಿದ್ದೇನೆ: ಸಚಿವ ಸತೀಶ್ ಜಾರಕಿಹೊಳಿ ನವದೆಹಲಿಯಲ್ಲಿ ಹೇಳಿಕೆ
ನವದೆಹಲಿ; ಎಲ್ಲಾ ವಿಚಾರವೂ ಹೈಕಮಾಂಡ್ ನಾಯಕರಿಗೂ ಹೇಳಿದ್ದೇನೆ ಎಂದು ನವದೆಹಲಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಾಳೆ ಬೆಂಗಳೂರಿನಲ್ಲಿ ಎಲ್ಲವೂ ಹೇಳ್ತಿನಿ. ಎಚ್ ಡಿ ಕೆ ಭೇಟಿ ಕುರಿತು ಖರ್ಗೆ, ಸುಜೇರ್ವಾಲ ಸೇರಿ ಎಲ್ಲವೂ ಹೇಳಿದ್ದೇನೆ. ಖರ್ಗೆ ಅವರಿಗೆ ದೆಹಲಿ ಬೆಳವಣಿಗೆ ಬಗ್ಗೆ ಹೇಳಿದ್ದೇನೆ. ಸಿಎಂ ಬದಲಾವಣೆಯ ಇಲ್ಲ. ಕೆಪಿಸಿಸಿಗೆ ಅಧ್ಯಕ್ಷರೂ ಇದ್ದಾರೆ ಅಲ್ವಾ? ಎಂದಿದ್ದಾರೆ.
ಇನ್ನು ಕಾಂಗ್ರೆಸ್ ಸಂಸದ ಜಿ.ಸಿ ಚಂದ್ರಶೇಖರ್ ಮಾತನಾಡಿ ಹೆಚ್ಡಿಕೆ ಕೇಂದ್ರ ಮಂತ್ರಿಯಾಗಿ ಹೆಚ್ಡಿಕೆ ಇರದೆ ಇದ್ದರೆ ಬೇರೆ ಅರ್ಥ ಬರುತ್ತಿತ್ತು. ಈಗ ಕೇಂದ್ರ ಮಂತ್ರಿಯಾಗಿದ್ದಾರೆ ಹಾಗಾಗಿ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವುದು ಬೇಡ . ಸತೀಶ್ ಜಾರಕಿಹೊಳಿ ನಮ್ಮ ಪಕ್ಷದ ಶಿಸ್ತಿನ ಸಿಪಾಯಿ. ಅಭಿವೃದ್ಧಿ ಬಗ್ಗೆ ಹೆಚ್ಡಿಕೆ ಬಳಿ ಸತೀಶ್ ಮಾತನಾಡಿರ್ತಾರೆ. ನಾವು ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತವೆ. ಎಲ್ಲದರಲ್ಲೂ ತಪ್ಪು ಹುಡುಕಬಾರದು ಎಂದರು.